Makar Sankranti : ಹಬ್ಬದ ದಿನ ಮರೆತೂ ಈ ಕೆಲಸ ಮಾಡ್ಬೇಡಿ

By Suvarna NewsFirst Published Jan 7, 2023, 11:20 AM IST
Highlights

ಹಬ್ಬದ ಸಂಭ್ರಮದಲ್ಲಿ ನಾವು ಕೆಲ ವಿಷ್ಯವನ್ನು ಮರೆಯುತ್ತೇವೆ. ಹಬ್ಬಕ್ಕೆ ಮಾಡುವ ಅಡುಗೆಯಿಂದ ಹಿಡಿದು ನಮ್ಮ ವರ್ತನೆಯವರೆಗೆ ಎಲ್ಲರದ ಮೇಲೂ ನಮಗೆ ಗಮನವಿರಬೇಕು. ಹಬ್ಬದ ದಿನ ಕೆಲ ತಪ್ಪು ಮಾಡಿದ್ರೆ ಅದ್ರಿಂದ ಕಷ್ಟ ಎದುರಿಸಬೇಕಾಗುತ್ತದೆ.
 

ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬವನ್ನು ದೇಶದೆಲ್ಲೆಡೆ ಆಚರಿಸಲು ತಯಾರಿ ಜೋರಾಗಿ ನಡೆದಿದೆ. ಜನರು ಎಳ್ಳು – ಬೆಲ್ಲವನ್ನು ನೀಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಮರಕ ರಾಶಿಗೆ ಸೂರ್ಯ ಪ್ರವೇಶ ಮಾಡುವುದ್ರಿಂದ ಸೂರ್ಯ ಉತ್ತರಾಯಣದಲ್ಲಿರುತ್ತಾನೆ. ಮಕರ ಸಂಕ್ರಾಂತಿ ದಿನ ಅನೇಕ ಧಾರ್ಮಿಕ ಕೆಲಸಗಳನ್ನು ಮಾಡಲಾಗುತ್ತದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ನಂತ್ರ ದೇವರ ಪೂಜೆ ಮಾಡಿ, ಸೂರ್ಯನಿಗೆ ಜಲವನ್ನು ಅರ್ಪಿಸಿ, ಎಳ್ಳು – ಬೆಲ್ಲವನ್ನು ತಿಂದು ಹಬ್ಬ ಆಚರಿಸುವುದು ವಾಡಿಕೆ. ಬೇರೆ ಬೇರೆ ಕಡೆ ಈ ಹಬ್ಬವನ್ನು ಬೇರೆ ಬೇರೆ ಪದ್ಧತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಈ ಸಂಕ್ರಾಂತಿ ದಿನ ಕೆಲವೊಂದು ಕೆಲಸವನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಶಾಸ್ತ್ರದ ಪ್ರಕಾರ, ಸಂಕ್ರಾಂತಿ ದಿನ ಯಾವ ಕೆಲಸ ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೆವೆ. 

ಮಕರ ಸಂಕ್ರಾಂತಿ (Sankranti) ಯ ದಿನ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ :
ಮಕರ ಸಂಕ್ರಾಂತಿ ದಿನ ಈ ಆಹಾರ (Food) ಸೇವಿಸ್ಬೇಡಿ :
ಮಕರ ಸಂಕ್ರಾಂತಿಯ ದಿನದಂದು ತಪ್ಪಾಗಿಯೂ ತಾಮಸಿಕ ಆಹಾರವನ್ನು ಸೇವಿಸಬಾರದು. ಇದು ಆರೋಗ್ಯ (health) ದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ಆಹಾರವು ನಿಮ್ಮ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಮಕರ ಸಂಕ್ರಾಂತಿಯ ದಿನದಂದು ಮಾಂಸ, ಬೆಳ್ಳುಳ್ಳಿ ಮತ್ತು ಈರುಳ್ಳಿ (Onion) ಸೇವಿಸಬೇಡಿ. ಮಕರ ಸಂಕ್ರಾಂತಿಯ ದಿನದಂದು ಸಾತ್ವಿಕ ಆಹಾರವನ್ನು ಮಾತ್ರ ನೀವು ತಿನ್ನಿ. 

Latest Videos

ಸಂಕ್ರಾಂತಿ ದಿನ ಇವರಿಗೆ ನೆರವಾಗಿ : ಮಕರ ಸಂಕ್ರಾಂತಿಯ ದಿನದಂದು ಬಡವರಿಗೆ ದಾನ (Donation) ಮಾಡುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಅಪ್ಪಿತಪ್ಪಿಯೂ ಯಾವುದೇ ಬಡವರನ್ನು ಅಥವಾ ನಿರ್ಗತಿಕರನ್ನು ಅವಮಾನಿಸಬೇಡಿ. ಬಡವರನ್ನು ನೋಯಿಸಿದ್ರೆ  ಜೀವನದಲ್ಲಿ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ಬಡವರ ಹಿಂಸೆಯನ್ನು ದೇವರು ಕ್ಷಮಿಸುವುದಿಲ್ಲ. ಅದೆಷ್ಟೇ ಪೂಜೆ ಮಾಡಿದ್ರೂ ಆಶೀರ್ವಾದ ನೀಡುವುದಿಲ್ಲ. ಈ ದಿನ ಭಿಕ್ಷುಕ (Beggar) ರನ್ನು ಬರಿಗೈನಲ್ಲಿ ಕಳುಹಿಸಬಾರದು. 

ZODIAC SIGN: ಮಗುವನ್ನ ಬೆಳೆಸೋಕೆ ಸಂಗಾತಿಗೆ ಸಹಕಾರ ನೀಡೋದ್ರಲ್ಲಿ ಇವ್ರು ಗ್ರೇಟ್

ಸಂಕ್ರಾಂತಿ ದಿನ ಯಾರನ್ನೂ ನಿಂದಿಸಬೇಡಿ : ಮಕರ ಸಂಕ್ರಾಂತಿ ದಿನ  ಮಾತಿನ ಮೇಲೆ ಹಿಡಿತರವಿರಲಿ. ಯಾರನ್ನೂ ನಿಂದಿಸಬೇಡಿ. ಮನೆಗೆ ಬಂದ ಅತಿಥಿಗಳಿರಲಿ ಇಲ್ಲ ಮನೆಯ ಸದಸ್ಯರಿರಲಿ, ಮಕ್ಕಳು, ಮಹಿಳೆಯರು ಸೇರಿದಂತೆ ಭಿಕ್ಷುಕರನ್ನು ಕೂಡ ನಿಂದಿಸಬಾರದು.  

ಮದ್ಯಪಾನ (Alcohol) ದಿಂದ ದೂರವಿರಿ : ಮಕರ ಸಂಕ್ರಾಂತಿಯ ದಿನ  ಮದ್ಯ ಸೇವಿಸಬಾರದು. ಈ ದಿನ ಆಲ್ಕೋಹಾಲ್ ಸೇವಿಸುವುದರಿಂದ ಆರ್ಥಿಕ ಸ್ಥಿತಿ ಹಾಳಾಗುತ್ತದೆ. ಯಾವುದೇ ಅಮಲು ಪದಾರ್ಥವನ್ನು ಸೇವಿಸಿದರೂ ಸಂತೋಷ (Happiness) ಮತ್ತು ಸಮೃದ್ಧಿಗೆ ಧಕ್ಕೆ ತರುತ್ತದೆ.

Vastu tips : ಮನೆಯಿಂದ ಹೊರಡೋ ಮುನ್ನ ಈ ಕೆಲಸ ಮಾಡಿದ್ರೆ, ಎಲ್ಲವೂ ಶುಭವಾಗುತ್ತೆ!    

ಮಕರ ಸಂಕ್ರಾಂತಿ ದಿನ ಈ ಕೆಲಸ ಮಾಡಿ : ಮಕರ ಸಂಕ್ರಾಂತಿ ದಿನ ನೀವು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಗಂಗೆ ಮಾತ್ರವಲ್ಲ, ಪವಿತ್ರವಾದ ಯಾವುದೇ ನದಿಯಲ್ಲಿ ನೀವು ಸ್ನಾನ ಮಾಡಬಹುದು. ಇದು ಸಾಧ್ಯವಿಲ್ಲ ಎನ್ನುವವರು ಮನೆಯಲ್ಲಿರುವ ಗಂಗೆಯನ್ನು ನೀರಿಗೆ ಹಾಕಿ ಸ್ನಾನ ಮಾಡಬಹುದು. ಅಲ್ಲದೆ ದಾನಕ್ಕೆ ವಿಶೇಷ ಮಹತ್ವವಿರುವ ಕಾರಣ ನೀವು ಈ ದಿನ ಖಿಚಡಿಯನ್ನು ದಾನ ಮಾಡಬೇಕು. ಉದ್ದಿನಬೇಳೆ ಮತ್ತು ಅಕ್ಕಿಯಿಂದ ಮಾಡಿದ ಖಿಚಡಿಯನ್ನು ದಾನ ಮಾಡಿದ್ರೆ ಒಳ್ಳೆಯದು. ಸಂಕ್ರಾಂತಿ ದಿನ ಬಡವರಿಗೆ ದಾನ ಮಾಡಬೇಕು. ನೀವು ಸಿಹಿ ಪದಾರ್ಥ, ಎಳ್ಳು, ಬೆಲ್ಲ ಎಲ್ಲವನ್ನೂ ದಾನ ಮಾಡಬಹುದು. ಇದು ಚಳಿಗಾಲವಾಗಿರುವ ಕಾರಣ ಬಡವರಿಗೆ ಹೊದಿಕೆ, ಬೆಚ್ಚಗಿನ ಬಟ್ಟೆ ನೀಡುವುದ್ರಿಂದ ಕೂಡ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.   
 

click me!