ಹೋಳಿಯ ಬಣ್ಣಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಕಂಡುಬರುತ್ತದೆ. ಹೋಳಿ ಅಥವಾ ಹೋಲಿಕಾ ದಹನ್ ದಿನದಂದು ನೀವು ಮಾಡಬಹುದಾದ ಆ ಕ್ರಮಗಳ ಬಗ್ಗೆ ಮಾತನಾಡೋಣ.
ಹೋಳಿಯನ್ನು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಇದು ವಸಂತ ಋತುವಿನ ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಆಚರಿಸಲು ಭಕ್ತ ಪ್ರಹ್ಲಾದನ ಕಥೆಯು ಪ್ರಚಲಿತವಾಗಿದೆ. ಈ ವರ್ಷ ಮಾರ್ಚ್ 8ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹಬ್ಬದಂದು ದೇವ-ದೇವತೆಗಳನ್ನು ಪೂಜಿಸಲಾಗುತ್ತದೆ.
ಹೋಳಿ ದಿನದಂದು ವಿಶೇಷ ಮಂತ್ರಗಳನ್ನು ಪಠಿಸುವುದರಿಂದ ಸಾಧಕರಿಗೆ ವಿಶೇಷ ಲಾಭಗಳು ದೊರೆಯುತ್ತವೆ. ಇದು ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೋಳಿಯ ಬಣ್ಣಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಕಂಡುಬರುತ್ತದೆ. ಜೀವನದಲ್ಲಿ ಅಭಿವೃದ್ದಿ ತರುವ ಅಂಥ ಆ ಹೋಳಿ ಪರಿಹಾರ ಕ್ರಮಗಳು ಯಾವೆಲ್ಲ ನೋಡೋಣ.
ಮಾನಸಿಕ ತೊಂದರೆ ನಿವಾರಣೆಗಾಗಿ
ಹೋಳಿಕಾ ದಹನದ ದಿನ ಒಣ ಕೊಬ್ಬರಿ, ಕರಿ ಎಳ್ಳು, ಲವಂಗ ಮತ್ತು ಹಳದಿ ಸಾಸಿವೆಯನ್ನು ತಲೆಯ ಮೇಲೆ ಹಾಕಿ ಬೆಂಕಿಯಲ್ಲಿ ಹಾಕಿ. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಮಾನಸಿಕ ತೊಂದರೆಗಳು ದೂರವಾಗುತ್ತವೆ.
ಆರೋಗ್ಯಕ್ಕಾಗಿ
ನಿಮ್ಮ ಕುಟುಂಬದಲ್ಲಿ ಯಾರಾದರೂ ದೀರ್ಘ ಕಾಲದಿಂದ ಯಾವುದೇ ರೀತಿಯ ದೈಹಿಕ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರಿಗೆ ಹೋಲಿಕಾ ದಹನದಲ್ಲಿ ಸುಟ್ಟ ಮರದ ಬೂದಿಯ ತಿಲಕವನ್ನುಇಡಬೇಕು. ಹೀಗೆ ಮಾಡುವುದರಿಂದ ದೈಹಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
March Horoscope 2023: ಮಿಥುನಕ್ಕೆ ಮಂಗಳಕರ ಮಾರ್ಚ್, ಕುಂಭಕ್ಕೆ ಏರಿಳಿತದ ತಿಂಗಳು
ಗ್ರಹ ದೋಷ ನಿವಾರಣೆಗಾಗಿ
ನೀವು ಗ್ರಹ ದೋಷಗಳಿಂದ ತೊಂದರೆಗೊಳಗಾಗಿದ್ದರೆ, ಶಿವಲಿಂಗದ ಪೂಜೆಯ ಸಮಯದಲ್ಲಿ ಹೋಲಿಕಾ ದಹನದ ಭಸ್ಮವನ್ನು ಶಿವನಿಗೆ ಅರ್ಪಿಸಿ. ಇದರ ನಂತರ, ಈ ಭಸ್ಮವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಹೋಳಿಯ ಈ ಪರಿಹಾರದಿಂದ ಉರಿಯುತ್ತಿರುವ ಗ್ರಹಗಳು ಶಾಂತವಾಗುತ್ತವೆ.
ಆದಾಯ ಹೆಚ್ಚಳಕ್ಕಾಗಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ಹಬ್ಬದ ದಿನದಂದು ಮನೆಯ ಮುಖ್ಯ ಬಾಗಿಲಿನ ದೀಪಕ್ಕೆ ಗುಲಾಲನ್ನು ಹಾಕಬೇಕು. ಇದರೊಂದಿಗೆ ಮನೆಯ ಮುಖ್ಯ ಬಾಗಿಲಲ್ಲಿ ಎರಡು ಮುಖದ ದೀಪವನ್ನು ಹಚ್ಚಬೇಕು. ಈ ಪರಿಹಾರವು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಆದಾಯದ ಹೆಚ್ಚಳಕ್ಕೆ ದಾರಿ ತೆರೆಯುತ್ತದೆ ಎಂದು ನಂಬಲಾಗಿದೆ.
ಲಕ್ಷ್ಮೀ ದೇವಿಯ ಆಶೀರ್ವಾದಕ್ಕಾಗಿ
ಹೋಳಿ ದಿನದಂದು ಲಕ್ಷ್ಮಿ ದೇವಿಯನ್ನು ವಿಧಿವತ್ತಾಗಿ ಪೂಜಿಸಬೇಕು. ಮಾತಾ ಲಕ್ಷ್ಮಿಗೆ ಕೆಂಪು ಬಣ್ಣ, ಹೂವುಗಳು, ಹಣ್ಣುಗಳು ಇತ್ಯಾದಿಗಳನ್ನು ಅರ್ಪಿಸುವುದರಿಂದ ವ್ಯಕ್ತಿಯು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾನೆ. ಈ ಕ್ರಮಗಳಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ.
ಆರ್ಥಿಕ ಸಮಸ್ಯೆ ನಿವಾರಣೆಗಾಗಿ
ನೀವು ದೀರ್ಘಕಾಲದಿಂದ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಹೋಳಿಕಾ ದಹನದ ಈ ದಿನದಂದು ತೆಂಗಿನಕಾಯಿಯನ್ನು ಚಿಪ್ಪಿನಲ್ಲಿ ಹಾಕಿ ಹೋಳಿಕಾ ಬೆಂಕಿಯಲ್ಲಿ ಹಾಕಿ. ಹೋಳಿಕಾ ದಹನದ ದಿನ ಈ ಪರಿಹಾರವನ್ನು ಮಾಡುವುದರಿಂದ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದೇ? ಸಿಟ್ಟಲ್ಲಿ ಸಂಬಂಧ ಹಾಳು ಮಾಡ್ಕೊಳೋ ರಾಶಿಗಳಿವು..
ನಕಾರಾತ್ಮಕ ಶಕ್ತಿ ತೆಗೆದು ಹಾಕಲು
ಹೋಲಿಕಾ ದಹನ್ ನಂತರ, ಮರದ ಬೂದಿಯನ್ನು ಮನೆಗೆ ತಂದು ಅದಕ್ಕೆ ಸಾಸಿವೆ ಮತ್ತು ಉಪ್ಪು ಸೇರಿಸಿ. ಈಗ ಈ ಬೂದಿಯನ್ನು ಶುದ್ಧವಾದ ಪಾತ್ರೆಯಲ್ಲಿ ಹಾಕಿ ಮತ್ತು ಅದನ್ನು ಮನೆಯಲ್ಲಿ ಪವಿತ್ರ ಸ್ಥಳದಲ್ಲಿ ಇರಿಸಿ. ಈ ಪರಿಹಾರವು ಮನೆಯಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತೆಗೆದು ಹಾಕುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.