Mahashivratri 2022: ಮಕ್ಕಳಿಲ್ಲದ ದಂಪತಿ ಮಹಾಶಿವರಾತ್ರಿಯಂದು ಈ ಪರಿಹಾರ ಕೈಗೊಳ್ಳಿ

By Suvarna NewsFirst Published Feb 28, 2022, 10:10 AM IST
Highlights

ಹಬ್ಬಗಳು ಬರುವುದೇ ಅತ್ಯುತ್ತಮ ಲಗ್ನ, ಸಮಯದಲ್ಲಿ. ದೇವರಿಗೆ ಸಂಬಂಧಿಸಿದ ಹಬ್ಬಗಳೆಂದರೆ ಅಂದು ಗ್ರಹಗತಿಗಳು ಚೆನ್ನಾಗಿಯೇ ಇರುತ್ತವೆ. ನಾಳೆ ಮಹಾಶಿವರಾತ್ರಿ. ಶಿವನನ್ನು ಹೇಗೆಲ್ಲ ಆರಾಧಿಸಿದರೆ ಯಾವೆಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ತಿಳಿಯಿರಿ. 

ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ(Mahashivratri) ಆಚರಿಸಲಾಗುತ್ತದೆ. ಶಿವನು ಪಾರ್ವತಿಯನ್ನು ವಿವಾಹವಾದ ಪವಿತ್ರ ದಿನವಿದು. ಇಂಥದೊಂದು ಸುಮೂಹೂರ್ತ ಕಾಲದಲ್ಲಿ ಶಿವ(Lord Shiva)ನನ್ನು ಭಕ್ತಿಪೂರ್ವಕವಾಗಿ ಸ್ಮರಿಸಿ, ಸಂಭ್ರಮಿಸಿದರೆ ಆತ ಭಕ್ತರ ಎಲ್ಲ ಇಷ್ಟಾರ್ಥಗಳನ್ನೂ ಈಡೇರಿಸುತ್ತಾನೆ. ಆದರೆ, ಯಾವ ಇಷ್ಟಾರ್ಥ ಸಿದ್ಧಿಗೆ ಹೇಗೆ ಪೂಜಿಸಬೇಕೆಂಬ ಬಗ್ಗೆ ನಿಮಗೆ ಚೆನ್ನಾಗಿ ಅರಿವಿರಬೇಕು. ಆರೋಗ್ಯ ಸಮಸ್ಯೆಗಳಿರಬಹುದು ಅಥವಾ ಹಣದ ಅಡಚಣೆ ಹೆಚ್ಚಿರಬಹುದು. ವಿವಾಹ ವಿಷಯದಲ್ಲಿ ಅಡೆತಡೆಗಳಾಗುತ್ತಿರಬಹುದು ಇಲ್ಲವೇ ಉದ್ಯೋಗ ಸಿಗದೆ ತೊಂದರೆಯಾಗುತ್ತಿರಬಹುದು. ನಿಮ್ಮ ಸಮಸ್ಯೆಗೆ ಅನುಗುಣವಾಗಿ ಶಿವರಾತ್ರಿಯಂದು ಈ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ. ಆಗ, ಖಂಡಿತಾ ನಿಮ್ಮ ಸಮಸ್ಯೆ ಶೀಘ್ರ ಈಡೇರಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. 

ಉದ್ಯೋಗ(Job) ಬೇಕೆಂದರೆ, ಇರುವ ಉದ್ಯೋಗದಲ್ಲಿ ಯಶಸ್ಸು(success) ಬೇಕೆಂದರೆ
ಶಿವರಾತ್ರಿಯ ದಿನ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಶಿವನೆದುರು ಕುಳಿತು ಸಂಕಲ್ಪ ಮಾಡಿ. ಆತನ 108 ಹೆಸರುಗಳನ್ನು ಜಪಿಸಿ. ನಂತರ ಶಿವಲಿಂಗಕ್ಕೆ ಬೆಳ್ಳಿ(silver)ಯ ಪುಟ್ಟ ಪಾತ್ರೆಯಿಂದ ಜಲಾಭಿಷೇಕ ಮಾಡುತ್ತಾ 'ಓಂ ನಮಃ ಶಿವಾಯ' ಪಠಿಸುತ್ತಿರಿ. ಬಳಿಕ ಪೂಜೆ ಮಾಡಿ ಉದ್ಯೋಗ ವಿಷಯವಾಗಿ ನಿಮ್ಮ ಬೇಡಿಕೆ ಕೇಳಿಕೊಳ್ಳಿ. ಅದು ದೊರಕುತ್ತಲೇ ಶಿವ ದೇವಾಲಯ(Shiva temple)ಕ್ಕೆ ಬಂದು ಪೂಜೆ ಮಾಡಿಸುವುದಾಗಿ ಹೇಳಿಕೊಳ್ಳಿ. 

Latest Videos

ವಿವಾಹ(marriage)ದ ಅಡಚಣೆಗಳು ನೀಗಬೇಕೆಂದರೆ
ಶಿವರಾತ್ರಿಯ ದಿನ ಶಿವ- ಪಾರ್ವತಿಯ ವಿವಾಹವಾದ ದಿನ. ಹೀಗಾಗಿ, ಈ ದಿನ ಶಿವ ಶಕ್ತಿಯರಲ್ಲಿ ನಿಮಗೆ ಸಂಗಾತಿಯನ್ನು ಕರುಣಿಸಲು ಅಥವಾ ಪ್ರೇಮ ವಿವಾಹ(love marriage)ದ ಯಶಸ್ಸಿಗೆ ಭಕ್ತಿಪೂರ್ವಕವಾಗಿ ಕೋರಿಕೊಂಡರೆ ಆತ ಖಂಡಿತಾ ಕರುಣಿಸುತ್ತಾನೆ. ಶಿವಶಕ್ತಿಯರ ಫೋಟೋ ಮುಂದೆ ಹಳದಿ ಬಟ್ಟೆ ಧರಿಸಿ ಕುಳಿತು ಮೊದಲು ದೀಪ ಹಚ್ಚಿ. ಆ ಬೆಳಕು ಪಾರ್ವತಿಯ ಸಂಕೇತ. ಹಣೆಗೆ ವಿಭೂತಿ ಇಟ್ಟುಕೊಳ್ಳಿ. ಬಳಿಕ ಧೂಪ, ಬಿಲ್ವ ಅರ್ಪಿಸಿ. ವಿವಾಹದ ದಿನ ನಿಗದಿಯಾಗುವವರೆಗೂ ಪ್ರತಿ ಸೋಮವಾರ(Monday) ಶಿವಪೂಜೆ ಕೈಗೊಳ್ಳುವುದಾಗಿ ಹೇಳಿಕೊಳ್ಳಿ.  

ಮಗು(child) ಬೇಕೆಂದರೆ
ದಂಪತಿಗೆ ವಿವಾಹವಾಗಿ ಕೆಲ ಸಮಯ ಕಳೆದಿದ್ದರೂ ಮಕ್ಕಳಾಗುತ್ತಿಲ್ಲವೆಂದರೆ ಶಿವರಾತ್ರಿಯ ದಿನ ಪತಿ ಪತ್ನಿ ಇಬ್ಬರೂ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ಶಿವ ದೇವಾಲಯಕ್ಕೆ ಭೇಟಿ ನೀಡಿ. ಈ ದಿನ ಸಂಪೂರ್ಣ ಉಪವಾಸ(fasting) ಆಚರಿಸಿ. ಹಣ್ಣುಗಳನ್ನು ಸೇವಿಸಬಹುದು. ದೇವಾಲಯದ ಎದುರು ಅಶ್ವತ್ಥ ವೃಕ್ಷ(peepal tree)ವಿದ್ದರೆ ಅದರ ಬುಡದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ನಂತರ ವೃಕ್ಷಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬಂದು ಬೇಡಿಕೊಳ್ಳಿ. ವೃಕ್ಷದಲ್ಲಿ ಶಿವ ನೆಲೆಸಿರುತ್ತಾನೆ. ಹೀಗಾಗಿ ಆತ ನಿಮ್ಮ ಪ್ರಾರ್ಥನೆ ಕೇಳಿಕೊಳ್ಳುತ್ತಾನೆ. ಇನ್ನು ಶಿವನ ದೇವಾಲಯದಲ್ಲೂ ವಿಶೇಷ ಪೂಜೆ ನಡೆಸಬಹುದು. ಅಲ್ಲಿಯೇ ಕುಳಿತು ಇಬ್ಬರೂ ಶಿವ ಪುರಾಣ ಓದಿ. ಇದರಿಂದ ಶಿವ ಖಂಡಿತಾ ಸಂಪ್ರೀತನಾಗುತ್ತಾನೆ. 

Maha Shivratri 2022: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!

ಆರೋಗ್ಯ(health)ಕ್ಕಾಗಿ
ಶಿವರಾತ್ರಿಯ ದಿನ ಶಿವನಿಗೆ ತುಪ್ಪದ ದೀಪ ಹಚ್ಚಿ. ಕರ್ಪೂರ(Camphor) ಬೆಳಗಿ. ಬಳಿಕ ಬಿಲ್ವ ಪತ್ರೆಗಳನ್ನು ಅರ್ಪಿಸುತ್ತಾ 108 ಬಾರಿ 'ಓಂ ನಮಃ ಶಿವಾಯ' ಎಂದು ಜಪ ಮಾಡಿ. ನಂತರ ಹಣೆಗೆ ವಿಭೂತಿ ಧರಿಸಿ 101 ಬಾರಿ ಮಹಾ ಮೃತ್ಯುಂಜಯ ಮಂತ್ರವಾದ 'ಓಂ ತ್ರ್ಯಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್' ಹೇಳಿ ಪೂರೈಸಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಸಾತ್ವಿಕ ಆಹಾರ(food)ವನ್ನೇ ಸೇವನೆ ಮಾಡುವ ಜೊತೆಗೆ ದೈಹಿಕ ವ್ಯಾಯಾಮ ಮಾಡುವ ಸಂಕಲ್ಪವನ್ನೂ ಮಾಡಿಕೊಳ್ಳಿ. ಏಕೆಂದರೆ ಯಾವುದೇ ವಿಷಯಕ್ಕೆ ದೈವಾನುಗ್ರಹ ಬೇಕೆಂದರೆ ನಮ್ಮಿಂದಲೂ ಅದಕ್ಕೆ ಬೇಕಾದ ಪ್ರಯತ್ನ ಹಾಕಬೇಕು. 

Maha Shivratri 2022: ಯಶಸ್ಸು ಬೇಕಂದ್ರೆ ಶಿವರಾತ್ರಿ ದಿನ ಹೀಗೆ ಮಾಡಿ

ಆದಾಯ ಹೆಚ್ಚಳಕ್ಕೆ
ಮಹಾಶಿವರಾತ್ರಿಯ ದಿನ ಬೆಳಿಗ್ಗೆ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ, ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿ. ಬಳಿಕ ಶಿವ ಶತನಾಮಾವಳಿ ಹೇಳಿಕೊಳ್ಳಿ. ನಂತರ ಉತ್ತಮ ಮನಸ್ಸಿನಿಂದ ನಾಲ್ಕು ಜನರಿಗೆ ಅನ್ನದಾನ ಮಾಡಿ. ಜೊತೆಗೆ ವಸ್ತ್ರವನ್ನೂ ನೀಡಬಹುದು. ಹೀಗೆ ಈ ಪವಿತ್ರ ದಿನ ನೀವು ಮಾಡುವ ದಾನದಿಂದಾಗಿ ಮುಂದಿನ ದಿನಗಳಲ್ಲಿ ನಿಮ್ಮ ಸಂಪತ್ತು ಅಕ್ಷಯವಾಗುವುದು. 

click me!