ಅಪಮೃತ್ಯುವಿನಿಂದ ಪಾರಾಗಲು ಹೀಗ್ ಸ್ನಾನ ಮಾಡಿ..

By Suvarna News  |  First Published May 20, 2020, 2:18 PM IST

ಸನಾತನ ಸಂಸ್ಕೃತಿಯಲ್ಲಿ ಆಚರಣೆ ಮತ್ತು ನಿಯಮಗಳಿಗೆ ವಿಶೇಷ ಮಹತ್ವವಿದೆ. ಅಂತಹ ಆಚರಣೆಗಳಲ್ಲಿ ಸ್ನಾನ ಮಾಡುವಾಗ ಮಂತ್ರವನ್ನು ಹೇಳಬೇಕೆಂಬುದು ಒಂದು. ಇದರಿಂದಾಗುವ ಅನೇಕ ಲಾಭಗಳ ಬಗ್ಗೆ  ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ಸ್ನಾನದ ಸಮಯದಲ್ಲಿ ಹೇಳಬೇಕಾದ ಮಂತ್ರ ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ.


ಸನಾತನ ಸಂಸ್ಕೃತಿಯಲ್ಲಿ ದಿನನಿತ್ಯ ನಾವು ಮಾಡುವ ಪ್ರತಿಯೊಂದು ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ಸೂರ್ಯನಿಗೆ ವಂದಿಸುವುದು, ಸ್ನಾನ, ಸಂಧ್ಯಾವಂದನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಹೀಗೆ ಪ್ರತಿ ಕೆಲಸಕ್ಕೂ ಒಂದೊಂದು ನಿಯಮವಿದೆ. ಆ ನಿಯಮಗಳ ಹಿಂದೆ ಸತ್ಕಾರಣವಿದೆ. ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳು ಸಕಾರಾತ್ಮಕ ಕಾರಣಗಳ ಮೇಲೆ ನಿಂತಿವೆ. ನಮ್ಮ ಹಿರಿಯರು ಹೇಳಿದ, ಆಚರಿಸಿದ ಪ್ರತಿ ವಿಷಯದಲ್ಲೂ ಒಳಿತೇ ಅಡಗಿದೆ. ವೇದ, ಪುರಾಣಗಳಲ್ಲಿ ಹೇಳಿರುವಂತೆ ಆಚಾರ-ವಿಚಾರಗಳನ್ನು ನಿಯಮ ಬದ್ಧವಾಗಿ ಪಾಲಿಸಿದರೆ ಭಗವಂತನ ಕೃಪೆಯಾಗಿ ಒಳಿತಾಗುತ್ತದೆ ಎಂದು. ಹೀಗೆಯೇ ಸ್ನಾನ ಮಾಡುವಾಗ ಅನುಸರಿಸಬೇಕಾದ ಕೆಲವು ನಿಯಮ ಮತ್ತು ವಿಷಯಗಳ ಬಗ್ಗೆ ಗಮನಹರಿಸೋಣ, ಈ ಆಚರಣೆಯು ಅಕಾಲಮೃತ್ಯವಿನಿಂದ ಪಾರು ಮಾಡುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ.

ಬ್ರಾಹ್ಮೀ ಮೂಹೂರ್ತದಲ್ಲಿ ಮಾಡುವ ಸ್ನಾನಕ್ಕಿರುವ ಫಲ ಬ್ರಾಹ್ಮೀ ಮೂಹೂರ್ತ ಶ್ರೇಷ್ಟವೆಂಬ ಬಗ್ಗೆ ಹಲವಾರು ಗ್ರಂಥಗಳಲ್ಲಿ ಹೇಳಲಾಗಿದೆ. ಈ ಮೂಹೂರ್ತದಲ್ಲಿ ಮಾಡುವ ಪ್ರಾರ್ಥನೆಗೆ, ಪೂಜೆಗೆ ಪುಣ್ಯ ಲಭಿಸುತ್ತದೆ. ಹಾಗೇಯೇ ಈ ಮೂಹೂರ್ತದಲ್ಲಿ ಮಾಡುವ ಸ್ನಾನಕ್ಕೂ ಮಹತ್ವವಿದೆ. ಧಾರ್ಮಿಕ ಗ್ರಂಥಗಳ ಅನುಸಾರ ಈ ಮೂಹೂರ್ತದಲ್ಲಿ ಸ್ನಾನವನ್ನು ಮಾಡುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಧೀರ್ಘಾಯಸ್ಸನ್ನು ಪಡೆಯಬಹುದು ಮತ್ತು ಪುಣ್ಯಸಂಪಾದನೆಗೆ ಇದು ಪುಣ್ಯಕಾಲವೆಂದು ಹೇಳಲಾಗಿದೆ.

ಇದನ್ನು ಓದಿ; ಬಯಸಿದ್ದನ್ನೆಲ್ಲ ಕೊಡುವ ಶ್ರೀಕೃಷ್ಣನ ಕೃಪೆಗೆ ಹೀಗೆ ಮಾಡಿ!...

ಎಷ್ಟು ಬಾರಿ ಸ್ನಾನ ಮಾಡಬೇಕು
ವೇದಗಳಲ್ಲಿ ಸ್ನಾನದ ಬಗ್ಗೆ ಹೇಳುವಾಗ, ಸಾಧು-ಸಂತರು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಕು. ವಿವಾಹಿತ ವ್ಯಕ್ತಿಯು ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕೆಂಬ ನಿಯಮವಿದೆ. ಅವಿವಾಹಿತರು ದಿನಕ್ಕೆ ಒಂದು ಬಾರಿ ಸ್ನಾನ ಮಾಡಬೇಕೆಂದು ಹೇಳಿದೆ. ಇದರಿಂದ ಪುಣ್ಯ ಫಲ ಸಿಗುತ್ತದೆ.ಆಯುರ್ವೇದ ಸ್ನಾನದ ಬಗ್ಗೆ ಹೇಳುವುದೇನು?
ಶುದ್ಧ ಜಲದಿಂದ, ಸ್ನಾನ ಮಾಡುವುದರಿಂದ ರೋಗಗಳನ್ನು ಹಿಮ್ಮೆಟ್ಟಿಸಬಹುದು, ಕಾಂತಿಯುತ ಶರೀರವನ್ನು ಹೊಂದಬಹುದು. ಸ್ವಾಸ್ಥ್ಯ ಮತ್ತು ಶುಚಿತ್ವದಿಂದ ಮಾನಸಿಕ ನೆಮ್ಮದಿ ಪಡೆಯಬಹುದು.

Tap to resize

Latest Videos

undefined

ಇದನ್ನು ಓದಿ; ನಿಮ್ಮ ರಾಶಿ ಮಂತ್ರ ಪಠಿಸಿರಿ, ಕಷ್ಟಗಳಿಂದ ಮುಕ್ತಿ ಹೊಂದಿರಿ!...

ಸ್ನಾನದ ಸಮಯದಲ್ಲಿ ಹೇಳಬೇಕಾದ ಮಂತ್ರ ಮತ್ತು ಮಹತ್ವ

ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ/ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು//
ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಮತ್ತು ಕಾವೇರಿ ಇವು ಪವಿತ್ರವಾದ ನದಿಗಳು. ಈ ನದಿಗಳನ್ನು ಸ್ನಾನದ ನೀರಿಗೆ ಆಹ್ವಾನಿಸುವುದು. ಈ ನೀರನ್ನು ಪವಿತ್ರಗೊಳಿಸೆಂದು ಕೇಳಿಕೊಳ್ಳುವುದು ಇದರ ಅರ್ಥ. ನಾರದ ಪುರಾಣದಲ್ಲಿ ಇದರ ಉಲ್ಲೇಖವಿದೆ. ನಾಮಜಪವನ್ನು ಮಾಡುತ್ತಾ ಅಥವಾ ಶ್ಲೋಕಗಳನ್ನು ಪಠಿಸುತ್ತಾ ಸ್ನಾನ ಮಾಡುವುದರಿಂದ, ನೀರಿನಲ್ಲಿರುವ ಚೈತನ್ಯವು ದೇಹವನ್ನು ಸ್ಪರ್ಶಿಸಿ ಸುಪ್ತ ಶಕ್ತಿಯನ್ನು ಜಾಗೃತ ಗೊಳಿಸುತ್ತದೆ. ದೇಹಕ್ಕೆ ದೈವತ್ವದ ಪ್ರಭಾವ
ಬೀಳುತ್ತದೆ. ಇದರಿಂದ ಆ ದಿನ ಪೂರ್ತಿ ಮಾಡುವ ಕೆಲಸವನ್ನು ಹುಮ್ಮಸ್ಸಿನಿಂದ ಮಾಡಲು ಶರೀರವು ಸಕ್ಷಮವಾಗುತ್ತದೆ. 

ಮನಸ್ಸಿನ ಶಾಂತಿಗಾಗಿ ಋಷಿಮುನಿಗಳು ತಿಳಿಸಿದ ಮಂತ್ರ ಈ ವಿಶೇಷ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ ಎಂದು ಋಷಿಮುನಿಗಳು ಅರುಹಿದ್ದಾರೆ. ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ/ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ// 
ಅಪವಿತ್ರನಾದರೂ, ಪವಿತ್ರನಾದರೂ, ಯಾವುದೇ ಅವಸ್ಥೆಯಲ್ಲಿದ್ದರೂ ಭಗವಂತನಾದ ಪುಂಡರೀಕಾಕ್ಷನ ಸ್ಮರಣೆ ಮಾಡಿದಲ್ಲಿ ಹೊರಗಿನಿಂದ ಮತ್ತು ಒಳಗಿನಿಂದ ಶುದ್ಧನಾಗುತ್ತಾನೆ. ತನು-ಮನ ಶುದ್ಧಿಯು ಈ ಮಂತ್ರದಿಂದ ಸಾಧ್ಯವೆಂದು ಹೇಳಲಾಗಿದೆ.

ಇದನ್ನು ಓದಿ; ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!...

ಈ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣೆಯ ಲಾಭಗಳು
ಸಂಕಟ ಮೋಚನ ಹನುಮಂತನ ಸ್ಮರಣೆ ಮಾಡಿದರೆ ಕಷ್ಟಗಳು ದೂರಾಗುತ್ತವೆ ಎಂದು ಹೇಳುತ್ತಾರೆ. ಪವಿತ್ರ ಹನುಮಾನ್ ಚಾಲೀಸಾವನ್ನು ಸ್ನಾನ ಮಾಡುವಾಗ ಜಪಿಸುವುದರಿಂದ ಅಕಾಲಮೃತ್ಯುವಿನಿಂದ ಪಾರಾಗಬಹುದು, ಹಲವು ತರಹದ ಸಂಕಟಗಳಿಂದ ರಕ್ಷಣೆಯನ್ನು ಪಡೆಯಬಹುದು. ಪರಿಶ್ರಕ್ಕೆ ತಕ್ಕ ಫಲ ದೊರಕುತ್ತದೆ. ಸ್ನಾನದ ನಂತರ ಹನುಮಂತನಿಗೆ ನಮಸ್ಕರಿಸಿದರೆ ಆಂಜನೇಯನ ಕೃಪೆಗೆ ಪಾತ್ರರಾಗಬಹುದು.

click me!