ಗೂಗಲ್ ಸಿಇಒ ಸುಂದರ್ ಪಿಚೈ ದೀಪಾವಳಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಗೂಗಲ್‌ನಲ್ಲಿ ದೀಪಾವಳಿಯಂದು ಹೆಚ್ಚಿನ ಜನರು ಏನೇನು ಸರ್ಚ್ ಮಾಡಿದ್ದಾರೆ ಎನ್ನುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ದೀಪಾವಳಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಗೂಗಲ್‌ನಲ್ಲಿ ದೀಪಾವಳಿಯಂದು ಹೆಚ್ಚಿನ ಜನರು ಏನೇನು ಸರ್ಚ್ ಮಾಡಿದ್ದಾರೆ ಎನ್ನುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ.
ಭಾನುವಾರದಂದು ಸುಂದರ್ ಪಿಚೈ ದೀಪಾವಳಿಯನ್ನು ಆಚರಿಸುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು, ಜನರು ದೀಪಾವಳಿ ಸಂಪ್ರದಾಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ . ಹಾಗೂ ಪ್ರಪಂಚಾದ್ಯಂತ ದೀಪಾವಳಿಯ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿರುವ ಟ್ರೆಂಡಿಂಗ್ ಪ್ರಶ್ನೆಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಗೂಗಲ್‌ನಲ್ಲಿ ಹುಡುಕಲಾದ ಪ್ರಮುಖ ಐದು ಪ್ರಶ್ನೆಗಳನ್ನು ತಿಳಿಸಿದ್ದಾರೆ.
ಇವರು ಟ್ವಿಟ್ಟರ್ನಲ್ಲಿ GIF ಅನ್ನು ಹಂಚಿಕೊಂಡಿದ್ದು, ದೀಪವನ್ನು ಕ್ಲಿಕ್ ಮಾಡಿದಾಗ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಇದು ದೀಪಾವಳಿಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತದ ಜನರು ಕೇಳುತ್ತಿರುವ ಪ್ರಮುಖ ಐದು ಪ್ರಶ್ನೆಗಳನ್ನು ಪ್ರತಿನಿಧಿಸಲು ಐದು ಸಂಖ್ಯೆಗಳನ್ನು ಹೊಂದಿರುವ ದೀಪವನ್ನು ತೋರಿಸುತ್ತದೆ.
ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಪ್ರಶ್ನೆಗಳು
1.) ಭಾರತೀಯರು ದೀಪಾವಳಿಯನ್ನು ಏಕೆ ಆಚರಿಸುತ್ತಾರೆ?
2.) ದೀಪಾವಳಿಯಂದು ನಾವು ರಂಗೋಲಿಯನ್ನು ಏಕೆ ಹಾಕುತ್ತೇವೆ?
3.) ದೀಪಾವಳಿಯಂದು ದೀಪಗಳನ್ನು ಏಕೆ ಹಚ್ಚುತ್ತೇವೆ?
4.) ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಏಕೆ ಮಾಡಲಾಗುತ್ತದೆ?
5.) ದೀಪಾವಳಿಯಲ್ಲಿ ಎಣ್ಣೆ ಸ್ನಾನ ಏಕೆ?
ದೀಪಾವಳಿಯು ಭಾರತದಾದ್ಯಂತ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಉತ್ಸಾಹದಿಂದ ಆಚರಿಸಲ್ಪಡುತ್ತದೆ. ದೀಪಾವಳಿಯು ರಾತ್ರಿಯನ್ನು ಬೆಳಗಿಸುವುದು ಮಾತ್ರವಲ್ಲದೆ ನಮ್ಮ ಹೃದಯವನ್ನೂ ಬೆಳಗಿಸುತ್ತದೆ, ಸಂತೋಷವನ್ನು ಹೆಚ್ಚಿಸುತ್ತದೆ. , ಸಂಪತ್ತು, ಸಮೃದ್ಧಿ ನೀಡುತ್ತದೆ.ಈ ಹಬ್ಬವು ಭಾರತದ ಪ್ರಾಚೀನ ಗ್ರಂಥಗಳು ಮತ್ತು ದಂತಕಥೆಗಳಲ್ಲಿ ತನ್ನ ಬೇರುಗಳನ್ನು ಕಂಡುಕೊಳ್ಳುತ್ತದೆ. ರಾವಣನನ್ನು ಸೋಲಿಸಿದ ನಂತರ ರಾಮನು ತನ್ನ ರಾಜ್ಯವಾದ ಅಯೋಧ್ಯೆಗೆ ಹಿಂದಿರುಗಿದ ದಿನ ಎಂದು ನಂಬಲಾಗಿದೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಗಳು ತಮ್ಮ ಮನೆಗಳು ಮತ್ತು ಹೃದಯಗಳನ್ನು ಶುದ್ಧೀಕರಿಸುವ ಸಮಯವಾಗಿದೆ.