Diwali 2022: ಇನ್ನೆರಡು ವಾರದಲ್ಲಿ ದೀಪಾವಳಿ.. ಐದು ದಿನಗಳ ಹಬ್ಬದ ಮಹತ್ವ ಏನು?

By Suvarna NewsFirst Published Oct 10, 2022, 11:36 AM IST
Highlights

ದೀಪಾವಳಿ ಎಂದರೆ ಇಡೀ ಭಾರತಕ್ಕೆ ಭಾರತವೇ ಮಣ್ಣಿನ ದೀಪದ ಬೆಳಕು, ಘಮಲಿಂದ ತುಂಬುತ್ತದೆ. ಅತ್ಯಂತ ಸಂಭ್ರಮದಿಂದ ಹಿಂದೂಗಳು ಆಚರಿಸುವ ಈ ಹಬ್ಬ ಯಾವಾಗ, ಅದರ ಪ್ರಾಮುಖ್ಯತೆ ಏನು ಎಲ್ಲ ವಿವರಗಳನ್ನು ತಿಳಿಯೋಣ.

ಬೀದಿಗಳು ಮಣ್ಣಿನ ದಿಯಾಗಳಿಂದ ಬೆಳಗುವುದರಿಂದ ಹಿಡಿದು ಪಟಾಕಿಗಳು ಸಂಜೆಯ ಆಕಾಶವನ್ನು ಬೆಳಗಿಸುವುದರಿಂದ ದೇಶವು ಮಿನುಗುವ ವರ್ಷದ ಸಮಯ ಸನ್ನಿಹಿತವಾಗಿದೆ. ಬಹು ನಿರೀಕ್ಷಿತ ಐದು ದಿನಗಳ ದೀಪಗಳ ಹಬ್ಬ, ದೀಪಾವಳಿಯ ಸಂಭ್ರಮ ಎಲ್ಲೆಡೆ ತುಂಬುತ್ತಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಸೂಚಿಸುವ ದೀಪಾವಳಿಯನ್ನು ಪ್ರಪಂಚದಾದ್ಯಂತ ಪ್ರೀತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. 

ಜನರು ಈ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ, ದೀಪಗಳನ್ನು ಬೆಳಗಿಸುತ್ತಾರೆ, ಹೂವುಗಳು ಮತ್ತು ರಂಗೋಲಿಯಿಂದ ತಮ್ಮ ಮನೆಯ ಪ್ರತಿಯೊಂದು ಮೂಲೆಯನ್ನು ಅಲಂಕರಿಸುತ್ತಾರೆ. ಕುಟುಂಬಗಳು ಲಕ್ಷ್ಮಿ ಪೂಜೆಯನ್ನು ಸಹ ಮಾಡುತ್ತವೆ ಮತ್ತು ತಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಅನುಗ್ರಹಿಸುವಂತೆ ಸಂಪತ್ತಿನ ದೇವತೆಯನ್ನು ಪ್ರಾರ್ಥಿಸುತ್ತಾರೆ. ವಿಶೇಷ ಖಾದ್ಯಗಳು ದೀಪಾವಳಿ ಆಚರಣೆಯ ಪ್ರಮುಖ ಭಾಗವಾಗಿದೆ.

Latest Videos

ದೀಪಾವಳಿ 2022 ದಿನಾಂಕ ಮತ್ತು ಪೂಜೆ ಸಮಯ: ಈ ವರ್ಷ, ದೀಪಾವಳಿಯು ಸೋಮವಾರ, ಅಕ್ಟೋಬರ್ 24ರಂದು ಬರುತ್ತದೆ. ಈ ಮಂಗಳಕರ ಹಬ್ಬದ ಆಚರಣೆಗಳು ಐದು ದಿನಗಳವರೆಗೆ ಇರುತ್ತದೆ. ಹಬ್ಬದ ಅವಧಿಯು ಧಂತೇರಸ್‌ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭಯ್ಯಾ ದೂಜ್‌ನಲ್ಲಿ ಕೊನೆಗೊಳ್ಳುತ್ತದೆ. 
ಅಕ್ಟೋಬರ್ 24, 2022 
ಲಕ್ಷ್ಮಿ ಪೂಜೆ ಮುಹೂರ್ತ - ಸಂಜೆ 07:26ರಿಂದ 08:39ರವರೆಗೆ
ಪ್ರದೋಷ ಕಾಲ - ಸಂಜೆ 06:10ರಿಂದ 08:39ರವರೆಗೆ
ವೃಷಭ ಕಾಲ - ಸಂಜೆ 07:26ರಿಂದ 09:26ರವರೆಗೆ
ಅಮವಾಸ್ಯೆ ತಿಥಿ ಪ್ರಾರಂಭ - ಅಕ್ಟೋಬರ್ 24, 2022ರಂದು ಸಂಜೆ 05:27
ಅಮವಾಸ್ಯೆಯ ತಿಥಿ ಅಂತ್ಯ - ಅಕ್ಟೋಬರ್ 25, 2022ರಂದು ಸಂಜೆ 04:18ಕ್ಕೆ

Mangal Gochar 2022: ಮೇಷ, ಮಿಥುನ ಸೇರಿ ಈ 4 ರಾಶಿಗಳಿಗೆ ಕಾದಿದೆ ತೊಂದರೆಗಳ ಸರಮಾಲೆ..

ದೀಪಾವಳಿಯ ಮಹತ್ವ
ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ವೀಕ್ಷಿಸಲು ಹಿಂದೂಗಳು ಈ ಮಂಗಳಕರ ಹಬ್ಬವನ್ನು ಆಚರಿಸುತ್ತಾರೆ. ಭಗವಾನ್ ಕೃಷ್ಣನಿಂದ ನರಕಾಸುರನಂತಹ ಅನೇಕ ರಾಕ್ಷಸರ ಮರಣ, ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಭಗವಾನ್ ರಾಮನ ಆಗಮನ ಮತ್ತು ಭಗವಾನ್ ವಾಮನನು ಬಲಿಯನ್ನು ಸೋಲಿಸಿದ ದಿನವನ್ನು ದೀಪಾವಳಿ ಸೂಚಿಸುತ್ತದೆ. 

ದೀಪಾವಳಿಯ ಐದು ಮಂಗಳಕರ ದಿನಗಳು
ಗೋವತ್ಸ ದ್ವಾದಶಿ, ಅಕ್ಟೋಬರ್ 21

ಮಹಾರಾಷ್ಟ್ರದಲ್ಲಿ, ದೀಪಾವಳಿ ಆಚರಣೆಗಳು ಗೋವತ್ಸ ದ್ವಾದಶಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಧಂತೇರಸ್‌ಗೆ ಒಂದು ದಿನ ಮೊದಲು ಗುರುತಿಸಲಾಗುತ್ತದೆ. ಇದನ್ನು ಕರ್ನಾಟಕದಲ್ಲಿ ಅಶ್ವಯುಜ ಬಹುಳ ತ್ರಯೋದಶಿ ಎನ್ನಲಾಗುತ್ತದೆ. ಈ ವರ್ಷ, ಇದು ಶುಕ್ರವಾರ, ಅಕ್ಟೋಬರ್ 21ರಂದು ಬರುತ್ತದೆ. ಈ ದಿನ, ಹಿಂದೂಗಳು ಹಸುಗಳು ಮತ್ತು ಕರುಗಳನ್ನು ಪೂಜಿಸುತ್ತಾರೆ ಮತ್ತು ಅವುಗಳಿಗೆ ಗೋಧಿ ಉತ್ಪನ್ನಗಳನ್ನು ಅರ್ಪಿಸುತ್ತಾರೆ. ಈ ದಿನವನ್ನು ನಂದಿನಿ ವ್ರತ ಎಂದೂ ಕರೆಯುತ್ತಾರೆ.

ಅನಂತ ಪದ್ಮನಾಭ ದೇವಸ್ಥಾನದ 'ಬಬಿಯಾ' ಇನ್ನಿಲ್ಲ!

ನರಕ ಚತುರ್ದಶಿ, ಅಕ್ಟೋಬರ್ 22
ನರಕ ಚತುರ್ದಶಿಯನ್ನು  ಈ ವರ್ಷ ಶನಿವಾರದಂದು ಆಚರಿಸಲಾಗುತ್ತದೆ. ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ. ಇದನ್ನು ಧಂತೇರಸ್ ಎಂದೂ ಹೇಳಲಾಗುತ್ತದೆ. ಇದು ದೀಪಾವಳಿ ಹಬ್ಬದ ಪ್ರಾರಂಭವನ್ನು ಸೂಚಿಸುತ್ತದೆ. ಈ ಮಂಗಳಕರ ದಿನದಂದು ಲಕ್ಷ್ಮಿ ದೇವತೆ ಮತ್ತು ಸಂಪತ್ತಿನ ದೇವರಾದ ಕುಬೇರನನ್ನು ಪೂಜಿಸಲಾಗುತ್ತದೆ. ಕೆಲವೆಡೆ ವಿಷ್ಣುವನ್ನೂ ಪೂಜಿಸಲಾಗುತ್ತದೆ. 

ಬಲೀಂದ್ರ ಪೂಜೆ, ಕಾರ್ತಿಕ ದೀಪ, ಅಕ್ಟೋಬರ್ 23
ಕಾರ್ತಿಕ ದೀಪವನ್ನು ಅಕ್ಟೋಬರ್ 23ರ ಭಾನುವಾರದಂದು ಆಚರಿಸಲಾಗುತ್ತದೆ. 

ಬಲಿಪಾಡ್ಯಮಿ, ಅಕ್ಟೋಬರ್ 24
ಈ ವರ್ಷ ಅಕ್ಟೋಬರ್ 24ರಂದು ಬಲಿ ಪಾಡ್ಯಮಿ ಬರುತ್ತದೆ. ಈ ದಿನ ಜನರು ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ, ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಗುರುತಿಸಲು ತಮ್ಮ ಮನೆಗಳನ್ನು ದೀಪಗಳಿಂದ ಬೆಳಗಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಸಿಹಿತಿಂಡಿಗಳು, ಒಣ ಹಣ್ಣುಗಳನ್ನು ವಿತರಿಸುತ್ತಾರೆ. 

ನಾಯಿ ಸಾಕುವುದು ಎಲ್ಲರಿಗೂ ಶುಭವಲ್ಲ, ಜ್ಯೋತಿಷ್ಯ ಏನನ್ನುತ್ತೆ ಕೇಳಿ!

ಗೋವರ್ಧನ ಪೂಜೆ, ಅಕ್ಟೋಬರ್ 25
ಈ ವರ್ಷ ಅಕ್ಟೋಬರ್ 25ರಂದು ಬರುವ ಗೋವರ್ಧನ ಪೂಜೆಯೊಂದಿಗೆ ದೀಪಾವಳಿ ಹಬ್ಬ ಕೊನೆಗೊಳ್ಳುತ್ತದೆ. ಈ ದಿನದಂದು ಭಗವಾನ್ ಕೃಷ್ಣನು ಇಂದ್ರನನ್ನು ಸೋಲಿಸಿದನು. ಕಾರ್ತಿಕ ಮಾಸದ ಪ್ರತಿಪದ ತಿಥಿಯಲ್ಲಿ ಆಚರಣೆಗಳು ಪ್ರಾರಂಭವಾಗುತ್ತವೆ.

click me!