ಧಾರವಾಡದ ಮುಸ್ಲಿಂ ಕುಟುಂಬವೊಂದು ಪುಣ್ಯ ಕ್ಷೇತ್ರ ಗೋಕರ್ಣದಲ್ಲಿ ಪಿತೃಕಾರ್ಯವನ್ನು ನಡೆಸಿದ ಅಪರೂಪದ ಘಟನೆಯು ಕೆಲವು ದಿನಗಳ ಹಿಂದೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ (ಅ.07): ಧಾರವಾಡದ ಮುಸ್ಲಿಂ ಕುಟುಂಬವೊಂದು ಪುಣ್ಯ ಕ್ಷೇತ್ರ ಗೋಕರ್ಣದಲ್ಲಿ ಪಿತೃಕಾರ್ಯವನ್ನು ನಡೆಸಿದ ಅಪರೂಪದ ಘಟನೆಯು ಕೆಲವು ದಿನಗಳ ಹಿಂದೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.
ಹೌದು, ರಾಜ್ಯದಹಲಬವು ನದಿ ತೀರ ಪ್ರದೇಶಗಳು ಹಾಗೂ ದೇಶದ ಹಲವು ಸಮುದ್ರ ತೀರದ ಪ್ರದೇಗಳಲ್ಲಿ ಹಿಂದೂಗಳು ಸಾಮಾನ್ಯವಾಗಿ ಪಿತೃ ಕಾರ್ಯಗಳನ್ನು ನೆವೇರಿಸಲಾಗುತ್ತದೆ. ಆದರೆ, ಇಲ್ಲೊಂದು ಮುಸ್ಲಿಂ ಕುಟುಂಬವು ಹಿಂದೂ ಸಂಪ್ರದಾಯದಂತೆ ಗೋಕರ್ಣ ಸಮುದ್ರ ತೀರದಲ್ಲಿ ಪಿತೃ ಕಾರ್ಯವನ್ನು ನಡೆಸಿದ ಅಪರೂಪದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಮುಸ್ಲಿಂ ಕುಟುಂಬದಿಂದ ಪಿತೃಕಾರ್ಯವನ್ನು ನೆರವೇರಿಸಲಾಗಿದೆ.
ಆರ್‌ಎಸ್‌ಎಸ್ ಮುಖಂಡನಿಗೆ ಹೃದಯಾಘಾತ: ಕಾರಲ್ಲಿ ಕುಳಿತುಕೊಂಡೇ ಪ್ರಾಣಬಿಟ್ರು
ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನ ಗೋಕರ್ಣದ ಪಿತೃಶಾಲೆಯಲ್ಲಿ ಪೂರೈಕೆ ಮಾಡಲಾಗುದೆ. ಧಾರವಾಡದ ಧಾನೇಶ್ವರಿ ನಗರದ ಶಂಸಾದ್ ಎಂಬ ಮಹಿಳೆಯ ಕುಟುಂಬದಿಂದ ಪಿತೃಕಾರ್ಯ ನೆರವೇರಿಸಲಾಗಿದೆ. ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳ ಮುಸ್ಲಿಂ ಕುಟುಂಬ ಇದಾಗಿದೆ. ಶಂಸಾದ್ ಅವರ ತಮ್ಮನಿಗೆ ಮದುವೆ ಸಂಬಂಧ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಮೊರೆ ಹೋಗಿದ್ದರು. ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆಯ ಉದ್ದೇಶದಿಂದ ಪಿತೃಕಾರ್ಯ ನೆರವೇರಿಸಲಾಗಿದೆ.
ಗೋಕಣದಲ್ಲಿ ಪುರೋಹಿತರಾದ ನಾಗರಾಜ ಭಟ್ ಗುರ್ಲಿಂಗ ಹಾಗೂ ಸುಬ್ರಹಣ್ಯ ಚಿತ್ರಿಗೆಮಠ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿಸಲಾಗಿದೆ. ಗೋಕರ್ಣದಲ್ಲಿ ಕ್ರೈಸ್ತ ಸಮುದಾಯದ ಸಾಕಷ್ಟು ಮಂದಿ ಪಿತೃ ಕಾರ್ಯ ನೆರವೇರಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಮುಸ್ಲಿಂ ಕುಟುಂಬದಿಂದ ಪಿತೃಕಾರ್ಯ ನೆರವೇರಿಸಿದ್ದಾರೆ ಎಂದು ಪುರೋಹಿತರು ಮಾಹಿತಿ ನೀಡಿದ್ದಾರೆ. ಈಗ ಮುಸ್ಲಿಂ ಕುಟುಂಬಕ್ಕೆ ಹಿಂದೂಗಳು ಕೂಡ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ.