ನೀವು ಹೇಗೆ ನಿರ್ಧಾರ ತಗೋತೀರಿ ಅನ್ನೋದು ನಿಮ್ಮ ರಾಶಿಯನ್ನ ಆಧರಿಸಿದೆ!

Published : Oct 06, 2023, 05:55 PM IST
ನೀವು ಹೇಗೆ ನಿರ್ಧಾರ ತಗೋತೀರಿ ಅನ್ನೋದು ನಿಮ್ಮ ರಾಶಿಯನ್ನ ಆಧರಿಸಿದೆ!

ಸಾರಾಂಶ

ಪ್ರತಿಯೊಬ್ಬರೂ ವಿಭಿನ್ನ ನಿಲುವು, ದೃಷ್ಟಿಕೋನ, ವಿಚಾರ, ಅಂಶಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಈ ಗುಣ ರಾಶಿಗಳನ್ನು ಅವಲಂಬಿಸಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯವರು ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ನೋಡಿ.  

ಜೀವನದ ಎಲ್ಲ ಹಂತಗಳಲ್ಲಿ, ಕ್ಷಣಗಳಲ್ಲಿ ನಮ್ಮ ಬದುಕಿನ ನಿರ್ಧಾರ ಕೈಗೊಳ್ಳುವವರು  ನಾವೇ ಆಗಿರಬೇಕು, ಎಲ್ಲದರಲ್ಲೂ ನಮ್ಮತನವೇ ತುಂಬಿರಬೇಕು ಎನ್ನುವುದು ಎಲ್ಲರ ಆಶಯ, ಬಯಕೆ. ಸಾಧ್ಯವಾದಷ್ಟೂ ಇದನ್ನು ಅನುಷ್ಠಾನಗೊಳಿಸಲು ಹೆಣಗುತ್ತೇವೆ. ನಮಗಾಗಿ ಬೇರೆಯವರು ನಿರ್ಧಾರ ತೆಗೆದುಕೊಳ್ಳುವುದನ್ನು ಸಹಿಸುವುದು ಕಷ್ಟ ಕಷ್ಟ. ಈ ನಿರ್ಧಾರ ಕೈಗೊಳ್ಳುವಿಕೆಯ ಗುಣ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ. ಒಂದೇ ರೀತಿಯ ಸನ್ನಿವೇಶ ಹತ್ತು ಜನರಿಗೆ ಎದುರಾದರೂ ಎಲ್ಲರೂ ಬೇರೆ ಬೇರೆ ರೀತಿಯಲ್ಲೇ ನಿರ್ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿರ್ಧಾರ ತೆಗೆದುಕೊಳ್ಳುವ ಬುದ್ಧಿಯ ಮೇಲೆ ರಾಶಿಚಕ್ರದ ಪ್ರಭಾವ ಅಧಿಕವಾಗಿರುತ್ತದೆ. ಪ್ರತಿ ರಾಶಿಗಳ ಜನ ನಿಗದಿತ ಒಂದು ಅಂಶದ ತಳಹದಿಯ ಮೇಲೆ ನಿರ್ಧಾರ ಕೈಗೊಳ್ಳುವುದು ಕಂಡುಬರುತ್ತದೆ. ಹಾಗಿದ್ದರೆ ಯಾವ ರಾಶಿಯವರು ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ನೋಡೋಣ.

•    ಮೇಷ (Aries)
ತ್ವರಿತವಾಗಿ ನಿರ್ಧಾರ (Decision) ಕೈಗೊಳ್ಳುತ್ತಾರೆ. ಅಂತಃಸ್ಫೂರ್ತಿ  ಏನು ಹೇಳುತ್ತದೆಯೋ ಹಾಗೆ ಮಾಡುತ್ತಾರೆ. ಅಪಾಯ (Risk) ಎದುರಿಸಲು ಭಯವಿಲ್ಲ. ದುಡುಕು (Impulsive) ಪ್ರವೃತ್ತಿ. ದೀರ್ಘಕಾಲ ಏನನ್ನಾದರೂ ಪೆಂಡಿಂಗ್ ಇಡಲು ಇವರಿಗೆ ಸಾಧ್ಯವಿಲ್ಲ. “ಮೊದಲು ಕೆಲಸ, ಬಳಿಕ ಯೋಚನೆ’ ಇವರ ಪಾಲಿಸಿ.

•    ವೃಷಭ (Taurus)
ಪ್ರಾಯೋಗಿಕ (Practical) ನಿಲುವಿನ ಇವರು ನಿರ್ಧಾರ ಕೈಗೊಳ್ಳುವಾಗ ನಿಗದಿತ ಉದ್ದೇಶದ ಬಗ್ಗೆ ಗಮನ ನೀಡುತ್ತಾರೆ. ಒಳಿತು-ಕೆಡುಕುಗಳ ಬಗ್ಗೆ ಯೋಚಿಸುತ್ತಾರೆ. ಜೀವನಕ್ಕೆ ಸ್ಥಿರತೆ, ಭದ್ರತೆ (Secure) ನೀಡುವಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

ಈ ರಾಶಿಯವರು ತಮ್ಮ ಸ್ನೇಹಿತರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ

•    ಮಿಥುನ (Gemini)
ಮಿಥುನದ ಜನ ಎಲ್ಲ ಮಾಹಿತಿ (Information) ಪಡೆಯಲು ಹವಣಿಸುತ್ತಾರೆ ಮತ್ತು ಹೊಂದಾಣಿಕೆಯಾಗುವಂತಹ ನಿರ್ಧಾರ ಕೈಗೊಳ್ಳುತ್ತಾರೆ. ಎಲ್ಲ ರೀತಿಯ ಅವಕಾಶಗಳನ್ನು (Opportunity) ಪರಿಶೀಲಿಸುತ್ತಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಇವರ ಬಳಿ ಸಮಗ್ರ ಮಾಹಿತಿ ಇರುತ್ತದೆ. ಹೊಸ ಮಾಹಿತಿ ದೊರೆತರೆ ತಮ್ಮ ಮನಸ್ಸನ್ನು ಬದಲಿಸಬಲ್ಲರು.

•    ಕರ್ಕಾಟಕ (Cancer)
ತಮ್ಮ ಭಾವನೆ (Feelings) ಮತ್ತು ಅಂತಃದೃಷ್ಟಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ನಿರ್ಧಾರದಿಂದ ತಮ್ಮ ಹಾಗೂ ಇತರರ ಮೇಲಾಗುವ ಭಾವನಾತ್ಮಕ ಪರಿಣಾಮಗಳನ್ನು ಪರಿಶೀಲನೆ ಮಾಡುತ್ತಾರೆ.

•    ಸಿಂಹ (Leo)
ತಮ್ಮ ಅಂತಃಸ್ಫೂರ್ತಿ (Intuition) ಹಾಗೂ ತಮಗೇನು ಇಷ್ಟವೋ ಅದರ ಬಗ್ಗೆ ಆತ್ಮವಿಶ್ವಾಸದಿಂದ ನಿರ್ಧಾರ ಕೈಗೊಳ್ಳುತ್ತಾರೆ. ತಮ್ಮ ಘನತೆ ಹಾಗೂ ಆತ್ಮಗೌರವ (Self Esteem) ಹೆಚ್ಚಿಸುವಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರ ಯಾವುದೇ ನಿರ್ಧಾರ ಇವರನ್ನು ಕೇಂದ್ರಬಿಂದುವಿನಲ್ಲಿ ನಿಲ್ಲಿಸುವಂತಿರುತ್ತದೆ.

•    ಕನ್ಯಾ (Virgo)
ವಿಸ್ತೃತ ಮಾಹಿತಿ ಹಾಗೂ ಎಲ್ಲ ರೀತಿಯ ಅವಕಾಶಗಳನ್ನು ಪರಿಶೀಲಿಸಿದ ಬಳಿಕ ನಿರ್ಣಯ ಕೈಗೊಳ್ಳುತ್ತಾರೆ. ಇವರು ಪರಿಪೂರ್ಣತೆ (Perfection) ಬಯಸುತ್ತಾರೆ ಹಾಗೂ ಪ್ರಾಯೋಗಿಕ ಮತ್ತು ದಕ್ಷಿತೆಯನ್ನು ಆಧರಿಸಿ ನಿರ್ಧರಿಸುತ್ತಾರೆ.

•    ತುಲಾ (Libra)
ಸಮತೋಲನ ಮತ್ತು ಸಾಮರಸ್ಯದ (Harmony) ನಿರ್ಧಾರ ಕೈಗೊಳ್ಳಲು ಆದ್ಯತೆ ನೀಡುತ್ತಾರೆ. ಇತರರಿಂದ ಮಾಹಿತಿ ಪಡೆಯುತ್ತಾರೆ. ತಮ್ಮೊಂದಿಗೆ ಇರುವ ಪ್ರತಿಯೊಬ್ಬರನ್ನೂ ತೃಪ್ತಿಪಡಿಸಲು ಯತ್ನಿಸುತ್ತಾರೆ. ರಾಜತಾಂತ್ರಿಕ ಮಾರ್ಗ ಅನುಸರಿಸುತ್ತಾರೆ. 

ಈ ರಾಶಿಯವರು 'ಐ ಲವ್‌ ಪಾರ್ಟಿ' ಎನ್ನುತ್ತಾರೆ

•    ವೃಶ್ಚಿಕ (Scorpio)
ಆಳವಾದ ಹಾಗೂ ಕಾರ್ಯತಂತ್ರದ ನಿರ್ಧಾರ ಕೈಗೊಳ್ಳಲು ಇವರು ಫೇಮಸ್. ಮಾಹಿತಿಗಳ ಕುರಿತು ಆಳವಾದ ಅಧ್ಯಯನ ನಡೆಸುತ್ತಾರೆ. ಸವಾಲುಗಳಿಗೆ (Challenges) ಹೆದರುವುದಿಲ್ಲ. ಪರಿವರ್ತನೆ ಮತ್ತು ಸಬಲಗೊಳಿಸುವಂತಹ ನಿರ್ಣಯ ಕೈಗೊಳ್ಳುತ್ತಾರೆ.

•    ಧನು (Sagittarius)
ಧನಾತ್ಮಕ (Optimistic) ಧೋರಣೆಯೊಂದಿಗೆ ನಿರ್ಧರಿಸುತ್ತಾರೆ. ವಿಸ್ತಾರವಾದ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಾರೆ. ಗುರಿ ಸಾಧನೆಯ ಮಾರ್ಗದಲ್ಲಿ ಅಪಾಯ ಎದುರಿಸಲು ಹಿಂಜರಿಯುವುದಿಲ್ಲ.

•    ಮಕರ (Capricorn)
ಗುರಿ (Goal) ಮತ್ತು ಲೌಕಿಕ ವಿಚಾರಗಳೊಂದಿಗೆ ನಿರ್ಣಯಿಸುತ್ತಾರೆ. ಸ್ಪಷ್ಟ ಉದ್ದೇಶ ಇಟ್ಟುಕೊಂಡು ದೀರ್ಘಾವಧಿ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಯಶಸ್ಸು ಮತ್ತು ಸ್ಥಿರತೆಗೆ ಆದ್ಯತೆ ನೀಡುತ್ತಾರೆ.

•    ಕುಂಭ (Aquarius)
ಅನ್ವೇಷಣಾತ್ಮಕ (Innovative) ನಿರ್ಧಾರ ಕೈಗೊಳ್ಳುತ್ತಾರೆ. ಪ್ರಗತಿ ಮತ್ತು ಮಾನವೀಯತೆಯ ಮೌಲ್ಯಗಳಿಗೆ ಆದ್ಯತೆ ನೀಡುತ್ತಾರೆ. ಅಸಾಂಪ್ರದಾಯಿಕ ಆಯ್ಕೆಗಳನ್ನು ಅನುಸರಿಸಲು ಸದಾ ಮುಕ್ತರಾಗಿರುತ್ತಾರೆ. 

•    ಮೀನ (Pisces)
ತಮ್ಮ ಅಂತಃದೃಷ್ಟಿ ಮತ್ತು ಪ್ರೀತಿಭರಿತ ಹೃದಯದಿಂದ ನಿರ್ಣಯಿಸುತ್ತಾರೆ. ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಸಹಾನುಭೂತಿಯಿಂದ (Empathy) ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. 
 

PREV
Read more Articles on
click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ಅಂಜುವ ಮಾತೇ ಇಲ್ಲ, ತಮ್ಮ ಹಣೆಬರಹವನ್ನ ತಾವೇ ಬದಲಾಯಿಸಿಕೊಳ್ಳುವ 4 ರಾಶಿಗಳಿವು