ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ವಿಚಿತ್ರ ಪತ್ರ!

By Govindaraj S  |  First Published Sep 24, 2022, 9:18 PM IST

ದೇವರಿಗೆ ಒಳ್ಳೆ ಬುದ್ಧಿ-ವಿದ್ಯೆ-ಜ್ಞಾನ-ಸುಖ-ಶಾಂತಿ-ನೆಮ್ಮದಿ-ಅಂತಸ್ತು-ಆರೋಗ್ಯ ಕೊಡಪ್ಪಾ ಅಂತಾ ಕೇಳ್ಕೊಳ್ತಾರೆ. ಆದರೆ ಸಂಬಳ ತಂದು ನನ್ನ ಕೈಗೆ ಕೊಡು, ಹುಡುಗಿನ ದಪ್ಪ ಮಾಡು, ಮದುವೆನ ಫಿಕ್ಸ್ ಮಾಡು ಅಂತ ಭಕ್ತನೋರ್ವ ದೇವಾಲಯದ ಹುಂಡಿಗೆ ತನ್ನ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಂತೆ ಪರಿಪರಿಯಾಗಿ ಬರೆದು ಬೇಡಿಕೊಂಡಿರುವ ಪತ್ರ ದೊರೆತಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.24): ದೇವರಿಗೆ ಒಳ್ಳೆ ಬುದ್ಧಿ-ವಿದ್ಯೆ-ಜ್ಞಾನ-ಸುಖ-ಶಾಂತಿ-ನೆಮ್ಮದಿ-ಅಂತಸ್ತು-ಆರೋಗ್ಯ ಕೊಡಪ್ಪಾ ಅಂತಾ ಕೇಳ್ಕೊಳ್ತಾರೆ. ಆದರೆ ಸಂಬಳ ತಂದು ನನ್ನ ಕೈಗೆ ಕೊಡು, ಹುಡುಗಿನ ದಪ್ಪ ಮಾಡು, ಮದುವೆನ ಫಿಕ್ಸ್ ಮಾಡು ಅಂತ ಭಕ್ತನೋರ್ವ ದೇವಾಲಯದ ಹುಂಡಿಗೆ ತನ್ನ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಂತೆ ಪರಿಪರಿಯಾಗಿ ಬರೆದು ಬೇಡಿಕೊಂಡಿರುವ ಪತ್ರ ದೊರೆತಿದೆ.

Tap to resize

Latest Videos

ದೇವರಿಗೆ ವಿಚಿತ್ರವಾಗಿ ಪತ್ರ ಬರೆದು ಬೇಡಿಕೊಂಡ ಭಕ್ತ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರೋ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಚಿತ್ರ ಪತ್ರವೊಂದು ಕಾಣಿಕೆ ಹುಂಡಿಯಲ್ಲಿ ಸಿಕ್ಕಿದೆ. ಪತ್ರದಲ್ಲಿ ಅಮ್ಮಾ ತಾಯೇ.... ರಮೇಶ್-ಮಂಜುಳ ಸಂಬಳವನ್ನ ರಾಜಮ್ಮನ ಕೈಗೆ ಕೊಡಲಿ. ಐಶ್ವರ್ಯ ಬೇಗ ದಪ್ಪ ಆಗಿ, ಪುಷ್ಠಿಯಾಗಿ ಕಾಣುವಂತೆ ಮಾಡು. ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ದಯೇ ತರೋ ಜೊತೆಗೆ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಂತೆ ಪರಿಪರಿಯಾಗಿ ಬರೆದು ಬೇಡಿಕೊಂಡಿರುವ ಪತ್ರ ದೊರೆತಿದೆ. 

Chikkamagaluru: ಕಾಂಗ್ರೆಸ್ಸಿನ ಪೇಸಿಎಂ ಪೇ ಪೋಸ್ಟರ್‌ಗೆ ಸಿ.ಟಿ.ರವಿ ಟಾಂಗ್

ದೇವಾಲಯದಲ್ಲಿ ನಿನ್ನೆ (ಶುಕ್ರವಾರ) ಹುಂಡಿಯ ಹಣ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ಹಣದ ಮಧ್ಯೆ ಇದೊಂದು ಪತ್ರ ಸಿಕ್ಕಿದ್ದು ದೇವಸ್ಥಾನದ ಆಡಳಿತ ಮಂಡಳಿಯವ್ರು ಹಾಗೂ ಅಧಿಕಾರಿಗಳು ಯಾರ್ ಗುರು ಇವ್ನು... ಹುಚ್ಚು ಭಕ್ತ ಎಂದು ನಸು ನಕ್ಕಿದ್ದಾರೆ. ದೇವರಿಗೆ ಆತ ಬರೆದಿರೋ ಸಮಸ್ಯೆಗಳ ಸರಮಾಲೆಯ ಪಟ್ಟಿಯನ್ನ ಓದಿ ಹೊಟ್ಟೆ-ಹುಣ್ಣಾಗುವಂತೆ ನಕ್ಕಿದ್ದಾರೆ. ಅದರಲ್ಲೂ ಸಂಬಳ ತಂದು ಇಂತವರಿಗೆ ಕೊಡಲಿ, ಹುಡುಗಿಯನ್ನ ದಪ್ಪ ಮಾಡಿ ಪುಷ್ಠಿಯಾಗಿ ಕಾಣುವಂತೆ ಮಾಡು ಎಂಬ ಕಲ್ಪನೆಯ ಮನವಿಯನ್ನು ಮಾಡಿದ್ದಾರೆ. ಅಲ್ಲದೆ ಮಂಜುಳ ಅತ್ತೆ-ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು. ಮಂಜುಳ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನ ಒಳ್ಳೆಯವರಾಗಿಸು. 

ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು. ನಮ್ಮ ಋಣದ ಬಾಧೆ ಹಾಗೂ ಸಾಲದ ಭಾದೆಯನ್ನ ಬೇಗ ತೀರಿಸು, ರಮೇಶ-ಮಂಜುಳ ಒಪ್ಪಿಕೊಂಡಿರುವ ಒಂದು ಲಕ್ಷ ರೂಪಾಯಿ ಹಣವನ್ನ ಬೇಗ ಕೊಡುವಂತೆ ಮಾಡು, ರಾಮಕೃಷ್ಣ-ಅರುಣ ಇಬ್ಬರೂ ಹಣವನ್ನ ಬೇಗ ಕೊಡುವಂತೆ ಮಾಡು ಎಂದೆಲ್ಲಾ ಕೇಳಿಕೊಂಡಿದ್ದಾರೆ. ಈ ಹುಚ್ಚು ಭಕ್ತನ ಸಮಸ್ಯೆಗಳ ಪಟ್ಟಿಗೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಈ ದೇವಾಲಯದಲ್ಲಿ ಈ ರೀತಿಯ ಪತ್ರ ಇದೇ ಮೊದಲಲ್ಲ. ಕಳೆದ ಒಂದೆರಡು ವರ್ಷಗಳ ಹಿಂದೆಯೂ ಇದೇ ರೀತಿ ಪತ್ರ ಪತ್ತೆಯಾಗಿತ್ತು. ಆಗಲೂ ಕೂಡ ಭಕ್ತನೋರ್ವ ಪ್ರೀತಿ-ಪ್ರೇಮ, ಹಣ-ಕೆಲಸದ ಬಗ್ಗೆಯೇ ಪತ್ರ ಬರೆದಿದ್ದನು. 

Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ಪರಿಹಾರ

ಕಾಣಿಕೆ ಹುಂಡಿಯಲ್ಲಿ 18.39 ಲಕ್ಷ ರೂಪಾಯಿ ಹಣ ಸಂಗ್ರಹ: ಕಳಸೇಶ್ವರ ದೇವಸ್ಥಾನ ಮತ್ತು ಪರಿವಾರ ದೇವತೆಗಳ ಹುಂಡಿಗಳಲ್ಲಿ ಕಳೆದ 6 ತಿಂಗಳಿನಲ್ಲಿ 18.39 ಲಕ್ಷ ರೂಪಾಯಿ ಹಣ ಸಂಗ್ರಹಣೆಯಾಗಿದೆ. ಕಳೆದ ಏಪ್ರಿಲ್ 1ರಿಂದ ಈವರೆಗಿನ 6 ತಿಂಗಳಲ್ಲಿ ಈ ಹಣವು ಸಂಗ್ರಹವಾಗಿದ್ದು. ಕಳಸೇಶ್ವರ ದೇವಸ್ಥಾನ, ಗಿರಿಜಾಂಬಾ ದೇವಸ್ಥಾನ, ಆನೆಗಣಪತಿ, ಸರ್ವಾಂಗ ಸುಂದರಿ, ಕ್ಷೇತ್ರಪಾಲ ಸೇರಿದಂತೆ ಒಟ್ಟು 19 ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ಮಾಡಲಾಗಿತ್ತು.

click me!