
ಪ್ರತಿಯೊಬ್ಬನಿಗೂ ಒಂದು ಜನ್ಮರಾಶಿ ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ ಇರುತ್ತದೆ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ- ಈ ಪಂಚಭೂತಗಳಲ್ಲಿ ಒಂದು ನಿಮ್ಮದಾಗಿರುತ್ತೆ. ಹೀಗಾಗಿ ನಮ್ಮ ನಿಮ್ಮ ಬದುಕು- ಸಾವು ಕೂಡ ಈ ಐದು ಭೂತಗಳಿಗೆ ಸಂಬಂಧಿಸಿದ ಹಾಗೆಯೇ ಇರುವುದು ಸ್ವಾಭಾವಿಕ. ಹುಟ್ಟಿದವರಿಗೆ ಸಾವು ಹಣೆಯಲ್ಲಿ ಬರೆದಿರುತ್ತದೆ. ಹಾಗೇ ಜನ್ಮರಾಶಿಗೂ ಸಾವಿಗೂ ಸಂಬಂಧವಿದೆ. ಕೆಲವೊಮ್ಮೆ ಅದು ನೂರಕ್ಕೆ ನೂರು ನಿಜವಾಗದೇ ಹೋಗಬಹುದು. ಯಾಕೆಂದರೆ ಜನ್ಮರಾಶಿಯ ಜೊತೆಗೆ ವ್ಯಕ್ತಿಯ ಲೈಫ್‌ಸ್ಟೈಲ್ ಕೂಡ ಇಲ್ಲಿ ಕೌಂಟ್ ಆಗುತ್ತೆ. ಆದರೆ ಯಾವ ರಾಶಿಯ ವ್ಯಕ್ತಿಗೆ ಮರಣಗಂಡ ಎಂದು ತರ್ಕಿಸುವುದು ಸಾಧ್ಯ. ಜೀವನಶೈಲಿ ಆರೋಗ್ಯಕರವಾಗಿದ್ದರೆ, ಶನಿಯಂಥ ಗ್ರಹಗಳು ಸೂಕ್ತ ಸ್ಥಾನದಲ್ಲಿದ್ದು ನಿಮ್ಮನ್ನು ರಕ್ಷಿಸಿದರೆ, ಅಪಮೃತ್ಯಗಳು ಕಾಡಲಾರವು ಎಂಬುದನ್ನೂ ನೆನಪಿನಲ್ಲಿಡಬೇಕು.
ಮೇಷ ರಾಶಿ (aries)
ಇವರ ಗುಣ ಬೆಂಕಿ. ಹೀಗಾಗಿ ಬೆಂಕಿಯ ಬಳಿ ಹುಷಾರಾಗಿರಬೇಕು. ಬಿಸಿಯಾದ ವಸ್ತುಗಳನ್ನು ಹಿಡಿಯುವಾಗ ಎಚ್ಚರ. ಸಣ್ಣ ಕಿಡಿಯೂ ದೊಡ್ಡ ಬೆಂಕಿಯಾಗಿ ಕಾಡಬಹುದು. ಉರಿಯುವ ವಸ್ತುಗಳ ಬಳಿ, ಪೆಟ್ರೋಲ್- ಡೀಸೆಲ್ ಕೈಯಲ್ಲಿರುವಾಗ, ಹೆಚ್ಚು ಎಚ್ಚರ ವಹಿಸಬೇಕು.
ವೃಷಭ ರಾಶಿ (taurus)
ಇವರ ಗುಣ ಭೂಮಿ. ಹೃದಯಕ್ಕೆ ಸಂಬಂಧಿಸಿದಂತೆ ಎಚ್ಚರ ಇರಬೇಕು. ಹೃದಯಾಘಾತದ ಸೂಚನೆಗಳು ಕಾಣಿಸಿದರೆ ವೈದ್ಯಕೀಯ ಸಲಹೆ ಪಡೆಯಲು ಹಿಂಜರಿಯಬಾರದು. ಒಂದು ವಯಸ್ಸಿನ ನಂತರ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಬೇಕು.
ಮಿಥುನ ರಾಶಿ (gemini)
ಇವರ ಗುಣ ಗಾಳಿ. ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಅದು ಮಾರಣಾಂತಿಕವೂ ಆಗಬಹುದು. ಒನ್ಸ್ ಎಗೇಯ್ನ್, ಲೈಫ್‌ಸ್ಟೈಲ್ ಆರೋಗ್ಯಕರವಾಗಿ ಇದ್ದರೆ ಲಿವರ್‌ಗೆ ಏನೂ ಸಮಸ್ಯೆ ಆಗದು. ಆದರೆ ಔಷಧಗಳ ಓವರ್‌ಡೋಸ್ ಬಗ್ಗೆ ಎಚ್ಚರ ಅಗತ್ಯ.
ಕಟಕ ರಾಶಿ (cancer)
ನಿಮ್ಮ ಗುಣ ನೀರು. ಜಲಾಶಯಗಳ ಬಳಿ ಹೋಗುವಾಗ ಎಚ್ಚರ. ಈಜು ಬರುತ್ತಿದ್ದರೂ ಸುಳಿ, ಪ್ರವಾಹಗಳ ಬಗ್ಗೆ ಕೇರ್‌ಲೆಸ್ ಆಗಿರಬೇಡಿ. ಮೂತ್ರಕೋಶ ಸಂಬಂಧಿತ ಕಾಯಿಲೆ, ಕಿಡ್ನಿ ಪ್ರಾಬ್ಲೆಮ್‌ಗಳು ನಿಮ್ಮನ್ನು ಕಾಡಬಹುದು. ಆರಂಭದಿಂದಲೂ ಕಿಡ್ನಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು.
ಸಿಂಹ ರಾಶಿ (leo)
ಇವರ ಗುಣವೂ ಬೆಂಕಿ. ಮಾರಕ ರೋಗವೊಂದು ನಿಮ್ಮನ್ನು ಕಾಡಬಹುದು. ಉದಾಹರಣೆಗೆ ಕ್ಯಾನ್ಸರ್ ಇತ್ಯಾದಿ. ಧೂಮಪಾನ, ಮಧ್ಯಪಾನದಂಥ ಅಭ್ಯಾಸಗಳು ಇದ್ದರೆ ಅವುಗಳಿಂದ ದೂರ ಉಳಿಯಲು ಮನಸ್ಸು ಮಾಡಿ. ಕುಟುಂಬದಲ್ಲಿ ಕ್ಯಾನ್ಸರ್‌ನ ಫ್ಯಾಮಿಲಿ ಹಿಸ್ಟರಿ ಇದ್ದರೆ ಹುಷಾರಾಗಿರಬೇಕು.
ಕನ್ಯಾ ರಾಶಿ (virgo)
ಇವರ ಗುಣ ಭೂಮಿ. ಭೂಕುಸಿತ, ಗೋಡೆ ಕುಸಿತಗಳ ಬಗ್ಗೆ ಎಚ್ಚರವಾಗಿರಬೇಕು. ಶಿಥಿಲವಾದ ಸೇತುವೆ, ಸಮುದ್ರದ ಅಂಚು, ಬಾವಿಯ ಅಂಚುಗಳಲ್ಲಿ ಎಚ್ಚರವಾಗಿರಿ. ಬೇಸ್‌ಮೆಂಟ್‌ಗಳಲ್ಲಿ, ಸುರಂಗಗಳಲ್ಲಿ ಉಸಿರುಗಟ್ಟಿದ ಅನುಭವ ನಿಮಗೆ ಆಗಬಹುದು. ಭೂಮಿಗಾಗಿ ಸಾಲು ಮಾಡುವುದೂ ನಿಮಗೆ ದುಬಾರಿ.
ತುಲಾ ರಾಶಿ (libra)
ಇವರ ಗುಣ ಗಾಳಿ. ಹರಿತವಾದ ವಸ್ತುಗಳಿಗೆ ನಿಮಗೆ ಮರಣಗಂಡ ಉಂಟಾಗಬಹುದು. ಚಾಕು ಚೂರಿ ಇತ್ಯಾದಿಗಳ ಬಗ್ಗೆ ಹುಷಾರಾಗಿರಿ. ಕೆಲವೊಮ್ಮೆ ನೀವು ಆತ್ಮರಕ್ಷಣೆಗೆಂದು ಇಟ್ಟುಕೊಂಡ ಆಯುಧವೇ ನಿಮಗೆ ಮಾರಕವಾಗಬಹುದು. ಆಯುಧಗಳಿಗಿಂತಲೂ ಆತ್ಮೀಯ ಸಂಗಾತಿಗಳೇ ನಮ್ಮನ್ನು ರಕ್ಷಿಸುವವರು ಎಂಬುದು ಗೊತ್ತಿರಲಿ.
ರುದ್ರಾಕ್ಷಿಯಿಂದ ಬಯಸಿದ ಲಾಭ ಬೇಕಂದ್ರೆ ಈ ನಿಯಮ ಪಾಲಿಸಿ
ವೃಶ್ಚಿಕ ರಾಶಿ (scorpio)
ಇವರ ಗುಣ ನೀರು. ವಿಷಕಾರಿ ಆಹಾರ ಪದಾರ್ಥಗಳು ಮರಣಗಂಡ ಉಂಟುಮಾಡಬಹುದು. ಗ್ಯಾಸ್ಟರೈಟಿಸ್ ಸಮಸ್ಯೆಯನ್ನು ಹೆಚ್ಚು ಕಾಲ ಉಳಿಯಲು ಬಿಡಬಾರದು. ಕೆಲವು ಸರಳ ಆಹಾರಗಳೇ ವಿಷವಾಗಬಹುದು. ಬೀದಿ ತಿಂಡಿಗಳನ್ನು ಎಚ್ಚರದಿಂದ ಪರಿಶೀಲಿಸಬೇಕು. ಸ್ವಚ್ಛತೆ ಮುಖ್ಯ.
ಧನು ರಾಶಿ (sagittarius)
ಗುಣ ಬೆಂಕಿ. ಮನಸ್ಸು ಜರ್ಝರಿತಗೊಳಿಸಿಕೊಳ್ಳುವುದೇ ಹಾನಿಕರ. ಆತ್ಮಹತ್ಯೆಯ ಯೋಚನೆಗಳು ಸುಳಿಯಬಹುದು. ಖಿನ್ನತೆ ಉಂಟಾಗಬಹುದು. ಇಂಥ ಸಂದರ್ಭದಲ್ಲಿ ಕೌನ್ಸೆಲಿಂಗ್ ಬೇಕು. ಆತ್ಮೀಯ ಕುಟುಂಬ ಹಾಗೂ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆಗಳಿಂದ ಜರ್ಝರಿತಗೊಂಡಾಗ ಆತ್ಮಹತ್ಯೆ ಬಗ್ಗೆ ಯೋಚಿಸಲೇಬಾರದು.
ಮಕರ ರಾಶಿ (capricorn)
ಗುಣ ಭೂಮಿ. ಶತ್ರುಗಳಿಂದ ಮರಣಗಂಡ ಎಂದು ಜ್ಯೋತಿಷ್ಯ ಸೂಚಿಸುತ್ತಿದೆ. ಇದಕ್ಕೆ ಸಿಂಪಲ್ ಪರಿಹಾರ ಎಂದರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ ಅಷ್ಟೇ. ಸಿಟ್ಟು, ದುಡುಕು, ಮುಂಗೋಪ, ಬಾಯಿಚಪಲ, ಚಾಡಿಯಂಥ ಗುಣಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡರೆ ಒಳಿತು, ಹಿತಶತ್ರುಗಳೂ ಗಮನದಲ್ಲಿರಲಿ.
ಕುಂಭ ರಾಶಿ (aquarius)
ಗುಣ ಗಾಳಿ. ಆಹಾರದಿಂದಲೇ ನಿಮಗೆ ತೊಂದರೆ. ಯಾವ ಆಹಾರ ಎಂದು ಚಿಂತಿಸಿ ಫಲವಿಲ್ಲ. ಅದು ನಿಮ್ಮ ಪ್ರೀತಿಯ ಆಹಾರವೇ ಆಗಿರಬಹುದು, ಅನಿಷ್ಟದ ಆಹಾರ ಕೂಡ ಇರಬಹುದು. ಕೆಲವೊಮ್ಮೆ ಸೇವಿಸುವ ಎಲ್ಲ ಆಹಾರವೂ ವ್ಯರ್ಥವೇ. ಆದರೆ ಹೊಟ್ಟೆಯ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ.
ಮೀನ ರಾಶಿ (pisces)
ಗುಣ ನೀರು. ಹಾವುಗಳ ಬಗ್ಗೆ ತುಂಬಾ ಎಚ್ಚರ ವಹಿಸಿ. ವಿಷಕಾರಿಯಾಗಿರಲಿ ಇಲ್ಲದಿರಲಿ, ಅವುಗಳ ಹತ್ತಿರಕ್ಕೂ ಹೋಗಬೇಡಿ. ಕತ್ತಲಿನಲ್ಲಿ ಓಡಾಡುವಾಗ, ಹುಲ್ಲುಗಾವಲಿನಲ್ಲಿ, ಹೊಲಗದ್ದೆಗಳಲ್ಲಿ ಹುಷಾರು. ಹಾವು ಕಚ್ಚಿದರೆ ಏನು ಮಾಡುವುದು ಎಂಬ ಎಮರ್ಜೆನ್ಸಿ ಪ್ಲಾನ್ ಸದಾ ಬಳಿ ಇರಲಿ.
ಮನೆಯಲ್ಲಿರಬೇಕು ತುಳಸಿ ಗಿಡ, ಅಪ್ಪಿ ತಪ್ಪಿಯೂ ಒಣಗದಂತೆ ಇರಿ ಎಚ್ಚರ