Death Experience: ಸತ್ತ ಮೇಲೆ ಏನು? ಸತ್ತು ಬದುಕಿ ಬಂದವ ಹೇಳಿದ್ದೇನು?

By Suvarna NewsFirst Published Aug 25, 2023, 2:04 PM IST
Highlights

ಸತ್ತ ಮೇಲೆ ಏನು? ಈ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಸತ್ತವರಿಗೆ ಮಾತ್ರ ಗೊತ್ತು ಎಂದು ಅನೇಕರು ಹೇಳ್ತಾರೆ. ಕೆಲವರು ಸತ್ತು ಬದುಕಿ ಬಂದಿದ್ದಾರೆ. ಅವರಲ್ಲೊಬ್ಬರ ಕಥೆ ಇಲ್ಲಿದೆ. 
 

ಹುಟ್ಟಿದ್ಮೇಲೆ ಸಾವು ನಿಶ್ಚಿತ. ಆದ್ರೆ ಪ್ರತಿಯೊಬ್ಬ ವ್ಯಕ್ತಿ ಸಾವಿಗೆ ಹೆದರುತ್ತಾನೆ. ಸಾವು ಯಾವಾಗ ಬರುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಾವು ಸಮೀಪವಾಗಿದೆ ಎಂದು ವೈದ್ಯರು ಹೇಳ್ತಾರೆಯೇ ವಿನಃ ಇದೇ ಸಮಯಕ್ಕೆ ಸಾವು ಸಂಭವಿಸುತ್ತದೆ ಎಂದು ಹೇಳೋದು ಕಷ್ಟ. ಸಾವು ಎಷ್ಟು ಗುಪ್ತವಾಗಿದೆಯೋ ಸಾವಿನ ನಂತ್ರದ ಜೀವನ ಕೂಡ ಅಷ್ಟೇ ರಹಸ್ಯವಾಗಿದೆ. ಭೂಮಿ ಮೇಲೆ ಜೀವಂತವಾಗಿರುವ ಜನರು ಸಾವಿನ ನಂತ್ರ ನಮ್ಮ ದೇಹದಿಂದ ಆತ್ಮ ಬೇರ್ಪಡುತ್ತದೆ, ಸ್ವರ್ಗ ಹಾಗೂ ನರಕವಿದೆ, ಯಮದೂತ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತಾನೆ, ಭೂಮಿ ಮೇಲೆ ಮಾಡಿದ ಪಾಪಕ್ಕೆ ನರಕದಲ್ಲಿ ಕಷ್ಟ ಅನುಭವಿಸಿ ಮತ್ತೆ ಆತ್ಮ ಇನ್ನೊಂದು ದೇಹದಲ್ಲಿ ಭೂಮಿಗೆ ಬರುತ್ತದೆ.. ಹೀಗೆ ಸಾವಿನ ನಂತ್ರದ ಜೀವನದ ಬಗ್ಗೆ ಸಾಕಷ್ಟು ನಂಬಿಕೆಗಳಿವೆ. ಇದಕ್ಕೆ ಸಂಬಂಧಿಸಿದಂತೆ ಜನರ ನಂಬಿಕೆ ಭಿನ್ನವಾಗಿದೆ. ಅವರು ಬೆಳೆದ ಪರಿಸರ, ಅವರು ಬಾಲ್ಯದಲ್ಲಿ ಕೇಳಿದ ಕಥೆ ಅಥವಾ ಯಾರದ್ದೋ ಜೀವನದಲ್ಲಿ ನಡೆದ ಘಟನೆಗಳನ್ನು ಆಧಾರಿಸಿ ಅವರು ಮರಣದ ಜೀವನದ ಬಗ್ಗೆ ನಂಬಿಕೆ ಹೊಂದಿರುತ್ತಾರೆ. 

ಸತ್ತ (Dead) ಮೇಲೆ ಏನಾಗುತ್ತೆ ಎಂಬ ಪ್ರಶ್ನೆಗೆ ಪುರಾಣಗಳಲ್ಲೂ ಸಾಕಷ್ಟು ಕಥೆಗಳಿವೆ. ಹಾಗೆಯೇ ಸತ್ತು ಬದುಕಿ ಬಂದವರಿದ್ದಾರೆ. ಹೌದು. ಇನ್ನೇನು ಪ್ರಾಣಪಕ್ಷಿ ಹಾರಿ ಹೋಗಿದೆ ಎನ್ನುವ ವೇಳೆಗೆ ಅವರ ಉಸಿರು ಮತ್ತೆ ಶುರುವಾಗಿದ್ದಿದೆ. ನಾಲ್ಕೈದು ಸೆಕೆಂಡು ಸತ್ತು ಮತ್ತೆ ಬದುಕಿ ಬಂದ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸತ್ತ ಮೇಲೆ ಏನೂ ಇಲ್ಲ ಎನ್ನುವವರು ಸತ್ತು ಬದುಕಿ ಬಂದವರ ಮಾತುಗಳನ್ನು ಕೇಳಿದಾಗ ಏನೋ ಇದೆ ಎಂಬುದನ್ನು ಒಪ್ಪಿಕೊಂಡದ್ದಿದೆ.

Vastu For Relationship: ಮೋಸ ಮಾಡುವ ಸಂಗಾತಿ ತಡೆಯೋದಕ್ಕೂ ವಾಸ್ತು ಇದೆ ಗೊತ್ತಾ!?

ಈಗ ಸತ್ತು ಮತ್ತೆ ಬದುಕಿ ಬಂದ ವ್ಯಕ್ತಿಯೊಬ್ಬ ತನ್ನ ಅನುಭವ ಹೇಳಿಕೊಂಡಿದ್ದಾನೆ. ರಾಯಲ್ ಷೇಕ್ಸ್ ಪಿಯರ್ ಕಂಪನಿಯ ನಟ ಶಿವ್ ಗ್ರೆವಾಲ್ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. 50 ವರ್ಷದ ಗ್ರೆವಾಲ್ ಗಂಭೀರ ಹೃದಯ (Heart) ಸ್ತಂಭನಕ್ಕೆ ಒಳಗಾಗಿದ್ದರು. ನಂತರ ಅವರ ಉಸಿರಾಟ ನಿಂತಿತ್ತು. ಗ್ರೆವಾಲ್ಗೆ 7 ನಿಮಿಷಗಳ ಕಾಲ ಪ್ರಜ್ಞೆ ಇರಲಿಲ್ಲ. ಪ್ರಜ್ಞೆ ಮರಳಿ ಬಂದ್ಮೇಲೆ ಗ್ರೆವಾಲ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಶಿವ ಗ್ರೆವಾಲ್, ಲಂಡನ್‌ ಪೆಕ್‌ಹ್ಯಾಮ್‌ನ ನಿವಾಸಿ. ಗ್ರೆವಾಲ್ ಸಾಯುವ  ಸಮಯದಲ್ಲಿ ವೈದ್ಯರು ಅವರ ಜೀವ ಉಳಿಸಲು ಸಿಪಿಆರ್ ನೀಡುತ್ತಿದ್ದರು. ನಾನು ಸತ್ತಿದ್ದೇನೆ ಎಂಬ ಭಾವನೆ ಇತ್ತು. ನನ್ನ ಬ್ರೈನ್ ಡೆಡ್ ಆಗುತ್ತಿದ್ದೇನೆ ಎಂದು ತಿಳಿದಿದ್ದೆ. ಸಹಾಯಕ್ಕಾಗಿ ಅಳುತ್ತಿದ್ದೆ. ಆದಾಗ್ಯೂ, ಈ ಸಮಯದಲ್ಲಿ ನಾನು ನನ್ನ ದೇಹದಿಂದ ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ಅನುಭವಿಸಿದೆ. ನನಗೆ ಪ್ರಜ್ಞೆ ಇರಲಿಲ್ಲ, ಆದರೆ ಇನ್ನೂ ನನ್ನ ಭಾವನೆಗಳು ಮತ್ತು ಸಂವೇದನೆಗಳನ್ನು ನಾನು ಅನುಭವಿಸುತ್ತಿದ್ದೆ ಎಂದು ಗ್ರೆವಾಲ್ ಹೇಳಿದ್ದಾರೆ. 

ಕಲರ್ ಫುಲ್, ವೈಬ್ರಂಟ್ ಬಟ್ಟೆ ಧರಿಸೋದಂದ್ರೆ ಈ 4 ರಾಶಿಗಳ ಮಂದಿಗೆ ಭಾರೀ ಇಷ್ಟ!

ನಾನು ನನ್ನ ಜೀವನಕ್ಕೆ ಮರಳಲು ಬಯಸಿದ್ದೆ. ಹೆಂಡತಿ ಜೊತೆ ಜೀವನ ನಡೆಸಲು ಬಯಸಿದ್ದೆ. ನಾನು ಜೀವಂತವಾಗಿರಲು ಬಯಸುತ್ತೇನೆ ನಾನು ಹಿಂತಿರುಗಬೇಕು ಎಂದು ನಾನು ಮನವಿ ಮಾಡುತ್ತಿದ್ದೆ. ಇದರ ನಂತರ ನನ್ನ ದೇಹಕ್ಕೆ ಮರಳಲು ನನಗೆ ಅವಕಾಶ ನೀಡಲಾಯಿತು. ಸಾವಿನ ಸಮಯದಲ್ಲಿ ನನ್ನ ದೇಹವೇ ಇರಲಿಲ್ಲ. ಎಲ್ಲವೂ ನೀರಿನಲ್ಲಿ ಈಜುವಂತಿತ್ತು. ನಾನು ತೂಕವಿಲ್ಲದವನಾಗಿದ್ದೆ. ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿದ್ದೇನೆ. ನಾನು ಚಂದ್ರನತ್ತ ಪ್ರಯಾಣಿಸುತ್ತಿದ್ದ ಅನುಭವವಾಗಿತ್ತು. ಸಂಪೂರ್ಣ ಬಾಹ್ಯಾಕಾಶ ಮತ್ತು ಉಲ್ಕೆಗಳನ್ನು ನೋಡುತ್ತಿದ್ದೆ ಎಂದು ಗ್ರೆವಾಲ್ ಹೇಳಿದ್ದಾರೆ. 

ಫೆಬ್ರವರಿ 9, 2013 ರಂದು ಗ್ರೆವಾಲ್ ಗೆ ಹೃದಯ ಸ್ತಂಭನವಾಗಿತ್ತು. 7 ನಿಮಿಷದ ನಂತ್ರ ಗ್ರೆವಾಲ್ ಹೃದಯಬಡಿತ ಮತ್ತೆ ಶುರುವಾಗಿತ್ತು. ಈ ಘಟನೆ ನಡೆದ ನಂತ್ರ ನಾನು ಸಾವಿಗೆ ಹೆದರುತ್ತಿಲ್ಲ. ನನಗೆ ಬದುಕಿನ ಮೇಲಿರುವ ನಂಬಿಕೆ ಇದ್ರಿಂದ ಗಟ್ಟಿಯಾಗಿದೆ. ಜೀವನದಲ್ಲಿ ಏನು ಅಮೂಲ್ಯ ಎಂಬುದು ನನಗೆ ತಿಳಿದಿದೆ ಎಂದು ಗ್ರೆವಾಲ್ ಹೇಳಿದ್ದಾರೆ.

click me!