Ayodhya Ram Temple: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನ ನಿಗದಿ

By Suvarna News  |  First Published May 1, 2023, 3:44 PM IST

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ನಡೆಯುತ್ತಿರುವುದು ತಿಳಿದೇ ಇದೆ. ಇಲ್ಲಿಗಾಗಿ ರಾಮನ ವಿಗ್ರಹದ ತಯಾರಿಕೆಯೂ ಆಗುತ್ತಿದೆ.. ಆದರೆ, ಈ ವಿಗ್ರಹದ ಪ್ರಾಣ ಪ್ರತಿಷ್ಠಾನ ಯಾವಾಗ ಆಗುವುದು? ದೇವಾಲಯದಲ್ಲಿ ಶ್ರೀರಾಮನನ್ನು ಭಕ್ತರು ಕಣ್ತುಂಬಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.


ಕೋಟ್ಯಂತರ ರಾಮಭಕ್ತರ ಕಾಯುವಿಕೆ ಕೊನೆಗೊಳ್ಳುವ ಸಮಯ ಸನ್ನಿಹಿತವಾಗಿದೆ. ಏಕೆಂದರೆ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಾಂಕ ನಿಗದಿಯಾಗಿದೆ. ಯೋಗಿ ಸರ್ಕಾರದಲ್ಲಿ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮರುಟ್ವೀಟ್ ಮಾಡಿದ ಟ್ವೀಟ್‌ನಲ್ಲಿ, ಜನವರಿ 22, 2024ರಂದು ರಾಮನನ್ನು ಶಾಶ್ವತವಾಗಿ ಗರ್ಭಗುಡಿಯಲ್ಲಿ ಕೂರಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಲಾಗಿದೆ.  

ದೇವಾಲಯದ ನಿರ್ಮಾಣವು ಭರದಿಂದ ಸಾಗುತ್ತಿದ್ದು, 2023ರ ಡಿಸೆಂಬರ್‌ ವೇಳೆಗೆ ರಾಮನ ಗರ್ಭಗುಡಿ ನಿರ್ಮಾಣ ಪೂರ್ಣಗೊಳ್ಳಲಿದೆ. ಜನವರಿ 2024ರಲ್ಲಿ ದೇವಾಲಯವನ್ನು ಭಕ್ತರಿಗೆ ತೆರೆಯಲಾಗುವುದು. ಆದಾಗ್ಯೂ, ಎರಡನೇ ಮಹಡಿ ಮತ್ತು ದೇವಾಲಯದ ಇತರ ಭಾಗಗಳ ನಿರ್ಮಾಣವು ಮುಂದುವರಿಯುತ್ತದೆ. 
ಮುಖ್ಯ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುತ್ತಾರೆ. 

Tap to resize

Latest Videos

ಈ ರೀತಿ ಅಪಶಕುನ ವಾಸ್ತು ದೋಷದ ಸೂಚನೆ!

ರಾಮ ಸೀತೆಯ ವಿಗ್ರಹ
ವಿಗ್ರಹಗಳನ್ನು ತಯಾರಿಸಲು ಬಳಸಲಾದ ಕಲ್ಲುಗಳನ್ನು ನೇಪಾಳದಿಂದ ಖರೀದಿಸಲಾಗಿದೆ. ನೇಪಾಳದ ಕಾಳಿ ಗಂಡಕಿ ನದಿಯಲ್ಲಿ ಪತ್ತೆಯಾದ ಇವು ಸಾಲಿಗ್ರಾಮ ಕಲ್ಲುಗಳಾಗಿದ್ದು, ಬರೋಬ್ಬರಿ 60 ಮಿಲಿಯನ್ ವರ್ಷಗಳಷ್ಟು ಹಳೆಯವಾಗಿವೆ. ಅಯೋಧ್ಯೆಯಲ್ಲಿಯೇ ರಾಮನ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಇದು ರಾಮನ ಬಾಲ್ಯದ ವಿಗ್ರಹವಾಗಲಿದೆ. ರಾಮನ ವಿಗ್ರಹದ ಎತ್ತರವು 5 ರಿಂದ 5.5 ಅಡಿಗಳ ನಡುವೆ ಇರುತ್ತದೆ. ರಾಮನವಮಿಯ ದಿನದಂದು ಸೂರ್ಯನ ಕಿರಣಗಳು ನೇರವಾಗಿ ರಾಮನ ಹಣೆಯ ಮೇಲೆ ಬೀಳುವ ರೀತಿಯಲ್ಲಿ ರಾಮನ ಎತ್ತರವನ್ನು ಆಯ್ಕೆ ಮಾಡಲಾಗಿದೆ.

ಭವ್ಯ ದೇವಾಲಯದ ರೂಪ ಹೇಗಿರುತ್ತದೆ?
ಗರ್ಭಗುಡಿ ತಲುಪಲು ಒಟ್ಟು 34 ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಶಿಖರ, ಆಸನ, ಬಾಗಿಲನ್ನು ಚಿನ್ನಾಭರಣದಿಂದ ಮಾಡಲಾಗುವುದು. ಗರ್ಭಗುಡಿಯನ್ನು ವಿಶೇಷ ಮಕ್ರಾನ ಅಮೃತ ಶಿಲೆಯಿಂದ ನಿರ್ಮಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಕಂಡುಬರುವ ಮಕ್ರಾನಾ ಮಾರ್ಬಲ್ ಅನ್ನು ವಿಶ್ವದ ಅತ್ಯಂತ ಪ್ರಸಿದ್ಧ ಅಮೃತಶಿಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕ, ಆಗ್ರಾದ ತಾಜ್ ಮಹಲ್, ಮುಂಬೈನ ರೌದತ್ ತಾಹೇರಾ, ದಕ್ಷಿಣ ರಾಜಸ್ಥಾನದ ದಿಲ್ವಾರಾ ಮತ್ತು ಮೈಸೂರು ಜೈನ ದೇವಾಲಯದಲ್ಲಿ ಅಂಬೇಡ್ಕರ್ ಪಾರ್ಕ್‌ನಲ್ಲಿ ಕೂಡಾ ಇದೇ ಶಿಲೆಯನ್ನು ಬಳಸಲಾಗಿದೆ ಎಂಬುದು ವಿಶೇಷ.  

Health Horoscope: ಮೇನಲ್ಲಿ ನಿಮ್ಮ ರಾಶಿಯ ಆರೋಗ್ಯ ಹೇಗಿರಲಿದೆ?

ದೇಗುಲದ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸಿಕ್ಕಿರುವ ಮಾಹಿತಿ ಪ್ರಕಾರ ಗರ್ಭಗುಡಿಯ 14 ಅಡಿವರೆಗಿನ ಕಂಬಗಳನ್ನೂ ಸಿದ್ಧಪಡಿಸಲಾಗಿದೆ.

click me!