Christmas 2022: ಕ್ರಿಸ್‌ಮಸ್‌ ದಿನ ರಹಸ್ಯ ದಾನ ಮಾಡಿದ್ರೆ ಏನು ಫಲ? ಯೇಸು ನೀಡಿದ್ದ ಸಂದೇಶವೇನು?

By Suvarna News  |  First Published Nov 28, 2022, 1:53 PM IST

ಕ್ರಿಸ್ ಮಸ್ ದಿನ ಯೇಸುವಿನ ಕೃಪೆಗೆ ಪಾತ್ರರಾಗಬೇಕು ಎಂದಾದ್ರೆ ಜನರು ಕೆಲವೊಂದು ವಿಶೇಷ ಕೆಲಸವನ್ನು ಮಾಡಬೇಕು. ಅದರಲ್ಲಿ ದಾನ ಕೂಡ ಒಂದು. ನೀವು ಯಾರಿಗೂ ತಿಳಿಸದೆ, ಪ್ರಚಾರ ಮಾಡದೆ ನಿರ್ಗತಿಕರಿಗೆ ಅಗತ್ಯವಿರುವ ವಸ್ತು ದಾನ ಮಾಡಿದ್ರೆ ಹೆಚ್ಚಿನ ಫಲ ಪಡೆಯಬಹುದು.
 


ಡಿಸೆಂಬರ್ 25ರಂದು ಕ್ರಿಸ್ ಮಸ್ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ 25ರಂದು ಕ್ರಿಸ್ ಮಸ್ ಹಬ್ಬ ಆಚರಿಸಲಾಗುತ್ತದೆ. ಅದಕ್ಕೆ ತಯಾರಿ ಈಗಿನಿಂದಲೇ ಶುರುವಾಗಿದೆ. ಬಗೆ ಬಗೆಯ ಕೇಕ್ ಗಳು, ಬಣ್ಣದ ಲೈಟ್ ಗಳು, ಕ್ರಿಸ್ ಮಸ್ ಟ್ರೀಗಳನ್ನು ನೀವು ಮಾರುಕಟ್ಟೆಯಲ್ಲಿ ಕಾಣಬಹುದು. ಡಿಸೆಂಬರ್ 25ರಂದು ಯೇಸು ಕ್ರಿಸ್ತ ಜನಿಸಿದ ದಿನ. ನಂಬಿಕೆ ಪ್ರಕಾರ, ದೇವರ ಮಗ ಭಗವಂತ ಯೇಸು ಕ್ರಿಸ್ತ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನವಿದು. ಹಾಗಾಗಿಯೇ ಅಂದು ಯೇಸು ಕ್ರಿಸ್ತನ ಜನ್ಮ ದಿನವನ್ನು ಆಚರಿಸಲಾಗುತ್ತದೆ. 

ಜೀವನ (Life) ದಲ್ಲಿ ಯೇಸು (Jesus ) ವಿನ ನೀತಿಗಳನ್ನು ಅಳವಡಿಸಿಕೊಂಡರೆ  ಸಂತೋಷ ಮತ್ತು ಶಾಂತಿಯನ್ನು ಪಡೆಯಬಹುದು. ಎಲ್ಲಾ ತೊಂದರೆಗಳಿಂದ ದೂರವಿರಬಹುದು ಎಂದು ಕ್ರಿಶ್ಚಿಯನ್ನ (Christian) ರು ನಂಬುತ್ತಾರೆ. ಹಿಂದೂ ಧರ್ಮದಂತೆ ಕ್ರಿಶ್ಚಿಯನ್ ಧರ್ಮದಲ್ಲೂ ಅನೇಕ ನಂಬಿಕೆಗಳಿವೆ. ಕ್ರಿಸ್ತ ಮಸ್ ಹಬ್ಬದ ದಿನದಂದು ಕ್ರಿಶ್ಚಿಯನ್ ಸಮುದಾಯದ ಜನರು ಕೆಲ ನಿಯಮಗಳನ್ನು ಪಾಲನೆ ಮಾಡ್ತಾ ಹಬ್ಬ ಆಚರಿಸುತ್ತಾರೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಹಿಂದೂ ಧರ್ಮದಂತೆ ದಾನ (Donation)ಕ್ಕೆ ಮಹತ್ವವಿದೆ. ಬರೀ ಹಿಂದೂ, ಕ್ರೈಸ್ತ ಧರ್ಮ ಮಾತ್ರವಲ್ಲ ನಮ್ಮಲ್ಲಿರುವ ಎಲ್ಲ ಧರ್ಮದಲ್ಲಿಯೂ ದಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.  

Tap to resize

Latest Videos

ಪ್ರತಿಯೊಬ್ಬ ವ್ಯಕ್ತಿ ದಾನ ಮಾಡಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಎಲ್ಲ ಧರ್ಮಗಳಲ್ಲಿ ಹೇಳಲಾಗಿದೆ. ಎಲ್ಲರಿಗೂ ತಿಳಿದು, ಪ್ರಚಾರ ಸಮೇತ ಯಾವುದೇ ವಸ್ತುವನ್ನು ದಾನ ಮಾಡಿದ್ರೂ ಅದ್ರಿಂದ ಸಿಗುವ ಫಲ ಕಡಿಮೆ. ರಹಸ್ಯವಾಗಿ ಮಾಡುವ ದಾನಕ್ಕೆ ಹೆಚ್ಚು ಮಹತ್ವವಿದೆ. ನೀವು ರಹಸ್ಯವಾಗಿ ಮಾಡುವ ದಾನವನ್ನು ದೇವರು ನೋಡುತ್ತಾನೆ. ನಿಮ್ಮ ಕೆಲಸಕ್ಕೆ ಮೆಚ್ಚಿ ಒಳ್ಳೆ ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಕ್ರಿಸ್ ಮಸ್ ದಿನ ರಹಸ್ಯ ದಾನ ಮಾಡಲಾಗುತ್ತದೆ. ನೀವೂ ಮಂಗಳಕರ ಫಲ ಪಡೆಯಬೇಕೆಂದ್ರೆ ಕ್ರಿಸ್ಮಸ್ ದಿನ ರಹಸ್ಯ ದಾನ ಮಾಡಿ. 

ಕ್ರಿಸ್‌ಮಸ್‌ ದಿನ ಮಾಡಿ ರಹಸ್ಯ ದಾನ :  ಕ್ರಿಸ್‌ಮಸ್‌ನಲ್ಲಿ ರಹಸ್ಯ ದಾನ ಅಥವಾ ಉಡುಗೊರೆಗೆ ಹೆಚ್ಚಿನ ಮಹತ್ವವಿದೆ. ಹೀಗೆ ಮಾಡುವ ಮೂಲಕ ಜನರು ಯೇಸುವನ್ನು ಮೆಚ್ಚಿಸುತ್ತಾರೆ. ಆ ಮೂಲಕ ಸಂತೋಷ ಪಡೆಯುತ್ತಾರೆ. ಕ್ರಿಸ್‌ಮಸ್‌ ಸಂದರ್ಭದಲ್ಲಿ ಸಾಂಟಾ ಕ್ಲಾಸ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಾಂಟಾ ರೂಪದಲ್ಲಿ ಬರುವ ಜನರು, ಬಡ, ನಿರ್ಗತಿಕ ಮಕ್ಕಳಿಗೆ ರಾತ್ರಿ ಉಡುಗೊರೆ ನೀಡಿ ಹೋಗ್ತಾರೆ. ಇದು ರಹಸ್ಯ ದಾನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.ರಹಸ್ಯ ದಾನದಿಂದ ಹೆಚ್ಚಿನ ಸಂತೋಷ ಸಿಗುತ್ತದೆ. ದೇವರ ಆಶೀರ್ವಾದವನ್ನು ನೀವು ಪಡೆಯುವುದು.

ಯಾರನ್ನಾದರೂ ಭೇಟಿಯಾದಾಗ ರಾಮ್-ರಾಮ್ ಎಂದು ಎರಡು ಸಾರಿ ಹೇಳೋದ್ಯಾಕೆ ಗೊತ್ತಾ?

ರಹಸ್ಯ ದಾನದ ಬಗ್ಗೆ ಯೇಸು ನೀಡಿದ್ದ ಸಂದೇಶ :  

  • 1. ಅಗತ್ಯಕ್ಕಿಂತ ಹೆಚ್ಚು ಹಣ ನಿಮಗೆ ಅಶಾಂತಿಯನ್ನು ಬಿಟ್ಟು ಬೇರೆ ಏನೂ ನೀಡಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಹಣವನ್ನು ಇತರರ ಸೇವೆಗೆ ಬಳಸಬೇಕು.  
  • 2. ರಹಸ್ಯ ಹಾಗೂ ನಿಸ್ವಾರ್ಥಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಯೇಸು ಕ್ರಿಸ್ತನ ಆಲೋಚನೆ ಪ್ರಕಾರ, ದೇವರು ರಹಸ್ಯ ದಾನವನ್ನು ನೋಡುತ್ತಾನೆ ಮತ್ತು ಅದರ ಫಲವನ್ನು ನೀಡುತ್ತಾನೆ. ಅದಕ್ಕಾಗಿಯೇ ಯಾವಾಗಲೂ ರಹಸ್ಯವಾಗಿ ಮತ್ತು ನಿಸ್ವಾರ್ಥವಾಗಿ ಬಡವರಿಗೆ ಮತ್ತು ಅಗತ್ಯವಿರುವವರಿಗೆ ದಾನ ನೀಡಬೇಕು. 
  • 3. ಕಷ್ಟದಲ್ಲಿರುವವರಿಗೆ  ಮತ್ತು ಅಸಹಾಯಕರಿಗೆ ನೆರವಾದ್ರೆ ದೇವರು ನಮ್ಮ ಪರ ಇರುತ್ತಾನೆ. ನಮಗೆ ಸಹಾಯ ಮಾಡುತ್ತಾನೆ ಎಂದು ಯೇಸು ಹೇಳಿದ್ದಾರೆ.
  • 4.  ಜೀವನದಲ್ಲಿ ಯಶಸ್ಸು ಸಾಧಿಸಲು ಏನು ಬೇಕು ಎಂಬುದನ್ನು ಕೂಡ ಯೇಸು ಹೇಳಿದ್ದರು. ಅವರ ಪ್ರಕಾರ, ಮನುಷ್ಯ ನಮ್ರತೆ, ಶುದ್ಧತೆ, ಶಾಂತಿ, ಪ್ರೀತಿ, ಸದ್ಭಾವನೆ, ಕ್ಷಮೆ ಮತ್ತು ರಹಸ್ಯ ದಾನ  ಎಂಬ ಧರ್ಮವನ್ನು ಅಳವಡಿಸಿಕೊಳ್ಳಬೇಕು. 
click me!