ಋಷ್ಯಶೃಂಗರಿಗೂ ಅಯೋಧ್ಯೆ ರಾಮನಿಗೂ ಅವಿನಾಭಾವ ಸಂಬಂಧ: ಋಷ್ಯಶೃಂಗೇಶ್ವರು ನಡೆಸಿದ ಯಾಗದ ಫಲದಿಂದಲೇ ಶ್ರೀರಾಮ ಜನನ!

By Govindaraj SFirst Published Jan 15, 2024, 10:03 PM IST
Highlights

ನೂರಾರು ವರ್ಷಗಳ ಹೋರಾಟ ಫಲವಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಲಲ್ಲನ ಮಂದಿರ ಸಿದ್ಧಗೊಂಡಿದೆ.ಉದ್ಘಾಟನೆಗೆ ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಇಡೀ ದೇಶದಲ್ಲಿ ಇದೀಗ ರಾಮನ ಜಪ ಆರಂಭಗೊಂಡಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.15): ನೂರಾರು ವರ್ಷಗಳ ಹೋರಾಟ ಫಲವಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಲಲ್ಲನ ಮಂದಿರ ಸಿದ್ಧಗೊಂಡಿದೆ.ಉದ್ಘಾಟನೆಗೆ ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಇಡೀ ದೇಶದಲ್ಲಿ ಇದೀಗ ರಾಮನ ಜಪ ಆರಂಭಗೊಂಡಿದೆ. ಅಸಂಖ್ಯಾತ ಜನರ ಆರಾಧ್ಯ ದೈವವಾಗಿ ವಿಶ್ವದ ಗಮನ ಸೆಳೆದಿರೋ ಅಯೋಧ್ಯೆಯ ಶ್ರೀರಾಮ ಹುಟ್ಟಿದ್ದೇ ಮಲೆನಾಡ ಮಳೆದೇವ ಋಷ್ಯಶೃಂಗೇಶ್ವರರಿಂದ ಅನ್ನೋದು ಇತಿಹಾಸದ ಸತ್ಯ. ದಶರಥನಿಗೆ ಮಕ್ಕಳಾಗಲೆಂದೇ ದಕ್ಷಿಣದಿಂದ ಉತ್ತರದ ತುದಿಗೆ ಹೋಗಿದ್ದ ಋಷ್ಯಶೃಂಗರರ ಯಾಗ ಫಲವೇ ವಿಷ್ಣುವಿನ 7ನೇ ಅವತಾರದ ಶ್ರೀರಾಮನ ಜನನದ ಬಗ್ಗೆ ವಾಲ್ಮೀಕಿ ರಾಮಯಾಣದಲ್ಲೂ ಉಲ್ಲೇಖವಿದೆ. 

ದಕ್ಷಿಣದ ಋಷ್ಯಶೃಂಗರಿಗೂ ಉತ್ತರದ ರಾಮನಿಗೂ ಅವಿನಾಭಾವ ಸಂಬಂಧ: ಕಾಫಿನಾಡಿಗೂ ಅಯೋಧ್ಯೆ ರಾಮನಿಗೂ ಇರೋದು ಬರೀ ಸಂಬಂಧವಲ್ಲ. ಜನ್ಮ ರಹಸ್ಯದ ಗುಟ್ಟು. ಇತಿಹಾಸದ ಸತ್ಯ. ಹೇಳಿ-ಕೇಳಿ ಕಾಫಿನಾಡಿನದ್ದು ಪುಣ್ಯಭೂಮಿ. ಸಪ್ತನದಿಗಳ ನಾಡು ಕೂಡ. ತುಂಗಾ-ಭದ್ರೆಯ ಜಲಮೂಲವಿರೋ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ವಿಭಾಂಡಕ ಮಹರ್ಷಿ ತಪ್ಪಸ್ಸು ಮಾಡಿದ ಸ್ಥಳವೆಂದು ಪುರಾಣದಲ್ಲೂ ಉಲ್ಲೇಖವಿದೆ. ಈ ವಿಭಾಂಡಕ ಮಹರ್ಷಿಯ ಮಗನೇ ಋಷ್ಯಶೃಂಗರು. ಋಷ್ಯಶೃಂಗರು ತಪ್ಪಸ್ಸು ಮಾಡಿ ಈಶ್ವರನನ್ನೇ ಒಲಿಸಿಕೊಂಡ ಮಹಾನ್ ತಪಸ್ವಿ. 

ಕೊಲೆ ಯತ್ನದ ಆರೋಪಿ ಆಸ್ಪತ್ರೆಯಿಂದ ಎಸ್ಕೇಪ್: ತಪ್ಪಿಸಿಕೊಳ್ಳಲು ಪೊಲೀಸರ ಮೇಲೂ ಮಚ್ಚು ಬೀಸಿದ್ದ ಪೂರ್ಣೇಶ್!

ಆದ್ರೆ. ದಕ್ಷಿಣದ ಋಷ್ಯಶೃಂಗರಿಗೂ ಉತ್ತರದ ರಾಮನಿಗೂ ಅವಿನಾಭಾವ ಸಂಬಂಧವಿದೆ. ಬರೀ ಸಂಬಂಧವಲ್ಲ. ಜನ್ಮ ರಹಸ್ಯದ ಸತ್ಯ. ಶೃಂಗೇರಿಯ ಋಷ್ಯಶೃಂಗರಿಗೂ ಅಯೋಧ್ಯಯ ರಾಮನಿಗೂ ಇರೋ ನಂಟಿನ ಬಗ್ಗೆ ವಾಲ್ಮೀಕಿ ರಾಮಯಾಣದಲ್ಲೂ ಉಲ್ಲೇಖವಿದೆ. ಪುತ್ರ ಸಂತಾನವಿಲ್ಲದೆ ಶೋಕದಲ್ಲಿದ್ದ ದಶರಥ ಮಹರಾಜರು ವಶಿಷ್ಠರ ಸಲಹೆಯಂತೆ ದಕ್ಷಿಣದ ಋಷ್ಯಶೃಂಗರನ್ನ ಕರೆಸಿ ಯಾಗ ನಡೆಸುವಂತೆ ಆದೇಶಿಸಿದ್ರು. ಆ ಸಲಹೆಯಂತೆ ಋಷ್ಯಶೃಂಗರನ್ನ ಕರೆಸಿ ಆಯೋಧ್ಯೆಯಲ್ಲಿ ಪುತ್ರಾಕಾಮೇಷ್ಠಿ ಯಾಗ ನಡೆಸಿದ್ದ ದಶರಥ ಮಹಾರಾಜ. ಋಷ್ಯಶೃಂಗರು ಮಾಡಿದ ಯಾಗದ ಅಗ್ನಿಕುಂಡದಿಂದ ಬಂದ ಪಾಯಸದ ಫಲವೇ ಶ್ರೀರಾಮನ ಜನನಕ್ಕೆ ಕಾರಣ ಅನ್ನೊದು ಇತಿಹಾಸದ ಸತ್ಯ. 

ಋಷ್ಯಶೃಂಗರು ರಾಮನ ಸಹೋದರಿಯೊಂದಿಗೆ  ವಿವಾಹ: ಅಯೋಧ್ಯೆಯ ರಾಮನ ಜನನಕ್ಕೆ ಋಷ್ಯಶೃಂಗರ ಯಾಗವೇ ಕಾರಣವಾದ್ರೆ ಮತ್ತೊಂದೆಡೆ ಅದೇ ಋಷ್ಯಶೃಂಗರು ರಾಮನ ಸಹೋದರಿಯನ್ನೇ ವಿವಾಹವಾದರು. ಅಂಗದೇಶದಲ್ಲಿ 12 ವರ್ಷಗಳಿಂದ ಭೀಕರ ಬರದ ಛಾಯೆ ಆವರಿಸಿತ್ತು. ಮಳೆ ಇಲ್ಲದೆ ರಾಜ-ಮಹಾರಾಜರು ಕಂಗೆಟ್ಟು ಹೋಗಿದ್ರು. ಆಗ ಋಷ್ಯಶೃಂಗರನ್ನ ಅಂಗದೇಶ ಆಹ್ವಾನಿಸಿದ್ದು ಋಷ್ಯಶೃಂಗರ ಪಾದಸ್ಪರ್ಶದಿಂದ ಸಮೃದ್ಧ ಮಳೆಯಾಗಿತ್ತು. ಅಲ್ಲಿನ ಅನಾವೃಷ್ಠಿಯೇ ಇಲ್ಲದಂತೆ ರಾಜ್ಯ ಸಮೃದ್ಧಿಯಿಂದ ಸುಭಿಕ್ಷವಾಗಿತ್ತು. ಆಗ ಅಂಗದೇಶದ ರಾಜ ರೋಮಪಾದ ತನ್ನ ಸಾಕು ಮಗಳಾದ ಶಾಂತಮ್ಮಳನ್ನ ಋಷ್ಯಶೃಂಗರಿಗೆ ಕೊಟ್ಟು ವಿವಾಹ ಮಾಡಿದ್ದರು. ಆ ಶಾಂತಮ್ಮ ಬೇರ್ಯಾರು ಅಲ್ಲ. ದಶರಥ ಮಹಾರಾಜರ ಮಗಳು ಅನ್ನೋ ಉಲ್ಲೇಖವೂ ಇದೆ. 

ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!

ದಶರಥ ಅಂಗದೇಶದ ರಾಜ ರೋಮಪಾದರಿಗೆ ದತ್ತಪುತ್ರಿಯಾಗಿ ಶಾಂತಮ್ಮಳನ್ನ ನೀಡಿದ್ದರು. ಹಾಗಾಗಿ, ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ನಿತ್ಯ ಋಷ್ಯಶೃಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಶಾಂತಮ್ಮನಿಗೂ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಇವೆ.ಒಟ್ಟಾರೆ, ಅಯೋಧ್ಯೆಯಲ್ಲಿ ರಾಮಲಲ್ಲನ ನೋಡೋದಕ್ಕೆ ವಿಶ್ವವೇ ಕಾತರದಿಂದ ಕಾದಿದೆ. ಆದ್ರೆ, ರಾಮನ ಜನ್ಮಕ್ಕೆ ಕಾರಣರಾದ ಋಷ್ಯಶೃಂಗೇಶ್ವರ ಸ್ವಾಮಿ ಬಳಿ ವಿಶೇಷ ಪೂಜೆ-ಹೋಮ-ಹವನ ನಡೆದು, ಅಯೋಧ್ಯೆಗೆ ಪ್ರಸಾದ ಕಳಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲನ ಪೂಜೆಗೂ ಮುನ್ನ ಋಷ್ಯಶೃಂಗರೇ ಕಳಿಸಿದ್ದಾರೆಂಬ ಭಾವನೆಯಲ್ಲಿನ ಇಲ್ಲಿಂದ ಹೋದ ಅಕ್ಷತೆ, ಪಂಜೆ, ಸೀರೆ, ಗಂಧ, ಅರಿಶಿನ-ಕುಂಕುಮಕ್ಕೂ ಪೂಜೆ ನಡೆಯಲಿದೆ. ಪೇಜಾವರ ಶ್ರೀಗಳು ಹಾಗೂ ಶೃಂಗೇರಿ ಋತ್ವಿಜರು ಇಬ್ಬರೂ ಆ ಪ್ರಸಾದವನ್ನ ಅಯೋಧ್ಯೆಗೆ ಕೊಂಡೊಯ್ಯಲಿದ್ದಾರೆ.

click me!