ಬೆಂಗಳೂರು ಕರಗ ಮಹೋತ್ಸವಕ್ಕೆ ಕೆಮಿಕಲ್‌ ಮಿಶ್ರಿತ ಹೂವು ಪೂರೈಕೆ: ಕರಗ ಹೊತ್ತ ಜ್ಞಾನೇಂದ್ರ ದೇಹದಲ್ಲಿ ಸುಟ್ಟ ಗಾಯ

By Sathish Kumar KHFirst Published Apr 11, 2023, 3:26 PM IST
Highlights

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಬಳಸುವ ಹೂವಿಗೆ ಖಾರದ ಪುಡಿ ಹಾಗೂ ಕೆಲವು ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗಿದ್ದು, ಕರಗವನ್ನು ಹೊತ್ತಿದ್ದ ಜ್ಞಾನೇಂದ್ರ ಅವರ ಮೈಮೇಲೆ ಸುಟ್ಟ ಗಾಯಗಳು ಉಂಟಾಗಿವೆ.

ಬೆಂಗಳೂರು (ಏ.11): ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಬಳಸುವ ಹೂವಿಗೆ ಖಾರದ ಪುಡಿ ಹಾಗೂ ಕೆಲವು ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗಿದ್ದು, ಕರಗವನ್ನು ಹೊತ್ತಿದ್ದ ಜ್ಞಾನೇಂದ್ರ ಅವರ ಮೈಮೇಲೆ ಸುಟ್ಟ ಗಾಯಗಳು ಉಂಟಾಗಿವೆ.

ಬೆಂಗಳೂರಿನ ಕರಗ ಮಹೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ಕರಗ ಮಹೋತ್ಸವವನ್ನು ತಿಗಳ ಸಮುದಾಯದ ಕುಟುಂಬಸ್ಥರಲ್ಲಿ ಒಬ್ಬರು ಕರಗವನ್ನು ಹೊರುತ್ತಾರೆ. ಇದಕ್ಕೂ ಹಲವು ವರ್ಷಗಳಿಂದ ಪೈಪೋಟಿ ನಡೆಯುತ್ತಿದ್ದು, ಈ ಬಾರಿ ಕರಗ ಮಹೋತ್ಸವದ ವೇಳೆ ಕರಗವನ್ನು ಹೊತ್ತಿದ್ದ ಜ್ಷಾನೇಂದ್ರ ಅವರ ಮೇಲೆ ರಾಸಾಯನಿಕ ಮಿಶ್ರಣ ಹಾಗೂ ಖಾರದಪುಡಿ ಮಿಶ್ರಿತ ಹೂವನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕರಗ ಮಹೋತ್ಸವ  ಮುಗಿದ ನಂತರ ಜ್ಷಾನೇಂದ್ರ ಅವರ ದೇಹದ ಮೇಲೆ ಸುಟ್ಟ ಗಾಯಗಳು ಉಂಟಾಗಿವೆ.

Latest Videos

Bengaluru: ಇಂದು ಮಧ್ಯರಾತ್ರಿ ಐತಿಹಾಸಿಕ ಅದ್ಧೂರಿ ಕರಗ ಶಕ್ತ್ಯೋತ್ಸವ

ಕರಗ ಹೊತ್ತ ವ್ಯಕ್ತಿಯ ಮೈತುಂಬಾ ಸುಟ್ಟಗಾಯ: ಇನ್ನು ವಿಶ್ವ ವಿಖ್ಯಾತ ಕರಗ ಮಹೋತ್ಸವವನ್ನು ಹಾಳು ಮಾಡುವ ಬಗ್ಗೆ ಹುನ್ನಾರ ಮಾಡಿರುವ ಆರೋಪ ಕೇಳಿಬಂದಿದೆ. ಇನ್ನು ಕರಗವನ್ನು ಹೊರುವ ವ್ಯಕ್ತಿಯನ್ನು ಕಿಡಿಗೇಡಿಗಳು ಟಾರ್ಗೆಟ್‌ ಮಾಡಿದ್ದಾರೆ ಎಂಬ ಅನುಮಾನಗಳು ಕೂಡ ಕಂಡುಬರುತ್ತಿವೆ. ಜೊತೆಗೆ, ಉತ್ಸವದ ವೇಳೆ ತನ್ನ ಮೇಲೆ ಹಲ್ಲೆಯಾಗಿರುವ ಬಗ್ಗೆಯೂ ಜ್ಞಾನೇಂದ್ರ ಆರೋಪ ಮಾಡಿದ್ದಾರೆ. ಇನ್ನು ಕರಗ ಹೊತ್ತ ಜ್ಞಾನೇಂದ್ರ ಮೈ ತುಂಬಾ ಸುಟ್ಟ ಗಾಯಗಳು ಉಂಟಾಗಿದ್ದು, ಹೂವಿನೊಂದಿಗೆ ಕರದ ಪುಡಿ ಹಾಗೂ ಅನ್ಯ ವಸ್ತುಗಳನ್ನು ಬೆರಸಿ ಮಿಶ್ರಣ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕರಗ ಹೊತ್ತ ವೇಳೆ ಹಲ್ಲೆ ಮಾಡಿದ ಕಿಡಿಗೇಡಿಗಳು: ಇನ್ನು ಕರಗವನ್ನು ಹೊತ್ತಿದ್ದ ಜ್ಞಾನೇಂದ್ರ ಅವರ ದೇಹದ ಕುತ್ತಿಗೆ ಭಾಗ, ಎದೆಯ ಭಾಗ, ಹೊಟ್ಟೆ ಸೇರಿ ವಿವಿಧೆಡೆ ಸುಟ್ಟ ಗಾಯಗಳು ಉಂಟಾಗಿವೆ. ಇನ್ನು ಕುತ್ತಿಗೆ ಭಾಗಕ್ಕೆ ಕಿಡಿಗೇಡಿಗಳು ಗಾಯವನ್ನೂ ಮಾಡಿದ್ದು, ಈ ವೇಳೆ ಹಲ್ಲೆ ಮಾಡಲು ಬಂದವನಿಗೆ ಕರಗ ಹೊತ್ತಿದ್ದ ಜ್ಞಾನೇಂದ್ರ ಅವರು ಕೈಲಿದ್ದ ಚಾಟಿಯಿಂದ ಏಟು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಆ ಕಿಡಿಗೇಡಿಗಳು ಯಾರು ಎಂಬುದು ಪತ್ತೆಯಾಗಿಲ್ಲ. ಜೊತೆಗೆ, ಕರಗವನ್ನು ಹಾಳು ಮಾಡುವ ವ್ಯವಸ್ಥಿತ ಹುನ್ನಾರ ನಡೆದಿದೆಯೇ ಎಂಬ ಅನುಮಾನ ಕಾಡುತ್ತಿವೆ. 

Bengaluru: ವಿಜೃಂಭಣೆಯ ಐತಿಹಾಸಿಕ ಧರ್ಮರಾಯ ಹಸಿ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ

ರಾಸಾಯನಿಕ ಎರಚಿದವನ ಪತ್ತೆ: ಹೂವಿನೊಂದಿಗೆ ಕೆಮಿಕಲ್ ಮಿಕ್ಸ್ ಮಾಡಿ ಎರಚಿರೋದಾಗಿ ಆರೋಪದ ಬೆನ್ನಲ್ಲೇ ಕಳೆದ ವಾರವಷ್ಟೇ ಕರಗ ಮಹೋತ್ಸವ ಮುಕ್ತಾಯಗೊಂಡಿದ್ದ ಕರಗ ಮಹೋತ್ಸವದ ಎಲ್ಲ ವೀಡಿಯೋವನ್ನು ಧರ್ಮರಾಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರು ಪರಿಶೀಲನೆ ಮಾಡಿದ್ದಾರೆ. ಕರಗವನ್ನೆ ಟಾರ್ಗೆಟ್ ಮಾಡಿ‌ ರಾಸಾಯನಿಕ ವಸ್ತು ಮಿಶ್ರಣದಿಂದ ಹಾನಿ ಮಾಡಿದ ಕಿಡಿಗೇಡಿ ಬಗ್ಗೆ ಮಾಹಿತಿಯನ್ನು ಕೂಡ ಕಲೆ ಹಾಕಿದ್ದಾರೆ. ಆದರೆ, ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಅದರ ಬಗ್ಗೆ ಮಾಹಿತಿ ನೀಡಿ ನಂತರ ಪೊಲೀಸರಿಗೆ ದೂರು ನೀಡುವುದಾಗಿ ಕರಗ ಉತ್ಸವ ಸಮಿತಿ‌ ಮುಖ್ಯಸ್ಥರು ಹೇಳಿದ್ದಾರೆ.

 

click me!