ಹೆಣ್ಣಿಗೆ ಈ ಗುಣವಿದ್ದರೆ ಮಾತ್ರ ಮದುವೆಯಾಗಿ; ಹುಡುಗರೇ ಎಚ್ಚರ ಎಂದಿದ್ದಾರೆ ಚಾಣಕ್ಯ..!

By Sushma Hegde  |  First Published Aug 21, 2023, 11:54 AM IST

ಆಚಾರ್ಯ ಚಾಣಕ್ಯನ ಪ್ರಕಾರ ಕೆಲವು ಗುಣಗಳು ಇರುವ ಮಹಿಳೆಯರನ್ನು ಮದುವೆಯಾದರೆ, ಆ ವ್ಯಕ್ತಿಯ ಅದೃಷ್ಟವು ತೆರೆದುಕೊಳ್ಳುತ್ತದೆ. ಅವರು ಪುರುಷನಿಗೆ, ಕುಟುಂಬಕ್ಕೆ ಅದೃಷ್ಟ ತರುವ ಮಹಿಳೆಯರು. ಅಂತಹ ಮಹಿಳೆಯರಲ್ಲಿ ಯಾವ ಗುಣಗಳು ಇರುತ್ತವೆ ಎಂಬ ಮಾಹಿತಿ ಇಲ್ಲಿದೆ.


ಆಚಾರ್ಯ ಚಾಣಕ್ಯನ ಪ್ರಕಾರ ಕೆಲವು ಗುಣಗಳು ಇರುವ ಮಹಿಳೆಯರನ್ನು ಮದುವೆಯಾದರೆ, ಆ ವ್ಯಕ್ತಿಯ ಅದೃಷ್ಟವು ತೆರೆದುಕೊಳ್ಳುತ್ತದೆ. ಅವರು ಪುರುಷನಿಗೆ, ಕುಟುಂಬಕ್ಕೆ ಅದೃಷ್ಟ ತರುವ ಮಹಿಳೆಯರು. ಅಂತಹ ಮಹಿಳೆಯರಲ್ಲಿ ಯಾವ ಗುಣಗಳು ಇರುತ್ತವೆ ಎಂಬ ಮಾಹಿತಿ ಇಲ್ಲಿದೆ.

ಮದುವೆಯ ವಿಚಾರದಲ್ಲಿ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಚಾಣಕ್ಯ ನೀತಿಯಲ್ಲಿ ಮದುವೆಗೆ ಅರ್ಹವಾದ ಮಹಿಳೆಯ ಗುಣವನ್ನು ವಿವರಿಸಲಾಗಿದೆ. ಇದು ಪತಿ ಮತ್ತು ಕುಟುಂಬಕ್ಕೆ ಬಹಳ ಅದೃಷ್ಟವೆಂದು ಪರಿಗಣಿಸಲಾಗಿದೆ. ಅಂತಹ ಮಹಿಳೆಯ ಕಾಲ್ಗುಣದಿಂದ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ಬರಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.

Tap to resize

Latest Videos

ಧಾರ್ಮಿಕ ಮಹಿಳೆಯರು

ತನ್ನ ಧರ್ಮವನ್ನು ಅನುಸರಿಸುವ ಮಹಿಳೆ ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಯಶಸ್ಸನ್ನು ಸಾಧಿಸುತ್ತಾಳೆ. ಅದೇ ಸಮಯದಲ್ಲಿ ನಿಯಮಗಳ ಪ್ರಕಾರ ಪೂಜೆ ಮಾಡುವುದರಿಂದ ಮನೆಯಲ್ಲಿ ಅದೃಷ್ಟ ಉಳಿಯುತ್ತದೆ. ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುವ ಜನರು ಕೆಟ್ಟ ಕಾರ್ಯಗಳಿಗೆ ಹೆದರುತ್ತಾರೆ ಎಂದು ನಂಬಲಾಗಿದೆ. 

ಇಲ್ಲಿನ ಮನೆಗಳಿಗೆ ಬಾಗಿಲುಗಳೇ ಇಲ್ಲ; ಕಳ್ಳತನಕ್ಕೆ ಯತ್ನಿಸಿದ್ರೇ ಏನ್ ಆಗುತ್ತೆ ಗೊತ್ತಾ?

 

ಸುಸಂಸ್ಕೃತ ಮಹಿಳೆ

ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯವು ಅಗತ್ಯ. ನಿಮ್ಮ ಜೀವನ ವಿಧಾನ ನಿಮ್ಮ ನಡುವಳಿಕೆಯಿಂದ ತಿಳಿಯುತ್ತದೆ. ಮತ್ತೊಂದೆಡೆ ಸುಸಂಸ್ಕೃತ ಅಥವಾ ಗೌರವಾನ್ವಿತ ಮಹಿಳೆ ಯಾವಾಗಲೂ ತನ್ನ ಹಿರಿಯರನ್ನು ಗೌರವಿಸುತ್ತಾಳೆ ಮತ್ತು ಅವರನ್ನು ನೋಡಿಕೊಳ್ಳುತ್ತಾಳೆ. 

ಬೆಂಬಲಿಸುವ ಮಹಿಳೆ

 ತನ್ನ ಕುಟುಂಬ ಮತ್ತು ಗಂಡನನ್ನು ಪ್ರತಿ ಪರಿಸ್ಥತಿಯಲ್ಲೂ ಬೆಂಬಲಿಸುವ ಸಂಗಾತಿ ಸಿಗಬೇಕು. ಆರ್ಥಿಕ, ಸಾಮಾಜಿಕ ಅಥವಾ ಕೌಟುಂಬಿಕ ಸ್ಥಿತಿಯಲ್ಲಿ ಸದ್ಗುಣಶೀಲ ಮಹಿಳೆ ತನ್ನ ಕುಟುಂಬ ಮತ್ತು ಗಂಡನನ್ನು ಪ್ರತಿ ಕಷ್ಟದ ಪರಿಸ್ಥಿತಿಯಲ್ಲಿಯೂ ಬೆಂಬಲಿಸುತ್ತಾಳೆ ಮತ್ತು ಸಮತೋಲನವನ್ನು ಕಾಪಾಡುತ್ತಾಳೆ.

click me!