Chanakya Niti: ಹೊಸ ವರ್ಷದಲ್ಲಿ ಯಶಸ್ಸು ಬೇಕೆಂದ್ರೆ ಈ ನೀತಿ ಪಾಲಿಸಿ

By Suvarna NewsFirst Published Dec 29, 2022, 2:25 PM IST
Highlights

ಚಾಣಕ್ಯ ನಮ್ಮ ಜೀವನಕ್ಕೆ ಬೇಕಾದ ಎಲ್ಲ ವಿಷ್ಯವನ್ನೂ ಹೇಳಿದ್ದಾನೆ. ಹೊಸ ವರ್ಷದಲ್ಲಿ ಗುರಿ ಸಾಧಿಸಬೇಕು, ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಬೇಕು ಎನ್ನುವುದಾದ್ರೆ ಚಾಣಕ್ಯ ಹೇಳಿದಂತೆ ಕೇಳಬೇಕು. ಚಾಣಕ್ಯನ ನೀತಿ ಪಾಲನೆ ಮಾಡಿದ್ರೆ ನಿಮ್ಮ ಜೀವನ ಸರಳ ಹಾಗೂ ಸುಗಮವಾಗಿ ಸಾಗುತ್ತದೆ.
 

ಚಾಣಕ್ಯನನ್ನು ವಿಷ್ಣುಗುಪ್ತ  ಎಂದೂ ಕರೆಯಲಾಗುತ್ತದೆ. ಅರ್ಥಶಾಸ್ತ್ರಜ್ಞ ಚಾಣಕ್ಯ ಪ್ರಸಿದ್ಧ ವಿದ್ವಾಂಸ. ಗುರಿಗೆ ಬಹಳ ಮಹತ್ವ ನೀಡುತ್ತಿದ್ದ ಚಾಣಕ್ಯ. ಒಮ್ಮೆ ನಿರ್ಧರಿಸಿದ್ದನ್ನು ಪೂರ್ಣಗೊಳಿಸಿದ ನಂತರವೇ ಅವನು ಮುಂದಿನ ಕೆಲಸಕ್ಕೆ ಹೋಗ್ತಿದ್ದ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ದುಃಖ ಮತ್ತು ಸಮಸ್ಯೆಗಳು ಬಂದೇ ಬರುತ್ತವೆ. ಹಗಲಿನ ನಂತರ ರಾತ್ರಿ ಬರುವ ರೀತಿಯಲ್ಲಿಯೇ ದುಃಖಗಳು ಬಂದು ಹೋಗುತ್ತಿರುತ್ತವೆ ಎಂದು ಚಾಣಕ್ಯ ನಂಬಿದ್ದ. 

ಇದು ಡಿಜಿಟಲ್ (Digital) ಯುಗ. ಜನರ ಜೀವನ ಶೈಲಿ (Lifestyle) ಸಂಪೂರ್ಣ ಬದಲಾಗಿದೆ. ಆದ್ರೆ ಈಗ್ಲೂ ಚಾಣಕ್ಯನ ನೀತಿ ಬಹಳ ಮಹತ್ವ ಪಡೆದಿದೆ. ಚಾಣಕ್ಯ (Chanakya) ನೀತಿಯಲ್ಲಿ ಮನುಷ್ಯನ ಜೀವನಕ್ಕೆ ಈಗ್ಲೂ ಬೇಕಾದಂತಹ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಹೊಸ ವರ್ಷ (New Year ) ದ ಸಮಯದಲ್ಲಿ ಚಾಣಕ್ಯನ ನೀತಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹೊಸ ವರ್ಷ ಹತ್ತಿರ ಬರ್ತಿದೆ. ಜನರು 2022 ನೋವನ್ನು ಮರೆತು ಹೊಸ ವರ್ಷದಲ್ಲಿ ಸಂತೋಷ ಸಿಗಲಿ ಎಂದು ಪ್ರಾರ್ಥನೆ ಮಾಡ್ತಿದ್ದಾರೆ. 2023ರಲ್ಲಿ ನೀವು ಚಾಣಕ್ಯ ಹೇಳಿದ ಕೆಲ ಮಾತುಗಳನ್ನು ಪಾಲಿಸಿದ್ರೆ ಜಯಗಳಿಸಬಹುದು. ನಾವಿಂದು ಹೊಸ ವರ್ಷದಲ್ಲಿ ನೀವು ಏನೆಲ್ಲ ಪಾಲನೆ ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ಭಯ ಬಿಡಬೇಕು : ಭಯ ನಮ್ಮ ಕೆಲಸಕ್ಕೆ ದೊಡ್ಡ ಹಿನ್ನಡೆ. ಮನುಷ್ಯ ಯಾವುದೇ ಸಂದರ್ಭದಲ್ಲಿಯೂ ಭಯಪಡಬಾರದು ಎನ್ನುತ್ತಾನೆ ಚಾಣಕ್ಯ. ಬಿಕ್ಕಟ್ಟುಗಳನ್ನು ಮನುಷ್ಯನಾದವನು ಎದುರಿಸಬೇಕೇ ವಿನಃ ಅದರಿಂದ ದೂರ ಓಡಬಾರದು. ಯಾವಾಗ ಸಮಸ್ಯೆ ಬರುತ್ತದೆಯೋ ಆಗ್ಲೇ ನಮ್ಮ ನಿಜವಾದ ಪರೀಕ್ಷೆಯನ್ನು ನಾವು ಮಾಡಬಹುದು ಎನ್ನುತ್ತಾರೆ ಚಾಣಕ್ಯ. ಚಾಣಕ್ಯ ನೀತಿಯು ಮನುಷ್ಯನಿಗೆ ಬಿಕ್ಕಟ್ಟಿನ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ದುಃಖದಲ್ಲಿರುವ ವ್ಯಕ್ತಿಗೆ ಚಾಣಕ್ಯ ನೀತಿಯು ಹೊಸ ಮಾರ್ಗವನ್ನು ತೋರಿಸುತ್ತದೆ. ಚಾಣಕ್ಯನ ಪ್ರಕಾರ ಮನುಷ್ಯ ಸದಾ ಯೋಚಿಸುತ್ತಾ ಧ್ಯಾನಿಸುತ್ತಿರಬೇಕು. ಇದು ಬದುಕಲು ದಾರಿ ನೀಡುತ್ತದೆ. ಚಾಣಕ್ಯನ ಪ್ರಕಾರ, ಮನುಷ್ಯ ಗೌರವವಿಲ್ಲದ ಜಾಗದಲ್ಲಿ ಬದುಕಬಾರದು. ಹಾಗೆಯೇ ಸ್ನೇಹಿತರಿಲ್ಲದ ಸ್ಥಳದಲ್ಲಿ ವಾಸಿಸಬಾರದು ಎನ್ನುತ್ತಾನೆ. 

ನಿರುದ್ಯೋಗ ಸಮಸ್ಯೆಯೇ? ಈ ರೀತಿ ಮಾಡಿದ್ರೆ ಬಯಸಿದ ಉದ್ಯೋಗ ಪಕ್ಕಾ!

ಜ್ಞಾನಾರ್ಜನೆಗೆ ಸಮಯ ನೀಡಿ : ಶಾಸ್ತ್ರದ ನಿಯಮಗಳನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾ ಶಿಕ್ಷಣವನ್ನು ಪಡೆಯುವವನು ಸರಿ, ತಪ್ಪು ಮತ್ತು ಶುಭ ಕಾರ್ಯಗಳ ಜ್ಞಾನವನ್ನು ಪಡೆಯುತ್ತಾನೆ ಎನ್ನುತ್ತಾರೆ ಚಾಣಕ್ಯ. ಜ್ಞಾನವನ್ನು ಹೊಂದಿದ ವ್ಯಕ್ತಿ ಅಪಾರ ಯಶಸ್ಸನ್ನು ಪಡೆಯುತ್ತಾನೆ. ಚಾಣಕ್ಯನ ಪ್ರಕಾರ ಎಲ್ಲಾ ದುಃಖಗಳಿಗೆ ಜ್ಞಾನವೇ ಪರಿಹಾರ. ಪ್ರತಿಯೊಂದು ಗುರಿಯನ್ನು ಜ್ಞಾನದಿಂದ ಮಾತ್ರ ಭೇದಿಸಬಹುದು. ಯಾರು ಜ್ಞಾನವನ್ನು ಪಡೆಯಲು ಯಾವಾಗಲೂ ಸಿದ್ಧರಿರುತ್ತಾರೆಯೋ ಅವರ ಹಿಂದೆ ಯಶಸ್ಸು ಬರುತ್ತದೆ ಎನ್ನತ್ತಾರೆ ಚಾಣಕ್ಯ. ಅವರಿಗೆ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ.  ಚಾಣಕ್ಯ ಇದಕ್ಕೆ ಸಂಬಂಧಿಸಿದಂತೆ ಅನೇಕ ಶ್ಲೋಕಗಳ ಮೂಲಕ ಜನರಿಗೆ ಮಾಹಿತಿ ನೀಡಿದ್ದಾನೆ.

ನಕಾರಾತ್ಮಕತೆಯಿಂದ ದೂರವಿರಿ : ಜೀವನದಲ್ಲಿ ಧನಾತ್ಮಕ ವರ್ತನೆಗೆ ಚಾಣಕ್ಯ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಮನುಷ್ಯ ನಕಾರಾತ್ಮಕತೆಯಿಂದ ದೂರವಿರಬೇಕು ಎಂದು ನಂಬುತ್ತಾನೆ. ಸಾಮರ್ಥ್ಯ, ಕಠಿಣ ಪರಿಶ್ರಮವನ್ನು ನಮ್ಮ ನಕಾರಾತ್ಮಕ ಆಲೋಚನೆ, ಮನಸ್ಥಿತಿ ನಷ್ಟ ಮಾಡುತ್ತದೆ. ಸಕಾರಾತ್ಮಕವಾಗಿರುವ ವ್ಯಕ್ತಿ ಯಾವಾಗ್ಲೂ ಸಮಸ್ಯೆಯನ್ನು ಬಹಳ ಸುಲಭವಾಗಿ ಬಗೆಹರಿಸುತ್ತಾನೆ ಎನ್ನುತ್ತಾನೆ ಚಾಣಕ್ಯ. 

Astrology: ಸಾಕುಪ್ರಾಣಿಗಳೆಂದ್ರೆ ಈ ರಾಶಿಯವ್ರಿಗೆ ಭಾರೀ ಇಷ್ಟ!

ಉಳಿತಾಯ ಮುಖ್ಯ ಎನ್ನುತ್ತಾರೆ ಚಾಣಕ್ಯ : ಯಾವ ಸಂದರ್ಭದಲ್ಲಿ ಯಾವ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ. ಹೀಗಿರುವಾಗ ಗಳಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ನಾವು ಉಳಿಸಬೇಕು. ಆತನಿಲ್ಲದ ಸಂದರ್ಭದಲ್ಲಿ ಹೆಂಡತಿ ಬದುಕನ್ನು ಸುರಕ್ಷಿತಗೊಳಿಸಲು ಆತ ಹಣ ಉಳಿತಾಯಮಾಡಬೇಕಾಗುತ್ತದೆ. ಆದ್ರೆ ಆತ್ಮದ ವಿಷ್ಯಕ್ಕೆ ಬಂದಾಗ ಹಣ ಮತ್ತು ಹೆಂಡತಿ ಎರಡನ್ನೂ ದೂರವಿಡಬೇಕು ಎನ್ನುತ್ತಾನೆ ಚಾಣಕ್ಯ. 

click me!