ಚಾಣಕ್ಯ ನೀತಿ: ಪುರುಷ ಯಾವಾಗ ಸ್ತ್ರೀಯ ಮೋಹಪಾಶದಲ್ಲಿ ಸಿಲುಕಿ ಹಾಳಾಗೋದು ಹೇಗೆ?

Published : Mar 10, 2025, 11:31 AM ISTUpdated : Mar 10, 2025, 04:16 PM IST
ಚಾಣಕ್ಯ ನೀತಿ: ಪುರುಷ ಯಾವಾಗ ಸ್ತ್ರೀಯ ಮೋಹಪಾಶದಲ್ಲಿ ಸಿಲುಕಿ ಹಾಳಾಗೋದು ಹೇಗೆ?

ಸಾರಾಂಶ

Love And Cheat: ಚಾಣಕ್ಯ ನೀತಿಯ ಪ್ರಕಾರ, ಪುರುಷನು ಸ್ತ್ರೀಯ ಮೋಹಪಾಶದಲ್ಲಿ ಸಿಲುಕಿ ಹೇಗೆ ನಾಶವಾಗುತ್ತಾನೆ ಎಂಬುದನ್ನು ವಿವರಿಸಲಾಗಿದೆ. ಸುಂದರ ಸ್ತ್ರೀಯ ಮೋಹಕ್ಕೆ ಬಲಿಯಾಗಿ ಪುರುಷನು ತನ್ನ ವಿವೇಕವನ್ನು ಕಳೆದುಕೊಂಡು ಅವನತಿಯತ್ತ ಸಾಗುತ್ತಾನೆ.

ಚಾರ್ಯ ಚಾಣಕ್ಯರು ಆರ್ಥಿಕತಜ್ಞರು ಮಾತ್ರವಲ್ಲದೇ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಮ್ಮ ನೀತಿಗಳಲ್ಲಿ ವಿವರವಾಗಿ ಹೇಳಿದ್ದಾರೆ. ಜೀವನದಲ್ಲಿ ಚಾಣಕ್ಯ ನೀತಿಗಳನ್ನು ಅಳವಡಿಸಿಕೊಂಡ ವ್ಯಕ್ತಿ ಯಶಸ್ವಿಯಾಗುತ್ತಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪಂಡಿತ ಚಾಣಕ್ಯರು, ವೃತ್ತಿ, ವೈಯಕ್ತಿಕ ಬದುಕಿನ ಕುರಿತು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ. ಇದರ ಜೊತೆಯಲ್ಲಿ ಕೆಟ್ಟ ಚಟಗಳು ಓರ್ವ ಸಜ್ಜನ ವ್ಯಕ್ತಿಯನ್ನು ಹೇಗೆ ನಾಶ ಮಾಡುತ್ತೆ ಮತ್ತು ಇವುಗಳಿಂದ ತಪ್ಪಿಸಿಕೊಳ್ಳಲು ಯಾವ ಮಾರ್ಗೊಪಾಯಗಳನನ್ನು ಅನುಸರಿಸಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ತಿಳಿದುಕೊಳ್ಳಬಹುದು. ಈ ಲೇಖನದಲ್ಲಿ ಪುರುಷನೋರ್ವ ಸ್ತ್ರೀಯ ಮೋಹಪಾಶದಲ್ಲಿ ಸಿಲುಕಿ ನಾಶವಾಗುತ್ತಾನೆ ಎಂದು ತಿಳಿಸಲಾಗಿದೆ.

ಸ್ತ್ರೀ ಮೋಹ ಅನ್ನೋದು ತುಂಬಾ ಅಪಾಯಕಾರಿ. ಈ ಹಿಂದೆ ತಪಸ್ಸು  ಭಂಗ ಮಾಡಲು ಗಂಧರ್ವಕನ್ಯೆಯರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ನಮ್ಮ ಪುರಾಣಗಳಲ್ಲಿ ಲಭ್ಯವಿದೆ. ಸ್ತ್ರೀಯಿಂದಲೇ ರಾಮಾಯಣ ಮತ್ತು ಮಹಾಭಾರತ ನಡೆಯಿತು ಎಂಬ ಮಾತುಗಳನ್ನು ಕೇಳುತ್ತಿರುತ್ತವೆ. ಮಹಿಳೆ ಮೋಹಕ್ಕೆ ಸಿಲುಕಿ ಆಸ್ತಿ ಅಂತಸ್ತು ಕಳೆದುಕೊಂಡು ಬೀದಿ ಹೆಣವಾಗಿರುವ ಉದಾಹರಣೆಗಳನ್ನು ನಮ್ಮ ಇತಿಹಾಸ ಹೇಳುತ್ತವೆ

ಆಚಾರ್ಯ ಚಾಣಕ್ಯ ನೀತಿಯ ಶ್ಲೋಕ
ಯೊ ಮೋಹನನ್ಯಂತೇ ಮೂಢ ರಕೇಯಂ ಮಯಿ ಕಾಮಿನಿ|
ಸ ತಸ್ಯಾ ವಶಗೋ ಭೂತ್ವಾ ನೃತ್ಯೋತ್ ಕ್ರೀಡಾ ಶಕುಂತವತ್||

ಶ್ಲೋಕದ ಅರ್ಥ
ಯಾವ ಮೂರ್ಖನು ಸುಂದರ ಸ್ತ್ರೀಯೋರ್ವಳು ತನ್ನನ್ನು ಪ್ರೇಮಿಸುತ್ತಾಳೆ ಎಂದು ಭ್ರಮಿಸುತ್ತಾನೋ, ಅವನು ಆ ಸ್ತ್ರೀಯ ಮೋಹಪಾಶದಲ್ಲಿ ಸಿಲುಕಿ ಸೂತ್ರದ ಗೊಂಬೆಯಂತೆ ವರ್ತಿಸುತ್ತಾನೆ.

ಶ್ಲೋಕದ ವಿವರಣೆ
ಚಾಣಕ್ಯರು ಮಹಿಳೆಯರ ಮೇಲೆ ವಿಶ್ವಾಸವಿಡತಕ್ಕದಲ್ಲ. ಮಹಿಳೆಯರ ಮುಂದೆ ಯಾವ ರಹಸ್ಯವನ್ನು ಹೇಳಬಾರದು. ಸ್ರ್ತೀಯರು  ಮೂಲತಃ ಸ್ವಾರ್ಥಿಗಳು ಆಗಿರುತ್ತಾರೆ  ಎಂಬ ಮಾತನ್ನು ನಮ್ಮ ಹಿತೋಪದೇಶದಲ್ಲಿಯೂ ಹೇಳಲಾಗಿದೆ.  ಒಂದಿಷ್ಟು ಮಹಿಳೆಯರು ತಮ್ಮ ಸ್ವಾರ್ಥ ಸಾಧನೆಗಾಗಿ ಪುರುಷರನ್ನು ತಮ್ಮ ಮೋಹದಲ್ಲಿ ಬೀಳಿಸಿಕೊಳ್ಳುತ್ತಾರೆ. ಈ ಮೋಹದಲ್ಲಿ ಮಹಿಳೆ ತನ್ನ ನಿಜವಾದ ಪ್ರೀತಿಯನ್ನು ಎಂದಿಗೂ ತೋರಿಸಲ್ಲ. ಕೇವಲ ತೋರ್ಪಡಿಕೆಗಾಗಿ ಮಹಿಳೆ ಪ್ರೀತಿ ತೋರಿಸುತ್ತಿರುತ್ತಾಳೆ. ಇದನ್ನೇ ನಂಬಿದ ಪುರುಷ ಆಕೆಯ ಮೋಹದ ಮಾಯಜಾಲದಲ್ಲಿ ಸಿಲುಕುತ್ತಾನೆ. ನಂತರ ಆಕೆ ಆಡಿಸಿದ ಸೂತ್ರದ ಗೊಂಬೆಯಂತೆ  ವರ್ತಿಸಲು ಆರಂಭಿಸುತ್ತಾನೆ. ಇಲ್ಲಿಂದಲೇ ಆ ಪುರುಷನ ಅವನತಿ ಆರಂಭವಾಗುತ್ತದೆ. ಮಹಿಳೆ ತನ್ನ ಕಾರ್ಯಸಾಧು ಆದ್ಮೇಲೆ  ಪ್ರೀತಿ ತೋರಿದ ಪುರುಷನನ್ನು ತಿರಸ್ಕರಿಸಬಹುದು. ಈ ಮೋಹದ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಪುರುಷ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿರುತ್ತಾನೆ. 

ಇದನ್ನೂ ಓದಿ:ಗಂಡನು ಈ 6 ವಿಷಯಗಳಲ್ಲಿ ಹೆಂಡತಿಗೆ ಆದ್ಯತೆ ನೀಡಬೇಕು ಅಂತಾರೆ ಚಾಣಕ್ಯ!

ಪುರುಷ ತನ್ನ ಹೆಂಡತಿಯನ್ನೇ ಪ್ರೀತಿ ಮಾಡಬೇಕು. ಬೇರೆ ಹೆಣ್ಣನ್ನು ಸೋದರಿ ಭಾವನೆಯಿಂದ ಕಾಣಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಸುಂದರ ವೇಶ್ಯೆಯೊಬ್ಬಳು ತನ್ನನ್ನೊಬ್ಬನೇ ಪ್ರೀತಿಸುತ್ತಾಳೆ ಎಂದು ತಿಳಿದುಕೊಂಡಿರುವ ಪುರುಷನನ್ನು ಮೂರ್ಖ ಎಂದು ಚಾಣಕ್ಯರು ಕರೆದಿದ್ದಾರೆ. ತನ್ನನ್ನು ಅನಾದರಿಸುವ ಮಹಿಳೆಯಿಂದ ಪುರುಷ ದೂರವಿರಬೇಕು. ಇದು ಆತನ ಏಳಿಗೆಗೆ ಕಾರಣವಾಗುತ್ತದೆ. ಆದರೆ ಕೆಲವೊಮ್ಮೆ ವಿನಾಶಕಾಲ ಬಂದಾಗ ವಿಪರೀತ ಬುದ್ಧಿ ಎಂದು ಹಿರಿಯರು ಹೇಳುತ್ತಾರೆ.

ಚಿನ್ನದ ಜಿಂಕೆಯನ್ನು ಯಾರು ನೋಡಿಲ್ಲ. ಚಿನ್ನದ ಜಿಂಕೆ ಇರುತ್ತೆ ಎಂಬುದರ ಬಗ್ಗೆಯೂ ಉಲ್ಲೇಖವಿಲ್ಲ. ಆ ಜಿಂಕೆಯನ್ನು ಯಾರು ಸಹ ನೋಡಿಲ್ಲ. ಆದರೂ ಕೂಡ ಮರ್ಯಾದಾ ಪುರುಷತ್ತೋಮವೆನಿಸಿದ ಶ್ರೀರಾಮಚಂದ್ರನು ಚಿನ್ನದ ಜಿಂಕೆಯನ್ನು ಬೆನ್ನಟ್ಟಿ ಹೋಗಿ ಸೀತೆಯನ್ನು ಕಳೆದುಕೊಂಡನು. ನಂತರ ಸೀತೆಗಾಗಿ ಹುಡುಕಾಟ, ರಾವಣನ ಸಂಹಾರ ನಡೆಯುತ್ತದೆ. ಸೀತೆಯ ಪತಿಯಿಂದ ದೂರವಾಗಿ ಅಶೋಕವನದಲ್ಲಿ ಇರುವಂತಾಯ್ತು. ಹಾಗಾಗಿ ವಿನಾಶಕಾಲದಲ್ಲಿ ವ್ಯಕ್ತಿ ಅತಿ ಬುದ್ಧಿವಂತನಾಗುತ್ತಾನೆ. ಯಾವುದನ್ನು ಸಹ ಆತ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುತ್ತಾನೆ.

ಇದನ್ನೂ ಓದಿ:ಚಾಣಕ್ಯನ ಪ್ರಕಾರ ಪುರುಷರ ಈ ಅಭ್ಯಾಸಕ್ಕೆ ಮಹಿಳೆಯರು ಹೆಚ್ಚು ಬೀಳುತ್ತಾರಂತೆ

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ