ಪ್ರತಿಯೊಬ್ಬರೂ ಹೊಸ ವರ್ಷವನ್ನು ವಿಶೇಷ ಮತ್ತು ಸ್ಮರಣೀಯವಾಗಿಸಲು ಬಯಸುತ್ತಾರೆ. ಹೊಸ bವರ್ಷವನ್ನು ವಿಶೇಷವಾಗಿಸಲು ಚಾಣಕ್ಯನ ಈ ವಿಷಯಗಳನ್ನು ಅನುಸರಿಸಿ.
ಆಚಾರ್ಯ ಚಾಣಕ್ಯ ರಾಜಾ ವಿಷ್ಣುಗುಪ್ತನ ಆಸ್ಥಾನದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯ ಪ್ರಮುಖರು ಎಂದು ಪರಿಗಣಿಸಲಾಗಿದೆ. ತನ್ನ ಕುಟಿಲ ತಂತ್ರಗಳ ಮೂಲಕ ಕೌಟಿಲ್ಯ ಎಂದೇ ಖ್ಯಾತಿ ಪಡೆದಿದ್ದ ಚಾಣಕ್ಯ ಪ್ರಸಿದ್ಧ ಅರ್ಥಶಾಸ್ತ್ರಜ್ಞ. ಅವರು ಯಾವಾಗಲೂ ತಮ್ಮ ಗುರಿಗೆ ಮುಡಿಪಾಗಿದ್ದರು. ತುಂಬಾ ಆತ್ಮವಿಶ್ವಾಸ ಮತ್ತು ದೃಢನಿಶ್ಚಯದ ವ್ಯಕ್ತಿಯಾಗಿದ್ದರ, ಅವರು ಒಮ್ಮೆ ನಿರ್ಧರಿಸಿದ್ದನ್ನು ಪೂರ್ಣಗೊಳಿಸಿದ ನಂತರವೇ ಸುಮ್ಮನಾಗುತ್ತಿದ್ದರು. ಇಂಥ ಈ ಚಾಣಕ್ಯರು ಹಲವಾರು ಜೀವನಪಾಠಗಳನ್ನು ಹೇಳಿದ್ದಾರೆ. ಅವು ಸಾರ್ವಕಾಲಿಕವಾಗಿವೆ. ಅಂದಿಗೂ ಇಂದಿಗೂ ಪ್ರಸ್ತುತವಾಗಿವೆ.
ಹೊಸ ವರ್ಷ ಬರುತ್ತಿದೆ. ಪ್ರತಿಯೊಬ್ಬರೂ 2023ರ ವರ್ಷಕ್ಕಾಗಿ ಕಾಯುತ್ತಿದ್ದಾರೆ. ಚಾಣಕ್ಯನ ಪ್ರಕಾರ, ಹಗಲಿನ ನಂತರ ರಾತ್ರಿ ಬರುವ ರೀತಿಯೇ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸುಖದ ಹಿಂದೆಯೇ ದುಃಖಗಳು ಮತ್ತು ತೊಂದರೆಗಳು ಬರುತ್ತವೆ.
ಚಾಣಕ್ಯನ ಪ್ರಕಾರ, ಮನುಷ್ಯ ಯಾವುದೇ ಪರಿಸ್ಥಿತಿಗೆ ಹೆದರಬಾರದು. ಬಿಕ್ಕಟ್ಟುಗಳನ್ನು ದೃಢವಾಗಿ ಎದುರಿಸಬೇಕು. ವ್ಯಕ್ತಿಯ ಗುಣಗಳ ನಿಜವಾದ ಪರೀಕ್ಷೆಯು ಬಿಕ್ಕಟ್ಟಿನ ಸಮಯದಲ್ಲಿ ಮಾತ್ರ ಎಂದು ಚಾಣಕ್ಯ ಹೇಳುತ್ತಾರೆ. ಹೊಸ ವರ್ಷಕ್ಕೆ ಈ ಚಾಣಕ್ಯನ ಮಾತುಗಳನ್ನೇ ಮಂತ್ರವಾಗಿರಿಸಿಕೊಂಡರೆ ಯಸಸ್ಸು ನಿಮ್ಮ ಪಾಲಿನದೇ ಆಗಿರುತ್ತದೆ.
ಅಧಿತ್ಯೇದಂ ಯಥಾಶಾಸ್ತ್ರಂ ನರೋ ಜಾನಾತಿ ಸತತಮ್
ಧಾರ್ಮಿಕ ಪ್ರವಚನ ಪ್ರಸಿದ್ಧ ಕಾರ್ಯ ಶುಭ
ಅರ್ಥ- ಶಾಸ್ತ್ರದ ನಿಯಮಗಳನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾ ಶಿಕ್ಷಣವನ್ನು ಪಡೆಯುವವನು ಸರಿ, ತಪ್ಪು ಮತ್ತು ಶುಭ ಕಾರ್ಯಗಳ ಜ್ಞಾನವನ್ನು ಪಡೆಯುತ್ತಾನೆ. ಅಂತಹ ವ್ಯಕ್ತಿಯು ಅತ್ಯುತ್ತಮ ಜ್ಞಾನವನ್ನು ಹೊಂದಿರುತ್ತಾನೆ. ಅಂಥ ಜನರು ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ.
ಅದೃಷ್ಟವಂತ J ಅಕ್ಷರದ ಹುಡುಗಿಯರನ್ನು ಕಾಡುತ್ತೆ ಈ ಸಮಸ್ಯೆ!
ಚಾಣಕ್ಯ ಜ್ಞಾನಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಚಾಣಕ್ಯರ ಪ್ರಕಾರ ಎಲ್ಲ ದುಃಖಗಳಿಗೆ ಜ್ಞಾನವೇ ಪರಿಹಾರ. ಪ್ರತಿಯೊಂದು ಗುರಿಯನ್ನು ಜ್ಞಾನದಿಂದ ಮಾತ್ರ ಭೇದಿಸಬಹುದು, ಯಾರು ಜ್ಞಾನವನ್ನು ಪಡೆಯಲು ಯಾವಾಗಲೂ ಸಿದ್ಧರಿರುತ್ತಾರೆೋ ಅವರು ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಅಂಥವರಿಗೆ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ. ಜ್ಞಾನದ ಬಗ್ಗೆ ಚಾಣಕ್ಯರ ಇನ್ನೊಂದು ಶ್ಲೋಕ -
ಯಸ್ಮಿನ್ ದೇಶ್ ನ ಸಮ್ಮಾನೋ ನ ವೃತ್ತಾರ್ನ್ ಚ ಬಾನ್ಧವಃ ।
ನ ಚ ವಿದ್ಯಾಗಮಪಯಾಸ್ತಿ ವಶಾಸ್ತ್ರ ನ ಕಾರಯೇತ್ ॥
ಅರ್ಥ- ಗೌರವವಿಲ್ಲದ ದೇಶದಲ್ಲಿ ಬದುಕಬಾರದು. ಉದ್ಯೋಗದ ಸಾಧನಗಳು ಇಲ್ಲದಲ್ಲಿ ಇರಬಾರದು. ನಿಮಗೆ ಸ್ನೇಹಿತರಿಲ್ಲದ ಸ್ಥಳದಲ್ಲಿ ಮನುಷ್ಯ ವಾಸಿಸಬಾರದು. ಎಲ್ಲಿ ಜ್ಞಾನವಿಲ್ಲವೋ ಆ ಸ್ಥಳವನ್ನೂ ತ್ಯಜಿಸಬೇಕು. ಜ್ಞಾನಿಗಳನ್ನು ಗೌರವಿಸಬೇಕು.
ಚಾಣಕ್ಯ ನೀತಿಯು ಮನುಷ್ಯನಿಗೆ ಬಿಕ್ಕಟ್ಟಿನ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ, ಒಬ್ಬ ವ್ಯಕ್ತಿಯು ದುಃಖದಿಂದ ಸುತ್ತುವರೆದಿರುವಾಗ, ಚಾಣಕ್ಯ ನೀತಿಯು ಅವನಿಗೆ ಹೊಸ ಮಾರ್ಗವನ್ನು ತೋರಿಸಲು ಪ್ರಯತ್ನಿಸುತ್ತದೆ. ಚಾಣಕ್ಯ ನೀತಿಯ ಮಾತುಗಳನ್ನು ಪಾಲಿಸುವವನ ಜೀವನ ಸುಖಮಯವಾಗಿರುತ್ತದೆ. ದುಃಖದ ಭಾರೀ ಮೋಡಗಳು ಸಹ ಅಂತಹ ವ್ಯಕ್ತಿಯನ್ನು ತೊಂದರೆಗೊಳಿಸುವುದಿಲ್ಲ. ಚಾಣಕ್ಯ ಹೇಳುತ್ತಾರೆ ಮನುಷ್ಯ ಸದಾ ಯೋಚಿಸುತ್ತಾ ಧ್ಯಾನಿಸುತ್ತಿರಬೇಕು. ಇದು ಬದುಕಲು ದಾರಿ ನೀಡುತ್ತದೆ. ಚಾಣಕ್ಯನ ಈ ಶ್ಲೋಕ ನೋಡಿ-
ಜನೀಯತ್ ಪ್ರೆಶನೇ ಭೃತ್ಯಾನ ಬಾಂಧವಾನ್ ವ್ಯಾದ್ಯಾಗಮೇ ।
ಮಿತ್ರಾ ಚಾಪ್ತಿಕಾಲೇ ತು ಭಾರ್ಯಾನ್ ಚ ವಿಭವಕ್ಷಯೇ ।
ಅರ್ಥ- ಸೇವಕನ ಪರೀಕ್ಷೆ ಎಂದರೆ ಕೆಟ್ಟ ಸಮಯ ಬಂದಾಗ, ಸಂಬಂಧಿಗಳು ತೊಂದರೆಯಿಂದ ಸುತ್ತುವರೆದಿರುವಾಗ ಅವರನ್ನು ಪರೀಕ್ಷಿಸಲಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಸ್ನೇಹಿತನನ್ನು ಪರೀಕ್ಷಿಸಲಾಗುತ್ತದೆ. ವಿಪತ್ತು ಬಂದಾಗ ಹೆಂಡತಿಯನ್ನು ಪರೀಕ್ಷಿಸಲಾಗುತ್ತದೆ.
3 ರಾಶಿಗಳಿಗೆ ಮಕರ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದ ಅದೃಷ್ಟ
ಚಾಣಕ್ಯನ ಸಾಮಾಜಿಕ ಜ್ಞಾನದ ವ್ಯಾಪ್ತಿ ವಿಸ್ತಾರವಾಗಿತ್ತು. ಜೀವನದಲ್ಲಿ ಧನಾತ್ಮಕ ವರ್ತನೆಗೆ ಚಾಣಕ್ಯ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಮನುಷ್ಯ ನಕಾರಾತ್ಮಕತೆಯಿಂದ ದೂರವಿರಬೇಕು ಎಂದು ನಂಬಿದ್ದರು. ಇದು ವ್ಯಕ್ತಿಯ ಸಾಮರ್ಥ್ಯ, ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವನ್ನು ನಾಶಪಡಿಸುತ್ತದೆ. ಮನುಷ್ಯ ಯಾವಾಗಲೂ ಧನಾತ್ಮಕವಾಗಿರಬೇಕು. ಸಕಾರಾತ್ಮಕ ವ್ಯಕ್ತಿಯು ಅತ್ಯಂತ ಸಂಕೀರ್ಣವಾದ ಸಮಸ್ಯೆಗಳನ್ನು ಸಹ ಸುಲಭವಾಗಿ ಜಯಿಸುತ್ತಾನೆ.
ಆಪದಾರ್ಥೇ ಧನಂ ರಕ್ಷೇದ್ದಾರಣ ರಕ್ಷೇಧನೈರಪಿ ।
ನಾತ್ಮಾನ್ ಸನಾತಂ ರಕ್ಸೇದ್ದಾರೈರ್ಪಿ ಧನೈರ್ಪಿ ।
ಅರ್ಥ- ಮುಂಬರುವ ತೊಂದರೆಗಳನ್ನು ತಪ್ಪಿಸಲು ಮನುಷ್ಯನು ಹಣವನ್ನು ಉಳಿಸಬೇಕು. ತನ್ನ ಸಂಪತ್ತನ್ನು ತ್ಯಜಿಸಿದ ನಂತರವೂ ಅವನು ತನ್ನ ಹೆಂಡತಿಯನ್ನು ರಕ್ಷಿಸಬೇಕು. ಆದರೆ ಆತ್ಮದ ಸುರಕ್ಷತೆಯ ವಿಷಯಕ್ಕೆ ಬಂದರೆ, ಅವನು ಹಣ ಮತ್ತು ಹೆಂಡತಿ ಎರಡನ್ನೂ ಅತ್ಯಲ್ಪವೆಂದು ಪರಿಗಣಿಸಬೇಕು.