ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..?

By Suvarna News  |  First Published Sep 3, 2020, 5:53 PM IST

 ಪ್ರತಿ ಮಾಸದಲ್ಲೂ ಗ್ರಹಗತಿಗಳು ಬದಲಾಗುತ್ತಿರುತ್ತವೆ. ಇದರಿಂದ ಜೀವನದಲ್ಲಿ ಏರುಪೇರು ಸಂಭವಿಸುತ್ತದೆ. ಹೀಗಾಗಿ ಒಂದು ತಿಂಗಳಲ್ಲಿ ಅದೃಷ್ಟ ಕೈಕೊಟ್ಟಿದ್ದರೆ ಮತ್ತೊಂದು ತಿಂಗಳಲ್ಲಿ ಗ್ರಹಗಳು ಶುಭ ತರಬಾರದು ಎಂದೇನಿಲ್ಲ. ಅಲ್ಲದೆ, ಕಾರ್ಯಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಉನ್ನತಿ ಸಾಧಿಸಬಹುದು? ಆರ್ಥಿಕ ಪರಿಸ್ಥಿತಿ ಹೇಗಿರಲಿದೆ? ಪರಿಶ್ರಮದಿಂದ ಲಾಭವಾಗಲಿದೆಯೇ? ಧನಾಗಮನವಾಗಲಿದೆಯೇ? ಎಷ್ಟೆಲ್ಲ ಪ್ರಯೋಜನಗಳಿವೆ ಎಂಬಿತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಹೀಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಏನಾಗಬಹುದು ಎಂಬುದನ್ನು ನೋಡೋಣ ಬನ್ನಿ…


ವೃತ್ತಿಯಲ್ಲಿ ಸಾಕಷ್ಟು ಏಳು-ಬೀಳುಗಳು ಇರುತ್ತವೆ. ಕೆಲವರು ಸಾಮರ್ಥ್ಯದ ಮೇಲೆ ಕೆಲಸದಲ್ಲಿ ಏಳ್ಗೆ ಸಾಧಿಸಿದರೆ, ಮತ್ತೆ ಕೆಲವರು ಅದೃಷ್ಟದ ಬಲದ ಮೇಲೆ ಮುಂದೆ ಬರುತ್ತಾರೆ. ಕೆಲವರಿಗೆ ಈ ಎರಡೂ ಇರುತ್ತದೆ. ಆದರೆ, ಅದೃಷ್ಟ ಸಹ ಬೇಕೇ ಬೇಕು ಎಂಬುದಂತೂ ಸತ್ಯ. ಈಗ ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದೆ. ಈ ತಿಂಗಳಿನಲ್ಲಿ ಯಾವ ಯಾವ ರಾಶಿಯವರಿಗೆ ಯಾವ ಯಾವ ಅದೃಷ್ಟ ಒಲಿಯಲಿದೆ. ವೃತ್ತಿ ಜೀವನಲ್ಲಿ ಏನು ಸಾಧಿಸುತ್ತೀರಿ? ಏನನ್ನು ಕಳೆದುಕೊಳ್ಳುತ್ತೀರಿ ಎಂಬಿತ್ಯಾದಿಗಳನ್ನು ತಿಳಿದುಕೊಳ್ಳೋಣ.

ಮೇಷ ರಾಶಿ
ಈ ರಾಶಿಯವರಿಗೆ ಈ ತಿಂಗಳು ಅದೃಷ್ಟ ತಂದುಕೊಡಲಿದೆ. ವೃತ್ತಿಜೀವನದ ಮತ್ತೊಂದು ಮಜಲಿಗೆ ಹೋಗಲು ಸಿದ್ಧರಾಗಬಹುದು. ಆದರೆ, ಇಲ್ಲಿ ಜಾತಕದಲ್ಲಿ ಪಾದಗಳು, ಗ್ರಹ- ನಕ್ಷತ್ರಗಳು ಪ್ರಮುಖವಾಗುತ್ತವೆ. ಹೀಗಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಲಿದೆಯಲ್ಲದೆ, ನಿಮ್ಮ ಕನಸಿಗೆ ಪೂರಕವಾಗಲಿದೆ. ಇಲ್ಲಿ ನಿಮಗೊಂದಿಷ್ಟು ಪರೀಕ್ಷೆಗಳು ಎದುರಾಗಲಿದ್ದು, ಎಲ್ಲವನ್ನೂ ಎದುರಿಸಿ ಗುರಿ ಮುಟ್ಟಬಹುದಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಿ.
  
ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ಹೀಗಿದ್ದರೆ ರಾಜಯೋಗ, ನಿಮ್ಮ ರಾಶಿಗಿದೆಯಾ ಈ ಯೋಗ? 

ವೃಷಭ ರಾಶಿ
ಈ ರಾಶಿಯವರಿಗೆ ಕೆಲವು ಸವಾಲು ಎದುರಾಗಲಿವೆ. ವೈಯಕ್ತಿಕ ಇಲ್ಲವೇ ತಂಡದ ಒಂದು ಭಾಗವಾಗಿರಲಿ ನಿಮ್ಮ ಎಚ್ಚರಿಕೆ ನಿಮಗೆ ಒಳ್ಳೆಯದು. ಕಾರಣ, ಸ್ವಲ್ಪ ನಿಮ್ಮ ಕೆಲಸದ ಆಧಾರದ ಮೇಲೆ ಕೆಳಮಟ್ಟಕ್ಕೆ ತಳ್ಳಲ್ಪಡುವ ಸಾಧ್ಯತೆ ಇದೆ. ಆದರೆ, ನೀವು ಇಷ್ಟಪಡುವುದನ್ನೇ ಮಾಡಿ. ಬೇರೆಯವರನ್ನು ಖುಷಿ ಪಡಿಸುವ ಪ್ರಯತ್ನದಲ್ಲಿ ನಿಮ್ಮ ಚೌಕಟ್ಟನ್ನು ಮರೆಯದಿರವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯವರು ಈ ತಿಂಗಳು ನಿಮ್ಮ ಮನಸ್ಸಿನ ಮಾತನ್ನು ಕೇಳುವುದು ಉತ್ತಮ. ನಿವು ಆಶಿಸಿದಂತೆ ನಿಮ್ಮ ಕನಸನ್ನು ನಿಜವಾಗಿಸುವತ್ತ ಕಾರ್ಯಪ್ರವೃತ್ತರಾದರೆ ಒಳಿತಾಗುವುದು. ಈ ತಿಂಗಳು ನಿಮ್ಮ ಕೆಲಸದ ಬಗ್ಗೆ ನಿಮಗಿರುವ ಗೊಂದಲಗಳು ನಿವಾರಣೆಯಾಗಿ ಸ್ಪಷ್ಟತೆ ಸಿಗಲಿದೆ. ಒತ್ತಡಗಳು ಕಳೆದು ನೆಮ್ಮದಿಯ ಜೀವನ ನಿಮ್ಮದಾಗಲಿದೆ. ಮನಸ್ಸಿನ ಶಾಂತತೆ ಕಾಯ್ದುಕೊಳ್ಳಲು ಧ್ಯಾನ ಮಾಡುವುದು ಉತ್ತಮ.



ಕರ್ಕಾಟಕ ರಾಶಿ
ಭವಿಷ್ಯವು ನಿಮಗೋಸ್ಕರ ಒಂದು ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದೆ. ಹೊರ ಜಗತ್ತಿನ ಸತ್ಯವನ್ನು ಕಂಡು ಭ್ರಮನಿರಸನಗೊಳ್ಳುವುದು ಬೇಡ. ನಿಮ್ಮ ಕನಸುಗಳು ಸದ್ಯದಲ್ಲೇ ನಿಜವಾಗಲಿವೆ. ನೀವು ಬಯಸಿದಂತೆ ವೃತ್ತಿಕ್ಷೇತ್ರದಲ್ಲಿ ದೊಡ್ಡದೊಂದು ಬದಲಾವಣೆಯನ್ನು ಕಾಣಲಿದ್ದೀರಿ, ಅದಕ್ಕೆ ಸಿದ್ಧರಾಗಿರುವುದು ಉತ್ತಮ.

ಸಿಂಹ ರಾಶಿ
ಪರಿಶ್ರಮದಿಂದ ಮಾತ್ರ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಈ ತಿಂಗಳಿನಲ್ಲಿ ಹೆಚ್ಚು ಆತಂಕ ಮತ್ತು ಅಡೆತಡೆಗಳು ನಿಮ್ಮನ್ನು ಬಾಧಿಸಿದರೂ, ಅದನ್ನೇಲ್ಲ ದಾಟಿ ಮುಂದೆ ಹೋಗುವ ಛಲ ನಿಮ್ಮಲ್ಲಿದೆ. ಎಲ್ಲ ಕಡೆಗಳಿಂದ ಕಷ್ಟಗಳೇ ಬಂದರೂ ಅದಕ್ಕೆ ಪರಿಹಾರ ಇರುವುದಂತೂ ಖಂಡಿತ, ಪರಿಶ್ರಮದಿಂದ ಯಶಸ್ಸನ್ನು ಕಾಣಬಹುದಾಗಿದೆ.

ಇದನ್ನು ಓದಿ: ಪಿತೃಪಕ್ಷದಲ್ಲಿ ಹೀಗೆ ಮಾಡಿ ಪಿತೃ ದೋಷದಿಂದ ಮುಕ್ತರಾಗಿ.. 

ಕನ್ಯಾ ರಾಶಿ
ನಿಮ್ಮ ಸಲಹೆಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ, ಆದರೆ ಇದರಿಂದ ನಿಮ್ಮ ದಾರಿ ಸುಗಮವಾಗುವುದಿಲ್ಲ. ನಿಮ್ಮ ಶಕ್ತಿಯನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ನಿಮ್ಮಲ್ಲಿರುವ ಕಾರ್ಯಕೌಶಲ್ಯವನ್ನು ಜಗತ್ತಿಗೆ ತಿಳಿಯುವಂತೆ ಮಾಡಬಲ್ಲಿರಿ. ನಿಮ್ಮ ಮನಸ್ಸಿನ ಮಾತಿನಂತೆ ನಡೆಯಿರಿ.

ತುಲಾ ರಾಶಿ
ನೀವಂದುಕೊಂಡ ದಾರಿಯಲ್ಲಿ ನಡೆಯಲು ಇದು ಸರಿಯಾದ ಸಮಯ. ಇದು ಬದಲಾವಣೆಯ ಕಾಲ ನಿಮ್ಮ ಶಕ್ತಿಯನ್ನು ಅರಿತು ನಡೆದರೆ ಯಶಸ್ಸು ಸಾಧ್ಯ. ನಿಮ್ಮ ಬದ್ಧತೆಯನ್ನು ಪ್ರಶ್ನಿಸುವಂಥ ಸನ್ನಿವೇಶಗಳು ಎದುರಾಗುವ ಸಾಧ್ಯತೆ ಇದೆ. ಅದೆಲ್ಲದರಿಂದ ಹೊರಬರುವ ಸಾಮರ್ಥ್ಯ ನಿಮ್ಮಲ್ಲಿದೆ.

ವೃಶ್ಚಿಕ ರಾಶಿ
ಗುರಿ ತಲುಪಲು ನಡೆಯುವ ಮಾರ್ಗವು ಮುಖ್ಯವಾಗುತ್ತದೆ. ಬಂದದ್ದನ್ನು ಎದುರಿಸಿ ಅದಕ್ಕೆ ಒಗ್ಗಿಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು. ನಿಮ್ಮಲ್ಲಿರುವ ಶಕ್ತಿಯನ್ನು ಅರಿತು ಕಾರ್ಯಪ್ರವೃತ್ತರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಧನು ರಾಶಿ
ನಿಮ್ಮಲ್ಲಿರುವ ಶಕ್ತಿಯನ್ನೆಲ್ಲ ಒಗ್ಗೂಡಿಸಿ ನಿಮ್ಮ ಮನಸ್ಸಿನ ಮಾತನ್ನು ಕೇಳಲು ಆರಂಭಿಸುತ್ತೀರಿ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವನ್ನು ಕಾಣುತ್ತೀರಿ. ಧನಾಗಮನ ಸಂಭವವೂ ಇದೆ. ವೃತ್ತಿಯಲ್ಲಿ ಉತ್ತಮ ಫಲವನ್ನು ನಿರಿಕ್ಷೀಸಬಹುದಾಗಿದೆ.

ಮಕರ ರಾಶಿ
ಈ ತಿಂಗಳಿನಲ್ಲಿ ಹೆಚ್ಚು ಕೆಲಸಮಾಡಿ, ಕಡಿಮೆ ಖರ್ಚು ಮಾಡಿದರೆ ಒಳ್ಳೆಯದು. ನಿಮ್ಮ ಕೆಲಸದ ಗತಿ ಹೆಚ್ಚು ವೇಗವಾಗಲಿದೆ. ಉದ್ವೇಗಕ್ಕೆ ಒಳಪಟ್ಟು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದಿರುವುದು ಉತ್ತಮ. ತಾಳ್ಮೆಯನ್ನು ರೂಢಿಸಿಕೊಳ್ಳುವುದು ನಿಮ್ಮ ಕರ್ತವ್ಯದ ದೃಷ್ಟಿಯಿಂದ ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಬೇರೆಯವರೊಂದಿಗೆ ವ್ಯವಹಾರವನ್ನು ಇಟ್ಟುಕೊಳ್ಳಬಾರದು. ಹೀಗೆ ಮಾಡುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಕೊಟ್ಟು ತೆಗೆದುಕೊಳ್ಳುವ ವಿಚಾರದಲ್ಲಿ ಜಾಗೃತರಾಗಿರುವುದು ಒಳ್ಳೆಯದು. ಆದರೆ, ನಿಮ್ಮ ಮನಸ್ಸಿನ ಮಾತನ್ನು ಈ ತಿಂಗಳು ಕೇಳಲಿದ್ದೀರಿ. 

ಇದನ್ನು ಓದಿ: ನಿಮ್ಮ ಜಾತಕದಲ್ಲೂ ಈ ದೋಷಗಳಿರಬಹುದು, ಚೆಕ್ ಮಾಡಿಕೊಳ್ಳಿ! 

ಮೀನ ರಾಶಿ
ಈ ರಾಶಿಯವರು ದಾರಿಯಲ್ಲಿ ಬರುವ ಬದಲಾವಣೆಗೆ ಸಿದ್ಧರಿಲ್ಲ, ಹೀಗಾಗಿ ಅದೃಷ್ಟವನ್ನೇ ನಂಬಿಕೊಂಡು ನೀವು ಮುಂದುವರಿಯಬೇಕು. ನಿಮ್ಮ ಭಯದ ಸ್ವಭಾವದಿಂದ ದೂರ ಓಡುವ ಬದಲು ಸ್ವಲ್ಪ ಎದುರಿಸಲು ಸಜ್ಜಾಗಿ. ಇಲ್ಲಿ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲು ನಿಮ್ಮ ಸಂಗಾತಿಯ ಪ್ರೋತ್ಸಾಹ ಸಿಗಲಿದೆ. ಆದರೆ, ಆರ್ಥಿಕ ಸ್ಥಿತಿ ಏರುಪೇರಾಗುವ ಸಾಧ್ಯತೆ ಇದೆ. 

Tap to resize

Latest Videos

click me!