Astrology Tips : ದೇವರಿಗೆ ಆರತಿ ಮಾಡುವಾಗ ನಿಲ್ಲಬೇಕು ಯಾಕೆ?

By Contributor AsianetFirst Published Jan 4, 2023, 2:37 PM IST
Highlights

ಮನೆಯಲ್ಲಿ ಪೂಜೆಯಾಗ್ತಿದೆ ಅಂದ್ರೆ ಕೊನೆಯಲ್ಲಿ ಆರತಿ ಇದ್ದೇ ಇರುತ್ತೆ. ಎಲ್ಲರೂ ಎದ್ದು ನಿಂತು ಆರತಿಯಲ್ಲಿ ಪಾಲ್ಗೊಳ್ತಾರೆ. ಆದ್ರೆ ಅನೇಕರಿಗೆ ಆರತಿ ಸಂದರ್ಭದಲ್ಲಿ ಏಕೆ ಎದ್ದು ನಿಲ್ಬೇಕು ಅನ್ನೋದು ತಿಳಿದಿಲ್ಲ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
 

ಆರತಿಯು ಹಿಂದೂ ಆಚರಣೆ ಮತ್ತು ಪೂಜೆಯ ಅತ್ಯಗತ್ಯ ಭಾಗವಾಗಿದೆ. ಕತ್ತಲೆಯನ್ನು ಹೋಗಲಾಡಿಸುವ ಬೆಳಕನ್ನು ಸೂಚಿಸುವ ಆರಾತ್ರಿಕ ಎಂಬ ಸಂಸ್ಕೃತ ಪದದಿಂದ ಆರತಿ ಎಂಬ ಈ ಪದವನ್ನು ಪಡೆಯಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಯಾವುದೇ ಪೂಜೆ ಯಾವಾಗಲೂ ಆರತಿಯೊಂದಿಗೆ ಕೊನೆಗೊಳ್ಳಬೇಕು.  ಆರತಿ ಮಾಡದೆ ಪೂಜೆ ಕೊನೆಗೊಳಿಸಿದ್ರೆ ಅದನ್ನು ಸಂಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಆರತಿ, ದೇವರನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದು ನಂಬಲಾಗಿದೆ. ದೇವರನ್ನು ಮೆಚ್ಚಿಸಲು ಮತ್ತು ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಲು ಆರತಿ ಮಾಡಬೇಕು.

ಯಾವುದೇ ಪೂಜೆ (Worship) ಯಿರಲಿ ಅದು ಪೂರ್ಣಗೊಂಡ ನಂತ್ರ ಮನೆಯ ಸದಸ್ಯರೆಲ್ಲ ನಿಂತು ಆರತಿ ಬೆಳಗುತ್ತಾರೆ. ಈ ಆರತಿ ಮಾಡುವ ಮೂಲಕ ತಪ್ಪಿಗೆ ಕ್ಷಮೆ ಯಾಚಿಸುತ್ತಾರೆ. ಇದು ಭಗವಂತ (Lord) ನ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತದೆ. 

ಕೈಯಲ್ಲಿದ್ಯಾ ಶಂಖ, ತ್ರಿಶೂಲ, ಸ್ವಸ್ತಿಕ, ಈ ಚಿಹ್ನೆಗಳು ಹೇಳುವ ಅರ್ಥವೇನು?

ಆರತಿ ಏಕೆ ಮುಖ್ಯ? : ಯಾರ ಮನೆ (House) ಯಲ್ಲಿ ಆರತಿ ಮಾಡುತ್ತಾರೋ ಆ ಮನೆಯಲ್ಲಿ ದೇವರು ನೆಲೆಸಿರುತ್ತಾನಂತೆ. ಕುಟುಂಬಸ್ಥ (Family) ರಿಗೆ ಸದಾ ದೇವರ ಕೃಪೆಯಿರುತ್ತದೆಯಂತೆ. ಈ ಆರತಿ ಮಾಡುವುದ್ರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಆರತಿ ಮಾಡಿದ ಮನೆಯಲ್ಲಿ ವಾಸಿಸುವ ಜನರು ಸತ್ತ ನಂತ್ರ ಸ್ವರ್ಗ (Heaven ) ಪಡೆಯುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಆರತಿಯನ್ನು ಭಕ್ತಿಯಿಂದ ಮಾಡುವುದು ಕೂಡ ಮುಖ್ಯವಾಗುತ್ತದೆ. ಆರತಿಯು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಕುಟುಂಬಸ್ಥರನ್ನು ಬೆರೆಸುತ್ತದೆ. 
ಆರತಿ ಮಾಡುವಾಗ ನಾವು ಕೆಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಹಿಂದೂ (Hindu) ಧರ್ಮದಲ್ಲಿ ಆರತಿ ಮಾಡುವುದು ಹೇಗೆ ಎನ್ನುವ ಬಗ್ಗೆ ಹೇಳಲಾಗಿದೆ. ಸಾಮಾನ್ಯವಾಗಿ ಆರತಿ ಮಾಡುವಾಗ ಎಲ್ಲರೂ ಎದ್ದು ನಿಲ್ಲುತ್ತಾರೆ. ಮನೆಯಿರಲಿ ಇಲ್ಲ ದೇವಸ್ಥಾನವಿರಲಿ, ಆರತಿ ಮಾಡುವ ಸಂದರ್ಭದಲ್ಲಿ ಎದ್ದು ನಿಲ್ಲಲು ಮುಖ್ಯ ಕಾರಣವಿದೆ.

ಆರತಿ ಮಾಡುವಾಗ ಏಕೆ ಎದ್ದು ನಿಲ್ಲಬೇಕು? :  ಜಗತ್ತಿನಲ್ಲಿ ದೇವರಿಗಿಂತ ದೊಡ್ಡ ವ್ಯಕ್ತಿ ಬೇರೊಬ್ಬರಿಲ್ಲ. ನಮ್ಮ ಮುಂದೆ ಯಾವುದೇ ವಿಶೇಷ ವ್ಯಕ್ತಿ ಅಥವಾ ಹಿರಿಯರು ಬಂದಾಗ ನಾವು ಎದ್ದು ನಿಂತು ಅವರಿಗೆ ಗೌರವ ಸೂಚಿಸುತ್ತೇವೆ. ಅದೇ ರೀತಿ ನಿಂತಿಗೊಂಡು ಆರತಿ ಮಾಡಿದ್ರೆ ಅದು ದೇವರಿಗೆ ತೋರುವ ಗೌರವವಾಗಿದೆ.  ದೇವರ ಮುಂದೆ ನಿಂತು ನಮಸ್ಕರಿಸುತ್ತಾ ನೀವು ಆರತಿ ಮಾಡಬೇಕು. ನಮಸ್ಕರಿಸುವುದು ಎಂದ್ರೆ ತಲೆಯನ್ನು ಸ್ವಲ್ಪ ಬಾಗಿಸಿ ಆರತಿ ಮಾಡಬೇಕು. ಹೀಗೆ ಮಾಡಿದ್ರೆ ದೇವರು ನಿಮಗೆ ಆಶೀರ್ವಾದ ನೀಡುತ್ತಾನೆ ಎಂದು ನಂಬಲಾಗಿದೆ. 

ಹೀಗ್ ಕರ್ಪೂರ ಬಳಸಿ ನೋಡಿ, ಲೈಫೇ ಬದಲಾಗಬಹುದು ಟ್ರೈ ಮಾಡಿ!

ಕುಳಿತು ಆರತಿ ಮಾಡುವುದು ತಪ್ಪಾ? : ದೇವರ ಆರತಿಯನ್ನು ನಿಂತು ಮಾಡ್ಬೇಕು ಎಂದಾಗ  ಈ ಪ್ರಶ್ನೆ ಮೂಡೋದು ಸಹಜ. ಕುಳಿತು ಮಾಡಿದ್ರೆ ದೇವರು ಕೋಪಗೊಳ್ಳೋದಿಲ್ಲ. ಆದ್ರೆ ನಿಂತು ಆರತಿ ಮಾಡಲು ಶಾಸ್ತ್ರಗಳಲ್ಲಿ ಶಿಫಾರಸು ಮಾಡಲಾಗಿದೆ. ನೀವು ಅನಾರೋಗ್ಯದ ಸ್ಥಿತಿಯಲ್ಲಿದ್ದರೆ ಅಥವಾ ನಿಂತು ಆರತಿ ಮಾಡಲು ನಿಮ್ಮಿಂದ ಸಾಧ್ಯವಾಗ್ತಿಲ್ಲ ಎಂದಾದ್ರೆ ಆಗ ನೀವು ಕುಳಿತುಕೊಂಡು ಆರತಿ ಮಾಡಬಹುದು. 
ದೇವರು ನೀವು ಯಾವ ವಿಧಾನದಲ್ಲಿ ಆರತಿ ಮಾಡುತ್ತೀರಿ ಎನ್ನುವುದಕ್ಕಿಂತ ಆರತಿ ಮಾಡುವಾಗ ನಿಮ್ಮ ಮನಸ್ಥಿತಿ ಏನಿದೆ ಎಂಬುದನ್ನು ನೋಡ್ತಾನೆ. ನೀವು ಸಂತೋಷದಿಂದ, ಶುದ್ಧತೆಯಿಂದ, ಶ್ರದ್ಧೆಯಿಂದ ಆರತಿ ಮಾಡಿದರೆ ಅದು ಯಾವುದೇ ಪರಿಸ್ಥಿತಿಯಲ್ಲಿಯೂ ದೇವರಿಗೆ ಸ್ವೀಕಾರಾರ್ಹವಾಗಿರುತ್ತದೆ. ದೇವರ ಪೂಜೆಯನ್ನು ನೀವು ಶುದ್ಧ ಮನಸ್ಸಿನಿಂದ ಮಾಡಿ. ದೇಹದ ಶುದ್ಧತೆಗೂ ಮಹತ್ವ ನೀಡಿ. ಕೈಗಳನ್ನು ನೇರವಾಗಿಟ್ಟುಕೊಂಡು ಆರತಿ ಮಾಡಿ. ಆರತಿ ಮಾಡುವಾಗ ದೇವರ ನಾಮವನ್ನು ಹೇಳಿ. ಹಾಗೆಯೇ ಎಡದಿಂದ ಬಲಕ್ಕೆ ಆರತಿ ಮಾಡುವುದನ್ನು ಮರೆಯಬೇಡಿ ಎನ್ನುತ್ತದೆ ಶಾಸ್ತ್ರ.
 

click me!