ಚಾಣಕ್ಯನ ಈ ನೀತಿಗಳನ್ನು ಅನುಸರಿಸಿ; ಗೆಲುವು ನಿಮ್ಮ ಕಾಲಡಿ ಬೀಳುತ್ತೆ..!

By Sushma HegdeFirst Published Jun 30, 2023, 10:22 AM IST
Highlights

ಜೀವನದಲ್ಲಿ ಯಶಸ್ವಿಯಾಗಲು ಎಲ್ಲರೂ ಕಷ್ಟಪಡುವುದು ಸಾಮಾನ್ಯ. ಆದರೆ ಕೆಲವರು ಯಶಸ್ವಿಯಾಗುತ್ತಾರೆ ಮತ್ತೆ ಕೆಲವರು ವಿಫಲರಾಗುತ್ತಾರೆ. ಇದಕ್ಕೆ ಕಾರಣ ನಮ್ಮ ಕೆಲವು ಗುಣಗಳು. ಆಚಾರ್ಯ ಚಾಣಕ್ಯರು ಹೇಳಿದ ಕೆಲವು ಅಂಶಗಳನ್ನು ಜೀವನದಲ್ಲಿ ಅನುಸರಿಸಬೇಕು. ಆಗ ನಮಗೆ ಸಕ್ಸಸ್ ಸಿಗುವುದು ಗ್ಯಾರಂಟಿ.

ಜೀವನದಲ್ಲಿ ಯಶಸ್ವಿಯಾಗಲು ಎಲ್ಲರೂ ಕಷ್ಟಪಡುವುದು ಸಾಮಾನ್ಯ. ಆದರೆ ಕೆಲವರು ಯಶಸ್ವಿ (Successful) ಯಾಗುತ್ತಾರೆ ಮತ್ತೆ ಕೆಲವರು ವಿಫಲರಾಗುತ್ತಾರೆ. ಇದಕ್ಕೆ ಕಾರಣ ನಮ್ಮ ಕೆಲವು ಗುಣಗಳು. ಆಚಾರ್ಯ ಚಾಣಕ್ಯರು ಹೇಳಿದ ಕೆಲವು ಅಂಶಗಳನ್ನು ಜೀವನದಲ್ಲಿ ಅನುಸರಿಸಬೇಕು. ಆಗ ನಮಗೆ ಸಕ್ಸಸ್ ಸಿಗುವುದು ಗ್ಯಾರಂಟಿ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಆಚಾರ್ಯ ಚಾಣಕ್ಯರು ಬರೆದ ನೀತಿ ಶಾಸ್ತ್ರದಲ್ಲಿ ಜೀವನದಲ್ಲಿ ನಾವು ಹೇಗೆ ಇರಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಚಾಣಕ್ಯ ನೀತಿ (chanakya niti) ಮನುಷ್ಯನಿಗೆ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತದೆ. ಆಚಾರ್ಯ ಚಾಣಕ್ಯರು ನೀಡಿದ ನೀತಿಗಳನ್ನು ಅನುಸರಿಸಿದರೆ ನೀವು ಯಾವತ್ತೂ ಸೋಲನ್ನು ಕಾಣುವುದಿಲ್ಲ. ಈ ಕುರಿತು ಇಲ್ಲಿದೆ ಡೀಟೇಲ್ಸ್..

Latest Videos

ಯಾವಾಗಲೂ ನೇರ ನುಡಿ ಇರಲಿ 

ಮನುಷ್ಯನು ಯಾವಾಗಲೂ ನೇರ ನುಡಿಯ ಸ್ವಭಾವ ಹೊಂದಿರಬೇಕು. ಏನೇ ಆಗಲಿ ಅದನ್ನು ಇದ್ದ ಹಾಗೆ ಹೇಳುವ ಧೈರ್ಯ (Courage) ಬೆಳೆಸಿಕೊಳ್ಳಬೇಕು. ನೀವು ಯಶಸ್ಸನ್ನು ಸಾಧಿಸಬೇಕಾದರೆ ಈ ಗುಣವನ್ನು ಮೈಗೂಡಿಸಿಕೊಳ್ಳಿ. ಜನರು ನೇರ ವ್ಯಕ್ತಿಯನ್ನು ಸುಲಭವಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ.

ಎಂದಿಗೂ ತಾಳ್ಮೆ ಇರಲಿ 

ಮನುಷ್ಯನಿಗೆ ತಾಳ್ಮೆ ತುಂಬಾ ಮುಖ್ಯ. ಚಾಣಕ್ಯ ನೀತಿಯ ಪ್ರಕಾರ ಮನುಷ್ಯನ ದೊಡ್ಡ ಶತ್ರು ಅವನ ಕೋಪ (anger) . ಏಕೆಂದರೆ ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರವು ನಿಮಗೆ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಂದು ವಿಚಾರದಲ್ಲಿಯೂ ತಾಳ್ಮೆ (patience) ಕಳೆದುಕೊಳ್ಳಬೇಕು. 

ಮನೆಯಲ್ಲಿ ಯಾವ ವಸ್ತುಗಳು ಎಲ್ಲಿರಬೇಕು?: ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ..!

 

ಜೀವನದಲ್ಲಿ ಶಿಸ್ತು ಬಹಳ ಮುಖ್ಯ

ಮನುಷ್ಯನಿಗೆ ಜೀವನದಲ್ಲಿ ಶಿಸ್ತು ಅತಿ ಮುಖ್ಯ. ಇದು ನಮ್ಮ ಯಶಸ್ಸಿಗೆ ರಹದಾರಿ. ಚಾಣಕ್ಯ ನೀತಿಯ ಪ್ರಕಾರ ಶಿಕ್ಷಣ, ಉದ್ಯೋಗ ಹಾಗೂ ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಶಿಸ್ತು (Discipline) ಪಾಲಿಸುವುದು ಬಹಳ ಮುಖ್ಯ. ಏಕೆಂದರೆ ಅಶಿಸ್ತಿನ ವ್ಯಕ್ತಿಗಳಿಂದ ಕೆಲವು ಸಂದರ್ಭಗಳಲ್ಲಿ ಕೆಲಸ  ಹಾಳಾಗುವ ಸಾಧ್ಯತೆ ಇರುತ್ತದೆ.

ರಹಸ್ಯ ಕಾಪಾಡಿಕೊಳ್ಳಿ

ನಮಗೆ ಎಷ್ಟೇ ಆಪ್ತ (close) ರಿದ್ದರೂ ಸಹ ಕೆಲವೊಂದು ವಿಚಾರಗಳನ್ನು ಯಾವುದೇ ಕಾರಣಕ್ಕೂ ಅವರ ಹತ್ತಿರ ಹಂಚಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾನೆ. ನಿಮ್ಮ ಯಾವುದೇ ರಹಸ್ಯ (secret) ಗಳನ್ನು ನೀವು ಹೊರಗಿನವರೊಂದಿಗೆ ಹಂಚಿಕೊಂಡರೆ ಅವರು ಅದರ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು ಎಂದು ಚಾಣಕ್ಯ ನೀತಿ ಶಾಸ್ತ್ರದಲ್ಲಿ ಹೇಳಲಾಗಿದೆ.

ಅನಗತ್ಯ ಹಣದ ಖರ್ಚು ಬೇಡ

ಮನುಷ್ಯನಿಗೆ ಹಣ ಕೂಡ ಬಹಳ ಮುಖ್ಯ. ಎಂದಿಗೂ ನಾವು ಅನಗತ್ಯವಾಗಿ ಹಣವನ್ನು ಖರ್ಚು (spending)  ಮಾಡಬಾರದು. ಬದಲಿಗೆ ಭವಿಷ್ಯದ ಸಮಸ್ಯೆ  (problem) ಎದುರಿಸಲು ಹಣವನ್ನು ಉಳಿಸಬೇಕು. ಇಂದು ನೀವು ಉಳಿಸಿದ ಹಣ ಮುಂದೊಂದು ದಿನ ನಿಮ್ಮ ಸಹಾಯಕ್ಕೆ ಖಂಡಿತ ಬರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

Weekly Love Horoscope: ಯಾರಿಗೆ ಒಲಿಯಲಿದೆ ಪ್ರೀತಿ?

 

ಪರರಿಗೆ ಸಹಾಯ ಮಾಡಿ

ಮನುಷ್ಯನಿಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಇರಬೇಕು. ಹಾಗೂ ಯಾರಾದರೂ ನಿಮಗೆ ಸಹಾಯ (help) ಮಾಡಿದ್ದರೆ, ನಿಮಗೆ ಅವಕಾಶ ಸಿಕ್ಕಾಗ ಅವರಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಡಿ. ಯಾಕೆಂದರೆ ಪರೋಪಕಾರಿ  (benevolent) ಜೀವನದಿಂದ ಯಶಸ್ಸು ಸಾಧ್ಯ ಎಂದು ಚಾಣಕ್ಯರು ಹೇಳಿದ್ದಾರೆ.

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!