
ಸುಝೋ(ಮಾ.03) ಹಲವು ದೇಗುಗಳಲ್ಲಿ ಆನೆ, ದನ ಸೇರಿದಂತೆ ಇತರ ಪ್ರಾಣಿಗಳು ಭಕ್ತರಿಗೆ ಆಶೀರ್ವಾದ ನೀಡುತ್ತದೆ. ಭಾರತದ ಹಲವು ದೇವಸ್ಥಾನಗಳಲ್ಲಿ ಭಕ್ತರು ಈ ರೀತಿ ಪ್ರಾಣಿಗಳಿಂದ ಆಶೀರ್ವಾದ ಪಡೆಯುತ್ತಾರೆ. ಆದರೆ ಬುದ್ಧ ದೇಗುಲದಲ್ಲಿ ಆನೆ, ದನ ರೀತಿಯ ಪ್ರಾಣಿಗಳಲ್ಲಿ. ಆದರೆ ಇಲ್ಲಿರುವುದು ಬೆಕ್ಕು. ದೇಗುಲದ ಹೊರ ಆವರಣದಲ್ಲಿ ನಿಂತಿರುವ ಈ ಬೆಕ್ಕು ಬಂದ ಭಕ್ತರಿಗೆ ಹೈಫೈ ಮೂಲಕ ಆಶೀರ್ವಾದ ನೀಡುತ್ತೆ. ಈ ಬೆಕ್ಕಿನಿಂದ ಆಶೀರ್ವಾದ ಪಡೆಯಲು ಇದೀಗ ಭಕ್ತ ಸಾಗರವೇ ದೇಗುಲಕ್ಕೆ ಹರಿದು ಬರುತ್ತಿದೆ. ಈ ಬೆಕ್ಕಿನ ವಿಡಿಯೋ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಷ್ಟಕ್ಕೂ ಈ ಬೆಕ್ಕಿನ ಆಶೀರ್ವಾದ ಪಡೆಯಲು ನೀವು ಬಯಸಿದ್ದರೆ ಚೀನಾಗೆ ಪ್ರಯಾಣಿಸಬೇಕು. ಕಾರಣ ಇದು ಚೀನಾದ ಸುಝೋ ಪ್ರಾಂತ್ಯದಲ್ಲಿರುವ ಶಿಯಾನ್ ಬುದ್ಧ ದೇಗುಲದಲ್ಲಿದೆ. ಕೊರಳಿಗೆ ದಪ್ಪಗಿರುವ ಚಿನ್ನದ ಸರ ಹಾಕಿರುವ ಈ ಬೆಕ್ಕು ದೇಗುಲದ ಹೊರಭಾಗದಲ್ಲಿರುವ ಕಟ್ಟೆ ಮೇಲೆ ಕುಳಿತಿದೆ. ಬಂದ ಭಕ್ತರಿಗೆ ತನ್ನ ಕೈಎತ್ತಿ ಹೈಫೈ ಮೂಲಕ ಆಶೀರ್ವಾದ ನೀಡುತ್ತಿದೆ. ಹೀಗಾಗಿ ಜನರು ಬುದ್ಧ ದೇಗುಲ ದರ್ಶನ ಮಾಡಿದ ಬಳಿಕ ಬೆಕ್ಕಿನ ಬಳಿ ಬಂದು ಹೈಫೈ ಆಶೀರ್ವಾದ ಪಡೆದು ಸಾಗುತ್ತಿದ್ದಾರೆ.
ಆಟೋಗಾಗಿ ಕಾಯುತ್ತಿದ್ದ ಯುವಕನನ್ನು ಆಟೋದೊಳಗೆ ಎಳೆದುಕೊಂಡ ಮಹಿಳೆ! ಮುಂದಾಗಿದ್ದು ಮಾನವೀಯತೆಗೆ ಸಾಕ್ಷಿ!
ಬೆಕ್ಕು ಮತ್ತು ಭಕ್ತರ ನಡುವಿನ ಕುತೂಹಲಕಾರಿ ಸಂವಹನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಬೆಕ್ಕು ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ಕ್ಸಿಯುವಾನ್ ದೇವಾಲಯದ ನಿವಾಸಿಯಾಗಿದೆ. ಕತ್ತಿನಲ್ಲಿ ದಪ್ಪನೆಯ ಚಿನ್ನದ ಬಣ್ಣದ ಸರ ಧರಿಸಿ ಗತ್ತಿನಿಂದ ಕುಳಿತಿರುವ ಬೆಕ್ಕು ತನ್ನ ಕೈಗಳನ್ನು ಚಾಚಿ ಭೇಟಿ ನೀಡುವವರ ಕೈಗೆ ಹೈ-ಫೈವ್ ನೀಡುತ್ತಿದೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಬೆಕ್ಕು ಆಶೀರ್ವಾದ ನೀಡುತ್ತಿದೆ ಎಂದು ತಮಾಷೆಯಾಗಿ ವರ್ಣಿಸಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಅನೇಕ ಭಕ್ತರು ಬೆಕ್ಕಿನ ಬಳಿ ಬಂದು ಹೈ-ಫೈವ್ ನೀಡಲು ಮುಗಿಬೀಳುತ್ತಿರುವುದನ್ನು ಕಾಣಬಹುದು. ಇದೆಲ್ಲವನ್ನೂ ಆನಂದಿಸುತ್ತಾ ಬೆಕ್ಕು ಸ್ವಲ್ಪ ಗತ್ತಿನಿಂದಲೇ ಆಶೀರ್ವಾದ ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಸುಝೌ ಪ್ರವಾಸೋದ್ಯಮದ ಅಧಿಕೃತ Instagram ಖಾತೆಯು ಬೆಕ್ಕಿನ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೀಡಿಯೊವು ಬಹಳ ಬೇಗನೆ ವೈರಲ್ ಆಗಿರುವುದು ಮಾತ್ರವಲ್ಲದೆ, ಪ್ರಪಂಚದಾದ್ಯಂತದ ವೀಕ್ಷಕರನ್ನು ಆಕರ್ಷಿಸಿ ಬೆಕ್ಕು ಅಂತರರಾಷ್ಟ್ರೀಯ ಗಮನವನ್ನು ಸೆಳೆದಿದೆ.
ವೆಸ್ಟ್ ಗಾರ್ಡನ್ ಟೆಂಪಲ್ ಎಂದೂ ಕರೆಯಲ್ಪಡುವ ಶಿಯುವಾನ್ ದೇವಾಲಯವು ಅತ್ಯಂತ ಪುರಾತನ ದೇವಾಲಯವಾಗಿದೆ. ಇದು ರಾಜವಂಶದ (1271-1368) ಅವಧಿಗೆ ಸೇರಿದೆ. ಸಾಂಪ್ರದಾಯಿಕ ಬೌದ್ಧ ವಾಸ್ತುಶಿಲ್ಪ ಮತ್ತು ಕ್ಲಾಸಿಕ್ ಚೈನೀಸ್ ಗಾರ್ಡನ್ ಸೌಂದರ್ಯಶಾಸ್ತ್ರವು ಈ ದೇವಾಲಯವನ್ನು ಆಕರ್ಷಕವಾಗಿಸುತ್ತದೆ. ಇದು ಅನೇಕ ಬೆಕ್ಕುಗಳ ಆವಾಸಸ್ಥಾನವಾಗಿದೆ. ದೇವಾಲಯದ ಉದ್ಯಾನಗಳು ಮತ್ತು ಪ್ರಾಚೀನ ರಚನೆಗಳ ನಡುವೆ ವಿಶ್ರಮಿಸುತ್ತಿರುವ ಈ ಬೆಕ್ಕುಗಳು ಈಗ ದೇವಾಲಯದ ಸೌಂದರ್ಯದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ.
₹62ಲಕ್ಷ ವೇತನಕ್ಕೆ ನಾಯಿ ಫುಡ್ ತಿನ್ನಬೇಕಾ? ಈ ವಿಚಿತ್ರ ಉದ್ಯೋಗದ ಬಗ್ಗೆ ಗೊತ್ತೇ?