ಪ್ರೀತಿಯ ವಿಷಯದಲ್ಲಿ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಲ್ಲಿ ಇರುತ್ತದೆ. ಬ್ರೇಕ್ ಅಪ್ ಆದಾಗ ಕೆಲವು ರಾಶಿಯವರು ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಮರೆತು ಬಿಡುತ್ತಾರೆ. ಆದರೆ ಕೆಲವು ರಾಶಿಯ ವ್ಯಕ್ತಿಗಳು ಬ್ರೇಕಪ್ ತುಂಬಾ ನೋವು ಪಡುತ್ತಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಪ್ರೀತಿಯ ವಿಷಯದಲ್ಲಿ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಲ್ಲಿ ಇರುತ್ತದೆ. ಬ್ರೇಕ್ ಅಪ್ ಆದಾಗ ಕೆಲವು ರಾಶಿಯವರು ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಮರೆತು ಬಿಡುತ್ತಾರೆ. ಆದರೆ ಕೆಲವು ರಾಶಿಯ ವ್ಯಕ್ತಿಗಳು ಬ್ರೇಕಪ್ (breakup) ತುಂಬಾ ನೋವು ಪಡುತ್ತಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಪ್ರೀತಿ ಒಂದು ಸುಂದರ ಅನುಭವ, ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತೇ ಕಾಣಲ್ಲ ಅಂತಾರೆ. ಆದ್ರೆ ಈ ಪ್ರೀತಿ ಒಂದೊಮ್ಮೆ ಮುರಿದು ಬಿದ್ದರೆ ಅದರ ಆಘಾತವೂ ಅಷ್ಟೇ ಭಯಂಕರವಾದದ್ದು. ಅದು ಮಾನಸಿಕವಾಗಿ ವ್ಯಕ್ತಿಯನ್ನು ಕುಗ್ಗಿಸಿಬಿಡುತ್ತೆ. ಸಂಬಂಧ ಮುರಿದಾಗ ಆಗುವ ನೋವು ತುಂಬಾ ಸಂಕಟ ತರುತ್ತೆ. ಕೆಲ ರಾಶಿಯವರು ಬ್ರೇಕಪ್ ಆದಾಗ ಅದರಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ.
ಈ ಪ್ರೀತಿಯೇ ಹಾಗೆ ಆರಂಭದಲ್ಲಿ ಕಾಡಿ ಬೇಡಿ ಪ್ರೀತಿ (love) ಗಳಿಸಿಕೊಂಡು, ನಂತರ ಬ್ರೇಕಪ್ ಆದರೆ ಅವರಿಗೆ ಪ್ರಾಣವೇ ಹೋದ ಹಾಗೆ ಆಗುತ್ತೆ. ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ. ಹಾಗೂ ಅನೇಕರು ಮದ್ಯಯಕ್ಕೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಆ ಬ್ರೇಕ್ ಅಪ್‌ನಿಂದ ಹೊರ ಬರಲು ಒದ್ದಾಡುತ್ತಾರೆ.
ಮಕರ ರಾಶಿ (Capricorn)
ಮಕರ ರಾಶಿಯವರು ಪ್ರೀತಿ ಮಾಡುವುದರಲ್ಲಿ ತುಂಬಾ ನಿಸ್ಸೀಮರು. ಆದರೆ ಇವರು ತಮ್ಮ ಪ್ರೀತಿ ಕೈಕೊಟ್ಟಾಗ ತುಂಬಾ ನೋವು ಅನುಭವಿಸುತ್ತಾರೆ. ಅದರಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ. ಮನಸ್ಸಿನಲ್ಲಿ ಸದಾ ಕೊರಗನ್ನು ಇಟ್ಟುಕೊಂಡು ಒದ್ದಾಡುತ್ತಾರೆ. ಸಂಬಂಧದ ವಿಷಯದಲ್ಲಿ ಇವರು ಬಹಳ ಮೃದು ಸ್ವಭಾವ (nature) ವನ್ನು ಹೊಂದಿದ್ದು, ಹೊಸ ಸಂಬಂಧ ಮಾಡಿಕೊಂಡರೂ ಹಳೇ ಕೊರಗು ಇದ್ದೇ ಇರುತ್ತದೆ.
ಕಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಭಾವ ಜೀವಿಗಳು. ಇವರಿಗೆ ಪ್ರೀತಿ ಮುರಿದು ಬಿದ್ದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಇವರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಸುವವರನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಪ್ರೀತಿಯಿಂದ ವಂಚಿತರಾದರೆ ಒಪ್ಪಿಕೊಳ್ಳಲು ಬಹಳ ಕಷ್ಟಪಡುತ್ತಾರೆ. ಆ ನೋವಿನಿಂದ ಹೊರಬರುವುದು ಸುಲಭದ ಕೆಲಸವಾಗಿರುವುದಿಲ್ಲ. ಜೊತೆಗೆ ಸೂಕ್ಷ್ಮ ಮನಸ್ಸುಳ್ಳವರಾಗಿರುವ ಇವರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.
Daily Horoscope: ಇಂದು ಈ ರಾಶಿಯವರ ದುರಹಂಕಾರ ಆಪತ್ತು ತರಲಿದೆ..!
ಸಿಂಹ ರಾಶಿ (Leo)
ಸಿಂಹ ರಾಶಿಯವರು ತುಂಬಾ ಹುಚ್ಚು ಪ್ರೀತಿಯನ್ನು ತೋರಿಸುತ್ತಾರೆ. ಇವರು ಪ್ರೀತಿಸುವವರು ಬ್ರೇಕಪ್ ಬಗ್ಗೆ ಹೇಳಿದರೆ ಸಾಕು ರಂಪಾಟ ಮಾಡಿಬಿಡುತ್ತಾರೆ. ಅವರು ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡದೇ ಸಾರ್ವಜನಿಕ (Public) ವಾಗಿ ಮರ್ಯಾದೆ ತೆಗೆದುಬಿಡುತ್ತಾರೆ.
ವೃಷಭ ರಾಶಿ (Taurus)
ವೃಷಭ ರಾಶಿಯವರು ಪ್ರೀತಿ ಮಾಡುವ ಮುಂಚೆ ಸಂಗಾತಿ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಟೈಂ ತೆಗೆದುಕೊಳ್ಳುತ್ತಾರೆ. ಇವರು ಪ್ರೀತಿಯಲ್ಲಿ ತುಂಬಾ ನಂಬಿಕೆ ಇಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಹೀಗೆ ನಂಬಿಕೆ ಇಟ್ಟು ಪ್ರೀತಿ ಮಾಡುತ್ತಿದ್ದಾಗ ಸಂಗಾತಿ ಪ್ರೀತಿಯನ್ನು ಒಲ್ಲೆ ಎಂದರೆ ಇವರಿಗೆ ಆಕಾಶವೇ ಕೆಳಗೆ ಬಿದ್ದಂತೆ ಭಾಸವಾಗುತ್ತದೆ. ಈ ನೋವು ಇವರಿಗೆ ಹಲವಾರು ವರ್ಷ (year) ಕಾಡುತ್ತದೆ.
ಈ ಸುಳಿವುಗಳು ನಿಮಗೆ ಪೂರ್ವ ಜನ್ಮವನ್ನು ನೆನಪಿಸುತ್ತವೆ..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.