ಅತ್ಯಂತ ಪರಿಶುದ್ಧ ಪ್ರೀತಿ, ಚಂಚಲ ಮನಸ್ಸು: ಇದು ಕರ್ಕಾಟಕ ರಾಶಿ ಭವಿಷ್ಯ

By Sushma HegdeFirst Published Jun 15, 2023, 4:42 PM IST
Highlights

ಕರ್ಕಾಟಕ ರಾಶಿ (Cancer) ಯ ನಾಲ್ಕನೇ ರಾಶಿ ಆಗಿದ್ದು, ಇದು ಬಹು ಪೀಡಿತ ಜಲರಾಶಿ. ಈ ರಾಶಿಯ ಚಿಹ್ನೆ ಏಡಿ. ಈ ರಾಶಿಯು ಚಂದ್ರನ ಒಡೆತನದಲ್ಲಿದೆ. ಆದ್ದರಿಂದ ಚಂದ್ರನ ತಂಪು ಮತ್ತು ಲವಲವಿಕೆ ಈ ರಾಶಿಯಲ್ಲಿದೆ. ಈ ರಾಶಿಯು ತುಂಬಾ ಸೂಕ್ಷ್ಮ (sensitivity) ವಾಗಿರುತ್ತದೆ.

ಕರ್ಕಾಟಕ ರಾಶಿ (Cancer) ಯ ನಾಲ್ಕನೇ ರಾಶಿ ಆಗಿದ್ದು, ಇದು ಬಹು ಪೀಡಿತ ಜಲರಾಶಿ. ಈ ರಾಶಿಯ ಚಿಹ್ನೆ ಏಡಿ. ಈ ರಾಶಿಯು ಚಂದ್ರನ ಒಡೆತನದಲ್ಲಿದೆ. ಆದ್ದರಿಂದ ಚಂದ್ರನ ತಂಪು ಮತ್ತು ಲವಲವಿಕೆ ಈ ರಾಶಿಯಲ್ಲಿದೆ. ಈ ರಾಶಿಯು ತುಂಬಾ ಸೂಕ್ಷ್ಮ (sensitivity) ವಾಗಿರುತ್ತದೆ.

ಕರ್ಕಾಟಕ ರಾಶಿ ಚಕ್ರದವರ ಮುಖವು ಸ್ವಲ್ಪ ನಿರುತ್ಸಾಹಗೊಂಡಿರುತ್ತದೆ. ಮತ್ತು ಕಣ್ಣುಗಳು ಕಡು ನೀಲಿ ಬಣ್ಣವನ್ನು ಹೊಂದಿರುತ್ತವೆ. ಅವರು ಸ್ವಭಾವತಃ ಸ್ವಲ್ಪ ಅಂಜುಬುರುಕ (Timid) ವಾಗಿರುವವರು. ಮನಸ್ಸು ಚಂಚಲ ಮತ್ತು ಸೂಕ್ಷ್ಮ. ಇವರು ಜನಪ್ರಿಯರಾಗಿರುತ್ತಾರೆ. ಇತರರಿಗೆ ಸಹಾಯ ಮಾಡಲು ಇಷ್ಟಪಡುತ್ತಾರೆ. ಇವರ ವ್ಯಕ್ತಿತ್ವ (personality) ವು ಸಿಹಿ ಮತ್ತು ಆಕರ್ಷಕವಾಗಿದೆ. 

Latest Videos

ವರ್ತನೆಯಲ್ಲಿ ನಿರಂತರ ಏರುಪೇರು

ಕರ್ಕಾಟಕ ಜಾತಕದ ಜನರು ಹೆಚ್ಚು ಬ್ರೇಕ್ ಅಪ್  (break up) ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಚಂದ್ರನು ಈ ರಾಶಿಯನ್ನು ಆಳುತ್ತಿರುವುದರಿಂದ, ಅವರ ವರ್ತನೆ ನಿರಂತರವಾಗಿ ಏರುಪೇರಾಗುತ್ತದೆ. ಅವರು ಕೆಲವೊಮ್ಮೆ ನಗುತ್ತಿರುವ, ಕೆಲವೊಮ್ಮೆ ಸಂತೋಷ, ಕೆಲವೊಮ್ಮೆ ದುಃಖದ ಸ್ವಭಾವ ೯nature) ವನ್ನು ಹೊಂದಿರುತ್ತಾರೆ. ಅವರು ತುಂಬಾ ಭಾವುಕರಾಗಿರುತ್ತಾರೆ.

ಅವರ ಮನಸ್ಸು ಭಾವನೆಗಳಿಂದ ತುಂಬಾ ಭಾರವಾಗಿರುತ್ತದೆ. ಅವರು ಕೆಲವೊಮ್ಮೆ ಗಡಸುತನ, ಕಹಿ, ತಟಸ್ಥತೆ, ಅವುಗಳ ಕೊರತೆಯೊಂದಿಗೆ ಬಳಲುತ್ತಾರೆ. ಅವರ ಮನಸ್ಸು ಸ್ಥಿರ ಮತ್ತು ಚಂಚಲ (fickle) ವಾಗಿರುವಂತಹ ಎಲ್ಲಾ ಗುಣಗಳನ್ನು ಹೊಂದಿದ್ದಾರೆ.


ಜಾತಿ ಮತ್ತು ಧರ್ಮ ಅನುಸರಿಸಲ್ಲ

ಇವರು ಯಾವುದೇ ಜಾತಿ ಮತ್ತು ಧರ್ಮ (religion) ವು ಅನುಸರಿಸುವುದಿಲ್ಲ‌. ಆದ್ದರಿಂದ  ಸಾರ್ವಜನಿಕ ಸಂಪರ್ಕದಲ್ಲಿ ಎಲ್ಲಾ ರೀತಿಯ ಜನರನ್ನು ಹೊಂದಿರುತ್ತಾರೆ. ಇವರಿಗೆ ಬಹಳ ದೊಡ್ಡ ಸ್ನೇಹಿತರ ಕುಟುಂಬವಿದೆ. ಕುಟುಂಬದಲ್ಲಿ ಎಲ್ಲಾ ರೀತಿಯ ಜನರನ್ನು ಹೊಂದಿರುತ್ತಾರೆ ಮತ್ತು ಅವರ ಸುತ್ತಮುತ್ತಲಿನ ಜನರು ಸಹ ಅವರನ್ನು ತುಂಬಾ ಪ್ರೀತಿ (love) ಸುತ್ತಾರೆ‌‌. ಅವರು ತಮ್ಮ ಭಾವನೆಗಳಲ್ಲಿ ತೀವ್ರ ಮತ್ತು ಭಾವೋದ್ರಿಕ್ತರಾಗಿದ್ದಾರೆ.

ಈ ರಾಶಿಯವರು ಪ್ರೀತಿಸುವ ಸ್ವಭಾವ ಮತ್ತು ನಿರ್ಮಲ ಮನಸ್ಸು ಹೊಂದಿರುವುದರಿಂದ ಭಕ್ತಿಯಿಂದ ಭಗವಂತನನ್ನು ಪೂಜಿಸುತ್ತಾರೆ‌ ಅವರು ಕೆಲಸ ಮಾಡುವ ಕ್ಷೇತ್ರದಲ್ಲಿ ಆತ್ಮದಿಂದ ಕೆಲಸ ಮಾಡುವ ಸ್ವಭಾವ ಇವರದು.

ಭಾಷೆಗಳ ಮೇಲೆ ಪಾಂಡಿತ್ಯ, ಉತ್ತಮ ಬುದ್ಧಿಶಕ್ತಿ: ಇದು ಮಿಥುನ ರಾಶಿಯ ಭವಿಷ್ಯ

 


ಅತ್ಯಂತ ನಿಸ್ವಾರ್ಥ ಮತ್ತು ಪರಿಶುದ್ಧ ಪ್ರೀತಿ

ಕರ್ಕಾಟಕ ರಾಶಿಯವರು ಮೇಷ , ವೃಷಭ, ವೃಶ್ಚಿಕ (Scorpio) , ಮೀನ ರಾಶಿಯನ್ನು ಸಂಗಾತಿಯಾಗಿ ಅಥವಾ ವ್ಯಾಪಾರ ಪಾಲುದಾರರಾಗಿ ಆಯ್ಕೆ ಮಾಡಿಕೊಳ್ಳಬೇಕು ಆದ್ದರಿಂದ ಅವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅವರು ತಮ್ಮ ಸಂಗಾತಿಯನ್ನು ಅತ್ಯಂತ ನಿಸ್ವಾರ್ಥತೆ ಮತ್ತು ಪರಿಶುದ್ಧತೆಯಿಂದ ಪ್ರೀತಿಸುತ್ತಾರೆ ಆದ್ದರಿಂದ ಅವರು ತಮ್ಮ ಸಂಗಾತಿಯಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಸಂಗಾತಿಗಳ ಬಗ್ಗೆ ಅವರ ಆಲೋಚನೆಗಳು ತುಂಬಾ ಸರಳವಾಗಿವೆ. ತಮ್ಮ ಪಾಲುದಾರರನ್ನು ತುಂಬಾ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾರೆ. ಆದರೆ ಅವರ ಸ್ವಭಾವ (nature) ವು ಕೆಲವೊಮ್ಮೆ ಅವರ ಪಾಲುದಾರರಿಂದ ಪ್ರಯೋಜನವನ್ನು ಪಡೆಯಬಹುದು. 

ಇವರು ನಟರು ಆಗಬಹುದು

ಈ ಚಿಹ್ನೆಗಳ ಉದ್ಯೋಗಗಳು ಬೋಧಕರು, ಮನೆಗೆಲಸಗಾರರು, ಸಾಮಾಜಿಕ ಕಾರ್ಯಕರ್ತರು, ನಟರು, ತೋಟಗಾರಿಕಾ ತಜ್ಞರು, ಔಷಧಿಕಾರರು, ದಾದಿಯರು (Nurses) , ನಾವಿಕರು, ಆಲ್ಕೋ ಹಾಲುಯುಕ್ತ ಪಾನೀಯಗಳ ವ್ಯಾಪಾರಿಗಳು, ಉಪ್ಪಿನ ವ್ಯಾಪಾರಿಗಳು ಮತ್ತು ವೈದ್ಯರು (Doctor) .ಇವರು ಇತರರಿಗಿಂತ ನಾಲ್ಕು ಹೆಜ್ಜೆ ಮುಂದಿರುತ್ತಾರೆ. 

ಈ ಚಿಹ್ನೆಗಳ ರೋಗಗಳು ಅಜೀರ್ಣ, ಎದೆಯುರಿ, ಕಾಮಾಲೆ, ಟೈಫಾಯಿಡ್, ಪಿತ್ತಗಲ್ಲು, ಇತ್ಯಾದಿ. ಈ ರಾಶಿಯ ಜನರು ಓಂ ಸೋ ಸೋಮೇ ನಮಃ ಎಂಬ ಮಂತ್ರವನ್ನು ಪಠಿಸಬೇಕು.

click me!