ಕೂಡಿಟ್ಟ ನೋಟುಗಳ ಇಸ್ತ್ರಿ ಮಾಡಿ, Bigg Boss ತನಿಷಾ ಕುಪ್ಪಂಡ ವಿಭಿನ್ನವಾಗಿ ಲಕ್ಷ್ಮೀಪೂಜೆ- ವಿಡಿಯೋ ಶೇರ್​ ಮಾಡಿದ ನಟಿ

Published : Aug 22, 2026, 01:11 PM IST
Tanisha Kuppanda

ಸಾರಾಂಶ

ಬಿಗ್​ಬಾಸ್​ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ವರಮಹಾಲಕ್ಷ್ಮೀ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ತಾವು ಕುಡಿಕೆಯಲ್ಲಿ ಕೂಡಿಟ್ಟ ಹಣವನ್ನು ತೆಗೆದು, ನೋಟುಗಳಿಗೆ ಇಸ್ತ್ರಿ ಮಾಡಿ ಲಕ್ಷ್ಮಿಗೆ ಪೂಜೆ ಸಲ್ಲಿಸಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ನಿನ್ನೆ ಅರ್ಥಾತ್​ ಆಗಸ್ಟ್​ 21ರಂದು ಬಹಳಷ್ಟು ಮಂದಿ ವಿಜೃಂಭಣೆಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು. ಕೆಲವರು, ಬರುವ ಶುಕ್ರವಾರ ಅರ್ಥಾತ್​ ಆಗಸ್ಟ್​ 28ರಂದು ಹಬ್ಬವನ್ನು ಆಚರಿಸುತ್ತಿದ್ದರೆ, ಹಲವರು ನಿನ್ನೆಯೇ ಆಚರಿಸಿದರು. ಮನೆಯಲ್ಲಿ ಲಕ್ಷ್ಮೀಯನ್ನು ಕುಳ್ಳರಿಸಿ ವಿಶೇಷ ಪೂಜೆಯನ್ನೂ ಸಲ್ಲಿಸಿದರು. ಹಲವು ಸೆಲೆಬ್ರಿಟಿಗಳು ಕೂಡ ಅದ್ಧೂರಿಯಾಗಿ ಈ ಹಬ್ಬವನ್ನು ಆಚರಿಸಿದರು. ಸೋಷಿಯಲ್​ ಮೀಡಿಯಾಗಳಲ್ಲಿ ನಿನ್ನೆಯಿಂದ ವರಮಹಾಲಕ್ಷ್ಮೀ ಹಬ್ಬದ ಸಡಗರವೇ ತುಂಬಿದೆ. ಕೆಲವರು ತಮ್ಮ ಮನೆಯಲ್ಲಿ ಇರುವ ಚಿನ್ನಾಭರಣ, ಹಣವನ್ನೆಲ್ಲಾ ಇಟ್ಟು ಪೂಜೆ ಮಾಡಿದರೆ, ಮತ್ತೆ ಕೆಲವರು ತಮ್ಮ ಅನುಕೂಲತೆಗೆ ತಕ್ಕಂತೆ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ ನೆರವೇರಿಸಿದರು.

ಅದೇ ರೀತಿಯಲ್ಲಿ ಬಿಗ್​ಬಾಸ್​ ಖ್ಯಾತಿಯ ತನೀಷಾ ಕುಪ್ಪಂಡ (Bigg Boss Tanisha Kuppanda) ಅವರು ಕೂಡ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರದಿಂದ ಆಚರಿಸಿದರು. ಅದರ ವಿಡಿಯೋ ಅನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಒಂದು ಕುತೂಹಲ ಏನೆಂದರೆ, ತನಿಷಾ ಅವರು ತಾವು ಕುಡಿಕೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಕುಡಿಕೆ ಒಡೆದು ಹೊರಕ್ಕೆ ತೆಗೆದಿದ್ದಾರೆ. ಆ ಬಳಿಕ ಒಂದೊಂದೇ ನೋಟಿಗೆ ಇಸ್ತ್ರಿ ಮಾಡಿ, ಅದನ್ನು ನೀಟಾಗಿ ಜೋಡಿಸಿದ್ದಾರೆ. ಆ ಬಳಿಕ, ನೀಟಾಗಿ ಜೋಡಿಸಿರುವ ನೋಟುಗಳನ್ನು ಲಕ್ಷ್ಮಿಯ ಮುಂದೆ ಇಟ್ಟು ಪೂಜೆ ನೆರವೇರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ತನಿಷಾ ಕುಪ್ಪಂಡ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದರು. ಅಂದಹಾಗೆ ತನಿಷಾ, ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಪೆನ್​ಡ್ರೈವ್​ ಸಿನಿಮಾದಲ್ಲಿಯೂ ಸಕತ್​ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್​​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಕೆಟ್ಟ ಕಮೆಂಟ್ಸ್​ಗೆ ಬೇಸರ

ಹೀಗೆ ಸಕತ್​ ಬಿಜಿಯಾಗಿರೋ ತನಿಷಾ ಅವರು, ಸಕತ್​ ಹಾಟ್​ ಅವತಾರದಲ್ಲಿ ಹಲವು ಬಾರಿ ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಸ್ಲಿಟ್​ ಡ್ರೆಸ್​ ಸೇರಿದಂತೆ ಮಿನಿ ಡ್ರೆಸ್​ಗಳಲ್ಲಿ ಕಂಗೊಳಿಸುತ್ತಾರೆ. ಈ ಮೂಲಕ ಪಡ್ಡೆಗಳ ನಶೆ ಏರಿಸುತ್ತಾರೆ. ಇವರ ಈ ಡ್ರೆಸ್​ ಸೆನ್ಸ್​ಗೆ ಸಾಕಷ್ಟು ಹೊಗಳಿಕೆಗಳು ಬಂದರೂ ಅಷ್ಟೇ ರೀತಿಯಲ್ಲಿ ಕೆಟ್ಟ ಕಮೆಂಟ್ಸ್​ಗಳೂ ಬರುತ್ತವೆ. ಕೆಟ್ಟ ಕಮೆಂಟ್ಸ್​ ಬಗ್ಗೆ ತನಿಷಾ ನೊಂದು ನುಡಿದಿದ್ದಾರೆ. ಸುದ್ದಿಮನೆ ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನೋಡಬಾರದು ಎನ್ನಿಸಿದರೂ ಕೆಲವೊಮ್ಮೆ ನೋಡಿ ಹೋಗ್ತದೆ. ಹಲವರು ಫೇಕ್​ ಪ್ರೊಫೈಲ್​ನಿಂದ ಕೆಟ್ಟ ಕಮೆಂಟ್ಸ್​ ಹಾಕಿದ್ರೆ ಮತ್ತೆ ಕೆಲವರು ಒರಿಜಿನಲ್​ ಪ್ರೊಫೈಲ್​ ಇಟ್ಟುಕೊಂಡೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು ನಟಿ. ಇದೀಗ ವರಮಹಾಲಕ್ಷ್ಮೀ ಹಬ್ಬದಂದು ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ನಟಿ ಕಂಗೊಳಿಸುತ್ತಿದ್ದು, ಸದಾ ಹೀಗೆಯೇ ಇರಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

PREV
Read more Articles on
click me!

Recommended Stories

ಸಂಜೆ 7 ಗಂಟೆ 24 ನಿಮಿಷಕ್ಕೆ ಸಿಂಹ ರಾಶಿಗೆ ಬುಧನ ಪ್ರವೇಶ: 5 ರಾಶಿಗೆ ನೆಮ್ಮದಿ, ಅದೃಷ್ಟ
ಈ ರಾಶಿಗೆ ಸಂಪತ್ತು ಅರಸುವ ಯೋಗ, 4 ರಾಶಿಗೆ ಹಣದ ಸುರಿಮಳೆ; ಮುಂದಿನ 10 ದಿನ ಭರ್ಜರಿ ಅದೃಷ್ಟ