ಫೆ.18ಕ್ಕೆ ನಮನ ಅಕಾಡೆಮಿಯಿಂದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮ

By Suvarna News  |  First Published Feb 16, 2023, 3:39 PM IST

ನಮನ ಆಕಾಡೆಮಿ ವತಿಯಿಂದ ಇದೇ 18ರಂದು  ಶಿವರಾತ್ರಿ ಹಬ್ಬದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸತತ 3ನೇ ವರ್ಷದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನಮನ ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಡಿ.ಕೆ.ಮಾಧವಿ ತಿಳಿಸಿದರು


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಫೆ.16): ನಗರದ ನಮನ ಆಕಾಡೆಮಿ ವತಿಯಿಂದ ಇದೇ 18ರಂದು  ಶಿವರಾತ್ರಿ ಹಬ್ಬದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸತತ 3ನೇ ವರ್ಷದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನಮನ ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಡಿ.ಕೆ.ಮಾಧವಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 18ರ ಶಿವರಾತ್ರಿಯಂದು ರಾತ್ರಿ 9ರಿಂದ ಬೆಳಗಿನ ಜಾವ 3 ಗಂಟೆವರೆಗೆ ದಾವಣಗೆರೆಯ ಪ್ರತಿಷ್ಠಿತ ನಾಲ್ಕು ದೇವಸ್ಥಾನಗಳಲ್ಲಿ ಒಂದರ ನಂತರ ಒಂದರಂತೆ ನೃತ್ಯಸೇವೆಯನ್ನು ಮಾಡುವ ಮೂಲಕ ಶಿವಸ್ಮರಣೆ ಯನ್ನು ನೃತ್ಯ ಜಾಗರಣೆಯ ಮೂಲಕ ಸಮರ್ಪಿಸಲಾಗುತ್ತಿದೆ ಎಂದು ಹೇಳಿದರು.

Latest Videos

undefined

ಅಂದು ರಾತ್ರಿ 9.30ಕ್ಕೆ ನಗರದ ರಿಂಗ್‌ ರಸ್ತೆಯಲ್ಲಿರುವ ಶ್ರೀಶಾರದಾ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ರವಿಚಂದ್ರ ಮತ್ತು ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ್‌ ಭಾಗವಹಿಸಲಿದ್ದಾರೆ. ನಮನ ಅಕಾಡೆಮಿಯ ಗೌರವಾಧ್ಯಕ್ಷ ಡಾ.ಎ.ಎಂ.ಶಿವಕುಮಾರ್, ನಿರ್ದೇಶಕ ದಿನೇಶ್‌ ಕೆ. ಶೆಟ್ಟಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Mahashivratri : ಸಾಲದಿಂದ ಮುಕ್ತರಾಗಲು ಮಹಾಶಿವರಾತ್ರಿಯಂದು ಈ ಕೆಲಸ ಮಾಡಿ

ರಾತ್ರಿ 11ಕ್ಕೆ ಜಯದೇವ ಸರ್ಕಲ್‌ನಲ್ಲಿರುವ ಶ್ರೀ ಕೂಡಲಿ ಶಂಕರ ಮಠಠದಲ್ಲಿ, ರಾತ್ರಿ 12.30 ಕ್ಕೆ ಗೀತಾಂಜಲಿ ಟಾಕೀಸ್ ಪಕ್ಕದಲ್ಲಿರುವ ಶ್ರೀ ಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ಮಧ್ಯರಾತ್ರಿ 2ಕ್ಕೆ ವಿದ್ಯಾನಗರದ ಶ್ರೀ ಶಿವ ಪಾರ್ವತಿ ದೇವಸ್ಥಾನದಲ್ಲಿ ನೃತ್ಯ ಸೇವೆಯನ್ನು ಮಾಡುವುದರ ಮೂಲಕ ಶಿವನಿಗೆ ನೃತ್ಯ ಜಾಗರಣೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದರು.

MahaShivratri 2023: ಸುಳ್ಳು ಹೇಳಿದ ಕೇತಕಿ, ಚಂಪಾ ಪುಷ್ಪಗಳಿಗೆ ಶಿವಪೂಜೆಯಲ್ಲಿ ಸ್ಥಾನವಿಲ್ಲ!

ಈ ಶಿವಸ್ಮರಣೆ ನೃತ್ಯ ಜಾಗರಣೆಯ ವಿಶೇಷವೇನೆಂದರೆ ನಗರದ ಹೆಸರಾಂತ ಕಲಾವಿದರಾದ ತರಳಬಾಳು ಬಡಾವಣೆಯ ಸ್ವಸ್ತಿ ಆರ್ಟ್ ಗ್ಯಾಲರಿ, ಪ್ರೊಪ್ರೈಟರ್  ರವಿ ಹುದ್ದಾರ್  ನೃತ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದ್ದಾರೆ ಎಂದರು. ಶಿವಸ್ಮರಣೆ ನೃತ್ಯ ಜಾಗರಣೆಯಲ್ಲಿ ನಮನ ಅಕಾಡೆಮಿಯ ಗುರು ವಿದುಷಿ ಡಿ.ಕೆ.ಮಾಧವಿ ಮತ್ತು ಅವರ ಶಿಷ್ಯಂದಿರಾದ ಅಧಿತಿ ಸಿ.ಜಿ., ಜಾಹ್ನವಿ ಎಂ., ಶ್ರೇಯಾ ಸಿ.ವಿ., ಪೂಜಾ ಡಿ.ಧಾಗೆ, ತನುಶ್ರೀ ಎಂ., ಭವಾನಿ ಡಿ.ಎಸ್., ಪರಿನಿಕ ಕೆ.ಎ., ಸಂಸ್ಕೃತಿ ಜೆ. ಆಚಾರ್, ಯಶ್ವಿನಿ ಜೆ.ಎಂ., ಶ್ರೇಯಾ ಜಿ.ಎಂ. ಇವರುಗಳು ನೃತ್ಯವನ್ನು ಸಮರ್ಪಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಮನ ಅಕಾಡೆಮಿಯ ನಿರ್ದೇಶಕ ಪಿ.ಸಿ.ರಾಮನಾಥ ಇದ್ದರು.

click me!