ವಾರದ ಈ ದಿನಗಳಲ್ಲಿ ಕೂದಲು ಕತ್ತರಿಸಿ ನೋಡಿ...ಅದೃಷ್ಟ ಲಕ್ಷ್ಮಿ ಹೇಗೆ ಮನೆಗೆ ಬರುತ್ತಾಳೆಂದು!

By Vaishnavi ChandrashekarFirst Published Aug 7, 2024, 4:57 PM IST
Highlights

ಫ್ರೀ ಇದ್ದೀವಿ ಅಂತ ಈ ದಿನಗಳಲ್ಲಿ ಕೂದಲು ಕತ್ತರಿಸಬೇಡಿ; ದುರಾದೃಷ್ಟ ದೂರಾಗಲು ಈ ದಿನವೇ ಮಾಡಿಸಿ
 

ಮನುಷ್ಯರು ಮಾಡುವ ಪ್ರತಿಯೊಂದು ಕೆಲಸಕ್ಕೂ ಒಳ್ಳೆಯ ದಿನ ಹುಡುಕುತ್ತಾರೆ. ಗೊತ್ತಿಲ್ಲದೆ ಕೆಟ್ಟ ಗಳಿಕೆಯಲ್ಲಿ ಕೆಲಸ ಮಾಡಿದರೂ ದೇವರ ಹೆಸರು ಹೇಳಿಕೊಂಡು ಸುಮ್ಮನಾಗುತ್ತಾರೆ ಆದರೆ ಗೊತ್ತಿದ್ದು ಮಾಡಿದರೆ ಅಬ್ಬಾ! ಯಾಕ್ ಕೇಳ್ತೀರಾ ಗೋಲಾಡುತ್ತಾರೆ. ಹಾಗೆಯೇ ಕೂದಲು ಕಟ್ ಮಾಡಿಸುವಾಗ ಸಾಕಷ್ಟು ಯೋಚನೆ ಮಾಡುತ್ತಾರೆ, ಯಾವ ದಿನ ಮಾಡಿಸಿದರೆ ಚೆನ್ನಾಗಿ ಬೆಳೆಯುತ್ತದೆ, ಯಾವ ದಿನ ಮಾಡಿಸಿದರೆ ಜಾಸ್ತಿ ಉದುರುತ್ತದೆ, ಯಾವ ದಿನ ಮಾಡಿಸಿದರೆ ಅದೃಷ್ಟ ಹೆಚ್ಚಾಗುತ್ತದೆ ಎಂದು ಈಗಲೂ ಹಿರಿಯರನ್ನು ಕೇಳಿಕೊಂಡು ಮಾಡಿಸುತ್ತಾರೆ.

ಕೂದಲಿನಿಂದ ನಮ್ಮ ಅಂದ ಎಷ್ಟು ಹೆಚ್ಚಾಗುತ್ತದೆಯೋ ಕಟ್ ಮಾಡಿಸುವಾಗ ನಮ್ಮಲ್ಲಿರುವ ನಕರಾತ್ಮಕ ಶಕ್ತಿಯೂ ದೂರವಾಗುತ್ತದೆ ಎನ್ನುತ್ತಾರೆ. ಕೆಟ್ಟ ಗಳಿಗೆಯಲ್ಲಿ ಕಟ್ ಮಾಡಿಸಿದರೆ ನಕರಾತ್ಮಕ ಶಕ್ತಿಯನ್ನು ನಾವೇ ಮನೆಗೆ ಕರೆದುಕೊಂಡು ಬಂದಂತೆ ಎನ್ನುತ್ತಾರೆ ಹಿರಿಯರು. ಅಷ್ಟೇ ಯಾಕೆ ಮಂಗಳವಾರ ಅದೆಷ್ಟೋ ಮಂದಿ ತಮ್ಮ ಪಾರ್ಲರ್ ಅಥವಾ ಸಲೂನ್‌ ಕ್ಲೋಸ್ ಮಾಡಿಬಿಡುತ್ತಾರೆ. ಹೀಗಾಗಿ ಯಾವ ದಿಮ ಕ್ಷೌರ ಮಾಡಬೇಕು ಅನ್ನೋದು ಇಲ್ಲಿದೆ.....

Latest Videos

ಆಗಸ್ಟ್‌ ತಿಂಗಳಿನಲ್ಲಿ ವಾಹನ ಖರೀದಿಸುತ್ತೀರಾ? ಇಲ್ಲಿದೆ ನೋಡಿ ನಿಮ್ಮ ಅದೃಷ್ಟದ ಡೇಟ್ ಅಂಡ್ ಟೈಂ

ಮಂಗಳವಾರ ಹನುಮಂತನ ದಿನ ಹಾಗೂ ಗುರುವಾರ ವಿಷ್ಣುವಿನ ದಿನ ಆಗಿರುವ ಕಾರಣ ಕೂದಲು ಕತ್ತರಿಸಿದರೆ ದೇವರಿಗೆ ಅಪಚಾರವಾಗಹುದು ಎಂದು ಅನೇಕರು ಹೇಳುತ್ತಾರೆ. ಬುಧವಾರ ಕೂದಲನ್ನು ಕಟ್ ಮಾಡಿಸುವುದಕ್ಕೆ ಒಳ್ಳೆಯ ದಿನ, ಈ ದಿನ ಕಟ್ ಮಾಡಿಸಿದರೆ ನಿಮಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೆ ಈ ದಿನ ಬುಧದ ಪ್ರಭಾವವನ್ನು ಬಲಪಡಿಸುತ್ತದೆ. ಇನ್ನು ಶುಕ್ರವಾರ ಶುಕ್ರನ ದಿನ ಆಗಿದ್ದು ಈ ಗ್ರಹ ನಿಮ್ಮ ಸೌಂದರ್ಯ, ಅನುಗ್ರಹ ಮತ್ತು ಆನಂದದ ಸಂಕೇತವಾಗಿರುತ್ತದೆ. ಈ ದಿನ ನಿಮ್ಮ ಕೂದಲನ್ನು ಕಟ್ ಮಾಡಿಸಿದರೆ ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಮತ್ತು ಸೌಂದರ್ಯ ಹೆಚ್ಚಿಸುತ್ತದೆ.

ಶ್ರಾವಣ ಮಾಸದಲ್ಲಿ ನಾನ್ ವೆಜ್ ಏಕೆ ತಿನ್ನಲ್ಲ ಗೊತ್ತಾ?

ಇನ್ನು ಸೋಮವಾರ ಯಾವುದೇ ಕಾರಣಕ್ಕೂ ಕೂದಲ ಕತ್ತರಿಸಬಾರದು. ಈ ದಿನ ಮಾಡಿಸಿದರೆ ನಿಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ ಅಲ್ಲದೆ ಮನೆಯಲ್ಲಿ ಮಾನಸಿಕ ಆರೋಗ್ಯದ ಪರಿಣಾಮ ಬೀರುತ್ತದೆ. ಶನಿ ಪ್ರಭಾವ ಹೆಚ್ಚಿರುವ ದಿನವೇ ಶನಿವಾರ. ಅಪ್ಪಿತ್ತಪ್ಪಿ ಈ ದಿನ ಕೂದಲು ಕತ್ತರಿಸಿದರೆ ನಿಮ್ಮಲ್ಲಿ ನಕರಾತ್ಮಕ ಗುಣಗಳು ಹೆಚ್ಚಾಗುತ್ತದೆ. ಇನ್ನು ಭಾನುವಾರ ಎಲ್ಲರೂ ಸಾಮಾನ್ಯವಾಗಿ ಫ್ರೀ ಇರುವ ದಿನ ಆದರೆ ಆ ಫ್ರೀ ದಿನ ಮಾಡಿಸಿದರೆ ದುರಾದೃಷ್ಟವನ್ನು ಮನೆಗೆ ಕರೆದುಕೊಂಡು ಬರುತ್ತೀರಿ ಅಷ್ಟೇ ಅಲ್ಲ ಸಂಪತ್ತು ಮತ್ತು ಬುದ್ಧಿವಂತಿಕೆಯನ್ನು ಕಳೆದುಕೊಳ್ಳುತ್ತೀರಿ. 

click me!