ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..‍!

By Suvarna News  |  First Published Dec 19, 2020, 4:47 PM IST

ಪರಶಿವನ ಕಣ್ಣಿಂದ ಬಿದ್ದ ಬಿಂದುವಿನಿಂದ ರುದ್ರಾಕ್ಷಿಯು ಉದ್ಭವವಾಯಿತೆಂಬ ನಂಬಿಕೆ ಇದೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಿರುವುದಾಗಿ ಪದ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ರುದ್ರಾಕ್ಷಿಯ ಪ್ರಕಾರಗಳಿಗೂ ಅದರದ್ದೇ ಆದ ಮಹತ್ವವಿದೆ. ಹಾಗೆಯೇ ಧರ್ಮ ಶಾಸ್ತ್ರಗಳಲ್ಲಿ ಏಕಮುಖಿ ರುದ್ರಾಕ್ಷಿಯು ಶಿವನ ಅವತಾರವೆಂದು ಹೇಳಲಾಗಿದೆ. ಇದನ್ನು ಧರಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಏಕಮುಖಿ ರುದ್ರಾಕ್ಷಿಯ ಮಹತ್ವ ಮತ್ತು ಅದನ್ನು ಧರಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿಯೋಣ...


ಪುರಾಣಗಳಲ್ಲಿ ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವಾದದ್ದೆಂದು ಉಲ್ಲೇಖಿಸಿದ್ದಾರೆ. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವವಾಯಿತೆಂದು ಹೇಳಲಾಗುತ್ತದೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಿವೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ. ಒಂದೊಂದು ಬಗೆಯ ರುದ್ರಾಕ್ಷಿಯ ಧಾರಣೆಯು ಅನೇಕ ಲಾಭಗಳನ್ನು ನೀಡುವುದಲ್ಲದೇ, ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗೂ ಅದರದ್ದೇ ಆದ ವಿಶೇಷ ಮಹತ್ವವಿದೆ.

ರುದ್ರಾಕ್ಷಿ ಧರಿಸುವುದರಿಂದಾಗುವ ಲಾಭ ಮತ್ತು ಪ್ರತಿ ರುದ್ರಾಕ್ಷಿಯ ಮಹತ್ವದ ಬಗ್ಗೆ ಹಲವು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಹೀಗೆ ಇನ್ನೂ ಹಲವು ಪುರಾಣಗಳಲ್ಲಿ ರುದ್ರಾಕ್ಷಿಯ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿ ಇರುವುದಾಗಿ ಶಿವ ಪುರಾಣದ ವಿಘ್ನೇಶ್ವರ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಲ್ಲಿ ಒಂದಾದ ಏಕಮುಖಿ ರುದ್ರಾಕ್ಷಿಯ ಮಹತ್ವ ಮತ್ತು ಧಾರಣೆಯಿಂದ ಯಾವ ರೀತಿಯ ಲಾಭ ಎಂಬುದನ್ನು ತಿಳಿಯೋಣ....

ಇದನ್ನು ಓದಿ: ವಾಸ್ತು ಶಾಸ್ತ್ರದಂತೆ ಈ ಉಡುಗೊರೆ ಕೊಟ್ಟರೆ ಸಂಬಂಧ ಕೆಡುತ್ತೆ! 

ಏಕಮುಖಿ ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಹೇಳಲಾಗುತ್ತದೆ. ಈ ರುದ್ರಾಕ್ಷಿಯು ಒಂದು ಮುಖವನ್ನು ಹೊಂದಿದ್ದು ನೋಡಲು ಗೋಲಾಕಾರವಾಗಿರುತ್ತದೆ ಮತ್ತು ಕೆಲವು ಅರ್ಧಚಂದ್ರನಂತೆ ಕಾಣುತ್ತವೆ. ಏಕಮುಖಿ ರುದ್ರಾಕ್ಷಿಯ ಅಧಿಪತಿ-ದೇವರು ಶಿವನೇ ಆಗಿರುವ ಕಾರಣ ಈ ರುದ್ರಾಕ್ಷಿಯು ಸಾಕ್ಷತ್ ಶಿವನ ಸ್ವರೂಪವೆಂದು ಹೇಳಲಾಗುತ್ತದೆ. ಏಕಮುಖಿ ರುದ್ರಾಕ್ಷಿಯು ಶಕ್ತಿ, ಸತ್ಯ ಮತ್ತು ಮೋಕ್ಷಕ್ಕೆ ಕಾರಕ ರುದ್ರಾಕ್ಷವೆಂದು ಹೇಳಲಾಗುತ್ತದೆ. ಈ ರುದ್ರಾಕ್ಷಿಯ ಅಧಿಪತಿ ಸೂರ್ಯಗ್ರಹವಾಗಿದೆ.

Tap to resize

Latest Videos

ಧರ್ಮ ಶಾಸ್ತ್ರಗಳಲ್ಲಿ ಏಕಮುಖಿ ರುದ್ರಾಕ್ಷಿಯು ಶಿವನ ಅವತಾರವೆಂದು ಹೇಳಲಾಗಿದೆ. ಇದನ್ನು ಧರಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಬ್ರಹ್ಮಹತ್ಯೆಯಂಥ ಪಾಪಗಳು ನಾಶವಾಗುತ್ತವೆಂದು ಹೇಳಲಾಗುತ್ತದೆ. “ಏಕಮುಖಿ ರುದ್ರಾಕ್ಷಿಯು  ಸಾಕ್ಷಾತ್ ಪರಮ ಶಿವನ ಸ್ವರೂಪವಾಗಿದೆ. ಇದು ಸಮಸ್ತ ಪಾಪಗಳನ್ನು ನಾಶ ಮಾಡುತ್ತದೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಸ್ವರ್ಗ ಲೋಕ ಮತ್ತು ಮೋಕ್ಷ ಲಭಿಸುತ್ತದೆ. ಶಿವನನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸುವ ವ್ಯಕ್ತಿ ಮಾತ್ರವೇ ಈ ರುದ್ರಾಕ್ಷಿಯನ್ನು ಧರಿಸಲು ಅರ್ಹನಾಗಿರುತ್ತಾನೆ. ಈ ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವನ ಪೂರ್ಣ ಕೃಪೆ ಲಭಿಸುತ್ತದೆ” ಎಂಬುದಾಗಿ ಪದ್ಮ ಪುರಾಣದಲ್ಲಿ ಏಕಮುಖಿ ರುದ್ರಾಕ್ಷಿಯ ಮಹತ್ವವನ್ನು ವರ್ಣಿಸಲಾಗಿದೆ.

ಇದನ್ನು ಓದಿ: ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...! 

ಏಕಮುಖಿ ರುದ್ರಾಕ್ಷಿಯನ್ನು ಧಾರಣೆಯಿಂದಾಗುವ ಲಾಭಗಳು 

- ಏಕಮುಖಿ ರುದ್ರಾಕ್ಷಿಯ ಜಪ ಮಾಲೆ ಧರಿಸುವ ಆಧ್ಯಾತ್ಮಿಕ ಇಚ್ಛೆಗಳು ಪೂರ್ಣಗೊಳ್ಳುವುದಷ್ಟೇ ಅಲ್ಲದೇ ಮನಸ್ಸಿಗೆ ಶಾಂತಿ ಲಭಿಸುತ್ತದೆ.

- ಈ ರುದ್ರಾಕ್ಷಿಯ ಪ್ರಭಾವದಿಂದ ಜೀವನದಲ್ಲಿ ಸಮೃದ್ಧಿ ಲಭಿಸುತ್ತದೆ.

- ಆತ್ಮ ವಿಶ್ವಾಸ ಮತ್ತು ನಾಯಕತ್ವದ ಕ್ಷಮತೆ ಹೆಚ್ಚಲಿದೆ. ಅಷ್ಟೇ ಅಲ್ಲದೆ ವ್ಯಕ್ತಿತ್ವದ ವಿಕಾಸ ಆಗಲಿದೆ.

- ಕಾರ್ಯಕ್ಷೇತ್ರದಲ್ಲಿ ಸಫಲತೆಯನ್ನು ದೊರಕಿಸಲು ಸಹಾಯಕವಾಗಲಿದೆ.

- ಏಕಮುಖಿ ರುದ್ರಾಕ್ಷಿಯನ್ನು ಧಾರಣೆ ಮಾಡಿದ ವ್ಯಕ್ತಿಯು ಆರ್ಥಿಕ ಲಾಭವನ್ನು ಪಡೆಯುವುದಲ್ಲದೆ, ಸಮಾಜದಲ್ಲಿ ಗೌರವಾದರಗಳು ಹೆಚ್ಚಲಿದೆ.

ಇದನ್ನು ಓದಿ: ಶರೀರದ ಈ ಭಾಗಗಳಲ್ಲಿರುವ ಮಚ್ಚೆ ತರುತ್ತೆ ಅದೃಷ್ಟ..! 

- ಸಿಟ್ಟನ್ನು ನಿಯಂತ್ರಿಸಿಕೊಳ್ಳಬೇಕೆಂದು ಇಚ್ಛಿಸುವವರು ಏಕಮುಖಿ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ. 

- ರುದ್ರಾಕ್ಷಿಯಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು, ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ರಕ್ತ, ಹೃದಯ, ಕಣ್ಣು ಮತ್ತು ತಲೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಏಕಮುಖಿ ರುದ್ರಾಕ್ಷಿ ಧಾರಣೆಯು ಅತ್ಯದ್ಭುತ ಔಷಧವಾಗಿದೆ.

- ಈ ರುದ್ರಾಕ್ಷಿಯು ಕೆಟ್ಟ ಚಟಗಳಿಂದ ಮುಕ್ತಿ ಪಡೆಯುವಲ್ಲಿ ಸಹಾಯಕವಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

ಏಕಮುಖಿ ರುದ್ರಾಕ್ಷಿಯಲ್ಲಿ ದೈವಿಕ ಶಕ್ತಿಯು ಸಮ್ಮಿಲಿತವಾಗಿರುವ ಕಾರಣ ಮಾನವರು ಇದರ ಅನೇಕ ಲಾಭಗಳನ್ನು ಪಡೆಯುತ್ತಾರೆ, ಆದರೆ ನಿಜವಾದ ಏಕಮುಖಿ ರುದ್ರಾಕ್ಷಿಯನ್ನು ಬಳಸಿದಲ್ಲಿ ಮಾತ್ರ ಸರಿಯಾದ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಾಗಿ ಅಸಲಿ ರುದ್ರಾಕ್ಷಿಯನ್ನು ಗುರುತಿಸಿ, ಧರಿಸಿದರೆ ಉತ್ತಮ.

click me!