
ಮಂಗಳಮುಖಿಯರು (transgender) ಅಪಾರ ಶಕ್ತಿಯನ್ನು ಹೊಂದಿರ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಬೇಡಿ ಬಂದಾಗ ಅವರನ್ನು ಬರಿಗೈನಲ್ಲಿ ಕಳಿಸೋದಿಲ್ಲ. ಶುಭ ಕಾರ್ಯಗಳ ಸಂದರ್ಭದಲ್ಲಿ ಅವರನ್ನು ಮನೆಗೆ ಕರೆಸಿ, ಅವರಿಗೆ ಹಣ, ಬಟ್ಟೆ ದಾನ ಮಾಡುವ ಜನರಿದ್ದಾರೆ. ಮಂಗಳಮುಖಿಯರು ಸಂತೋಷಗೊಂಡ್ರೆ ಅದೃಷ್ಟದ ಬಾಗಿಲು ತೆರೆದಂತೆ ಎಂಬ ನಂಬಿಕೆ ಇದೆ. ಮಾರ್ಕೆಟ್ ನಲ್ಲಿ, ಸಿಗ್ನಲ್ ನಲ್ಲಿ ಕೈ ಒಡ್ಡುವ ಮಂಗಳಮುಖಿಯರಿಗೆ ದಾನ ಮಾಡುವ ಮುನ್ನ ನೀವು ಕೆಲ ಸಂಗತಿ ತಿಳಿದಿರಬೇಕು. ತಪ್ಪಾಗಿ ಮಾಡುವ ಕೆಲ್ಸ ಅದೃಷ್ಟದ ಬದಲು ದುರಾದೃಷ್ಟ ತರ್ಬಹುದು.
ಮಂಗಳಮುಖಿಯರಿಗೆ ದಾನ ಮಾಡುವ ಮೊದಲು ಇದೆಲ್ಲ ತಿಳಿದಿರಲಿ :
ಸೂಸೂತ್ರವಾಗಿ ನಡೆಯುತ್ತೆ ಎಲ್ಲ ಕೆಲ್ಸ : ಮನೆಯಲ್ಲಿ ಮಾಡ್ಬೇಕು ಅಂದ್ಕೊಂಡಿರುವ ಶುಭ ಕೆಲಸಕ್ಕೆ ಪದೇ ಪದೇ ಅಡ್ಡಿಯಾಗ್ತಿದ್ದರೆ ನೀವು ಮಂಗಳಮುಖಿಯರ ಡೋಲನ್ನು ಪೂಜೆ ಮಾಡ್ಬೇಕು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉಡುಗೊರೆ ನೀಡಿ. ಮಂಗಳಮುಖಿಯರ ಆಶೀರ್ವಾದದಿಂದ ಕೆಲಸಕ್ಕೆ ಬಂದ ಅಡೆತಡೆ ನಿವಾರಣೆಯಾಗುತ್ತದೆ.
ಈ ವಸ್ತುವನ್ನು ಎಂದೂ ಮಂಗಳಮುಖಿಯರಿಗೆ ದಾನ ಮಾಡ್ಬೇಡಿ : ಹಣ, ಬಟ್ಟೆ, ಆಹಾರವನ್ನು ನೀವು ಮಂಗಳಮುಖಿಯರಿಗೆ ದಾನ ಮಾಡಿದ್ರೆ ಅವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಆದ್ರೆ ಕೆಲ ವಸ್ತುಗಳನ್ನು ಮಂಗಳಮುಖಿಯರಿಗೆ ದಾನದ ರೂಪದಲ್ಲಿ ನೀಡ್ಬಾರದು. ಹಿಂದೂ ನಂಬಿಕೆ ಪ್ರಕಾರ, ನೀವು ಧರಿಸಿದ ಬಟ್ಟೆ ಅಥವಬಾ ಬಳಸಿದ ಮೇಕಪ್ ವಸ್ತುಗಳನ್ನು ಮಂಗಳಮುಖಿಯರಿಗೆ ನೀಡಬೇಡಿ. ಹಾಗೆಯೇ ಸತ್ತ ವ್ಯಕ್ತಿಯ ಬಟ್ಟೆಯನ್ನು ಕೂಡ ಅವರಿಗೆ ದಾನವಾಗಿ ನೀಡಬಾರದು. ಪ್ಲಾಸ್ಟಿಕ್ ಪಾತ್ರೆ, ಪೊರಕೆ, ಎಣ್ಣೆ ಇತ್ಯಾದಿಗಳನ್ನು ನಪುಂಸಕರಿಗೆ ದಾನ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಹಳಸಿದ ಅಥವಾ ಹಿಂದಿನ ದಿನದ ಆಹಾರವನ್ನು ಅವರಿಗೆ ನೀಡಬೇಡಿ.
ಹೀಗೆ ಮಾಡಿದ್ರೆ ದಾನದ ಫಲ ಲಭಿಸದು : ಮನೆಯ ಮುಂದೆ ಬರುವ ಮಂಗಳಮುಖಿಯನ್ನು ಹಾಗೆ ಕಳುಹಿಸಬೇಡಿ. ರಸ್ತೆ ಅಥವಾ ಸಿಗ್ನಲ್ ನಲ್ಲಿ ಸಿಗುವ ಮಂಗಳಮುಖಿಯರಿಗೆ ಹಣ ನೀಡಿದ ಮೇಲೆ ಅವರಿಗೆ ಅವಮಾನ ಮಾಡಬೇಡಿ. ಅವರನ್ನು ಗೇಲಿ ಮಾಡಿದ್ರೆ ಅಥವಾ ಅವರನ್ನು ನೋಡಿ ನಕ್ಕರೆ ದಾನದ ಫಲ ಲಭಿಸುವುದಿಲ್ಲ. ಅವರಿಗೆ ಎಲ್ಲರಂತೆ ಸಮನಾದ ಗೌರವ ನೀಡಿದಾಗ ಮಾತ್ರ ಅವರ ಆಶೀರ್ವಾದ ನಿಮಗೆ ಸಿಗುತ್ತದೆ.