ಬಸವಣ್ಣನವರು ಹಿಂದೂ ಧರ್ಮದ ಶಾಸ್ತ್ರ ಗ್ರಂಥಗಳಲ್ಲಿ ಹೇಳಿದ ಉತ್ತಮ ಅಂಶಗಳನ್ನು ಒಪ್ಪಿ, ಪ್ರಮಾದಗಳ ವಿರುದ್ಧ ಧ್ವನಿ ಎತ್ತಿ, ಬೇಕಾದಲ್ಲಿ ಪ್ರಮಾಣಗಳನ್ನು ಕೊಟ್ಟು, ತಪ್ಪಿದ್ದಲ್ಲಿ ಕಟುವಾದ ಟೀಕೆ ಮಾಡಿ ಧರ್ಮ ಉತ್ಥಾನಕ್ಕೆ ಕಾರಣರಾದ ದಾರ್ಶನಿಕ.
ಕಿರಣಕುಮಾರ, ವಿವೇಕವಂಶಿ, ಬೆಂಗಳೂರು
ನಾತನ ಧರ್ಮ ಹೊಸತನಕ್ಕೆ ಎಂದೆಂದಿಗೂ ತನ್ನನ್ನು ತೆರೆದು ಕೊಂಡಿದೆ. ಟೀಕೆ ಟಿಪ್ಪಣಿಗಳಿಗೆ ಮುಕ್ತ ಅವಕಾಶ ನೀಡಿದೆ. ಸೆಮೆಟಿಕ್ ಮತಗಳಂತೆ ಇದು ಹೀಗೆಯೇ ಎನ್ನುವ ಪ್ರಮಾಣಗಳಿಂದ ಕೂಡಿದ ಜಡ ಮಾರ್ಗವಾಗದೇ, ಕಾಲಕಾಲಕ್ಕೆ ಬಂದ ದಾರ್ಶನಿಕರು, ತತ್ವಜ್ಞಾನಿಗಳು, ಮಹಾ ಪುರುಷರು ಮಾಡಿದ ಟೀಕೆ, ಆರೋಪಗಳನ್ನು ತೆಗೆದುಕೊಂಡು ಬದಲಾವ ಣೆಗಳನ್ನು ಅತ್ಯಂತ ಮುಕ್ತವಾಗಿ ಸ್ವಾಗತಿಸಿದೆ. 12ನೇ ಶತಮಾನದ ಬಸವಾದಿ ಶರಣರೂ ಇದಕ್ಕೆ ಹೊರತಾ ಗಿಲ್ಲ. ಆಚಾರ್ಯ ಶಂಕರರ ನಂತರ ಬ ರ ಬಸವಣ್ಣ ನವರಂಥ ಧರ್ಮ ಸುಧಾರಕ ಹಾಗೂ ಸಮರ್ಥಕ ಮತ್ತೊಬ್ಬ ಸಿಗಲಿಕ್ಕಿಲ್ಲ! ವೇದಗಳನ್ನು ಭಕ್ತಿಭಂಡಾರಿ ಬಸವಣ್ಣ ಧಿಕ್ಕರಿಸಿದರು, ಹೀಗಾಗಿ ಅವರು ವೈದಿಕ ಮತದಲ್ಲಿ ನಂಬಿಕೆ ಕಳೆದುಕೊಂಡವರಾಗಿ ದ್ದರು ಎಂದು ಹೇಳುವವರಿದ್ದಾರೆ.
ಉಪ ನಿಷತ್‌ಗಳೂ ವೇದಗಳನ್ನು ಟೀಕಿಸಿದ್ದವು, ಹಾಗಂತ ಅವನ್ನು ಸನಾತನ ವಿರೋಧಿ ಎನ್ನಲಾದೀತೆ? ಖಂಡಿತಾ ಇಲ್ಲ. ಒಂದು ಧರ್ಮ ಯಾವಕಾಲಕ್ಕೂ ಪ್ರಸ್ತುತವಾಗಬೇಕಾದರೆ ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಧರ್ಮದಲ್ಲಿ ಸುಧಾರಣೆ ಕಾರ್ ಮಾಡಲು ಬಂದ ಅಗ್ರಗಣ್ಯ ನಾಯಕ ವಿಶ್ವಗುರು ಬಸವೇಶ್ವರ. ಬಸವಣ್ಣನವರಿಗೆ ಹಿಂದೂ ಧರ್ಮದ ಬಗ್ಗೆ ಭಿನ್ನಮತ ಇರಲಿಲ್ಲ. ಭಿನ್ನತೆ ಇದ್ದದ್ದು ಇಲ್ಲಿನ ಕೆಲ ಅನಿಷ್ಠ ಆಚರಣೆಗಳ ಬಗ್ಗೆ, ಅವನ್ನು ಸರಿ ಪಡಿಸುವ ಕಾರ್ಯವನ್ನು ಲಿಂಗಮತದಲ್ಲಿ ನಿಂತು ಅವರು ಮಾಡಿ ದ್ದಾರೆ. ಬಸವೇಶ್ವರರು ವೇದಗಳಲ್ಲಿನ ವರ್ಣ ವ್ಯವಸ್ಥೆ, ಹಿಂಸೆ, ಪ್ರಾಣಿ ಬಲಿ ಹೀಗೆ ಹಲವು ಸಂಗತಿಗಳನ್ನು ಖಂಡಿಸಿದ್ದಾರೆಯೇ ವಿನಃ ಸಂಪೂರ್ಣ ವೇದಗಳನ್ನೇ ಅಲ್ಲ. ಬಸವಣ್ಣನವರು ವೇದಗಳ ವಿಚಾರಗಳನ್ನು ತಮ್ಮ ಅನೇಕ ವಚನಗಳಲ್ಲಿ ಉಲ್ಲೇಖಿಸಿದ್ದಾರೆ.
Akshaya Tritiya 2024: ಅಪರಿಮಿತ ಸೌಭಾಗ್ಯ ನೀಡುವ ಅಕ್ಷಯ ತೃತೀಯಾ: ಆಚರಣೆಗಿದೆ ವಿಶಿಷ್ಟ ಹಿನ್ನಲೆ, ಮಹತ್ವ!
ಉಪನಿಷತ್ತಿನ ಬಹು ಸಂಗತಿಗಳನ್ನು ಎತ್ತಿ ಹಿಡಿದಿದ್ದಾರೆ. ಭಗವದ್ಗೀತೆಯ ಘನ ಸಂಗತಿ ಗಳನ್ನು ವಚನಗಳ ಮೂಲಕ ಸರಳವಾಗಿ ಸಾಮಾನ್ಯನಿಗೂ ಅರ್ಥ ವಾಗುವ ರೀತಿಯಲ್ಲಿ ತಿಳಿಸುವ ಕೆಲಸ ಮಾಡಿ ದ್ದಾರೆ. ಬಸವೇಶ್ವರರು ತಮ್ಮ ವಚನಗಳಲ್ಲಿ ವೇದವನ್ನು 37 ಬಾರಿ ಉಲ್ಲೇಖ ಮಾಡಿದ್ದಾರೆ. ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ, 'ತತ್ತ್ವಮಸಿ' ಎಂಬುದನರಿದು ಕತ್ತಲೆದೊಡೆವಿರಯ್ಯಾ. ವೇದವಿಪ್ರರ ವಿಚಾರಿಸಿನೋಡಲು,' ಉಪದೇಶ ಪರೀಕ್ಷೆನಾಯಕನರಕ' ಎಂದುದು ಕೂಡಲಸಂಗನ ವಚನದ ಸೂಚನೆ.' ಇಲ್ಲಿ ವೇದ ಓದಿದರೆ ಸಾಲದು, ಅದನ್ನು ಸರಿಯಾದ ರೀತಿ ಪಾಲಿಸಬೇಕು ಎಂದು ತಿಳಿಸಿದ್ದಾರೆ. ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ. ವೇದ ಘನವೆಂಬೆನೆ? ಪ್ರಾಣ ವಧೆಯ ಹೇಳುತ್ತಿದೆ. ಶ್ರುತಿ ಘನವೆಂಬೆನೆ?
ಮುಂದಿಟ್ಟು ಅರಸುತ್ತಿದೆ. ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮ ದೇವನ. ಎನ್ನುವ ಈ ವಚನದಲ್ಲಿ ಬಸವಣ್ಣನವರು ಹಿಂಸೆಯ ವಿಷಯಕ್ಕೆ ವೇದದ ಮೇಲೆ ದೋಷಾರೋಪಣೆ ಮಾಡಿದ್ದಾರೆ. ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ, ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ ಸತ್ತವರೊಳರೆ ಅಯ್ಯಾ ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ, ಎಂಬ ಈ ವಚನದಲ್ಲಿ ಅವರು ಶ್ರುತಿಗೆ ಅಗಮ್ಯವು ಪರಮಾತ್ಮ ನೆಂದು ಹೇಳುತ್ತ ವೇದದ ಪ್ರಮಾಣದಂತೆ ಸಂಗನೊಬ್ಬನೇ (ಶಿವ) ದೇವರೆಂದು ಹೇಳುತ್ತಾರೆ.
ಒಟ್ಟು ಬಸವಣ್ಣನವರು ಹಿಂದೂ ಧರ್ಮದ ಶಾಸ್ತ್ರ ಗ್ರಂಥಗಳಲ್ಲಿ ಹೇಳಿದ ಉತ್ತಮ ಅಂಶಗಳನ್ನು ಒಪ್ಪಿ, ಪ್ರಮಾದಗಳ ವಿರುದ್ಧ ಧ್ವನಿ ಎತ್ತಿ, ಬೇಕಾದಲ್ಲಿ ಪ್ರಮಾಣಗಳನ್ನು ಕೊಟ್ಟು, ತಪ್ಪಿದ್ದಲ್ಲಿ ಕಟುವಾದ ಟೀಕೆಯನ್ನು ಮಾಡಿ ಇನ್ನಿತರೆ ದಾರ್ಶನಿಕರಂತೆಯೇ ನಿಸಂಶಯವಾಗಿಯೇ ಹಿಂದೂ ಧರ್ಮದ ಉತ್ಥಾನಕ್ಕೆ ಕಾರಣರಾಗಿದ್ದಾರೆ. ಅವರ ಧೈಯವೇ 'ಸರ್ವೇ ಜನಾಃ, ಸುಖಿನೋ ಭವಂತು' ಎಂಬ ವೈಶ್ವಿಕ ಮಂತ್ರ. ಕಾಯಕ ನಿಷ್ಠೆಯೇ ಅವರು ಸನಾ ತನ ಧರ್ಮಕ್ಕೆ ನೀಡಿದ ಮಹದುಪದೇಶವಾಗಿದೆ. ವೇದಗಳ ಬಗ್ಗೆ ಬಸವಣ್ಣನವರ ವಚನಗಳನ್ನು ಮೂರು ರೀತಿಯಿಂದ ವಿಂಗಡಿಸಬಹುದಾಗಿದೆ. ಮೊದಲನೆಯ ವರ್ಗದ ವಚನ ಗಳಲ್ಲಿ ಬಸವಣ್ಣನವರು ದೇವರ ಸ್ವರೂಪವನ್ನು ಹೇಳುವಾಗ ಕೇವಲ ವೇದ ಪ್ರಮಾಣವನ್ನು ತೆಗೆದುಕೊಂಡದ್ದು.
ಎರಡನೆಯ ವರ್ಗದಲ್ಲಿ ಹಿಂಸಾವಿಷಯಕ್ಕೆ ವೇದವನ್ನು ಸಂಪೂರ್ಣವಾಗಿ ಖಂಡಿಸುವುದು. ಮೂರನೆಯ ವರ್ಗದ ವಚನಗಳಲ್ಲಿ ವೇದದ ಹೆಸರನ್ನು ತೆಗೆದು ಕೊಂಡು ವೇದಗಳಿಗೆ ಲಿಂಗದ ಸ್ವರೂಪವು ತಿಳಿದಿಲ್ಲವೆಂದು ಹೇಳುವುದು. ಬಸವಣ್ಣನವರು ಯಜ್ಞದ ನೆಪದಲ್ಲಿನ ಹಿಂಸೆ, ಕಾಲಾನಂತರದಲ್ಲಿ ಭೇದಕ್ಕೆ ಕಾರವಾದ ವರ್ಣಾಶ್ರಮ ಪದ್ಧತಿ, ಉಚ್ಚ-ನೀಚನೀತಿ, ಹಿಂಸಾಯುಕ್ತಗಳನ್ನು ವಿರೋಧಿಸಿ, ಸರಿಪಡಿಸುವ ಕೆಲಸವನ್ನು ಮಾಡಿದ್ದಾರೆ. ವೇದಾಗಮೋಪನಿಷತ್ತುಗಳಲ್ಲಿ ಉತ್ಕೃಷ್ಟ ವಾದ ಕೆಲವು ವಿಷಯಗಳನ್ನು ಆಯ್ದುಕೊಂಡು ಸುಂದರವಾದ ಮತ್ತು ನಿರಂತರ ಜೀವಂತವಾಗಿರುವ ಸಮಾಜವನ್ನು ಉದ್ದರಿಸಿದ್ದಾರೆ. ಲೋಕದೊಳಗೆ ಲಿಂಗದೇವನೇ ಶ್ರೇಷ್ಠನು. ಲಿಂಗದೇವರ ಹೊರತು ಅನ್ಯ ದೇವರುಂಟು ಎಂಬುದು ಹುಸಿಯಾದ ಮಾತು ಎಂಬ ಸಿದ್ಧಾಂತ ತಿಳಿಸಿದ್ದಾರೆ.
ಯುಗಪುರುಷ ಸ್ವಾಮೀ ಚಿನ್ಮಯಾನಂದರಿಗೆ 108: ಸ್ವಾಮಿ ಆದಿತ್ಯಾನಂದರ ವಿಶೇಷ ಲೇಖನ
ಆದ್ದರಿಂದ ಆಗಮಗಳಲ್ಲಿಯೂ ಕೂಡ 'ನ ವೀರಶೈವ ಮತ ಸದೃಶಮಸ್ತಿ ಜಗತ್ರಯೇ?'' ಎಂದು ಹೇಳಲಾಗಿದೆ. ಬಸವಣ್ಣನವರು ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಅವಿರತ ಪ್ರಯತ್ನ ಮಾಡಿದ್ದಾರೆ. ವೇದಾದಿಗಳು ಎತ್ತಿ ತೋರಿದ ಶಿವತತ್ವವನ್ನು ಜೀವಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದಾರೆ. ಹೀಗಾಗಿಯೇ ಅವರು ಭಕ್ತಿ ಭಂಡಾರಿ, ವಿಶ್ವಗುರು, ಜಗಜ್ಯೋತಿ, ಸನಾತನ ಸಾಂಸ್ಕೃತಿಕ ನಾಯಕ ಬಸವೇಶ್ವರರಾಗಲು ಸಾಧ್ಯವಾದದ್ದು. ಇದನ್ನು ಸಮಾಜವು ಅರಿತುಕೊಳ್ಳಬೇಕಿರುವುದು ಇಂದಿನ ತುರ್ತು ಸಂಗತಿ. ಅಲ್ಲದೇ ಸಮಾಜ ಒಡೆಯುವ ಸಂಗತಿಗಳಿಗೆ ಕಿವಿಗೊಡದೆ ಅಖಂಡ ಸನಾತನ ಸಮಾಜವನ್ನು ಕಾಪಿಟ್ಟು, ಮುಂದಿನ ಪೀಳಿಗೆಗೆ ಶ್ರದ್ದೆಯಿಂದ ವರ್ಗಾಯಿಸುವ ಗುರುತರ ಜವಾಬ್ದಾರಿಯೂ ನಮ್ಮ ಮೇಲಿದೆ.