Akshaya Tritiya 2024: ಅಪರಿಮಿತ ಸೌಭಾಗ್ಯ ನೀಡುವ ಅಕ್ಷಯ ತೃತೀಯಾ: ಆಚರಣೆಗಿದೆ ವಿಶಿಷ್ಟ ಹಿನ್ನಲೆ, ಮಹತ್ವ!

By Kannadaprabha NewsFirst Published May 10, 2024, 7:06 AM IST
Highlights

ಅಕ್ಷಯಾ ತೃತೀಯ ಮಂಗಳಕರ, ಆದರೆ ಬಹಳ ಜನ ಈ ದಿನವನ್ನು ಖರೀದಿಗೆ ಮಾತ್ರ ಮೀಸಲಿಟ್ಟಿರುವುದು ವಿಪರ್ಯಾಸ. ಇಂದು ದಾನ ಕೊಡುವುದೂ ತುಂಬಾ ಮುಖ್ಯ. ಇಂದು ಮಾಡುವ ಎಲ್ಲಾ ಕೆಲಸಗಳೂ ಶುಭದಾಯಕ.

ಗವಿಸಿದ್ದೇಶ್.ಕೆ ಕಲ್ಲುಡಿ, ಗಂಗಾವತಿ

ರತೀಯ ಹಬ್ಬ-ಹರಿದಿನಗಳ ಆಚರಣೆಯಲ್ಲಿ ಒಂದು ಭಾನಾವೀನ್ಯತೆಯನ್ನು ನಾವು ಗಬಹುದು ಎದ್ದು ಹಬ್ಬಗಳು ಧರ್ಮ-ಸಂಸ್ಕೃತಿಯ ಪರಿಧಿಯಲ್ಲಿಯೇ ಆಚರಣೆಗೊಳ್ಳು ಇವೆ. ಹಬ್ಬಗಳ ಸಡಗರ ಕೇವಲ ಉಂಡು ಉಡುವುದಕ್ಕೆ ಸೀಮಿತವಾಗಿ ರದೇ, ಪರಸ್ಪರರ ಅಂತರಂಗವನ್ನು ಬೆಸೆಯುವ ಮೂಲಕ, ಸಂಬಂಧ ಗಳನ್ನು ಗಟ್ಟಿಗೊಳಿಸುತ್ತವೆ. ಧರ್ಮ, ಸಂಸ್ಕೃತಿ ಶ್ರದ್ಧೆಯನ್ನು ನೂರ್ಮ ಡಿಗೊಳಿಸುತ್ತವೆ. ಈ ನಿಟ್ಟಿನಲ್ಲಿ ಅಕ್ಷಯ ತೃತೀಯಾ ಕೂಡ ವಿಶೇಷತೆ ಪಡೆದುಕೊಂಡಿದೆ. ವೈಶಾಖ ಮಾಸದ, ಶುಕ್ಲ ಪಕ್ಷದ ಮೂರನೇ ದಿನವನ್ನು ದೇಶಾದ್ಯಂತ 'ಅಕ್ಷಯ ತೃತೀಯ' ಎಂದು ಆಚರಿಸಲಾಗುತ್ತದೆ. 

ಶ್ರೀರಾಮನವಮಿಯ ನಂತರ ಬರುವ ಹಬ್ಬವಿದು. ಹಿಂದುಗಳ ಪಾಲಿಗೆ ಪುಣ್ಯದಿನ. ನಮ್ಮೆಲ್ಲಾ ಮನೋ ಕಾಮನೆಗಳು, ಶುಭ ನಿರೀಕ್ಷೆಗಳು ಈಡೇರುವ ದಿನ. ಅಕ್ಷಯವಾಗುವ ದಿನ ಎನ್ನುವ ವಿಶಿಷ್ಟ ಸಂದೇಶ ನೀಡುವ ಹಬ್ಬ ಇದಾಗಿದೆ. ಹಿಂದೆ ಮಹಾಭಾರತದ ಕಾಲ ದಲ್ಲೂ ಅಕ್ಷಯ ತೃತೀಯ ಆಚರಣೆಯ ಇತ್ತು ಎನ್ನಲಾಗಿದೆ. ಒಮ್ಮೆ ಶ್ರೀಕೃಷ್ಣ ಯುಧಿಷ್ಠಿರನಿಗೆ ಹೀಗೆ ನುಡಿದನಂತೆ- ಅಕ್ಷಯ ತೃತೀಯಾತಿಥಿಯಲ್ಲಿ ಮಾಡಿದ ದಾನ, ಹವನ ಕ್ಷಯವಾಗುವುದಿಲ್ಲ ಮತ್ತು ಇಂದು ಯಾವುದೇ ಪುಣ್ಯ ಕರ್ಮಗಳನ್ನು ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಾಗಾಗಿ ಇಂದಿಗೂ ಈ ಬಲವಾದ ನಂಬಿಕೆ ನಮ್ಮ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ. 

ಯುಗಪುರುಷ ಸ್ವಾಮೀ ಚಿನ್ಮಯಾನಂದರಿಗೆ 108: ಸ್ವಾಮಿ ಆದಿತ್ಯಾನಂದರ ವಿಶೇಷ ಲೇಖನ

ದಾನದಿಂದ ಪುಣ್ಯಪ್ರಾಪ್ತಿ: ಭವಿಷ್ಯತ್ ಪುರಾಣದಲ್ಲಿ ಅಕ್ಷಯ ತೃತೀಯಾದ ಕುರಿತು - 'ಈ ದಿನ ಎಷ್ಟೇ ದಾನ ಮಾಡಿದರೂ ನೀಡಿದ ಫಲ ಅಕ್ಷಯವಾಗುತ್ತದೆ' ಎಂದು ಹೇಳಲಾಗಿದೆ. ಹಾಗಾಗಿ ಇಂದು ಅನೇಕರು ತಮ್ಮ ಜನ್ಮ ನಕ್ಷತ್ರಕ್ಕನು ಗುಣವಾಗಿ ದಾನ-ಧರ್ಮಗಳನ್ನು ಮಾಡುತ್ತಾರೆ. ಪುಣ್ಯ ಸ್ಥಳಗಳಿಗೆಭೇಟಿ ನೀಡಿ ಕೃತಾರ್ಥರಾಗುತ್ತಾರೆ. ಹಾಗೂ ಅದೇಷ್ಟೋ ಜನರಲ್ಲಿ ಇಂದು ಚಿನ್ನ ಖರೀದಿಸುವುದರಿಂದ, ಖರೀದಿಸಿದ ಚಿನ್ನ ಅಕ್ಷಯವಾಗು ತ್ತದೆ ಎನ್ನುವ ನಂಬಿಕೆಯಿರುವುದರಿಂದ ಚಿನ್ನವನ್ನು ಖರೀದಿಸಿ ತೃಪ್ತಿ ಪಡುತ್ತಾರೆ. ಆದರೆ, ಅಕ್ಷಯ ತೃತೀಯ ಇಷ್ಟು ಮಾತ್ರವಾ ಎಂದರೆ ಖಂಡಿತ ಇಲ್ಲ. ಯಾವುದೇ ಹಬ್ಬಗಳೇ ಆಗಲಿ, ಅಲ್ಲಿ ಧ್ಯಾನ, ದಾನ, ಪುಣ್ಯಸ್ನಾನ, ಪೂಜಾದಿ ಧರ್ಮಕಾರ್ಯಗಳು ಇರಬೇಕು.

ಅಕ್ಷಯ ತೃತೀಯಾ ದಿನ ವಿಷ್ಣು ಸಂಪ್ರೀತನಾಗಲು ಜಪ, ತಪ ಹೋಮಾದಿ ಮಾಡಬೇಕು. ಪಿತೃತರ್ಪಣ ನೀಡ ಬೇಕು. ಉತ್ತಮ ಗ್ರಂಥಗಳ ಪಾರಾ ಯಣ, ಕೈಲಾದಷ್ಟು ದಾನವನ್ನು ಮಾಡಿ ದರೆ ಅದು ಅಕ್ಷಯವಾಗುತ್ತದೆ ಎಂದು ಹೇಳಲಾಗಿದೆ. ಅಕ್ಷಯ ಎನ್ನುವ ಪದದ ಅರ್ಥವೇ ನಾಶವಿಲ್ಲದ್ದು, ಸಮೃದ್ಧಿ ಎಂದು. ಬೃಹತ್ ಪರಾಶರ ಸಂಹಿತೆಯಲ್ಲಿ 'ದಾನಮೇಕಂಕಲೌಯುಗೇ' ಎನ್ನಲಾ ಗಿದೆ. ಅಂದರೆ, ಯಾರಿಗೆ ಆಹಾರ, ಬಟ್ಟೆ ಹಾಗೂ ಔಷಧಿಗಳ ಅವಶ್ಯಕತೆ ಇದೆಯೋ ಅಂತವರಿಗೆ ದಾನ ಮಾಡುವುದರಿಂದ ಚಿತ್ತಶುದ್ದಿಯಾಗಿ, ಭಗವಂತ ಸಂಪ್ರೀತನಾಗಿ, ಸರ್ವವಿಧ ಪುಣ್ಯಪ್ರಾಪ್ತಿಯಾಗುತ್ತದೆ. ಅಕ್ಷಯಃ ಮೋಕ್ಷಸ್ಯ ಕಾರಣಂ ಎಂದಿರುವುದರಿಂದ ಇಂದು ಈ ಎಲ್ಲಾ ಪುಣ್ಯಕರ್ಮಗಳನ್ನು ಮಾಡುವುದರಿಂದ ಮೋಕ್ಷವೂ ಪ್ರಾಪ್ತಿಯಾಗು ತ್ತದೆ ಎಂದು ನುಡಿಯಲಾಗಿದೆ.

ಆಚರಣೆಗಿದೆ ವಿಶಿಷ್ಟ ಹಿನ್ನಲೆ: ಇಂದು ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ. ಹಾಗಾಗಿ ಇಂದು ಅನೇಕರು ಪರಶುರಾಮ ಜಯಂತಿಯನ್ನು ಆಚರಿಸುತ್ತಾರೆ. ಪವಿತ್ರಳಾದ ಗಂಗೆ ಭೂಮಿಗೆ ಬಂದ ದಿನ, ಭಗವಾನ್ ಸೂರ್ಯ ದೇವರು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆಯನ್ನು ನೀಡಿದ ದಿನ, ಬಸವೇಶ್ವರರು ಹುಟ್ಟಿದ ದಿನ, ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ ದಿನ, ಮಹಾಭಾರತ ಯುದ್ಧ ಅಂತ್ಯಗೊಂಡ ದಿನ, ದ್ವಾಪರಯುಗ ಅಂತ್ಯವಾದ ದಿನ, ಆದಿ ಶಂಕರರು ಕನಕಧಾರಾ ಸ್ತೋತ್ರ ರಚಿಸಿದ ದಿನ, ಕೃಷ್ಣ-ಸುಧಾಮರು ಭೇಟಿಯಾಗಿ ಅವರಿಬ್ಬರ ಸ್ನೇಹಬಂಧ ಗಟ್ಟಿಯಾದ ದಿನ, 

ಯಕ್ಷರಾಜನಾದ ಕುಬೇರನಿಗೆ ಅಮೂಲ್ಯ ನಿಧಿ ದೊರೆತ ದಿನ ಹಾಗೂ ಬ್ರಹ್ಮದೇವನ ಮಗ ಅಕ್ಷಯ ಕುಮಾರ ಹುಟ್ಟಿದ ದಿನವೂ ಈ ಪವಿತ್ರ ಅಕ್ಷಯ ತೃತೀಯಾ ದಿನ ದಂದೇ ಎಂದು ಹೇಳಲಾಗಿದೆ. ಅಕ್ಷಯ ತೃತೀಯ ಜೈನರ ಪುಣ್ಯದಿನವೂ ಹೌದು. ಜೈನಧರ್ಮ ದಲ್ಲಿ ಈ ಹಬ್ಬವನ್ನು ಅವರ ಮೊದಲ ತೀರ್ಥಂಕರ ಆದಿನಾಥರ ಸ್ಮರ ಣಾರ್ಥವಾಗಿ ಆಚರಿಸಲಾಗುತ್ತದೆ. ಹಾಗೂ ಈ ದಿನವನ್ನು ಜೈನರು ವಾರ್ಸಿ ತಪ ಎಂಬ ಹೆಸರಿನಿಂದ ಕರೆಯುತ್ತಾರೆ. ಇಂದು ಮೊದಲ ತೀರ್ಥಂಕರನಾದ ಋಷಭದೇವರು ತಮ್ಮ ಹದಿಮೂರು ದಿನಗಳ ಕಠಿಣ ಉಪವಾಸವನ್ನು ಇಂದು ಕಬ್ಬಿನ ರಸವನ್ನು ಸೇವಿಸುವುದರ ಮೂಲಕ ಮುಕ್ತಾಯಗೊಳಿಸಿದರು ಎಂದು ಹೇಳಲಾಗಿದೆ.

ಇಂಡಸ್ಟ್ರಿಯಲ್ಲಿ ಟ್ಯಾಲೆಂಟ್‌ ಇದ್ದರೆ ಮಾತ್ರ ಅವಕಾಶ ಸಿಗುವುದು: ನಟ ರಿಷಿ ಹೀಗೆ ಹೇಳಿದ್ಯಾಕೆ?

ಪುರಾಣಗಳಲ್ಲಿ ಅಕ್ಷಯ ತೃತೀಯ: ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಸದಾಚಾರಿಯಾಗಿದ್ದ ಅವನು ಒಮ್ಮೆ ಅಕ್ಷಯ ತೃತೀಯವ್ರತದ ಕುರಿತು ಅರಿತು, ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿ, ಭಗವಂತನನ್ನು ಪೂಜಿಸಿ, ವಡವೆ, ವಸ್ತ್ರ, ಆಹಾರ, ಧಾನ್ಯಗಳನ್ನು ಸತ್ಪಾತ್ರರಿಗೆ ದಾನ ಮಾಡಿದ. ತಾನು ಯಾವುದೇ ಪರಿ ಸ್ಥಿತಿಯಲ್ಲಿದ್ದರೂ, ಪ್ರತಿವರ್ಷವೂ ಆತ ವ್ರತವನ್ನು ಮಾತ್ರ ಬಿಡುತ್ತಿರ ಲಿಲ್ಲ. ಸತ್ ಕರ್ಮಫಲದಿಂದ ಆ ವೈಶ್ಯ ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದ. ಆಗಲೂ ವ್ರತಾಚರಣೆಯನ್ನು ಮಾತ್ರ ಅವನು ಬಿಡಲಿಲ್ಲ. ಇದರಿಂದ ಸಂಪ್ರೀತನಾದ ಇಂದ್ರದೇವ ಸ್ವತಃ ಬ್ರಾಹ್ಮಣನ ವೇಷವನ್ನು ಧರಿಸಿಕೊಂಡು ರಾಜನ ದಾನರೂಪೀಯಜ್ಞದಲ್ಲಿ ಪಾಲ್ಗೊ ಳ್ಳುತ್ತಿದ್ದ. ರಾಜನಿಗೆ ದಾನ ನೀಡುವಾಗ ಯಾವುದೇ ಅಹಂಕಾರವಿಲ್ಲದಿ ರುವುದು ಮತ್ತು ತನ್ನ ಶ್ರದ್ಧಾಭಕ್ತಿಯ ಕುರಿತು ಅಹಂಕಾರ ಇಲ್ಲದಿರು ವುದನ್ನು ಇಂದ್ರದೇವ ಗಮನಿಸಿದ. ಹೀಗೆ ಈ ವ್ರತದ ಬಲದಿಂದ ರಾಜ ಉತ್ತರೋತ್ತರ ಅಭಿವೃದ್ಧಿ ಹೊಂದಿ, ಪ್ರಸಿದ್ದನಾಗಿ, ಸದ್ಧತಿ ಹೊಂದಿದ ಎಂದು ಪುರಾಣದಲ್ಲಿ ಅಕ್ಷಯ ತೃತೀಯಾದ ಮಹತ್ವದ ಕುರಿತು ಹೇಳಲಾಗಿದೆ.

click me!