chanakya Niti : ಹೀಗೆ ಆಹಾರ ಸೇವಿಸಿದರೆ ಕಾಯಿಲೆ ಖಚಿತ ಅಂತಾರೆ ಚಾಣಕ್ಯ!

By Suvarna News  |  First Published Feb 27, 2024, 11:08 AM IST

ಚಾಣಕ್ಯನ ನೀತಿ ಪ್ರಕಾರ ಆಹಾರ ಸೇವಿಸುವಾಗ, ಸೇವಿಸುವ ರೀತಿಯಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದು ಮುಖ್ಯ. ಅವನ ಪ್ರಕಾರ ಇದೇ ಹಲವು ಕಾಯಿಲೆಗಳಿಗೆ ಮೂಲ.


ಚಾಣಕ್ಯ ಇಂಥಾ ವಿಷಯ ಮಾತಾಡಿಲ್ಲ ಅಂತ ಇಲ್ಲ. ರಾಜನಾದವನು ಗುರುತು ಪರಿಚಯವಿಲ್ಲದ ಸ್ತ್ರೀಯ ಜೊತೆಗೆ ಮಲಗುವುದು ಅಪಾಯಕಾರಿ ಎಂದಿರುವ (ಅವರು ವಿಷಕನ್ಯೆಯರಾಗಿರಬಹುದು) ಹಾಗೆಯೇ, ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವ ಬಗ್ಗೆಯೂ ಮಾತಾಡಿದ್ದಾನೆ. ಕೆಲವು ಆಹಾರ ಸೇವಿಸಿದರೆ, ಕೆಲವು ಆಹಾರ ಸೇವಿಸದಿದ್ದರೆ, ಕೆಲವನ್ನು ಅತಿಯಾಗಿ ಸೇವಿಸಿದರೆ, ಆಹಾರ ಪದ್ಧತಿ ಸರಿಯಾಗಿಲ್ಲದಿದ್ದರೆ  ಕಾಯಿಲೆ ಬೀಳುತ್ತೀರಿ ಎಂದು ಎಚ್ಚರಿಸಿದ್ದಾನೆ. ಅವನು ನೀಡಿರುವ ಟಿಪ್ಸ್ ಏನು ಅಂತ ನೋಡೋಣ. ಏನು ಮಾಡಿದರೆ ವ್ಯಕ್ತಿ ಕಾಯಿಲೆ ಬೀಳುತ್ತಾನೆ? ಏನು ಮಾಡಬಾರದು? 

ತಪ್ಪು 1: ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿರುವುದು.

Tap to resize

Latest Videos

ನಮ್ಮ ಊಟವನ್ನು ಸರಿಯಾದ ಸಮಯಕ್ಕೆ ಸೇವಿಸುವುದು ತುಂಬಾ ಮುಖ್ಯ. ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವ ಜನರಿದ್ದಾರೆ, ಇತರರು ಬಹುತೇಕ ಪ್ರತಿದಿನ ರಾತ್ರಿಯ ಊಟವನ್ನು ಬಿಟ್ಟುಬಿಡುತ್ತಾರೆ. ಸಮಯ ಸಿಕ್ಕಾಗ ಮತ್ತು ಸಮಯಕ್ಕೆ ತಕ್ಕಂತೆ ತಿನ್ನುವವರೂ ಇದ್ದಾರೆ. ಇವುಗಳು ನಿಜವಾಗಿಯೂ ದೇಹಕ್ಕೆ ಹಾನಿ ಮಾಡುವ ವಿಷಯಗಳು. ನಿಯಮಿತ ಆಹಾರದ ದಿನಚರಿಯನ್ನು ಕಾಪಾಡಿಕೊಳ್ಳುವುದು ಮತ್ತು ಅದಕ್ಕೆ ಅಂಟಿಕೊಳ್ಳುವುದು ಅತ್ಯಗತ್ಯ

ತಪ್ಪು 2: ನಡುನಡುವೆ ತಿಂಡಿ

ಎರಡು ಊಟಗಳ ನಡುವೆ ಬಾಯಿಯಲ್ಲಿ ಏನಾದರೂ ಕುರುಕುತ್ತಿರುವುದು, ಚಿಪ್ಸ್ ಅಥವಾ ಬಿಸ್ಕತ್ತುಗಳನ್ನು ಸೇವಿಸುವುದು ಸರಿಯಲ್ಲ. ಅಂತಹ ಅಭ್ಯಾಸವು ನಮ್ಮ ಹಸಿವನ್ನು ಹಾಳುಮಾಡುತ್ತದೆ, ಅದು ಜೀರ್ಣಾಗ್ನಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗೆ ಮಾಡುವುದರಿಂದ ಹಿಂದಿನ ಊಟವೂ ಸರಿಯಾಗಿ ಜೀರ್ಣವಾಗುವುದಿಲ್ಲ.

ತಪ್ಪು 3: ತಿನ್ನುವ ಮೊದಲು ಕೈ ತೊಳೆಯದಿರುವುದು

ತಿನ್ನುವ ಮೊದಲು ಕೈ ಮತ್ತು ನಮ್ಮ ಮುಖವನ್ನು ತೊಳೆಯದಿರುವುದು ಸೋಂಕುಗಳು ಮತ್ತು ರೋಗಗಳಿಗೆ ಕಾರಣವಾಗಬಹುದು. ಇದು ಯಾವುದೇ ಆರೋಗ್ಯವಂತ ವ್ಯಕ್ತಿಯು ಬಯಸುವಂಥದಲ್ಲ. ನಾವು ನಮ್ಮ ಕೈಗಳನ್ನು ಎಷ್ಟೇ ಸ್ವಚ್ಛವಾಗಿರಿಸಿಕೊಳ್ಳುತ್ತೇವೆ ಎಂದು ಭಾವಿಸಿದರೂ, ಊಟದ ಮೊದಲು ಅವುಗಳನ್ನು ತೊಳೆಯಬೇಕು. ಇದು ಜೀರ್ಣಕಾರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ತಪ್ಪು 4: ಮನಸ್ಸಿಡದೆ ತಿನ್ನುವುದು

ತಿನ್ನುವ ಆಹಾರದಲ್ಲಿ ಮನಸ್ಸಿಡಬೇಕು. ನಮ್ಮ ಜಾಮ್-ಪ್ಯಾಕ್ಡ್ ವೇಳಾಪಟ್ಟಿಗಳ ನಡುವೆ, ಟಿವಿ ಮೊಬೈಲ್ ನೋಡುತ್ತಾ ಅಥವಾ ಕೆಲಸ ಮಾಡುತ್ತಾ ಆಹಾರ ತಿನ್ನವುದು ತುಂಬಾ ಕೆಟ್ಟ ಅಭ್ಯಾಸವಾಗಿದೆ. ಇದು ನಮಗೆ ಅಗತ್ಯಕ್ಕಿಂತ ಹೆಚ್ಚು ತಿನ್ನುವಂತೆ ಮಾಡುತ್ತದೆ.

ತಪ್ಪು 5: ಸರಿಯಾಗಿ ಕುಳಿತುಕೊಳ್ಳದೆ ಆಹಾರ ಸೇವನೆ

ನಮ್ಮಲ್ಲಿ ಬಹಳಷ್ಟು ಜನರಿಗೆ ಡೈನಿಂಗ್ ಟೇಬಲ್‌ನಲ್ಲಿ ಅಥವಾ ನೆಲದ ಮೇಲೆ ಕುಳಿತು ತಿನ್ನದಿರುವ ಕೆಟ್ಟ ಅಭ್ಯಾಸವಿದೆ. ಬದಲಿಗೆ, ಮಂಚದ ಮೇಲೆ ಮಲಗಿ ಮತ್ತು ಹಾಸಿಗೆಯ ಮೇಲೆ ತಿನ್ನುತ್ತಾರೆ. ಇದು ಚಾಣಕ್ಯನ ಪ್ರಕಾರ ಅನಾರೋಗ್ಯಕರ. ಏಕೆಂದರೆ ಇದು ಹೊಟ್ಟೆಗೆ ಹೋಗುವ ಆಹಾರದ ಹಾದಿಗೆ ಅಡಚಣೆ ಮಾಡುತ್ತದೆ. ಇದು ಅಜೀರ್ಣಕ್ಕೆ ಕಾರಣವಾಗುತ್ತದೆ. ಇದು ದೇಹದಲ್ಲಿ ವಿಷಕ್ಕೆ ಕಾರಣವಾಗುತ್ತದೆ.

ತಪ್ಪು 6: ಹಳೆಯ, ಹಳಸಿದ, ತಂಪು, ಆಹಾರ ತಿನ್ನುವುದು

ಇದು ನಮ್ಮಲ್ಲಿ ಅನೇಕರಿಗೆ ಇರುವ ಮತ್ತೊಂದು ಕೆಟ್ಟ ಅಭ್ಯಾಸ. ಸೋಮಾರಿತನದಿಂದಲೋ ಅಥವಾ ಅಜ್ಞಾನದಿಂದಲೋ ನಮ್ಮಲ್ಲಿ ಹಲವರು ಹಳಸಿದ ಆಹಾರ ಅಥವಾ ಫ್ರಿಡ್ಜ್‌ನಲ್ಲಿ ದೀರ್ಘಕಾಲ ಇಟ್ಟ ಆಹಾರವನ್ನು ತಿನ್ನುತ್ತಾರೆ. ಇದನ್ನು ತಾಮಸಿಕ ಆಹಾರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ದೇಹಕ್ಕೆ ಅತ್ಯಂತ ಹಾನಿಕಾರಕವಾಗಿದೆ

ತಪ್ಪು 7: ತುಂಬಾ ವೇಗವಾಗಿ ತಿನ್ನುವುದು

ತುಂಬಾ ವೇಗವಾಗಿ ತಿಂದರೆ ಅದು ಬೇಕಾದಷ್ಟು ನುರಿಸಿರುವುದಿಲ್ಲ. ಅಗಿಯುವುದಕ್ಕಿಂತ ವೇಗವಾಗಿ ನುಂಗುತ್ತಿದ್ದರೆ ಆ ಆಹಾರವನ್ನು ಒಡೆಯುವಲ್ಲಿ ಜೀರ್ಣಾಂಗ ವ್ಯವಸ್ಥೆಯು ವ್ಯಾಪ್ತಿಗೆ ಮೀರಿ ಕೆಲಸ ಮಾಡಬೇಕಾಗುತ್ತದೆ. ಇದು ಅಸಮರ್ಪಕ ಜೀರ್ಣಕ್ರಿಯೆಗೆ ಕಾರಣವಾಗಬಹುದು. ಪರಿಣಾಮವಾಗಿ ಅಜೀರ್ಣದ ಜೊತೆಗೆ ವಿಷ ಶೇಖರಣೆ ಸೇರಿದಂತೆ ಇತರ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುತ್ತವೆ.

ಶ್ರೀಮಂತರಲ್ಲಿ ಈ ರಹಸ್ಯ ಗುಣಗಳಿರ್ತವೆ, ಆದ್ದರಿಂದಲೇ ಅವರು ಶ್ರೀಮಂತರಾಗಿರ್ತಾರೆ ಅಂದ ಚಾಣಕ್ಯ!

ತಪ್ಪು 8: ಅತಿಯಾಗಿ ತಿನ್ನುವುದು

ದೇಹಕ್ಕಾಗಿ ತಿನ್ನು, ದುರಾಸೆಗಾಗಿ ಅಲ್ಲ ಎಂಬುದು ನೀತಿ. ಆಹಾರ ಸೇವನೆ ಎಲ್ಲಿ ನಿಲ್ಲಿಸಬೇಕೆಂದು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಇದು ಜೀರ್ಣಕಾರಿ ಅಂಗಗಳ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಬಹುದು, ಅಂದರೆ ಜೀರ್ಣಕ್ರಿಯೆಯ ಸಂಪೂರ್ಣ ಪ್ರಕ್ರಿಯೆ ಕೆಡಬಹುದು.

ತಪ್ಪು 9: ಊಟದ ನಡುವೆ ನೀರು ಕುಡಿಯುವುದು

ಊಟ ಮಾಡುವಾಗ ಹೆಚ್ಚು ನೀರು ಕುಡಿಯಬಾರದು ಎಂದು ಆಯುರ್ವೇದ ಹೇಳುತ್ತದೆ. ಇದು ಜೀರ್ಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಊಟದ ಸಮಯದಲ್ಲಿ ನೀರಿನ ಸೇವನೆಯನ್ನು ಕನಿಷ್ಠಕ್ಕೆ ಇರಿಸಿ. ಊಟಕ್ಕೆ ಅರ್ಧ ಘಂಟೆಯ ಮೊದಲು ನೀರನ್ನು ಸೇವಿಸಿ, ಅದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಆಹಾರ ಸೇವಿಸಿದ ನಂತರ ನೀರು ಕುಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ತಪ್ಪು 10: ಸಾಕಷ್ಟು ಕೊಬ್ಬನ್ನು ಸೇವಿಸದಿರುವುದು

ನಮ್ಮಲ್ಲಿ ಬಹಳಷ್ಟು ಜನರು ನಮ್ಮ ತೂಕದ ಬಗ್ಗೆ ಜಾಗೃತರಾಗಿರುತ್ತಾರೆ ಮತ್ತು ಪೌಷ್ಟಿಕಾಂಶದ ಈ ಪ್ರಮುಖ ಅಂಶವನ್ನು ಬಿಟ್ಟುಬಿಡಬಹುದು. ಇದು ಕೆಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ತುಪ್ಪ ನಿಜವಾಗಿಯೂ ದೇಹಕ್ಕೆ ಹಾಗೂ ಮೇಧಾಶಕ್ತಿಗೆ ತುಂಬಾ ಒಳ್ಳೆಯದು. 

Chanakya Niti: ಬುದ್ದಿವಂತ ಜನರು ಯಾವತ್ತೂ ಈ ಕೆಲಸಗಳನ್ನು ಮಾಡಬಾರದಂತೆ !
 

click me!