ಶ್ರೀರಾಮನ ಪ್ರತಿಷ್ಠಾಪನೆ, ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಡಿಕೇರಿ ಕಾಂಗ್ರೆಸ್ ಶಾಸಕ

By Suvarna News  |  First Published Jan 22, 2024, 8:02 PM IST

ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಹೋಮ, ಹವನಗಳ ಮೂಲಕ ವಿವಿಧ ಪೂಜಾ ಕೈಂಕರ್ಯಗಳು ನಡೆದವು.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.22): ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಹೋಮ, ಹವನಗಳ ಮೂಲಕ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಡಿಕೇರಿಯ ಆಂಜನೇಯ ದೇವಸ್ಥಾನ, ಮುನೇಶ್ವರ ದೇವಸ್ಥಾನ, ಕೋದಂಡರಾಮ ದೇವಸ್ಥಾನ, ಕುಶಾಲನಗರದ ಗಣಪತಿ ಮತ್ತು ಆಂಜನೇಯ ದೇವಾಲಯ, ಸೋಮವಾರಪೇಟೆಯ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ಹೋಮಗಳು ನಡೆದವು.

Latest Videos

undefined

ಕುಶಾಲನಗರದ ಆಂಜನೇಯ ದೇವಾಲಯದಲ್ಲಿ ರಾಮತಾರಕ ಹೋಮ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಬಳಿಕ ನಗರದ ಅಯ್ಯಪ್ಪ ದೇವಾಲಯ ಸಮೀಪ ಕಾವೇರಿ ನದಿಗೆ ಮಹಾಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಗಣಪತಿ ದೇವಾಲಯದ ವತಿಯಿಂದ ಸಿದ್ದಗೊಳಿಸಿದ್ದ 40 ಸಾವಿರ ಲಾಡುಗಳನ್ನು ತಾಲ್ಲೂಕಿನ ಎಲ್ಲಾ ದೇವಾಲಯಗಳಿಗೆ ವಿತರಣೆ ಮಾಡಿ ಪೂಜೆ ಸಲ್ಲಿಸಿ ಬಂದ ಭಕ್ತರಿಗೆ ಪ್ರಸಾದವಾಗಿ ಸಿಹಿ ವಿತರಣೆ ಮಾಡಲಾಯಿತು.

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಬೆಂಗಳೂರಿನಲ್ಲಿ ಸಂಭ್ರಮ

ಮಡಿಕೇರಿಯ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಹೊರಟ ರಾಮ ಭಕ್ತರು ಬಳಿಕ ಆಂಜನೇಯ ದೇವಾಲಯಕ್ಕೆ ಬಂದು ಸೇರಿದರು. ಮೆರಣಿಗೆ ಉದ್ಧಕ್ಕೂ ಶ್ರೀರಾಮ ಘೋಷಣೆಗಳನ್ನು ಕೂಗುತ್ತಾ ರಾಮನ ಗೀತೆಗಳಲ್ಲಿ ಹಾಡುತ್ತಾ ಮೆರವಣಿಗೆ ತೆರಳಿದರು. ಹೀಗೆ ವಿವಿಧ ದೇವಾಲಯಗಳಿಂದ ಮೆರವಣಿಗೆ ಮೂಲಕ ಆಂಜನೇಯ ದೇವಾಲಯಕ್ಕೆ ಬಂಧ ಭಕ್ತರಿಗೆ ಮಜ್ಜಿಗೆ ಪಾನಕಗಳನ್ನು ವಿತರಣೆ ಮಾಡಲಾಯಿತು. ಅಲ್ಲದೆ ಲಾಡು ಜೆಲೇಬಿ ಸೇರಿದಂತೆ ವಿವಿಧ ಸಹಿಗಳನ್ನು ವಿತರಣೆ ಮಾಡಲಾಯಿತು. ನಂತರ ಆಂಜನೇಯ ದೇವಸ್ಥಾನದಲ್ಲಿ ರಾಮ ತಾರಕ ಹೋಮ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಆಂಜನೇಯ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸಿದ್ದರು.

ದೇವಾಲಯದ ಮುಂಭಾಗದಲ್ಲಿ ರಾಮಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೊತೆಗೆ ಬೃಹತ್ ಎಲ್ಇಡಿ ಪರದೆ ಅಳವಡಿಸಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಪರದೆಯಲ್ಲಿ ಸುವರ್ಣ ನ್ಯೂಸ್ ನ ಲೈವ್ ವೀಕ್ಷಣೆಯನ್ನು ಭಕ್ತರು ನೋಡಿ ಸಂಭ್ರಮಿಸಿದರು. ಇದೇ ವೇಳೆ ಎರಡು ಬಾರಿ ಕರ ಸೇವೆಗೆ ತೆರಳಿದ್ದ ಕರ ಸೇವಕರನ್ನು ಗುರುತ್ತಿಸಿ ಆಹ್ವಾನಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ ಕುಶಾಲನಗರ, ಮಡಿಕೇರಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಮಧ್ಯಾಹ್ನದ ವೇಳೆ ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಕೂಡ ನಡೆಯಿತು.

ಮಸೀದಿಯಲ್ಲಿ ಶ್ರೀರಾಮನನ್ನಿಟ್ಟು ಪೂಜಿಸಿದ ಮುಸ್ಲಿಮರು!

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಡಿಕೇರಿ ಕಾಂಗ್ರೆಸ್ ಶಾಸಕ ಮಂತರ್ ಗೌಡ ಅವರು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಮಮಂದಿರವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸುತ್ತಿರುವುದಕ್ಕೆ ಕಾಂಗ್ರೆಸ್ ತಾವು ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಹಿಂದೆ ಸರಿದಿತ್ತು. ಆದರೆ ಕಾಂಗ್ರೆಸ್ ಶಾಸಕ ಮಂತರ್ ಗೌಡ ಅವರು ಸೋಮವಾರಪೇಟೆ ಪಟ್ಟಣದಲ್ಲಿ ಇರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮಂತರ್ ಗೌಡ ಅವರು ವಿಶೇಷ ಪೂಜೆ ಸಲ್ಲಿಸಿ, ನಮಿಸಿ ಬೇಡಿದ್ದು ಅಚ್ಚರಿ ಎನಿಸಿದೆ.

ಜೊತೆಗೆ ಕಾಂಗ್ರೆಸ್ ನಲ್ಲಿ ದ್ವಂದ್ವ ನಿಲುವುಗಳಿವೆ ಎನ್ನುವುದನ್ನು ಸಾಬೀತು ಪಡಿಸಿದೆ. ಒಟ್ಟಿನಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ವೇಳೆ ಕೊಡಗು ಜಿಲ್ಲೆ ಎಲ್ಲೆಡೆ ಸಂಭ್ರಮ, ಸಡಗರ ಹಾಗೂ ಭಕ್ತಿ ಭಾವದಿಂದ ವಿವಿಧ ಪೂಜೆ ಪುನಸ್ಕಾರಗಳು ನಡೆದಿವೆ.

click me!