ಗೋವಿನಲ್ಲಿ ಮುಕ್ಕೋಟಿ ದೇವರಿದ್ದಾರೆ ಎಂದು ನಂಬುತ್ತದೆ ಹಿಂದೂ ಧರ್ಮ. ಮನೆಯಿಂದ ಹೊರಡುವಾಗ ಗೋಸೇವೆ ಮಾಡಿದರೆ ಹೋದ ಕೆಲಸದಲ್ಲಿ ಸಫಲತೆ ದೊರೆಯುವುದು.
ಜ್ಯೋತಿಷ್ಯ ಮತ್ತು ಸನಾತನ ಧರ್ಮದಲ್ಲಿ ಗೋಸೇವೆಗೆ ವಿಶೇಷ ಮಹತ್ವವಿದೆ. ಹಸುವನ್ನು ಪವಿತ್ರ ಜೀವಿ ಎಂದು ಪರಿಗಣಿಸಲಾಗುತ್ತದೆ. ಇದರೊಳಗೆ 33 ಕೋಟಿ ದೇವತೆಗಳು ನೆಲೆಸಿದ್ದಾರೆ. ಮನೆಯಿಂದ ಹೊರಡುವಾಗ ತಾಯಿ ಹಸುವಿಗೆ ರೊಟ್ಟಿ ತಿನ್ನಿಸಿದರೆ ಪ್ರತಿಯೊಂದು ಕೆಲಸವೂ ಪೂರ್ಣಗೊಳ್ಳುತ್ತದೆ, ಬಿಕ್ಕಟ್ಟುಗಳು ಮಾಯವಾಗುತ್ತವೆ. ಮನೆಯಲ್ಲಿ ಯಾವತ್ತೂ ಹಣದ ಕೊರತೆ ಇರುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು. ಮನೆಯಿಂದ ಹೊರಡುವಾಗ ತಾಯಿ ಹಸುವಿನ ದರ್ಶನ ಮಾಡಿ, ಎಲ್ಲಾ ಕೆಲಸಗಳು ಆಗುತ್ತವೆ.
ಗೋವು ಮನುಷ್ಯನಿಗೆ ಎರಡನೇ ತಾಯಿ. ಆಕೆಯ ಹಾಲನ್ನು ಕುಡಿದು ಮನುಷ್ಯ ಬೆಳೆಯುತ್ತಾನೆ. ಗೋವಿನ ಶಕ್ತಿಯನ್ನು ತನ್ನ ದುಡಿಮೆಗೆ ಬಳಸಿಕೊಳ್ಳುತ್ತಾನೆ. ಗೋವಿನ ಮೂತ್ರ ಔಷಧಿ ತಯಾರಿಕೆಗೆ ಬಳಕೆಯಾಗುತ್ತದೆ. ಸಗಣಿ ಮನೆಯ ಅಂಗಳ ಬಳಿಯಲು, ಬೆರಣಿಗಾಗಿ ಉಪಯೋಗಕ್ಕೆ ಬರುತ್ತದೆ. ಹಸುವಿನ ಹಾಲಿನಿಂದ ತುಪ್ಪ, ಬೆಣ್ಣೆ, ಪನ್ನೀರ್, ಚೀಸ್ ಸೇರಿದಂತೆ ಸಾಕಷ್ಟು ಆಹಾರ ಉತ್ಪನ್ನಗಳನ್ನು ತಯಾರಿಸುತ್ತೇವೆ. ಒಟ್ಟಿನಲ್ಲಿ ಹಸುಗಳು ಕೇಳಿದ್ದೆಲ್ಲ ಕೊಡುವ ಮನೆಯ ಕಾಮಧೇನುವೇ ಸರಿ.
ಕೇಳಿದ್ದೆಲ್ಲ ಕೊಡುವ ಕಾಮಧೇನು
ತಾಯಿ ಗೋವು ಮನುಷ್ಯನ ಎಲ್ಲಾ ವಿಪತ್ತುಗಳನ್ನು ದೂರ ಮಾಡುವ ಶಕ್ತಿ ಹೊಂದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹಸುವಿನ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಎತ್ತರವನ್ನು ತಲುಪಬಹುದು.
Shukra Gochar 2022: ವರ್ಷಾಂತ್ಯಕ್ಕೆ ಮುನ್ನ ಎರಡು ಬಾರಿ ಶುಕ್ರ ಗೋಚಾರ, ಈ ರಾಶಿಗಳಿಗೆ ಲಾಭ
ಗೋಸೇವೆಯನ್ನು ಮಾಡುವ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತಾನೆ. ಗ್ರಾಮೀಣ ಪ್ರದೇಶಗಳಲ್ಲಿ ಗೋ ಸೇವಕರು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗದಿರುವುದು ಕಂಡು ಬರುತ್ತದೆ. ಹಸುವಿನ ದೇಹವು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಬೆಳಿಗ್ಗೆ ಕಚೇರಿ ಅಥವಾ ಯಾವುದೇ ಕೆಲಸಕ್ಕೆ ಹೊರಡುವ ಮೊದಲು ತಾಯಿ ಹಸುವಿನ ದರ್ಶನವನ್ನು ಮಾಡಬೇಕು. ಅದರಲ್ಲೂ ಗುರುವಾರದಂದು ಹಸು ಕಂಡರೆ ಅದಕ್ಕೆ ಮೇವು, ಬ್ರೆಡ್ ಅಥವಾ ಇತರ ವಸ್ತುಗಳನ್ನು ತಿನಿಸಬೇಕು. ಅಷ್ಟೇ ಅಲ್ಲ, ರಸ್ತೆಯಲ್ಲಿ ಹಸು ಅನಾರೋಗ್ಯ ಅಥವಾ ಅಪಘಾತಕ್ಕೀಡಾದರೆ ಅದನ್ನು ಅಲ್ಲಿ ಹಾಗೆಯೇ ಬಿಡಬಾರದು. ಬದಲಿಗೆ ಬದುಕಿದ್ದರೆ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದಲ್ಲಿ ಸರಿಯಾಗಿ ಅಂತ್ಯಕ್ರಿಯೆ ಮಾಡಬೇಕು. ಪ್ರತಿ ನಿತ್ಯ ಹಸುವಿನ ದರ್ಶನ ಮಾಡುವುದರಿಂದ, ಗೋಸೇವಾ ಕೈಂಕರ್ಯದಿಂದ , ವ್ಯಕ್ತಿಯ ಜೀವನದಲ್ಲಿ ಅದ್ಭುತ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಆಹಾರ ನೀಡಿ
ತಾಯಿ ಹಸು ಮನೆ ಬಾಗಿಲಿಗೆ ಬಂದರೆ ಬರಿಗೈಯಲ್ಲಿ ಅದನ್ನು ಕಳುಹಿಸಬೇಡಿ. ಅದಕ್ಕೆ ಮೇವು, ಆಹಾರ ನೀಡಿ. ಪ್ರತಿ ಶುಭ ಕಾರ್ಯದಲ್ಲಿ ತಾಯಿ ಹಸುವನ್ನು ಸೇರಿಸಬೇಕು ಎಂಬುದನ್ನು ಸಹ ನೆನಪಿನಲ್ಲಿಡಬೇಕು. ತಾಯಿ ಹಸುವನ್ನು ಎಂದಿಗೂ ಮುಟ್ಟಬೇಡಿ, ತಾಯಿ ಹಸು ಅನ್ನಪೂರ್ಣ ದೇವಿ, ಕಾಮಧೇನು, ಇಷ್ಟಾರ್ಥ ಈಡೇರಿಸುವವಳು. ತಾಯಿ ಹಸುವಿನ ಬೆನ್ನಿನಲ್ಲಿ ಬೆಳೆದ ಗೂನು ಇರುತ್ತದೆ. ಅದರಲ್ಲಿ ಸೂರ್ಯ-ಕೇತು ವಾಹಿನಿ ಇದೆ. ಪ್ರತಿದಿನ ಬೆಳಿಗ್ಗೆ ತಾಯಿ ಹಸುವಿನ ಬೆನ್ನಿನ ಮೇಲೆ ಕೈಗಳನ್ನು ಉಜ್ಜುವುದರಿಂದ ರೋಗಗಳು ಕಡಿಮೆಯಾಗುತ್ತವೆ. ಗೋವನ್ನು ಧರ್ಮದಿಂದ ಪೂಜಿಸುವವನು ಶತ್ರು ದೋಷಗಳಿಂದಲೂ ಮುಕ್ತನಾಗುತ್ತಾನೆ ಎನ್ನುತ್ತದೆ ಜ್ಯೋತಿಷ್ಯ.
New Year 2023 : ಈ ರಾಶಿಯವರಿಗೆ ಸಿಗಲಿದೆ ಹೊಸ ಉದ್ಯೋಗ
ಈ ದಿನ ಹಸುವಿನ ಸೇವೆ ತಪ್ಪಿಸಬೇಡಿ
ಶುಕ್ರವಾರದಂದು ಕಾಮಧೇನುವನ್ನು ಪೂಜಿಸುವುದರಿಂದ ಮತ್ತು ಅಮಾವಾಸ್ಯೆಯಂದು ಹಸುಗಳಿಗೆ ಆಹಾರವನ್ನು ನೀಡುವುದರಿಂದ, ಬುಧವಾರ ಹಸಿರು ಮೇವು ನೀಡುವುದರಿಂದ, ಅಕ್ಷಯ ತೃತೀಯ ಸೇರಿದಂತೆ ಪ್ರಮುಖ ಧಾರ್ಮಿಕ ಹಬ್ಬಗಳ ದಿನಗಳಂದು ಹಸುವಿನ ಸೇವೆ ಮಾಡುವುದರಿಂದ ನಿಮಗೆ ಶಾಂತಿ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ. ಗೋ ಪೂಜೆಯನ್ನು ಮಾಡುವುದರಿಂದ ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಬಹುದು ಮತ್ತು ಎಲ್ಲಾ ಕೆಟ್ಟ ಕರ್ಮಗಳನ್ನು ತೊಡೆದು ಹಾಕಬಹುದು.