ಒಂದಲ್ಲ ಒಂದು ಕಾರಣಕ್ಕೆ ಮದುವೆ ಮುರಿದು ಬಿದ್ದಾಗ ನೋವಾಗೋದು ಸಹಜ. ಗ್ರಹಗತಿ ಸರಿಯಿಲ್ಲದೆ ಹೋದಾಗ ನಾನಾ ಸಮಸ್ಯೆ ಕಾಡುತ್ತದೆ. ಇವುಗಳಿಂದ ನೆಮ್ಮದಿ ಕಾಣಬೇಕು ಅಂದ್ರೆ ನೀವು ಈ ಉಪಾಯ ಮಾಡಿ.
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಮಾತಿದೆ. ಮದುವೆ ಮಾಡೋದು ಹೇಳಿದಷ್ಟು ಸುಲಭವಲ್ಲ. ಮದುವೆ ಸಮಯದಲ್ಲಿ ಸಂಬಂಧ ಹೊಂದಿಸುವ ವೇಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವರ್ಷ ಉರುಳುತ್ತಿದ್ದರೂ ಕಂಕಣ ಭಾಗ್ಯ ಕೂಡಿ ಬರೋದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಮದುವೆ ಮುರಿದು ಬೀಳುತ್ತದೆ. ಇದು ಮನೆಯವರ ಬೇಸರಕ್ಕೆ, ಆತಂಕಕ್ಕೆ ಕಾರಣವಾಗುತ್ತದೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಆತುರದಲ್ಲಿ ಪಾಲಕರಿರ್ತಾರೆ. ಆದ್ರೆ ಸಣ್ಣಪುಟ್ಟ ವಿಚಾರಕ್ಕೆ ಮದುವೆ ಮುರಿದು ಬಿದ್ದಾಗ ಅಥವಾ ಯಾವುದೇ ಸಂಬಂಧ ಹೊಂದಿಕೆ ಆಗದೆ ಇದ್ದಾಗ ಕುಟುಂಬಸ್ಥರಲ್ಲಿ ಟೆನ್ಷನ್ ಹೆಚ್ಚಾಗುತ್ತದೆ.
ಕೆಲವೊಬ್ಬರಿಗೆ ಮದುವೆ (Marriage) ಯಾದ್ರೂ ಸಂಬಂಧ ತುಂಬಾ ದಿನ ಬಾಳೋಲ್ಲ. ಕೆಲವೇ ದಿನಗಳಲ್ಲಿ ಸಮಸ್ಯೆ ಶುರುವಾಗುತ್ತದೆ. ದಂಪತಿ ದೂರವಾಗ್ತಾರೆ. ಇನ್ನು ಎಲ್ಲವೂ ಸರಿಯಿದ್ರೂ ಮಕ್ಕಳ ಭಾಗ್ಯ ಕೆಲವರಿಗೆ ಲಭ್ಯವಾಗೋದಿಲ್ಲ. ಮದುವೆ ಭಾಗ್ಯ ಕೂಡಿ ಬರದೆ ಇರಲು ಅಥವಾ ಕುಟುಂಬದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲು ನಿಮ್ಮ ಜಾತಕವೂ ಕಾರಣವಾಗಿರಬಹುದು. ಗ್ರಹ (Planet) ಗಳ ಸ್ಥಾನ, ನೀವು ಮಾಡುವ ಕೆಲಸ, ಜಾತಕ (Horoscope) ದಲ್ಲಿನ ದೋಷ ಎಲ್ಲವೂ ವಿವಾಹದ ದಾರಿಯನ್ನು ಮುಚ್ಚುವ ಸಾಧ್ಯತೆ ಇರುತ್ತದೆ.
undefined
ಈ ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಬಾರದೆನ್ನುತ್ತಾರೆ ಆಚಾರ್ಯ ಚಾಣಕ್ಯ
ಈ ಸಮಯದಲ್ಲಿ ನೀವು ಹೆಚ್ಚಿನ ಹಣ ಖರ್ಚು ಮಾಡದೆ ಮನೆಯಲ್ಲೇ ಸುಲಭವಾಗಿ ಕೆಲ ಉಪಾಯಗಳನ್ನು ಮಾಡಿ. ಇದು ಮದುವೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಯನ್ನು ತೊಡೆದುಹಾಕುತ್ತದೆ. ಮನೆಯಲ್ಲಿರುವ, ಮಹಿಳೆಯರು ಬಳಸುವ ಬಳೆಯಿಂದಲೇ ಮದುವೆ ಸಮಸ್ಯೆ, ಕೌಟುಂಬಿಕ ಸಮಸ್ಯೆ ಹಾಗೂ ಮಕ್ಕಳ ಭಾಗ್ಯ ಪಡೆಯೋದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ. ನಾಲ್ಕು ಬಳೆಯಿಂದ ಮದುವೆ ಸಮಸ್ಯೆ ಪರಿಹಾರ : ಮದುವೆ ಪದೇ ಪದೇ ಮುರಿದು ಬೀಳುತ್ತಿದ್ದರೆ ಅಥವಾ ಬೇರೆ ಕಾರಣಗಳಿಂದ ಮದುವೆ ವಿಳಂಬವಾಗುತ್ತಿದ್ದರೆ ನಾಲ್ಕು ಬಳೆಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮಾತಾ ಪಾರ್ವತಿಗೆ ಅರ್ಪಿಸಿ. ನಂತರ ಆ ಬಳೆಗಳನ್ನು ಮದುವೆಗೆ ಅಡ್ಡಿಯಾದ ಹುಡುಗಿ ಅಥವಾ ಹುಡುಗನ ಕೋಣೆಯ ಕಪಾಟಿನಲ್ಲಿ ಇರಿಸಿ.
ಕುಟುಂಬದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ಹೀಗೆ ಮಾಡಿ : ಮದುವೆ ಆದ್ಮೇಲೂ ಸಮಸ್ಯೆ ಬಗೆಹರಿಯೋದಿಲ್ಲ. ದಾಂಪತ್ಯ ಜೀವನದಲ್ಲಿ ಸಾಕಷ್ಟು ಟೆನ್ಷನ್ ಇರುತ್ತದೆ. ಪತಿ-ಪತ್ನಿಯ ನಡುವೆ ಆಗಾಗ ಜಗಳವಾಗ್ತಿದ್ದರೆ, ಮನಸ್ತಾಪವಿದ್ದರೆ, ಅತ್ತೆ-ಮಾವನ ಜೊತೆ ಹೊಂದಾಣಿಕೆ ಆಗ್ತಿಲ್ಲ ಎಂದಾದ್ರೆ ಬಳೆಯಿಂದಲೇ ನೀವು ಪರಿಹಾರ ಕಂಡುಕೊಳ್ಳಬಹುದು. ಬಳೆಗಳ ಮೇಲೆ ಅರಿಶಿನ ಮತ್ತು ಅಕ್ಷತೆಯನ್ನು ಹಾಕಿ. ನಂತರ ಆ ಬಳೆಗಳನ್ನು ನಿಮ್ಮ ನಿಮ್ಮ ಮಲಗುವ ಕೋಣೆ ಬೀರುವಿನಲ್ಲಿ ಇಡಿ. ಇದು ಒತ್ತಡವನ್ನು (Stress) ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇಯರ್ ಎಂಡ್ ಪಾರ್ಟಿ ಸಮಯದಲ್ಲಿ ಎಚ್ಚರ: ಬ್ರಹ್ಮಾಂಡದ ಸಂದೇಶದಲ್ಲಿ ಇದೂ ಒಂದು
ಮಗುವನ್ನು ಪಡೆಯಲು ಬಳೆ ಉಪಾಯ : ಗಾಜಿನ ಬಳೆಗಳನ್ನು ಸೌಭಾಗ್ಯದ ಸಂಕೇತ ಎನ್ನಲಾಗುತ್ತದೆ. ಈ ಬಳೆ ನಿಮ್ಮ ಮಡಿಲು ತುಂಬಿಸಲು ನೆರವಾಗುತ್ತದೆ. ಮಹಿಳೆಯರು ತಾಯಿಯಾಗ್ಬೇಕೆಂಬ ಹಂಬಲ ಹೊಂದಿರುತ್ತಾರೆ. ಈಗಿನ ದಿನಗಳಲ್ಲಿ ಮಗು ಪಡೆಯೋದು ಕಷ್ಟವಾಗ್ತಿದೆ. ಜಾತಕ ದೋಷದಿಂದ ಈ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಮೊದಲು ನೀವು ಹಳದಿ ಬಟ್ಟೆಯಲ್ಲಿ ಹಸಿರು ಬಳೆಗಳನ್ನು ಸುತ್ತಿ. ನಂತರ ಆ ಬಟ್ಟೆಯ ಬಂಡಲ್ ಅನ್ನು ಭಗವಂತ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಮುಂದೆ ಇರಿಸಿ. ಮಗುವಿಗಾಗಿ ಪ್ರಾರ್ಥಿಸಿ. ಮರುದಿನ ನೀವು ಬಟ್ಟೆಯಲ್ಲಿ ಸುತ್ತಿದ ಬಳೆಗಳನ್ನು ಬಾಳೆ ಗಿಡದ ಕೆಳಗೆ ಇಡಿ. ನಿಮ್ಮ ಜಾತಕದ ದೋಷ ಕಡಿಮೆ ಆಗಿ, ನಿಮಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುವ ಅವಕಾಶ ಇದ್ರಿಂದ ಹೆಚ್ಚಾಗುತ್ತದೆ.