ಈ ರಾಶಿಯ ಹುಡುಗಿಯರಿಗೆ ವಿಪರೀತ ಕೋಪ....ನಿಮ್ಮದ್ಯಾವ ರಾಶಿ?

By Suvarna News  |  First Published Sep 8, 2021, 5:23 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ನಕ್ಷತ್ರ ಗ್ರಹ ಗತಿಗಳ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು, ಭವಿಷ್ಯದ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಇಲ್ಲಿ ಕೆಲವು ರಾಶಿಯ ಹುಡುಗಿಯರಿಗೆ ವಿಪರೀತ ಕೋಪ ಎಂದು ಹೇಳಲಾಗುತ್ತದೆ. ಆ ರಾಶಿಯ ಹುಡುಗಿಯರ ಬಗ್ಗೆ ತಿಳಿಯೋಣ...


ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಸ್ವಭಾವ ಗುಣಲಕ್ಷಣಗಳನ್ನು ತಿಳಿಯಲು ರಾಶಿ, ನಕ್ಷತ್ರ, ಗ್ರಹ ಗತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಾಗುತ್ತದೆ. ಅವುಗಳ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ, ಭವಿಷ್ಯದ ಬಗ್ಗೆ ಅನೇಕ ವಿಚಾರಗಳನ್ನು ಅರಿಯಬಹುದು. 

ರಾಶಿ ಚಕ್ರಗಳು ಹನ್ನೆರಡು. ಪ್ರತಿ ರಾಶಿಯವರ ಸ್ವಭಾವಗಳು ಬೇರೆ ಬೇರೆ. ಒಂದೇ ದಿನ ಜನಿಸಿದರೂ ರಾಶಿ ಭಿನ್ನವಾಗಿರುತ್ತವೆ. ಕೆಲವರದು ಅಗ್ನಿ ತತ್ವ ರಾಶಿಯಾದರೆ, ಇನ್ನು ಕೆಲವು ರಾಶಿಯವರದ್ದು ವಾಯು ಮತ್ತು ಜಲ ತತ್ವ ರಾಶಿ ಆಗಿರುತ್ತದೆ. ಹಾಗಾಗಿ ಆಯಾ ತತ್ವಗಳಿಗೆ ತಕ್ಕಂತೆ ಗುಣಸ್ವಭಾವಗಳು ಆಧರಿಸಿರುತ್ತವೆ. ಅಷ್ಟೇ ಅಲ್ಲದೆ ಪ್ರತಿ ರಾಶಿಯ ಗುಣಗಳು ಆಯಾ ರಾಶಿಯ ಅಧಿಪತಿ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಗ್ರಹ, ರಾಶಿ, ನಕ್ಷತ್ರಗಳ ಪ್ರಭಾವದಿಂದ ವ್ಯಕ್ತಿಯಿಂದ ವ್ಯಕ್ತಿಗೆ ರೂಪ, ಸ್ವಭಾವ, ಗುಣ, ವ್ಯಕ್ತಿತ್ವಗಳಲ್ಲಿ ಅನೇಕ ವ್ಯತ್ಯಾಸಗಳಿರುತ್ತವೆ.

ಇದನ್ನು ಓದಿ: ನಿಮ್ಮ ರಾಶಿಗೆ ಅನುಗುಣವಾಗಿ ಗುರು ವಂದನೆ ಸಲ್ಲಿಸಿ, ಬದುಕಿಕೊಂದು ದಾರಿ ಕಾಣಿಸುತ್ತೆ!

ಪ್ರತಿ ರಾಶಿಗೂ ಆಯಾ ರಾಶಿಯ ಅಧಿಪತಿ ಗ್ರಹಗಳು ಇರುತ್ತವೆ. ಅಧಿಪತಿ ಗ್ರಹಗಳ ಪ್ರಭಾವವು ರಾಶಿಯ ಮೇಲೆ ಆಗಿರುತ್ತದೆ. ಹಾಗಾಗಿ ಕೆಲವು ರಾಶಿಯವರು ಸೂಕ್ಷ್ಮ ಸ್ವಭಾವದವರಾದರೆ ಮತ್ತೆ ಕೆಲವರದು ಒರಟು ಸ್ವಭಾವವಾಗಿರುತ್ತದೆ. ಈ ನಾಲ್ಕು ರಾಶಿಯ ಹುಡುಗಿಯರಿಗೆ ವಿಪರೀತ ಕೋಪವಂತೆ. ಆ ನಾಲ್ಕು ರಾಶಿಗಳಾದ ಮೇಷ, ವೃಷಭ, ಸಿಂಹ ಮತ್ತು ವೃಶ್ಚಿಕ ರಾಶಿಗಳ ಬಗ್ಗೆ ತಿಳಿಯೋಣ....

ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮೇಷ ರಾಶಿಯ ಹುಡುಗಿಯರಿಗೆ ಸಿಟ್ಟು ಹೆಚ್ಚಾಗಿರುತ್ತದೆ. ಹುಟ್ಟಿನಿಂದ ಈ ರಾಶಿಯ ಹುಡುಗಿಯರು ಸಾಹಸ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಧೈರ್ಯವಂತರಾಗಿರುತ್ತಾರೆ. ಈ ರಾಶಿಯ ಹುಡುಗಿಯರು ಯಾವುದೇ ರೀತಿಯ ಕೆಲಸವನ್ನು ಮಾಡಬೇಕೆಂದು ಛಲ ತೊಟ್ಟರೆ ಅದನ್ನು ಮುಗಿಸುವವರೆಗೆ ನೆಮ್ಮದಿಯಿಂದ ಕೂರುವುದಿಲ್ಲ. ಅದೇ ರೀತಿ ಇವರಿಗೆ ಸಿಟ್ಟು ವಿಪರೀತವಾಗಿರುತ್ತದೆ. ಸಿಟ್ಟಿನಲ್ಲಿದ್ದರೆ ಇತರರ ಮಾತನ್ನು ಕೇಳುವ ಸಂಯಮವನ್ನು ಇವರು ತೋರುವುದಿಲ್ಲ. ಹಾಗಾಗಿ ಈ ರಾಶಿಯವರ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಲು ಸಿಟ್ಟು ಪ್ರಮುಖ ಕಾರಣವಾಗುತ್ತದೆ. ಅನೇಕ ಬಾರಿ ಉತ್ತಮ ಅವಕಾಶಗಳನ್ನು ಸಹ ಸಿಟ್ಟಿನ ಕಾರಣದಿಂದ ಕಳೆದುಕೊಳ್ಳುತ್ತಾರೆ.

ಇದನ್ನು ಓದಿ: ಗ್ರಹಗಳ ಅಶುಭ ಪ್ರಭಾವದಿಂದ ಪಾರಾಗಲು ಧರಿಸಿ ಈ ರುದ್ರಾಕ್ಷಿ ...!!!

ವೃಷಭ ರಾಶಿ
ವೃಷಭ ರಾಶಿಯ ಹೆಚ್ಚಿನ ಹುಡುಗಿಯರು ಹಠವಾದಿಗಳು ಮತ್ತು ಸಿಟ್ಟಿನ ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿಯವರು ಯಾರನ್ನಾದರೂ ಒಂದು ಬಾರಿ ಮನಸ್ಸಿನಿಂದ ತೆಗೆದುಹಾಕಿದರೆ ಮತ್ತೆ ಅವರೊಂದಿಗೆ ಸಂಬಂಧವನ್ನು ಬೆಳೆಸುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಈ ರಾಶಿಯ ಹುಡುಗಿಯರು ಹೆಚ್ಚಿನ ಸಫಲತೆಯನ್ನು ಪಡೆಯುತ್ತಾರೆ. ಹಾಗಂತ ಸಿಟ್ಟನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಉದ್ಯೋಗದಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರ ಸಿಟ್ಟಿನ ಸ್ವಭಾವ ಇವರ ಅಸಫಲತೆಗೆ ಕಾರಣವಾಗುತ್ತದೆ. 

Tap to resize

Latest Videos


ಸಿಂಹ ರಾಶಿ
ಸಿಂಹ ರಾಶಿಯ ಹುಡುಗಿಯರು ಹೆಚ್ಚು ಪ್ರಾಮಾಣಿಕರು ಮತ್ತು ಜವಾಬ್ದಾರಿಯ ಬಗ್ಗೆ ಹೆಚ್ಚಿನ ಅರಿವು ಇವರಿಗಿರುತ್ತದೆ. ಇವರು ಯಶಸ್ಸನ್ನು ಪಡೆಯಲು ಛಲದಿಂದ ಮುನ್ನುಗ್ಗುತ್ತಾರೆ. ಸದಾ ಆತ್ಮವಿಶ್ವಾಸದಿಂದ ಇರುವ ಈ ರಾಶಿಯ ಹುಡುಗಿಯರು ಇತರರ ಮೇಲೆ ಅವಲಂಬಿತರಾಗಿರಲು ಬಯಸುವುದಿಲ್ಲ. ಸಿಟ್ಟಿನ ಸ್ವಭಾವವನ್ನು ಹೊಂದಿರುವ ಇವರು ಯಾವುದೇ ಕೆಲಸವನ್ನಾದರೂ ಚೆನ್ನಾಗಿ ನಿಭಾಯಿಸುತ್ತಾರೆ. ಆದರೆ, ಸಿಟ್ಟಿನ ಕಾರಣದಿಂದ ಕೆಲವು ಬಾರಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.

ಇದನ್ನು ಓದಿ: ಹುಡುಗಿಯರ ಹಸ್ತದಲ್ಲಿ ಈ ರೇಖೆಗಳಿದ್ದರೆ ಯಶಸ್ಸು ಖಚಿತ..!

ವೃಶ್ಚಿಕ ರಾಶಿ 
ಈ ರಾಶಿಯ ಹುಡುಗಿಯರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಹಾಗಂತ ಸಿಟ್ಟು ಬಂದರೆ ಯೋಚಿಸುವ ಮತ್ತು ಅರ್ಥೈಸಿಕೊಳ್ಳುವ ಕ್ಷಮತೆಯನ್ನು ಕಳೆದುಕೊಳ್ಳುತ್ತಾರೆ. ಈ ರಾಶಿಯ ಹುಡುಗಿಯರು ತಮ್ಮ ಜೀವನದಲ್ಲಿ ಎಲ್ಲ ಸುಖ ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ. ಸಿಟ್ಟಿನ ಕಾರಣದಿಂದ ಹಲವಾರು ಬಾರಿ ಸಂಬಂಧಗಳನ್ನು ಮತ್ತು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. 

click me!