Latest Videos

ಮೊದಲ ದಿನವೇ 13000 ಭಕ್ತರಿಂದ ಅಮರನಾಥ ಹಿಮಲಿಂಗದ ದರ್ಶನ

By Kannadaprabha NewsFirst Published Jun 30, 2024, 12:45 PM IST
Highlights

ಪವಿತ್ರ ಅಮರನಾಥ ಯಾತ್ರೆ ಶನಿವಾರ ಆರಂಭವಾಗಿದ್ದು, ಮೊದಲ ದಿನವೇ 13,736 ಜನರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಈ ಸಲ ಉಗ್ರರ ಉಪಟಳದ ನಡುವೆಯೂ ಭಾರಿ ಬಿಗಿ ಭದ್ರತೆ ನಡುವೆ ಯಾತ್ರೆ ಆರಂಭಗೊಂಡಿದೆ.

ಶ್ರೀನಗರ/ಜಮ್ಮು: ಪವಿತ್ರ ಅಮರನಾಥ ಯಾತ್ರೆ ಶನಿವಾರ ಆರಂಭವಾಗಿದ್ದು, ಮೊದಲ ದಿನವೇ 13,736 ಜನರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಈ ಸಲ ಉಗ್ರರ ಉಪಟಳದ ನಡುವೆಯೂ ಭಾರಿ ಬಿಗಿ ಭದ್ರತೆ ನಡುವೆ ಯಾತ್ರೆ ಆರಂಭಗೊಂಡಿದ್ದು, ಜಮ್ಮು ಕಾಶ್ಮೀರ ಪೊಲೀಸರು, ಐಟಿಬಿಪಿ ಸಿಬ್ಬಂದಿ, ಸೇನೆ ಸೇರಿದಂತೆ ವಿವಿಧ ಭದ್ರತಾ ಪಡೆಗಳ ಸಾವಿರಾರು ಸಿಬ್ಬಂದಿ ಅಮರನಾಥ ಯಾತ್ರೆಗೆ ತೆರಳುತ್ತಿರುವ ಭಕ್ತರಿಗೆ ಸರ್ಪಗಾವಲಾಗಿ ನಿಂತಿದ್ದಾರೆ. ಜೂ.29ರಿಂದ ಅಂದರೆ ನಿನ್ನೆಯಿಂದ ಆರಂಭಗೊಂಡಿರುವ ಯಾತ್ರೆಗೆ ಇದುವರೆಗೂ 3.50ಲಕ್ಷಕ್ಕೂ ಹೆಚ್ಚಿನ ಜನರು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್‌ 19ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.

ಎರಡೂ ಕ್ಯಾಂಪ್‌ಗಳಿಂದ ತೆರಳಿದ 6484 ಭಕ್ತರು

ಪವಿತ್ರ ಅಮರನಾಥ ಯಾತ್ರೆ ಶನಿವಾರ ಆರಂಭವಾಗಿದ್ದು, ಎರಡು ತಂಡಗಳಲ್ಲಿ 4603 ಹಾಗೂ 1881 ಭಕ್ತರು ಹಿಮಲಿಂಗದ ದರ್ಶನಕ್ಕೆ ತೆರಳಿದರು. 52 ದಿನಗಳ ಈ ಯಾತ್ರೆಯಲ್ಲಿ ಎರಡು ಪ್ರತ್ಯೇಕ ಮಾರ್ಗಗಳಿವೆ. ಒಂದು 48 ಕಿಲೋಮೀಟರ್‌ ದೂರದ ಪಹಾಲ್ಗಾಂ ಮಾರ್ಗವಾಗಿದೆ. ಮತ್ತೊಂದು 14 ಕಿಲೋಮೀಟರ್‌ ದೂರದ ಕಡಿದಾದ ಬಾಲ್ಟಾಲ್‌ ಮಾರ್ಗದಲ್ಲಿ ಅಮರನಾಥ ಗುಹೆಗೆ ತೆರಳಬಹುದಾಗಿದೆ. ಈ ಸಲ ಉಗ್ರರ ಉಪಟಳದ ನಡುವೆಯೂ ಭಾರಿ ಬಿಗಿ ಭದ್ರತೆ ನಡುವೆ ಯಾತ್ರೆ ಆರಂಭಗೊಂಡಿದ್ದು, ಜಮ್ಮು ಕಾಶ್ಮೀರ ಪೊಲೀಸರು, ಐಟಿಬಿಪಿ ಸಿಬ್ಬಂದಿ, ಸೇನೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಸಾವಿರಾರು ಸಿಬ್ಬಂದಿ ಯಾತ್ರಿಗಳಿಗೆ ಸರ್ಪಗಾವಲಾಗಿ ನಿಂತಿದ್ದಾರೆ. 

ಅಮರನಾಥ ನೋಡಲು ಅಮೆರಿಕಾದಿಂದ ಬಂದವರಿಗೆ ಪ್ರಧಾನಿ ಶ್ಲಾಘನೆ

ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ: ಕದನ ವಿರಾಮ ಉಲ್ಲಂಘನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಕೃಷ್ಣ ಘಾಟಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೇನೆ ಶನಿವಾರ ಕದನ ವಿರಾಮ ಉಲ್ಲಂಘಿಸಿದೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನವು ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಈ ಪ್ರಚೋದನೆಗೆ ಪ್ರತಿಯಾಗಿ ಭಾರತೀಯ ಸೇನೆಯು ಪ್ರಬಲವಾಗಿ ಪ್ರತಿದಾಳಿ ನಡೆಸಿತು ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಸಾವು ನೋವಿನ ವರದಿ ಬಂದಿಲ್ಲ. ಇತ್ತೀಚೆಗೆ ಪಾಕಿಸ್ತಾನಿ ಉಗ್ರರು ಜಮ್ಮು ಕಾಶ್ಮೀರದ ಹಲವು ಕಡೆ ಏಕಾಏಕಿ ಉಗ್ರ ದಾಳಿಗಳನ್ನ ನಡೆಸಿ ಆತಂಕ ಉಂಟು ಮಾಡಿದ್ದರು.

ನನಗೆ ಪೆಟ್ಟಾಗಿದೆ, ಪ್ಲೀಸ್ ಗಾಬರಿ ಆಗಬೇಡಿ; ಮಗನ ಕೊನೆಯ ಮಾತು ನೆನೆದು ಭಾವುಕರಾದ ತಂದೆ

click me!