Ram Navami 2023: ಶ್ರೀರಾಮನಿಗೊಬ್ಬಳು ಅಕ್ಕ ಇದ್ದಳು.. ಅವಳಿಗಾಗಿ ದೇವಾಲಯವೂ ಇದೆ!

By Suvarna News  |  First Published Mar 24, 2023, 1:46 PM IST

ಶ್ರೀ ರಾಮನಿಗೆ ಒಬ್ಬಳು ಅನುರೂಪ ಸುಂದರಿ ಅಕ್ಕ ಇದ್ದಳು. ಆಕೆ ವಿದ್ಯಾವಂತೆಯೂ ಆಗಿದ್ದಳು. ಅವಳಿಗಾಗಿ ಭಾರತದಲ್ಲಿ ದೇವಾಲಯವೂ ಇದ್ದು, ಅಲ್ಲಿ ದಸರಾ ಆಚರಣೆ ಜೋರಾಗಿರುತ್ತದೆ. ಶ್ರೀರಾಮನ ಅಕ್ಕನ ಬಗ್ಗೆ ನಿಮಗೆಷ್ಟು ಗೊತ್ತು?


ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಒಂದು ಮಹಾಕಾವ್ಯವಾಗಿದೆ. ಹಲವಾರು ವರ್ಷಗಳಿಂದ, ಈ ಮಹಾಕಾವ್ಯಕ್ಕೆ ಸಂಬಂಧಿಸಿದ ಕಥೆಗಳನ್ನು ನಾವು ಕೇಳಿದ್ದೇವೆ. ಶಿಶುವಿನಿಂದ ಹಿಡಿದು ವಯಸ್ಕರಾಗುವವರೆಗೆ, ಮಹಾಕಾವ್ಯಕ್ಕೆ ಸಂಬಂಧಿಸಿದ ಕತೆಗಳು ಆಸಕ್ತಿಯನ್ನು ಕೆರಳಿಸುತ್ತಲೇ ಇರುತ್ತವೆ. ಮುಖ್ಯವಾದ ಕತೆ ಎಲ್ಲರಿಗೂ ತಿಳಿದಿರುತ್ತದೆಯಾದರೂ ಇದರಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳು ಹೆಚ್ಚಿನವರಿಗೆ ಪರಿಚಿತವಲ್ಲ. ರಾಮಾಯಣ, ಮಹಾಭಾರತಗಳಲ್ಲಿ ಬಗೆದಷ್ಟೂ ಮುಗಿಯದ ಕತೆಗಳು, ಉಪಕತೆಗಳು ಇವೆ. ಇವುಗಳಲ್ಲೊಂದು ರಾಮನ ಸಹೋದರಿ ಶಾಂತದೇವಿಯ ಕತೆ.

ರಾಮನಿಗೆ ಅಕ್ಕ ಇರುವುದೇ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ, ರಾಮಾಯಣ ಮಹಾಕಾವ್ಯದಲ್ಲಿ ಅವಳ ಉಲ್ಲೇಖವಿದೆ. ರಾಮನ ಅಕ್ಕ ಯಾರು? ಅವಳ ಕತೆಯೇನು? ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ!

Tap to resize

Latest Videos

ರಾಮನ ಸಹೋದರಿ
ದೇವಿ ಶಾಂತಾ ಮಹಾರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗಳು. ಮಹಾರಾಜ ದಶರಥನಿಗೆ ಕೈಕೇಯಿ ಮತ್ತು ಸುಮಿತ್ರಾ ಎಂಬ ಇಬ್ಬರು ರಾಣಿಯರಿದ್ದರು. ಎಲ್ಲರಿಗೂ ತಿಳಿದಿರುವಂತೆ ಅವರಿಗೆ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂಬ ನಾಲ್ಕು ಮಕ್ಕಳಿದ್ದರು.

ಆದರೆ ಒಬ್ಬ ಮಗಳು ಕೂಡ ಇದ್ದಳು ಎಂಬುದು ಸಾಮಾನ್ಯವಾಗಿ ಎಲ್ಲಿಯೂ ಉಲ್ಲೇಖವಾಗುವುದಿಲ್ಲ. ರಾಮನ ಅಕ್ಕ ಶಾಂತಾ ತುಂಬಾ ಭರವಸೆಯ ಹುಡುಗಿ, ಪ್ರತಿ ಕ್ಷೇತ್ರದಲ್ಲೂ ಪರಿಪೂರ್ಣಳು, ಪ್ರತಿಯೊಂದು ಕ್ಷೇತ್ರದಲ್ಲೂ ವಿಶಿಷ್ಟವಾದ ಜ್ಞಾನವನ್ನು ಹೊಂದಿದ್ದಳು.

Hindu New Year: ಮುಂದಿನ 12 ತಿಂಗಳು 3 ರಾಶಿಗಳಿಗೆ ಕಠಿಣ, ಗುರು- ಶನಿಯ ಕಾಟ ವಿಪರೀತ

ಪುರಾತನ ನಂಬಿಕೆಗಳ ಪ್ರಕಾರ, ದೇವಿ ಶಾಂತಾಳನ್ನು ರಾಜ ದಶರಥನು ಅಂಗದೇಶದ ರಾಜ ರೋಮಪಾದನಿಗೆ ದತ್ತು ಕೊಟ್ಟಿದ್ದನು. 

ಒಮ್ಮೆ ಅಂಗದೇಶದ ರಾಜ ರೋಮಪಾದ ತನ್ನ ಹೆಂಡತಿಯೊಂದಿಗೆ ರಾಜ ದಶರಥನನ್ನು ಭೇಟಿಯಾಗಲು ಅಯೋಧ್ಯೆಗೆ ಬಂದಾಗ, ರಾಜ ರೋಮಪಾದರಿಗೆ ಮಕ್ಕಳಿಲ್ಲ ಎಂದು ತಿಳಿದುಕೊಂಡನು. ಮಕ್ಕಳಿಲ್ಲದ ನೋವನ್ನು ಅರಿತು ರಾಜ ದಶರಥನು ತನ್ನ ಹಿರಿಯ ಮಗಳಾದ ಶಾಂತಳನ್ನು ದಂಪತಿಗೆ ನೀಡಿದನು. ಹೀಗೆ ಶಾಂತಾ ಅಂಗ ದೇಶದ ರಾಜಕುಮಾರಿಯಾದಳು.

ದೇವಿ ಶಾಂತಾ ಮದುವೆಯಾದಾಗ..
ಶಾಂತಾ ವೇದಗಳು, ಕಲೆ ಮತ್ತು ಕರಕುಶಲತೆಯಲ್ಲಿ ಅನನ್ಯ ಜ್ಞಾನ ಹೊಂದಿದ್ದಳು. ಅವಳು ತುಂಬಾ ಸುಂದರವಾಗಿದ್ದಳು. ಒಂದು ಮಳೆಗಾಲದ ದಿನ ರಾಜ ರೋಮಪಾದ ಶಾಂತಾ ಜೊತೆ ಸಂಭಾಷಣೆಯಲ್ಲಿ ನಿರತರಾಗಿದ್ದಾಗ, ಬ್ರಾಹ್ಮಣ ಜಾತಿಯ ಹುಡುಗನು ರಾಜನನ್ನು ಬೇಸಾಯದಲ್ಲಿ ಸಹಾಯವನ್ನು ಕೇಳಲು ಬಂದನು.

700 ವರ್ಷಗಳ ಬಳಿಕ ಮಹಾಷ್ಟಮಿಯಂದು 5 ರಾಜಯೋಗಗಳ ಸೃಷ್ಟಿ; 4 ರಾಶಿಗಳಿಗೆ ಮಿತಿಯೇ ಇಲ್ಲದ ಅದೃಷ್ಟ

ರಾಜಾ ರೋಮಪಾದನು ಬ್ರಾಹ್ಮಣ ಹುಡುಗನ ಮನವಿಗೆ ಕಿವಿಗೊಡಲಿಲ್ಲ. ಅವನ ನಿರ್ಲಕ್ಷ್ಯದಿಂದ ಕೋಪಗೊಂಡ ಬ್ರಾಹ್ಮಣನು ಅಲ್ಲಿಂದ ಹೊರಟು ಹೋದನು. ತನ್ನ ಭಕ್ತನಿಗೆ ಮಾಡಿದ ಈ ಅವಮಾನದಿಂದ ಮಳೆಯ ದೇವರು ಇಂದ್ರ ದೇವನೂ ಕೋಪಗೊಂಡನು. ಇದರಿಂದ ಅಂಗ ದೇಶದಲ್ಲಿ ಬರಗಾಲ ಆರಂಭವಾಯಿತು. 

ಈ ಸಮಸ್ಯೆಯನ್ನು ಹೋಗಲಾಡಿಸಲು, ರೋಮಪಾದನು ಋಷಿ ಶೃಂಗಕ್ಕೆ ಹೋದನು. ರೋಮಪಾದನು ಶೃಂಗನನ್ನು ಮಳೆಗಾಗಿ ಯಾಗವನ್ನು ಮಾಡಲು ವಿನಂತಿಸಿದನು. ಶೃಂಗನ ಮಾತಿನಂತೆ ಯಾಗವನ್ನು ನಡೆಸಲಾಗುತ್ತದೆ, ನಂತರ ನಾಡಿನಲ್ಲಿ ಮಳೆಯಾಗುತ್ತದೆ ಮತ್ತು ಬರಗಾಲದ ಸಮಸ್ಯೆಯನ್ನು ಕೊನೆಗೊಳಿಸಲಾಗುತ್ತದೆ. ಇದರಿಂದ ಸಂತಸಗೊಂಡ ರಾಜಾ ರೋಮಪಾದ ತನ್ನ ಮಗಳು ದೇವಿ ಶಾಂತಾಳನ್ನು ಶೃಂಗನಿಗೆ ಮದುವೆ ಮಾಡಿಸುತ್ತಾನೆ.

ಶಾಂತಾ ದೇವಿಯನ್ನು ಎಲ್ಲಿ ಪೂಜಿಸಲಾಗುತ್ತದೆ?
ಹಿಮಾಚಲದ ಕುಲುವಿನಲ್ಲಿರುವ ಶೃಂಗ ಋಷಿ ದೇವಸ್ಥಾನದಲ್ಲಿ ಭಗವಾನ್ ರಾಮನ ಅಕ್ಕ, ದೇವಿ ಶಾಂತಾ ಅವರನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಕುಲುವಿನಿಂದ 50 ಕಿ.ಮೀ ದೂರದಲ್ಲಿದೆ. ಅಲ್ಲಿ ಶಾಂತಾ ದೇವಿಯ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ, ಈ ದೇವಾಲಯದಲ್ಲಿ ದೇವಿ ಶಾಂತಾ ಮತ್ತು ಅವರ ಪತಿ ಋಷ್ಯ ಶೃಂಗರನ್ನು ಒಟ್ಟಿಗೆ ಪೂಜಿಸಲಾಗುತ್ತದೆ.

ಶಾಂತಾ ದೇವಿಯ ಈ ದೇವಾಲಯದಲ್ಲಿ, ಯಾವ ದಂಪತಿಗಳು ನಿಜವಾದ ಹೃದಯದಿಂದ ಪೂಜಿಸುತ್ತಾರೋ, ಅವರಿಗೆ ಶ್ರೀರಾಮನ ಅನುಗ್ರಹ ಸಿಗುತ್ತದೆ. ಶಾಂತಾ ದೇವಿಯ ದೇವಸ್ಥಾನದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದಲ್ಲದೆ ಕರ್ನಾಟಕದ ಶೃಂಗೇರಿ ಬಳಿಯ ಕಿಗ್ಗದಲ್ಲಿಯೂ ಋಷ್ಯಶೃಂಗರಿಗೆ ದೇವಾಲಯವಿದೆ.

click me!