ಅಕ್ಷಯ ತದಿಗೆ ಅಂದರೆ ಚಿನ್ನ ಕೊಳ್ಳುವುದು ಅಲ್ಲ, ಗೋವು, ಬ್ರಾಹ್ಮಣರನ್ನು ಪೂಜಿಸುವುದು

Published : Apr 25, 2025, 11:17 AM ISTUpdated : Apr 25, 2025, 11:31 AM IST
ಅಕ್ಷಯ ತದಿಗೆ ಅಂದರೆ ಚಿನ್ನ ಕೊಳ್ಳುವುದು ಅಲ್ಲ,  ಗೋವು, ಬ್ರಾಹ್ಮಣರನ್ನು ಪೂಜಿಸುವುದು

ಸಾರಾಂಶ

ಅಕ್ಷಯ ತೃತೀಯ ವಿಶೇಷ ಅಂದರೆ ಉಚ್ಚದಲ್ಲಿ ರವಿಯಿದ್ದು (ಮೇಷ), ಉಚ್ಚದಲ್ಲಿ ಚಂದ್ರನಿದ್ದು (ವೃಷಭ), ನಡು ನೆತ್ತಿಯ ಸೂರ್ಯನಿರುವಾಗ ಅಭಿಜಿತ್ ಮೂಹುರ್ತ ಸಂಗಮವಾಗುತ್ತದೆ.

ದೈವಜ್ಞ ಹರೀಶ್ ಕಾಶ್ಯಪ

ನಮ್ಮ ಸನಾತನ ಪರಂಪರೆಯಲ್ಲಿಎಲ್ಲಾ ಶುಭ ಕಾರ್ಯಗಳಿಗೂ ಒಳ್ಳೆಯ ದಿನ ಕಾಲ ಮುಹುರ್ತದಲ್ಲಿ ಮಾಡುತ್ತಾರೆ. ಶಾಸ್ತ್ರಕ್ಕೆ ಅನುಸಾರವಾಗಿಯೇ ಬೆಳೆದು ಬಂದಿದೆ.. ಪ್ರತಿ ವರ್ಷ ಮೂರು ದಿನ ಮತ್ತು ಇನ್ನೊಂದು ಅರ್ಧ ದಿನ ನಿಗದಿಪಡಿಸಿರುವರು. ಈ ಮೂರುವರೆ ದಿನಗಳಲ್ಲಿ ಯಾವ ಮುಹೂರ್ತವೂ ನೋಡಬೇಕಿಲ್ಲ. ಅಂದು ಯಾವುದೇ ಹೊಸ ಕೆಲಸ, ಹೂಡಿಕೆ, ಶುಭ ಕಾರ್ಯ, ಸಂಕಲ್ಪಗಳು ಮಾಡಿದರೆ.ಇಷ್ಟಾರ್ಥ ಸಿದ್ದಿ ಎಂದು ಹೇಳಲಾಗಿದೆ.

ಚಂದ್ರ ಯುಗಾದಿಯ ಪ್ರತಿಪದ, ವೈಶಾಖ ಶುದ್ದ ತೃತೀಯ ಅಕ್ಷಯ ತದಿಗೆ ಶರ ನವರಾತ್ರಯ ವಿಜಯದಶಮಿ ಮೂರು ದಿನಗಳಲಾದರೆ, ಕಾರ್ತಿಕ ಶುದ್ದ ಪಾಡ್ಯ (ದೀಪಾವಳಿ) ಪ್ರತಿಪದಿಯ ಅಹಃಕಾಲ( ಅರ್ಧದಿನ) ಸೇರಿ ಮೂರುವರೆ ಮಉಹೂರ್ತಗಳು. ಉತ್ತರದಲ್ಲಿ ಇದನ್ನು ಸಾಡೇ ತೀಸ್ ಮುಹೂರ್ತ ಎನ್ನುವರು.

ಅಕ್ಷಯ ತೃತೀಯ ವಿಶೇಷ ಅಂದರೆ ಉಚ್ಚದಲ್ಲಿ ರವಿಯಿದ್ದು (ಮೇಷ), ಉಚ್ಚದಲ್ಲಿ ಚಂದ್ರನಿದ್ದು (ವೃಷಭ), ನಡು ನೆತ್ತಿಯ ಸೂರ್ಯನಿರುವಾಗ ಅಭಿಜಿತ್ ಮೂಹುರ್ತ ಸಂಗಮವಾಗುತ್ತದೆ. ಇಂಥ ಗ್ರಹಚಾರ ವಿಶೇಷದಲ್ಲಿ ತ್ರೇತರಯಲ್ಲಿ ಜಮದಗ್ನಿ ರೇಣುಕೆಯರ ಪುತ್ರನಾಗಿ ಶ್ರೀ ವಿಷ್ಣು ಭಗವಾನ್ ಪರಶುರಾಮನಾಗಿ ಅವತಾರ ಎತ್ತಿದ. ಶ್ರೀ ರಾಮಚಂದ್ರನಿಗಿಂತ ಬುದುಹಿಂದೆಯೇ ಪರಶುರಾಮನು ರಾಮ ನಾಮ ವಿಖ್ಯಾತಿಯನ್ನು ಪಡೆದಿದ್ದನು. ಇದೇ ವೈಶಾಖದ ವೃಷಭ ರಾಶಿಯ ಮೃಗಶಿರಾ ನಕ್ಷತ್ರ 2ನೇ ಪಾದದವರೆಗೂ ಅಗ್ನಿ ನಕ್ಷತ್ರದ ದೋಷವೂ ಬರುತ್ತದೆ. ಇಂಥ ರವಿಯ ಕೇಂದ್ರದ ಪ್ರಜ್ವಲ ಕಾಲವು ನಡು ಬೇಸಿಗೆಯ ಬೇಗೆಯನ್ನು ಹರಡುವುದು. ಮಾತ್ರವಲ್ಲದೆ.ಕ್ಷಾತ್ರ ಗುಣವನ್ನು  ತೀವ್ರವಾಗಿ ಹರಡುತ್ತಿದೆ. ಶಕ್ತಿ ಯುಕ್ತ ದಿನ ಅಕ್ಷಯ ತೃತೀಯ.

ಅಗ್ರತೋ ಚತುರೋ ವೇದಾಃ ಪೃಷ್ಟತಃ ಸಶರಂಧನುಃ
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ|| ಇದು ಭಗವಾನ ಪರಶುರಾಮನ ಅಕ್ಷಯ ಮಹಿಮೆ, ಕರಗಳಲ್ಲಿ ಹೃದಯದಲ್ಲಿ  ವೇದ ಶಾಸ್ತ್ರಗಳ ಸಿದ್ದೀಯನ್ನೂ, ಭಜ ಬೆನ್ನಿನಲ್ಲಿ ಬಾಣ ಬಿಲ್ಲು ಬತ್ತಳಿಕೆಯ ಸಪೂರ ಶಸ್ತ್ರ ಸಿದ್ದಿಯನ್ನು ಧರಿಸಿದ ರಾಮನು, ಶಾಪದಿಂದಲೂ ಶರ(ಬಾಣ)ದಿಂದಲೂ ಯಾರನ್ನೂ ದಂಡಿಸಲೂ ಸದಾ ಸಿದ್ದನಿರುವ ಈತ ಚಿರಂಜೀವಿ ಕೂಡಾ, ಭಗವಂತನ ಎಲ್ಲಾ ಅವತಾರಗಳೂ ನಿತ್ಯವೇ, ಶಾಶ್ವತವೇ. ಆದರೆ ಪರಶುರಾಮ ರೂಪ ತಿರೋಹಿತ ಆಗದು. ಸದಾ ಶಾಸ್ತ್ರ ನಿರತ ಸಜ್ಜನರನ್ನು ಕಾಪಾಡುವೆ ಎಂದು ವರಕೊಟ್ಟ ಪರಶುರಾಮ ರೂಪದಿಂದಲೇ ಸರ್ವತ್ರ ವ್ಯಾಪಿಸಿಕೊಂಡು, ಮೇರು ಪೂರ್ವದಲ್ಲಿ ಧ್ಯಾನ ಮಗ್ನನಾಗಿ ಇರುತ್ತಾನೆ. ಇಷ್ಟು ಅಕ್ಷಯ ತೃತೀಯ ವಿಶೇಷ ಹಿನ್ನಲೇ. ಈ ಪರಮ ಶುಭದಿನ ವೈಶಾಖವೂ ಆದ್ದರಿಂದ ನದಿ ತೀರ್ಥಗಳಲ್ಲಿ ಸ್ನಾನ, ಜಪ, ದಾನಗಳ ಮಾಡುವುದು ಶಾಸ್ತ್ರ ವಿಧಿತ. ದೇವತೆಗಳನ್ನೂ , ಪಿತೃಗಳನ್ನೂ, ಗೋವು, ಬ್ರಾಹ್ಮಣರನ್ನು ಯಥಾ ಶ್ರದ್ದೆಯಿಂದ ಪೂಜಿಸ ಬೇಕು. ಅದರ ಪುಣ್ಯ ಅನಂತವಾಗುವುದು.

ಆದರೆ ಕಾಲ ಕಲುಷಿತವಾಗುತ್ತ ಜನರು ಈ ಸತ್ ಸಂಪ್ರದಾಯಗಳು ಮರೆತು ಬಂಗಾರ ಖರೀದಿ ಪೂಜೆಗೆ ಇಳಿದಿದ್ದಾರೆ, ದರಂತ. ಚಿನ್ನ ಕೊಳ್ಳುವುದು ಒಳ್ಳೆಯದೇ ಆದರೆ ಅಕ್ಷಯ ತದಿಗೆ ಅಂದರೆ ಚಿನ್ನ ಕೊಳ್ಳುವುದು ಎಂಬ ಬೆಪ್ಪತನ ಒಳ್ಳೆಯದಲ್ಲ. ದಿನ ವಿಶೇಗಳ ತಿಳಿದು, ಸತ್ಕರ್ಮ ಆಚರಿಸಿ, ಇರುವ ಅಮೂಲ್ಯ ವಸ್ತು, ಆಭರಣಗಳನ್ನೆ ದೇವರೆದುರು ಅಲಂಕರಿಸಿ ನವಿಸಿರಿ. ಅದೇ ಅಕ್ಷಯವಾಗುತ್ತೆ.
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ