
ಪಂಚಾಂಗದ ಪ್ರಕಾರ, ಅಕ್ಷಯ ತೃತೀಯ ಹಬ್ಬವನ್ನು ಈ ಬಾರಿ ಏಪ್ರಿಲ್ 22, 2023ರಂದು ಆಚರಿಸಲಾಗುತ್ತದೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಭಗವಾನ್ ವಿಷ್ಣುವು ವಿವಿಧ ಯುಗಗಳಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವು 7 ಶುಭ ಯೋಗಗಳ ಸಂಯೋಜನೆಯನ್ನು ತಂದಿದೆ. ಇದು ಈ ದಿನದ ಮಹತ್ವವನ್ನು ಹಲವು ಪಟ್ಟು ಹೆಚ್ಚಿಸಿದೆ.
ಈ ದಿನ ಯಾವುದೇ ಖರೀದಿ ಮಾಡಿದರೆ, ಅದು ಮನೆಯಲ್ಲಿ ಅಕ್ಷಯವಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ, ಇಂದು ಕಾರು, ಚಿನ್ನ, ಬೆಳ್ಳಿ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಕೊಳ್ಳಲಾಗುತ್ತದೆ. ಅಲ್ಲದೆ, ಶುಭ ಕಾರ್ಯಗಳನ್ನು ನಡೆಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿದೆ. ಈ ಬಾರಿ ಅಕ್ಷಯ ತೃತೀಯದಂದು 7 ಶುಭ ಯೋಗಗಳ ಸಂಯೋಜನೆಯಾಗುತ್ತಿದೆ. ಹಾಗಾಗಿ, ಈ ದಿನ ನೀವು ಯಾವುದೇ ಕೆಲಸವನ್ನು ಮಾಡಿದರೆ, ನಿಮಗೆ ಯಶಸ್ಸು ಸಿಗುತ್ತದೆ,.
ಅಕ್ಷಯ ತೃತೀಯ ಶುಭ ಸಮಯ
ಅಕ್ಷಯ ತೃತೀಯ ತಿಥಿಯು ಏಪ್ರಿಲ್ 22ರಂದು ಬೆಳಿಗ್ಗೆ 7.50 ರಿಂದ ಪ್ರಾರಂಭವಾಗಲಿದ್ದು, 23 ರಂದು ಬೆಳಿಗ್ಗೆ 7.48 ರವರೆಗೆ ನಡೆಯಲಿದೆ.
Tirupati: ವಿಐಪಿ ಬ್ರೇಕ್ ರದ್ದು, ಸಾಮಾನ್ಯ ಯಾತ್ರಾರ್ಥಿಗಳಿಗೆ ಪ್ರತಿದಿನ 15 ಗಂಟೆಗಳ ದರ್ಶನಕ್ಕೆ ನಿರ್ಧಾರ
ಅಕ್ಷಯ ತೃತೀಯ 2023ರ ಯೋಗಗಳು
ಆಯುಷ್ಮಾನ್ ಯೋಗ - 21 ಏಪ್ರಿಲ್ 2023, 11:00 AM - 22 ಏಪ್ರಿಲ್ 2023, 09:26 AM
ಸೌಭಾಗ್ಯ ಯೋಗ - 22 ಏಪ್ರಿಲ್ 2023, 09:26 AM - 23 ಏಪ್ರಿಲ್ 2023, 08:22 AM
ತ್ರಿಪುಷ್ಕರ ಯೋಗ - 05:49 am - 07:49 am (22 ಏಪ್ರಿಲ್ 2023)
ಸರ್ವಾರ್ಥ ಸಿದ್ಧಿ ಯೋಗ - 22 ಏಪ್ರಿಲ್ 2023, 11.24 am - 23 ಏಪ್ರಿಲ್ 2023, 05.48 am
ರವಿ ಯೋಗ - 22 ಏಪ್ರಿಲ್ 2023, 11.24 am - 23 ಏಪ್ರಿಲ್ 2023, 05.48 am
ಅಮೃತ ಸಿದ್ಧಿ ಯೋಗ - 22 ಏಪ್ರಿಲ್ 2023, 11.24 am - 23 ಏಪ್ರಿಲ್ 2023, 05.48 am
Sankashti Chaturthi 2023: ದಿನಾಂಕ, ಶುಭಮುಹೂರ್ತ, ಪೂಜಾ ವಿಧಾನ
ಬೆಳ್ಳಿ ಖರೀದಿಸಿ
ಅಕ್ಷಯ ತೃತೀಯದಂದು, ಚಂದ್ರನು ತನ್ನ ಉತ್ಕೃಷ್ಟ ಚಿಹ್ನೆ ವೃಷಭ ರಾಶಿಯಲ್ಲಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಬೆಳ್ಳಿಯನ್ನು ಖರೀದಿಸುವುದು ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಬೆಳ್ಳಿಯ ಆನೆ ಮತ್ತು ಆಭರಣಗಳನ್ನು ಖರೀದಿಸುವುದು ಮನೆಗೆ ಆಶೀರ್ವಾದವನ್ನು ತರುತ್ತದೆ.
ಅಕ್ಷಯ ತೃತೀಯದಲ್ಲಿ ಯಾರನ್ನು ಪೂಜಿಸಲಾಗುತ್ತದೆ?
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿದೆ. ಇದರೊಂದಿಗೆ ಧಾನ್ಯಗಳು, ಬೆಲ್ಲ, ಬೇಳೆ, ಸಟ್ಟು, ಜಗ್, ನೀರು, ಕೈಯಿಂದ ತಯಾರಿಸಿದ ಬೀಸಣಿಗೆ ಮತ್ತು ಬಟ್ಟೆ ಇತ್ಯಾದಿಗಳನ್ನು ಈ ದಿನ ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಮತ್ಸ್ಯ ಪುರಾಣದ ಪ್ರಕಾರ, ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದು ಆತನ ವಿಶೇಷ ಅನುಗ್ರಹವನ್ನು ನೀಡುತ್ತದೆ. ಇದಲ್ಲದೇ ಈ ದಿನ ಬಡವರ ಸೇವೆ ಮಾಡುವುದು ಕೂಡ ಶ್ರೇಯಸ್ಕರ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.