ದರ್ಶನ್ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಪತ್ನಿ ವಿಜಯಲಕ್ಷ್ಮಿ ನವಚಂಡಿಕಾ ಹೋಮ!, ಏನಿದರ ವಿಶೇಷ?

By Gowthami K  |  First Published Jul 26, 2024, 11:02 AM IST

ಕೊಲ್ಲೂರಿಗೆ ಆಗಮಿಸಿರುವ ವಿಜಯಲಕ್ಷ್ಮಿ, ನವಚಂಡಿಕಾಯಾಗದ ಸಂಕಲ್ಪ, ಪಾರಾಯಣದಲ್ಲಿ ಭಾಗಿಯಾಗಿ ಬಳಿಕ  ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದ ಯಾಗಶಾಲೆಯಲ್ಲಿ ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ , ಸಂಕಲ್ಪ ಮಾಡಿದರು.


ಕುಂದಾಪುರ (ಜು.26): ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ   ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಗುರುವಾರ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದರು. ಇದೇ ವೇಳೆ ತಮ್ಮ ಪತಿಯ ಶೀಘ್ರ ಬಿಡುಗಡೆಗಾಗಿ ಪ್ರಾರ್ಥನೆ ಸಲ್ಲಿಸಿ, ನವ ಚಂಡಿಕಾ ಯಾಗವನ್ನೂ ಪ್ರಾರಂಭಿಸಿದರು. ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ದರ್ಶನ್ ಅವರ ಪರ ಶ್ರೀದೇವಿಗೆ ಪ್ರಾರ್ಥನೆ ಸಲ್ಲಿಸಿರುವ ವಿಜಯಲಕ್ಷ್ಮಿ ಅವರು ಶುಕ್ರವಾರ ಬೆಳಗ್ಗೆ ಕ್ಷೇತ್ರದ ಅರ್ಚಕರ ಮೂಲಕ ನಡೆದ ನವಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.

ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಸಹಪಾಲುದಾರರಿಂದ ಕೋರ್ಟ್‌ಗೆ ಮೊರೆ

Tap to resize

Latest Videos

undefined

ಆಪ್ತರು ಮತ್ತು ಪುತ್ರನ ಜೊತೆ ಗುರುವಾರ ಕೊಲ್ಲೂರಿಗೆ ಆಗಮಿಸಿರುವ ವಿಜಯಲಕ್ಷ್ಮಿ, ನವಚಂಡಿಕಾಯಾಗದ ಸಂಕಲ್ಪ, ಪಾರಾಯಣದಲ್ಲಿ ಭಾಗಿಯಾಗಿ ಬಳಿಕ  ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದ ಯಾಗಶಾಲೆಯಲ್ಲಿ ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ , ಸಂಕಲ್ಪ ಮಾಡಿದರು.  ಕೊಲ್ಲೂರು ನರಸಿಂಹ ಅಡಿಗ ನೇತೃತ್ವದಲ್ಲಿ ನವಚಂಡಿಕಾಯಾಗ ನಡೆಯಿತು.   ಚಂಡಿಕಾಯಾಗಕ್ಕೆ  ಸುಬ್ರಹ್ಮಣ್ಯ ಅಡಿಗ  ಸಂಕಲ್ಪ ಮಾಡಿಸಿದರು. ಬಳಿಕ ತಾಯಿ ಮೂಕಾಂಬಿಕೆಗೆ ರೇಷ್ಮೆ ಸೀರೆ, ಫಲಪುಷ್ಪ ಸಲ್ಲಿಕೆ ಮಾಡಿದರು. ಸಕಲ ಸಂಕಲ್ಪಗಳನ್ನು ಮಾಡಿದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಏನಿದು ನವಚಂಡಿಕಾ ಹೋಮ: ಇದು ಚಂಡಿ ದೇವಿಯನ್ನು ಆವಾಹನೆ ಮಾಡಲು ಮತ್ತು ಆಕೆಯ ದೈವಿಕ ಅನುಗ್ರಹವನ್ನು ಪಡೆಯಲು ಪ್ರಬಲವಾದ ಹೋಮವಾಗಿದೆ. ಚಂಡಿ ದೇವಿಯು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯ ಮೂರ್ತರೂಪವಾಗಿದೆ. ಚಂಡಿ ಹೋಮವು ನಿಮಗೆ ಯಶಸ್ಸು, ಸಮೃದ್ಧಿ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತದೆ. ಇದು ದುರ್ಗಾಸಪ್ತಶತಿ ಪಾರಾಯಣ. ಇದರಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಇದರ ಮೂಲಕ ಮಹಾದುರ್ಗಿಯರನ್ನು ಸ್ತೋತ್ರಭಾಗದಿಂದ ಆರಾಧಿಸಲಾಗುತ್ತದೆ. ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ, ಚಂಡಮುಂಡ, ರಕ್ತಬೀಜ ರಾಕ್ಷಸರನ್ನು ತ್ರಿಶಕ್ತಿಯ ರೂಪದಿಂದ ಕೊಂದು ಲೋಕ ಕಲ್ಯಾಣ ಮಾಡುತ್ತಾಳೆ. ಚಂಡಿಕಾದೇವಿಯು 18 ಕೈಗಳನ್ನು ಹೊಂದಿದ್ದು 18 ಬಗೆಯ ಆಯುಧಗಳನ್ನು ಹಿಡಿದಿರುತ್ತಾಳೆ.

ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!

ಯಾಕೆ ಮಾಡಿಸುತ್ತಾರೆ ಮತ್ತು ಲಾಭಗಳೇನು?: ಮಾಟ, ಮಂತ್ರ, ವಶೀಕರಣ, ದುಷ್ಟಪೀಡೆ, ಅರಿಷ್ಟ, ಶತ್ರುಬಾಧೆ, ಗ್ರಹದೋಷ, ಜೀವ ಭಯ, ಮೃತ್ಯು ಭಯ ಇದ್ದವರು ದೇವಿಯ ಕೃಪೆಗೆ ಪಾತ್ರರಾಗಬೇಕೆನ್ನುವ ಇಚ್ಛೆಯಿದ್ದರೆ ಮಾಡಿಸಬಹುದು. ಇದರಿಂದ ನಕಾರಾತ್ಮಕ  ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿ ಬರುತ್ತವೆ. ಶಾಪ, ಪೀಡೆಗಳು ಮಾತ್ರವಲ್ಲ ಎಲ್ಲಾ ಬಗೆಯ ನೆಗೆಟಿವ್ ಅಂಶಗಳು ದೂರವಾಗುತ್ತವೆ. ಉತ್ತಮ ಆರೋಗ್ಯ, ಸಂಪತ್ತು, ಅಭಿವೃದ್ಧಿ, ಶತ್ರು ಬಾಧೆ ನಿವಾರಣೆಯಾಗುತ್ತದೆ.

ಇದನ್ನು ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ, ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ಚೈತ್ರ ಮತ್ತು ಕಾರ್ತಿಕ ಪೌರ್ಣಮಿ ಶುಭ ದಿನಗಳಂದು ಮಾಡಲಾಗುತ್ತದೆ.

ಚಂಡಿಕಾ ಯಾಗದಲ್ಲಿ ಎರಡು ಬಗೆಯಿದೆ. ಶತ ಚಂಡಿಕಾ ಯಾಗ, ಪ್ರಯೂತ ಚಂಡಿಯಾಗ, ಆಯುತ ಚಂಡಿಯಾಗ. ಆಯುತ ಚಂಡಿಯಾಗವೆಂದರೆ ದುರ್ಗಾಸಪ್ತಶತಿಯ 700 ಶ್ಲೋಕಗಳನ್ನು ಹತ್ತು ಸಾವಿರ ಬಾರಿ ಜಪಿಸುತ್ತಾರೆ. ಪ್ರಯೂತ ಚಂಡಿಯಾಗವೆಂದರೆ 700 ಶ್ಲೋಕಗಳನ್ನು ಒಂದು ದಶಲಕ್ಷ ಬಾರಿ ಜಪಿಸುತ್ತಾರೆ. 

click me!