ರಾಶಿಯನುಸಾರ ನಿಮ್ಮ ಸ್ನೇಹಿತರು-ಶತ್ರುಗಳ್ಯಾರೆಂದು ತಿಳಿಯಿರಿ..!

By Suvarna News  |  First Published Nov 9, 2020, 3:33 PM IST

ಪ್ರತಿ ರಾಶಿಯವರು ವಿಭಿನ್ನ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ರಾಶಿಯ ಗುಣಗಳು ಒಂದಕ್ಕೊಂದು ಹೊಂದುವ ಗುಣ ಕೆಲ ರಾಶಿಯವರದ್ದಾದರೆ ಮತ್ತೆ ಕೆಲವು ರಾಶಿಯವರದ್ದು ತದ್ವಿರುದ್ಧ ಗುಣಗಳಾಗಿರುತ್ತದೆ. ಇಂಥ ವ್ಯಕ್ತಿಗಳು ಪರಸ್ಪರ ಮಾತನಾಡುವಾಗ ವಾಗ್ವಾದಗಳಾಗಿ ಒಬ್ಬರನ್ನೊಬ್ಬರು ದ್ವೇಷಿಸುವ ಪ್ರಸಂಗ ಬಂದರೂ ಅಚ್ಚರಿ ಇಲ್ಲ. ಹಾಗಾಗಿ ರಾಶಿಗಳಿಗೆ ಅನುಗುಣವಾಗಿ ಯಾವ ರಾಶಿಯವರಿಗೆ ಯಾವ ರಾಶಿಯವರು ಸ್ನೇಹಿತರು ಮತ್ತು ಶತ್ರುಗಳು? ಎಂದು ತಿಳಿಯೋಣ...
 


ಹನ್ನೆರಡು ರಾಶಿಗಳಿಗೂ ಭಿನ್ನವಾದ ಗುಣ ಮತ್ತು ಸ್ವಭಾವಗಳಿವೆ. ಅದರಂತೆಯೇ ಆಯಾ ರಾಶಿಯ ವ್ಯಕ್ತಿಗಳು ಅವರ ರಾಶಿ ಮತ್ತು ನಕ್ಷತ್ರದ ಪ್ರಭಾಕ್ಕೊಳಪಟ್ಟಿರುತ್ತಾರೆ. ರಾಶಿಯ ಸ್ವಭಾವದಂತೆ ಅವರ ವರ್ತನೆಯು ಇರುತ್ತದೆ. ಹಾಗಾಗಿ ರಾಶಿಗಳಿಗೆ ಅನುಗುಣವಾಗಿ ಯಾವ ರಾಶಿಯವರಿಗೆ ಯಾವ ರಾಶಿಯವರು ಸ್ನೇಹಿತರು ಮತ್ತು ಶತ್ರುಗಳು? ಎಂದು ತಿಳಿಯೋಣ...

ಮೇಷ ರಾಶಿ
ಈ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಬೇರೆ ಎಲ್ಲ ರಾಶಿಗಳಿಗೆ ಹೋಲಿಸಿದಲ್ಲಿ ಮೇಷ ರಾಶಿಯವರು ಪ್ರಬಲ ನಾಯಕತ್ವದ ಗುಣವನ್ನು ಹೊಂದಿರುವ ರಾಶಿಯವರಾಗಿದ್ದಾರೆ. ಮೇಷ ರಾಶಿಯವರಿಗೆ ಕರ್ಕಾಟಕ, ತುಲಾ ಮತ್ತು ಧನು ಈ ರಾಶಿಗಳು ಮಿತ್ರ ರಾಶಿಗಳು. ಮಿಥುನ, ಸಿಂಹ, ಮತ್ತು ಕನ್ಯಾ ಇವು ಶತ್ರು ರಾಶಿಗಳಾಗಿವೆ.
 
ಇದನ್ನು ಓದಿ: ಈ ಕೆಲವು ಸಸ್ಯಗಳು ಮನೆಯಲ್ಲಿದ್ದರೆ ರೋಗಗಳು ದೂರ..! ಕುಟುಂಬಕ್ಕೆ ಶುಭ 

ವೃಷಭ ರಾಶಿ
ಸಂಬಂಧಗಳ ಕಾರಕನಾಗಿರುವ ಶುಕ್ರ ಗ್ರಹವು ಈ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರು ಹುಟ್ಟಿನಿಂದಲೇ ಹಠ ಮತ್ತು ಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ವೃಷಭ ರಾಶಿಯ ವ್ಯಕ್ತಿಗಳು ಸರಿಯಾಗಿ ತಿಳಿದು ಗೆಳೆತನ ಮಾಡಿದರೆ ಉತ್ತಮ. ವೃಷಭ ರಾಶಿಯವರಿಗೆ ಕನ್ಯಾ, ಮಕರ ಮತ್ತು ಕುಂಭ ಈ ರಾಶಿಗಳು ಮಿತ್ರ ರಾಶಿಗಳು. ವೃಶ್ಚಿಕ ಮತ್ತು ಧನು ಇವು ಶತ್ರು ರಾಶಿಗಳಾಗಿವೆ.

ಮಿಥುನ ರಾಶಿ
ಉತ್ತಮವಾಗಿ ಮಾತನಾಡುವ ಕಲೆಯನ್ನು ಬಲ್ಲ ಮಿಥುನ ರಾಶಿಯ ಅಧಿಪತಿ ಗ್ರಹ ಬುಧ. ಎಲ್ಲರನ್ನೂ ತಮ್ಮ ಬಳಿ ಸೆಳೆದುಕೊಳ್ಳುವುದನ್ನು ಈ ರಾಶಿಯವರು ಚೆನ್ನಾಗಿ ಅರಿತಿರುತ್ತಾರೆ. ಹಾಗಾಗಿ ಇವರ ಈ ಗುಣ ಹಲವರ ಅಸೂಯೆಗೆ ಕಾರಣವಾಗುತ್ತದೆ. ಹಾಗಾಗಿ ಗೆಳೆತನದ ವಿಷಯ ಬಂದಾಗ ಜಾಗರೂಕರಾಗಿದ್ದರೆ ಉತ್ತಮ. ಮಿಥುನ ರಾಶಿಯವರಿಗೆ ಕನ್ಯಾ, ತುಲಾ ಮತ್ತು ಕುಂಭ ಈ ರಾಶಿಗಳು ಮಿತ್ರ ರಾಶಿಗಳು. ಮೇಷ, ಕರ್ಕ ಮತ್ತು ವೃಶ್ಚಿಕ ಇವು ಶತ್ರು ರಾಶಿಗಳಾಗಿವೆ.

Latest Videos


ಕರ್ಕಾಟಕ ರಾಶಿ
ಈ ರಾಶಿಯವರು ಉತ್ತಮ ವಿಚಾರ ಮತ್ತು ಅದ್ಭುತ ಕಲ್ಪನಾ ಶಕ್ತಿಯನ್ನು ಹೊಂದಿರುವವರು. ಈ ರಾಶಿಯ ಅಧಿಪತಿ ಚಂದ್ರ ಗ್ರಹ. ಇತರರು ಇವರ ಭಾವನೆಗಳನ್ನು ಅಪಹಾಸ್ಯ ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಶತ್ರುಗಳು ಹೆಚ್ಚಾಗುತ್ತಾರೆ. ಕರ್ಕಾಟಕ ರಾಶಿಯವರಿಗೆ ತುಲಾ, ವೃಶ್ಚಿಕ, ಕುಂಭ ಮತ್ತು ಮೀನ ಈ ರಾಶಿಗಳು ಮಿತ್ರ ರಾಶಿಗಳು. ಮಿಥುನ, ಸಿಂಹ, ಮತ್ತು ಕನ್ಯಾ ಇವು ಶತ್ರು ರಾಶಿಗಳಾಗಿವೆ.

ಸಿಂಹ ರಾಶಿ
ಅತ್ಯಂತ ಉತ್ಸಾಹ ಮತ್ತು ಸಕಾರಾತ್ಮಕ ವಿಚಾರಗಳಿಗೆ ಈ ರಾಶಿಯವರು ಹೆಸರುವಾಸಿಯಾಗಿರಲು ರಾಶಿಯ ಅಧಿಪತಿ ಸೂರ್ಯದೇವನ ಪ್ರಭಾವವೇ ಕಾರಣವಾಗಿದೆ. ಇತರರಿಗಿಂತ ಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ಕಾರಣ ಇವರಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಸಿಂಹ ರಾಶಿಯವರಿಗೆ ಮೇಷ, ವೃಶ್ಚಿಕ ಮತ್ತು ಮೀನ ಈ ರಾಶಿಗಳು ಮಿತ್ರ ರಾಶಿಗಳು. ತುಲಾ, ಧನು, ಮಕರ ಮತ್ತು ಕರ್ಕಾಟಕ ಇವು ಶತ್ರು ರಾಶಿಗಳಾಗಿವೆ.

ಇದನ್ನು ಓದಿ: ಪತ್ನಿಗೆ ಈ ನಾಲ್ಕು ಗುಣಗಳಿವೆ ಎಂದರೆ ಪತಿ ಅದೃಷ್ಟವಂತನೆಂದೇ ಅರ್ಥ…! 

ಕನ್ಯಾ ರಾಶಿ
ಈ ರಾಶಿಯವರಿಗೆ ಜೀವನದ ಬಗ್ಗೆ ಅರಿವು ಮತ್ತು ಜನರ ವ್ಯಕ್ತಿತ್ವವನ್ನು ಚೆನ್ನಾಗಿ ತಿಳಿದಿರುತ್ತಾರೆ. ಈ ರಾಶಿಯ ಅಧಿಪತಿ ಬುಧನಾಗಿರುವ ಕಾರಣ ಸರಿಯಾಗಿ ಅರಿತು ಸ್ನೇಹ ಬೆಳೆಸುತ್ತಾರೆ. ಕನ್ಯಾ ರಾಶಿಯವರಿಗೆ  ವೃಷಭ, ಕುಂಭ ಮತ್ತು ಮಕರ ಈ ರಾಶಿಗಳು ಮಿತ್ರ ರಾಶಿಗಳು. ಧನು, ಮೇಷ ಮತ್ತು ಕರ್ಕಾಟಕ ಇವು ಶತ್ರು ರಾಶಿಗಳಾಗಿವೆ.

ತುಲಾ ರಾಶಿ
ಕೋಪ ಮತ್ತು ಅನಾವಶ್ಯಕವಾಗಿ ಮಾತನಾಡುವ ಬಗ್ಗೆ ಹಿಡಿತವನ್ನು ಸಾಧಿಸುವಲ್ಲಿ ರಾಶಿಯ ಅಧಿಪತಿ ಗ್ರಹವಾದ ಶುಕ್ರ ಪ್ರಭಾವವೇ ಕಾರಣವಾಗಿರುತ್ತದೆ. ತುಲಾ ರಾಶಿಯವರಿಗೆ ಮಿಥುನ, ಕರ್ಕಾಟಕ ಮತ್ತು ಕುಂಭ ಈ ರಾಶಿಗಳು ಮಿತ್ರ ರಾಶಿಗಳು. ಧನು ಮತ್ತು ಮೀನ ಇವು ಶತ್ರು ರಾಶಿಗಳಾಗಿವೆ.

ವೃಶ್ಚಿಕ ರಾಶಿ
ಚತುರರು ಮತ್ತು ಚುರುಕು ಬುದ್ಧಿಯನ್ನು ಹೊಂದಿರುವ ಈ ರಾಶಿಯ ಅಧಿಪತಿ ಮಂಗಳ ಗ್ರಹ. ಶಾಂತವಾಗಿದ್ದುಕೊಂಡು ಎಲ್ಲ ರೀತಿಯ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಇವರಿಗೆ ಶಾಂತರಾಗಿರುವ ಸ್ನೇಹಿತರನ್ನು ಇಷ್ಟಪಡುತ್ತಾರೆ. ವೃಶ್ಚಿಕ ರಾಶಿಯವರಿಗೆ ಸಿಂಹ, ಕರ್ಕಾಟಕ ಮತ್ತು ಮೀನ ಈ ರಾಶಿಗಳು ಮಿತ್ರ ರಾಶಿಗಳು. ಮಿಥುನ, ಕನ್ಯಾ ಮತ್ತು ಮಕರ ಇವು ಶತ್ರು ರಾಶಿಗಳಾಗಿವೆ.

ಧನು ರಾಶಿ
ಸಾಧಾರಣ ಜೀವನ, ಉತ್ತಮ ವಿಚಾರಕ್ಕೆ ಹೆಸರುವಾಸಿಯಾಗಿರುವ ಈ ರಾಶಿಯ ಅಧಿಪತಿ ಗುರುಗ್ರಹವಾಗಿದೆ. ಚಾಲಾಕಿತನವನ್ನು ತೋರುವವರನ್ನು ಇವರು ಇಷ್ಟಪಡುವುದಿಲ್ಲ. ಧನು ರಾಶಿಯವರಿಗೆ ವೃಶ್ಚಿಕ, ಕರ್ಕಾಟಕ ಮತ್ತು ಮೀನ ಈ ರಾಶಿಗಳು ಮಿತ್ರ ರಾಶಿಗಳು. ಮೇಷ, ವೃಷಭ, ಮತ್ತು ತುಲಾ ಇವು ಶತ್ರು ರಾಶಿಗಳಾಗಿವೆ.

ಮಕರ ರಾಶಿ
ಪರಿಶ್ರಮ ಮತ್ತು ಮಹತ್ವಾಕಾಂಕ್ಷೆಯುಳ್ಳ ಈ ರಾಶಿಯ ಅಧಿಪತಿ ಗ್ರಹ ಶನಿದೇವನಾಗಿದ್ದಾನೆ. ಪ್ರತಿ ಕೆಲಸವನ್ನು ಛಳ ಮತ್ತು ಪರಿಶ್ರಮದಿಂದ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಮಕರ ರಾಶಿಯವರಿಗೆ ವೃಷಭ, ಕನ್ಯಾ ಮತ್ತು ಕುಂಭ ಈ ರಾಶಿಗಳು ಮಿತ್ರ ರಾಶಿಗಳು. ವೃಶ್ಚಿಕ, ಸಿಂಹ, ಮತ್ತು ಮೀನ ಇವು ಶತ್ರು ರಾಶಿಗಳಾಗಿವೆ.

ಕುಂಭ ರಾಶಿ
ಸಕಲ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುವ ಕುಂಭ ರಾಶಿಯ ಅಧಿಪತಿ ಗ್ರಹ ಶನಿದೇವ. ಎಂಥದ್ದೇ ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಸ್ವಭಾವ ಇವರದ್ದು. ರಾಶಿಯವರಿಗೆ ವೃಷಭ, ಕನ್ಯಾ ಮತ್ತು ಕುಂಭ ಈ ರಾಶಿಗಳು ಮಿತ್ರ ರಾಶಿಗಳು.   ಸಿಂಹ, ವೃಶ್ಚಿಕ ಮತ್ತು ಮೀನ ಇವು ಶತ್ರು ರಾಶಿಗಳಾಗಿವೆ.

ಇದನ್ನು ಓದಿ: ಹೇಗಿರ್ತಾರೆ ನವೆಂಬರ್‌ನಲ್ಲಿ ಜನಿಸಿದವರು, ನೀವು - ನಿಮ್ಮವರಿದ್ದಾರಾ..?

ಮೀನ ರಾಶಿ
ಪರೋಪಕಾರ ಮತ್ತು ಕಾಳಜಿಯ ಗುಣವನ್ನು ಹೊಂದಿರುವ ಈ ರಾಶಿಯ ಅಧಿಪತಿ ಗ್ರಹ ಗುರು. ಇವರ ಈ ಗುಣವನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚು. ಮೀನ ರಾಶಿಯವರಿಗೆ ಕರ್ಕಾಟಕ, ವೃಶ್ಚಿಕ ಮತ್ತು ಧನು ಈ ರಾಶಿಗಳು ಮಿತ್ರ ರಾಶಿಗಳು. ವೃಷಭ, ತುಲಾ ಮತ್ತು ಕುಂಭ ಇವು ಶತ್ರು ರಾಶಿಗಳಾಗಿವೆ.

click me!