Chanakya Neeti: ಈ ನಾಲ್ಕು ವಿಷಯಗಳಿಗೆ ಎಂದಿಗೂ ಸಂಕೋಚ ಸಲ್ಲದು!

By Suvarna News  |  First Published Feb 12, 2022, 12:18 PM IST

ಆಚಾರ್ಯ ಚಾಣಕ್ಯ ಹೇಳುವಂತೆ ಬದುಕಿನಲ್ಲಿ ಪ್ರಮುಖವಾದ ನಾಲ್ಕು ವಿಷಯಗಳಿಗೆ ಸಂಕೋಚ ಮಾಡಿಕೊಳ್ಳಕೂಡದು. ಅದರಿಂದ ಬಹಳಷ್ಟನ್ನು ಕಳೆದುಕೊಳ್ಳುತ್ತೇವೆ. ಅವು ಯಾವುವು ನೋಡೋಣ. 


ಆಚಾರ್ಯ ಚಾಣಕ್ಯ(Acharya Chanakya)ರ ಬುದ್ಧಿವಂತಿಕೆ, ನೀತಿ ನಿಯಮಗಳ ಮೇಲೆ ಮೌರ್ಯ ಸಾಮ್ರಾಜ್ಯ(Mauryan dynasty) ಬಲವಾಯಿತು. ಚಂದ್ರಗುಪ್ತ ಮೌರ್ಯನಿಗೆ ಸಲಹೆಗಾರರಾಗಿದ್ದ ಅವರು ತಮ್ಮ ತಂತ್ರಗಾರಿಕೆಯಿಂದ ಕೌಟಿಲ್ಯ ಎಂದೇ ಹೆಸರಾಗಿದ್ದರು. 
ಅವರ ಈ ರಾಜ್ಯಾಡಳಿತದ ಪಾಲಿಸಿ ಪುಸ್ತಕದಲ್ಲಿ ಹಲವಾರು ಪ್ರಮುಖ ವಿಚಾರಗಳನ್ನು ತಿಳಿಯಬಹುದಾಗಿದೆ. ಆ ನೀತಿಗಳು ಅಷ್ಟೊಂದು ಮೌಲ್ಯಯುತವಾಗಿರುವುದರಿಂದಲೇ ಎಷ್ಟೇ ಶತಮಾನಗಳು ಕಳೆದರೂ ಚಾಣಕ್ಯ ನೀತಿ(policy) ಪ್ರಸ್ತುತವಾಗಿಯೇ ಉಳಿದಿದೆ. ಅವು ನಮ್ಮ ದೈನಂದಿನ ಬದುಕಿಗೂ ಮೌಲ್ಯ ತಂದುಕೊಡುತ್ತವೆ. ತನ್ನ ಒಂದು ನೀತಿಯಲ್ಲಿ ಚಾಣಕ್ಯನು ನಾವು ಬದುಕಿನಲ್ಲಿ ಕೆಲ ವಿಷಯಗಳಿಗೆ ಅವಮಾನ, ಸಂಕೋಚ ಪಡಬಾರದು. ಹಾಗೊಂದು ವೇಳೆ ಪಟ್ಟರೆ ಬಹಳಷ್ಟನ್ನ ಕಳೆದುಕೊಳ್ಳಬೇಕಾಗುತ್ತದೆ, ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎನ್ನುತ್ತಾನೆ. ಜೊತೆಗೆ. ಈ ವಿಷಯಗಳನ್ನು ಅವಮಾನವಾಗಿ ಪರಿಗಣಿಸುವವರು ಹಾಗೂ ಅವಮಾನಿಸುವವರು ಬದುಕಿನಲ್ಲಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುತ್ತಾನೆ. ಆಚಾರ್ಯ ಚಾಣಕ್ಯ ಹೇಳಿದ್ದು ಯಾವ ವಿಷಯಗಳ ಬಗ್ಗೆ ನೋಡೋಣ. 

ಹಣ(money)
ಹಣವಿಲ್ಲದ ಜೀವನ ದುರ್ಬರ ಎಂದು ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಹಣದ ವಿಚಾರದಲ್ಲಿ ಯಾವಾಗಲೂ ಬಹಳ ಎಚ್ಚರಿಕೆಯಿಂದಿರಬೇಕು. ಯಾರಿಗಾದರೂ ಸಾಲ ಕೊಡಬೇಕಾಗಿ ಬಂದರೆ ಅದನ್ನು ಹಿಂತಿರುಗಿ ಕೇಳಲು ಸಂಕೋಚ ಪಟ್ಟುಕೊಳ್ಳಬಾರದು. ನಮ್ಮಲ್ಲಿ ಬಹುತೇಕರ ಸಮಸ್ಯೆಯೇ ಇದು. ನಮ್ಮದೇ ಹಣವನ್ನು ನಾವು ಕೇಳಲು ಸಂಕೋಚ ಪಟ್ಟುಕೊಳ್ಳುತ್ತೇವೆ. ಅದಕ್ಕೇ ಅಲ್ಲವೇ ಕೊಟ್ಟವ ಕೋಡಂಗಿ, ಇಸಕೊಂಡವ ಈರಭದ್ರ ಎನ್ನುವುದು. ನಮ್ಮ ಪರವಾದ ಹಣವನ್ನು ನ್ಯಾಯಯುತವಾಗಿ ಹಿಂದಿರುಗಿಸುವಂತೆ ಕೋರಬೇಕು. ತಮ್ಮ ಹಣವನ್ನು ತಾವೇ ಕೇಳಲು ಹಿಂಜರಿಯುವವರು ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಚಾಣಕ್ಯ. 

Tap to resize

Latest Videos

undefined

ಶಿಕ್ಷಣ(education)
ಹಣದಂತೆಯೇ ಶಿಕ್ಷಣದ ವಿಷಯದಲ್ಲೂ ನಾಚಿಕೆ ಪಟ್ಟುಕೊಳ್ಳಬಾರದು. ಓದುವಾಗ ವಿದ್ಯಾರ್ಥಿಯು ತನ್ನ ಎಲ್ಲ ಗೊಂದಲಗಳ ಬಗ್ಗೆಯೂ ಶಿಕ್ಷಕರ ಬಳಿ ಪ್ರಶ್ನೆ ಕೇಳಬೇಕು. ಅದು ಎಂಥದೋ ಸಣ್ಣ ವಿಚಾರ ಎಂದುಕೊಂಡರೆ ಎಂದೋ, ಏನಂದುಕೊಳ್ಳುತ್ತಾರೋ ಎಂದು ಮುಜುಗರ ಪಟ್ಟುಕೊಂಡು ಕೂತರೆ ಗೊಂದಲ ಬಗೆಹರಿಯುವುದಿಲ್ಲ. ಜ್ಞಾನ ಹೆಚ್ಚುವುದಿಲ್ಲ. ಕಡೆಗೂ ತಪ್ಪು ತಿಳಿವಳಿಕೆಯಲ್ಲೇ ಬದುಕಬೇಕಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ. ಜ್ಞಾನ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ, ಶಿಕ್ಷಣದ ಕುರಿತಾಗಿ ಏನೊಂದನ್ನು ಕೇಳಲೂ ಹಿಂಜರಿಯಬಾರದು. 

Sleep Direction: ವಾಸ್ತು ಮಾತ್ರವಲ್ಲ, ವಿಜ್ಞಾನವೂ ಹೇಳುತ್ತೆ, ಈ ದಿಕ್ಕಿಗೇ ತಲೆ ಹಾಕಬೇಕೆಂದು, ಯಾಕೆ ಗೊತ್ತಾ?

ಆಹಾರ(food)
ಇಡೀ ಭೂಮಿ ಮೇಲೆ ಪ್ರತಿಯೊಬ್ಬರೂ ತಮ್ಮ ಆಹಾರ ಸಂಪಾದಿಸಲು ಒದ್ದಾಡುತ್ತಾರೆ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಎನ್ನುವುದೇ ಅದಕ್ಕಲ್ಲವೇ? ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿಯೇ ಇಡೀ ದಿನದ ದುಡಿಮೆ ಎಂದ ಮೇಲೆ ತಿನ್ನಲು ಸಂಕೋಚ ಪಟ್ಟುಕೊಳ್ಳಬಾರದು. ಅದರಲ್ಲೂ ಕೆಲವೊಮ್ಮೆ ಮತ್ತೊಬ್ಬರ ಮನೆಗೆ ನೆಂಟರಾಗಿ ಊಟಕ್ಕೆ ಹೋದಾಗ ಸಂಕೋಚಕ್ಕೆ ಬೇಡವೆಂದು ಕೈಯೊಡ್ಡುತ್ತೇವೆ. ಇದರಿಂದ ಮೋಸವಾಗುವುದು ನಮ್ಮ ಹೊಟ್ಟೆಗೆ. ತಿನ್ನುವ ವಿಷಯದಲ್ಲಿ ಯಾರೇನು ಅಂದುಕೊಳ್ಳುವರೋ ಎಂಬ ಯೋಚನೆ ಸಲ್ಲದು. ಇದರಿಂದ ನಮ್ಮ ಹೊಟ್ಟೆಗೆ, ಆರೋಗ್ಯಕ್ಕೆ ನಾವೇ ಮೋಸ ಮಾಡಿಕೊಂಡಂತಾಗುತ್ತದೆ. 

ಕೋಪ ನಿಯಂತ್ರಿಸಲು ಸಾಧ್ಯವಾಗ್ತಿಲ್ವೇ? ಈ Vastu Tips ಫಾಲೋ ಮಾಡಿ

ಮಾತು
ಚಾಣಕ್ಯರು ಹೇಳುವಂತೆ, 'ಯಾವಾಗ ಸಭೆ ಇರುತ್ತದೋ ಆಗ ಜೋರಾಗಿ ಮಾತನಾಡಬೇಕು. ಸುಮ್ಮನೆ ಮೌನವಾಗಿ ಕುಳಿತರೆ, ನಿಮ್ಮ ಭವಿಷ್ಯದ ಯೋಜನೆಗಳನ್ನು ಹಿಂಬಾಲಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಹೀಗೆ ಎಲ್ಲ ಬಾರಿ ಮೌನವಾಗಿ ಉಳಿದರೆ ನಿಮ್ಮ ಪ್ರಾಮುಖ್ಯತೆ ಹಾಗೂ ಪ್ರಭಾವ ಕಡಿಮೆಯಾಗುತ್ತದೆ. ಹೀಗಾಗಿ, ಅಗತ್ಯವಿದ್ದಾಗಲೆಲ್ಲ ನೀವು ಮಾತನಾಡಲೇಬೇಕು. ' ಮಾತಾಡಲು ಸಂಕೋಚ ಪಟ್ಟುಕೊಳ್ಳುವುದು ಎಂದಿಗೂ ಸಲ್ಲದು. 

click me!