ಈ ವರ್ಷದ ದಸರಾ ಮಹೋತ್ಸವಕ್ಕೆ 14 ಆನೆಗಳು ಆಯ್ಕೆ, ಈ ಬಾರಿಯೂ ಅಭಿಮನ್ಯು ಹೆಗಲಿಗೆ ಅಂಬಾರಿ

By Suvarna News  |  First Published Aug 14, 2024, 10:29 PM IST

ಆ.21ಕ್ಕೆ ಕಾಡಿನಿಂದ ನಾಡಿಗೆ ಗಜಪಯಣ. ಮೊದಲ ತಂಡದಲ್ಲಿ 9, ಎರಡನೇ ತಂಡದಲ್ಲಿ 5 ಆನೆಗಳು ಆಗಮನ. ಈ ಬಾರಿ ದಸರೆಗಾಗಿ 4 ಆನೆಗಳು ಮೀಸಲು


ಬಿ. ಶೇಖರ್‌ ಗೋಪಿನಾಥಂ

ಮೈಸೂರು (ಆ.14): ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ದಸರೆಯ ಮೊದಲ ಅತಿಥಿಯಾದ ಆನೆಗಳು ಕಾಡಿನಿಂದ ನಾಡಿಗೆ ಬರಲು ಮೂಹೂರ್ತ ನಿಗದಿಯಾಗಿದೆ. ಆ.21 ರಂದು ದಸರಾ ಆನೆಗಳ ಮೊದಲ ತಂಡವು ಮೈಸೂರಿಗೆ ಆಗಮಿಸಲಿವೆ.

Tap to resize

Latest Videos

undefined

ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಿಂದ ಆ.21 ರಂದು ದಸರಾ ಗಜಪಡೆ ಕಾಡಿನಿಂದ ನಾಡಿಗೆ ಕರೆ ತರಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯು ಈಗಾಗಲೇ ಅಗತ್ಯ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದೆ.

ಅನಂತ್ ಅಂಬಾನಿ ರಾಧಿಕಾ ಹನಿಮೂನ್‌, ಬೆಡ್‌ ರೂಂನ ಒಂದು ದಿನದ ಬಾಡಿಗೆ 31 ಲಕ್ಷ!

2024ರ ದಸರಾ ಮಹೋತ್ಸವದ ದಸರಾ ಗಡಪಡೆಗೆ ಅರಣ್ಯ ಇಲಾಖೆಯು 14 ಆನೆಗಳು ಆಯ್ಕೆ ಮಾಡಿದೆ. ಮೊದಲ ತಂಡದಲ್ಲಿ 9 ಆನೆಗಳು, ಎರಡನೇ ತಂಡದಲ್ಲಿ 5 ಆನೆಗಳು ಕಾಡಿನಿಂದ ನಾಡಿಗೆ ಬರಲಿದೆ. ಅಲ್ಲದೆ, 4 ಆನೆಗಳನ್ನು ಮೀಸಲು ಇರಿಸಲಾಗಿದೆ.

ಅಂಬಾರಿ ಆನೆ ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ದೊಡ್ಡಹರವೆ ಲಕ್ಷ್ಮಿ, ಕಂಜನ್, ರೋಹಿತ್ ಮತ್ತು ಏಕಲವ್ಯ ಆನೆಗಳು ಮೊದಲ ತಂಡದಲ್ಲಿ ಬರಲಿವೆ. ಎರಡನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು ಬರಲಿವೆ. ಹರ್ಷ, ಅಯ್ಯಪ್ಪ, ಪಾರ್ಥಸಾರಥಿ ಮತ್ತು ಮಾಲಾದೇವಿ ಮೀಸಲು ಆನೆಗಳಾಗಿ ಆಯ್ಕೆ ಮಾಡಲಾಗಿದೆ.

ವಿವಿಧ ರಾಜ್ಯದ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸುತ್ತೂರು ಮಠದ ಶಾಲೆಯಲ್ಲಿ 23 ಜೋಡಿ ಅವಳಿ ಮಕ್ಕಳು!

ಏಕಲವ್ಯ ಆನೆಗೆ ಮೊದಲ ದಸರಾ: 14 ಆನೆಗಳ ಪೈಕಿ 39 ವರ್ಷದ ಏಕಲವ್ಯ ಆನೆಯು ಮತ್ತಿಗೋಡು ಆನೆ ಶಿಬಿರದಿಂದ ಇದೇ ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದೆ. ಉಳಿದ ಆನೆಗಳು ಈ ಹಿಂದಿನ ದಸರೆಯಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿವೆ. ಹಾಗೆಯೇ ಮೀಸಲು ಪಟ್ಟಿಯಲ್ಲಿರುವ ಹರ್ಷ, ಪಾರ್ಥಸಾರಥಿ ಈ ಹಿಂದಿನ ದಸರೆಯಲ್ಲಿ ಪಾಲ್ಗೊಂಡಿದ್ದ ಆನೆಗಳಾಗಿವೆ. ಅಯ್ಯಪ್ಪ ಮತ್ತು ಮಾಲಾದೇವಿ ಹೊಸ ಆನೆಯಾಗಿದೆ.

ದಸರಾ ಗಜಪಡೆ: ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ದೊಡ್ಡಹರವೆ ಲಕ್ಷ್ಮಿ, ಕಂಜನ್, ರೋಹಿತ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು 2024ರ ದಸರೆಗೆ ಆಯ್ಕೆಯಾಗಿವೆ. ಈ 14 ಆನೆಗಳ ಪೈಕಿ ಯಾವುದಾದರೂ ಆನೆಗೆ ಅನಾರೋಗ್ಯ, ತಾಲೀಮು ವೇಳೆ ಹೊಗ್ಗಿಕೊಳ್ಳದಿರುವುದು, ಮದ ಅಥವಾ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡ ಪಕ್ಷದಲ್ಲಿ ಮೀಸಲು ಆನೆಗಳಾಗಿ ಆಯ್ಕೆಯಾಗಿರುವ ಹರ್ಷ, ಅಯ್ಯಪ್ಪ, ಪಾರ್ಥಸಾರಥಿ ಮತ್ತು ಮಾಲಾದೇವಿ ಆನೆಗಳನ್ನು ಕರೆ ತರಲು ಅರಣ್ಯ ಇಲಾಖೆಯು ನಿರ್ಧರಿಸಿದೆ.

2024ರ ದಸರೆಗೆ 14 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಮೊದಲ ತಂಡದಲ್ಲಿ 9 ಆನೆಗಳನ್ನು ಆ.21 ರಂದು ಗಜಪಯಣ ಮೂಲಕ ಮೈಸೂರಿಗೆ ಕರೆ ತರಲಾಗುವುದು. ಇದಾದ ಕೆಲವೇ ದಿನಗಳಲ್ಲಿ ಎರಡನೇ ತಂಡದಲ್ಲಿ 5 ಆನೆಗಳನ್ನು ನೇರವಾಗಿ ಮೈಸೂರಿಗೆ ಕರೆ ತರಲಾಗುವುದು. 4 ಮೀಸಲು ಆನೆಗಳನ್ನು ಆಯ್ಕೆ ಮಾಡಿದ್ದು, ಅವು ಆನೆ ಶಿಬಿರಗಳಲ್ಲಿ ಇರಲಿವೆ. ನಾಡಿಗೆ ಬಂದ ಆನೆಗಳಲ್ಲಿ ವ್ಯತ್ಯಾಸ ಕಂಡು ಬಂದರೇ ಮಾತ್ರ ಮೀಸಲು ಆನೆಗಳನ್ನು ಕರೆ ತರಲಾಗುವುದು.

- ಐ.ಬಿ. ಪ್ರಭುಗೌಡ, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ

click me!