ಶನಿ ದೋಷ ಪರಿಹಾರಕ್ಕೆ ಮಾ.18 ಅದ್ಭುತ ಯೋಗ; ಹೀಗೆ ಮಾಡಿ..

By Suvarna NewsFirst Published Mar 16, 2023, 12:11 PM IST
Highlights

ಶನಿದೇವನ ಆಶೀರ್ವಾದ ಪಡೆಯಲು ಮಾರ್ಚ್ 18ರಂದು ಅದ್ಭುತ ದಿನವಾಗಿದೆ. ಶನಿಯಿಂದ ತೊಂದರೆ ಅನುಭವಿಸುತ್ತಿದ್ದರೆ ಈ ದಿನ ಕೆಲ ಪರಿಹಾರ ಕ್ರಮಗಳನ್ನು ಅನುಸರಿಸಿ. 

ಮಾರ್ಚ್ 18 ಶನಿದೇವನ ಆಶೀರ್ವಾದ ಪಡೆಯಲು ಅತ್ಯಂತ ಮಂಗಳಕರ ದಿನವಾಗಿದೆ. ಈ ದಿನದಂದು ರೂಪುಗೊಳ್ಳುವ ಮಂಗಳಕರ ಯೋಗವು ಶನಿ ದೋಷದಿಂದ ಬಳಲುತ್ತಿರುವ ಜನರಿಗೆ ಪರಿಹಾರವನ್ನು ನೀಡುತ್ತದೆ. ಪ್ರಸ್ತುತ, ಶನಿಯು ತನ್ನದೇ ಆದ ರಾಶಿಚಕ್ರ ಕುಂಭ ರಾಶಿಯಲ್ಲಿ ಸಾಗುತ್ತಿದೆ. ಶನಿಯ ಅರ್ಧಾರ್ಧ, ಧೈಯ್ಯಾ, ಸಾಡೇಸಾತಿಯಿಂದ ಬಳಲುತ್ತಿರುವವರು ಈ ದಿನ ಕೆಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೋಷ ಕಡಿಮೆ ಮಾಡಿಕೊಳ್ಳಬಹುದು. 

ಪಂಚಾಗ ಪ್ರಕಾರ, ಮಾರ್ಚ್ 18, 2023 ಅನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿನ ಶ್ರವಣ ನಕ್ಷತ್ರವಿದೆ, ಅದರ ಅಧಿಪತಿ ಶನಿ ದೇವನೇ. ಇದರೊಂದಿಗೆ ಈ ದಿನ ಶಿವಯೋಗ ನಡೆಯಲಿದೆ. ಇವೆಲ್ಲವೂ ಒಟ್ಟಾಗಿ ಶನಿವಾರದಂದು ಶನಿ ದೇವನನ್ನು ಪೂಜಿಸಲು ಉತ್ತಮವೆಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಪ್ರಸ್ತುತ ಶನಿಯು ಐದು ರಾಶಿಚಕ್ರ ಚಿಹ್ನೆಗಳ ಮೇಲೆ ವಿಶೇಷ ಅಂಶವನ್ನು ಹೊಂದಿದೆ. ಶನಿಯ ಧೈಯ್ಯಾವು ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಮೇಲೆ ಓಡುತ್ತಿದೆ. ಇನ್ನೊಂದೆಡೆ ಮಕರ, ಕುಂಭ, ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆಯುತ್ತಿದೆ.

Panch Mahayog: 700 ವರ್ಷಗಳ ಬಳಿಕ ಪಂಚ ಮಹಾಯೋಗ; 3 ರಾಶಿಗಳಿಗೆ ಮಹಾ ಅದೃಷ್ಟ

  • ಏಕಾದಶಿಯು ಶನಿವಾರದಂದು ಬರುತ್ತಿದ್ದು, ಈ ದಿನ ಭಗವಾನ್ ವಿಷ್ಣುವಿನ ಆರಾಧನೆಯು ಪರಿಪೂರ್ಣ ಸಂಯೋಜನೆಯಾಗಿದೆ. ಶನಿಯು ವಿಷ್ಣು ಅವತಾರ ಭಗವಾನ್ ಕೃಷ್ಣನ ಆರಾಧಕನಾಗಿದ್ದಾನೆ, ಅದಕ್ಕಾಗಿಯೇ ಈ ದಿನ ಶನಿದೇವನೊಂದಿಗೆ ವಿಷ್ಣುವನ್ನು ಪೂಜಿಸುವುದರಿಂದ ಶನಿಯ ಕೋಪವು ಕಡಿಮೆಯಾಗುತ್ತದೆ.
  • ಅಲ್ಲದೆ, ಈ ದಿನ ಶಿವಯೋಗ ಇರುವ ಕಾರಣ, ಶಿವನಿಗೆ ಜಲಾಭಿಷೇಕ ಮಾಡಿಸುವುದು ಕೂಡಾ ಉತ್ತಮವಾಗಿದೆ. ಶಿವಪೂಜೆಯಿಂದಲೂ ಶನಿದೋಷ ಕಡಿಮೆಯಾಗುವುದು. ಏಕೆಂದರೆ, ಶಿವಭಕ್ತರನ್ನು ಶನಿ ಹೆಚ್ಚಾಗಿ ಕಾಡುವುದಿಲ್ಲ.
  • ಶನಿವಾರದಂದು ಅಗತ್ಯವಿರುವವರಿಗೆ ಒರಟಾದ ಧಾನ್ಯಗಳನ್ನು ದಾನ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಅತ್ಯಂತ ಫಲಪ್ರದ ಎಂದು ಪರಿಗಣಿಸಲಾಗಿದೆ. ಈ ದಿನದಂದು ಕುಷ್ಠರೋಗಿಗಳ ಸೇವೆ ಮಾಡುವ ಮೂಲಕ ಶನಿದೇವನು ಸಂತುಷ್ಟನಾಗುತ್ತಾನೆ.
  • ಶನಿಯನ್ನು ಮೆಚ್ಚಿಸಲು, ಯಾವುದೇ ವ್ಯಕ್ತಿ ಶನಿವಾರ ಸೂರ್ಯೋದಯದ ನಂತರ ಅಶ್ವತ್ಥ ಮರವನ್ನು ಪೂಜಿಸಿ, ನೀರನ್ನು ಅರ್ಪಿಸಿ ಮತ್ತು ಎಣ್ಣೆ ದೀಪವನ್ನು ಬೆಳಗಿಸಬೇಕು. ಇದರಿಂದ ಯಾವಾಗಲೂ ಶನಿದೇವನ ಆಶೀರ್ವಾದವನ್ನು ಪಡೆಯುತ್ತಾನೆ. ಅಶ್ವತ್ಥ ಮರವನ್ನು ಪೂಜಿಸುವುದರಿಂದ ಶನಿ ದೇವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ.
  • ಈ ದಿನ ಕಪ್ಪು ಅಥವಾ ಗಾಢ ನೀಲಿ ಬಟ್ಟೆಗಳನ್ನು ಧರಿಸಿ.
  • ಭಗವಾನ್ ಹನುಮಾನ್ ಅಥವಾ ಭಗವಾನ್ ಶನಿ ದೇವ ದೇವಸ್ಥಾನಕ್ಕೆ ಭೇಟಿ ನೀಡಿ.

    ವಿಷ್ಣುವಿನ ದಶಾವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು?
  •  
  • ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಎಳ್ಳಿನ ಎಣ್ಣೆಯಲ್ಲಿ ಅದ್ದಿ ಮಣ್ಣಿನ ದೀಪದ ಮೇಲೆ ಇಡಬೇಕು.
  • ಶನಿವಾರ ಸುಂದರಕಾಂಡ ಅಥವಾ ಶನಿ ಕವಚವನ್ನು ಪಠಿಸಿ.
  • ಹನುಮಾನ್ ದೇವಸ್ಥಾನದ ಹೊರಗೆ ಭಿಕ್ಷುಕರಿಗೆ ಆಹಾರ ಪದಾರ್ಥಗಳನ್ನು ನೀಡಿ.
  • ನೀವು ಶನಿ ದೇವರನ್ನು ಮೆಚ್ಚಿಸಲು ಬಯಸಿದರೆ, ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಇದು ಅತ್ಯಂತ ಅಶುಭಕರ ಮತ್ತು ಇದು ನಿಮ್ಮ ಜೀವನದಲ್ಲಿ ಸಾಲಗಳನ್ನು ತರುತ್ತದೆ. ಅಲ್ಲದೆ, ನಿಮ್ಮ ಜೀವನದಲ್ಲಿ ನಕಾರಾತ್ಮಕ ಘಟನೆಗಳನ್ನು ಪ್ರಚೋದಿಸುತ್ತದೆ.
  • “ಓಂ ಪ್ರಾಂ ಪ್ರೇಮ್ ಪ್ರಾವೋಂ ಸಹ ಶನೇಶ್ಚರಾಯ ನಮಃ” ಈ ಮಂತ್ರವನ್ನು ಜಪಿಸಿ. 
  • ಕೆಟ್ಟ ಚಟಗಳನ್ನು ದೂರವಿಟ್ಟಷ್ಟೂ ಶನಿ ದೋಷ ನಿಮ್ಮಿಂದ ದೂರವಾಗುತ್ತದೆ. ಏಕೆಂದರೆ, ಕೆಟ್ಟದ್ದಕ್ಕೆಲ್ಲ ಶನಿ ಶಿಕ್ಷೆ ನೀಡಿಯೇ ನೀಡುತ್ತಾನೆ.
click me!