ಮೊಹರಂ ನಿಮಿತ್ಯ ಹಾಕಿದ ನಿಗಿನಿಗಿ ಕೆಂಡದಲ್ಲಿ‌ ಕಂಬಳಿ‌ ಹಾಸಿ‌ ಕುಳಿತ ವ್ಯಕ್ತಿ!

By Ravi Janekal  |  First Published Jul 29, 2023, 2:46 PM IST

ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಜಿಲ್ಲೆಯಲ್ಲಿ ಹಲವೆಡೆ ಪವಾಡಗಳು ಕೇಳಿಬರುತ್ತವೆ. ಆದರೆ ಈ ಬಾರಿ ಮೊಹರಂ ಆಚರಣೆ ವೇಳೆ ಅಂಥದೊಂದು ಪವಾಡಕ್ಕೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮ ಸಾಕ್ಷಿಯಾಗಿದೆ.


ವಿಜಯಪುರ (ಜು.29) : ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಜಿಲ್ಲೆಯಲ್ಲಿ ಹಲವೆಡೆ ಪವಾಡಗಳು ಕೇಳಿಬರುತ್ತವೆ. ಆದರೆ ಈ ಬಾರಿ ಮೊಹರಂ ಆಚರಣೆ ವೇಳೆ ಅಂಥದೊಂದು ಪವಾಡಕ್ಕೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮ ಸಾಕ್ಷಿಯಾಗಿದೆ.

ನಿಗಿನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತ ವ್ಯಕ್ತಿ!

Tap to resize

Latest Videos

ಅಮರಗೋಳ ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ ಕೆಂಡದ ಸುತ್ತ ಅಲಾಯಿ ಕುಣಿದಿರುವ ಗ್ರಾಮಸ್ಥರು. ಇಂದು  ನಸುಕಿನ ವೇಳೆ ಮೊಹರಂ ನಿಮಿತ್ಯ ಹಾಕಿದ್ದ ಕೆಂಡದ ಮೇಲೆ ಭಕ್ತನೊಬ್ಬ ಕಂಬಳಿ ಹಾಸಿ ಕುಳಿತಿದ್ದಾನೆ!  ರಾತ್ರಿಯೆಲ್ಲ ಕೆನ್ನಾಲಗೆ ಚಾಚಿದ್ದ ಬೆಂಕಿ ಬೆಳಗಿನ ವೇಳೆ ನಿಗಿನಿಗಿ ಉರಿಯುತ್ತಿತ್ತು. ಕೆಂಡದ ಸಮೀಪಕ್ಕೆ ಹೋಗುವುದೇ ಅಸಾದ್ಯವೆಂಬಷ್ಟು ಕಿಚ್ಚು ಬಡಿಯುತ್ತಿತ್ತು. ಹೀಗಿರುವಾಗ ವ್ಯಕ್ತಿಯೊಬ್ಬ ಕೆಂಡದಲ್ಲಿ ಕುಳಿತಿಕೊಳ್ಳುವುದಿರಲಿ, ನಿಲ್ಲುವುದಷ್ಟು ಕೂಡ ಅಸಾಧ್ಯವೆಂಬಷ್ಟು ಕಿಚ್ಚು. ಆದರೆ ಇದು ದೇವರು ಪವಾಡವೋ, ಭಕ್ತಿಯ ಪರಕಾಷ್ಠೆಯೋ ಅಂಥದೊಂದು ಪವಾಡ ನಡೆದಿದೆ.

ಮೊಹರಂ ಹಬ್ಬ: ಚಿಕ್ಕಮಗಳೂರಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದ್ಯೋತಕ

ಗ್ರಾಮದ ಯಲ್ಲಾಲಿಂಗ ಹಿರೇಹಾಳ ಎಂಬಾತ ದೇವರ ಎದುರಿಗೆ ಹಾಕಿದ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತಿದ್ದಾನೆ. ಹೀಗೆ ಕೆಲ ಕ್ಷಣಗಳ ಕಾಲ ಕೆಂಡದಲ್ಲಿ ಕುಳಿತು ಭಕ್ತಿ ಸಮರ್ಪಿಸಿದ್ದಾನೆ. ಅಷ್ಟೇ ಅಲ್ಲದೆ ಬರಿಗೈಲಿ ಕೆಂಡದುಂಡೆಗಳನ್ನು ಹಿಡಿದು ದೇವರಿಗೆ ಕೆಂಡದಾರುತಿ ಮಾಡಿದ್ದಾನೆ. ಇಷ್ಟಾದರೂ ಯಲ್ಲಾಲಿಂಗ ಏನೂ ಹಾಗೇ ಇಲ್ಲವೆಂಬಂತೆ ಇರುವುದು ಕಂಡು ಗ್ರಾಮಸ್ಥರು ಬೆಕ್ಕಸ ಬೆರಗಾಗಿದ್ದಾರೆ. ಬೆಂಕಿ ಮೇಲೆ‌ ಕುಳಿತರೂ ಕೈಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ  ಯಾವುದೇ ಸುಟ್ಟ ಗಾಯವಾಗಿಲ್ಲ. ಯಲ್ಲಾಲಿಂಗನ ಭಕ್ತಿಯ ಪಾರಾಕಷ್ಠತೆಗೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ  ಇದು ಅಲಾಯಿ ದೇವರ ಪವಾಡವೆಂದು‌ ಗ್ರಾಮಸ್ಥರು ಬಲವಾಗಿ ನಂಬಿದ್ದಾರೆ.

 

click me!