ನಿಜಗಲ್ ಸಿದ್ದರ ಬೆಟ್ಟದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ

By Govindaraj S  |  First Published Dec 5, 2022, 10:22 PM IST

ಹನುಮ ಜಯಂತಿಯನ್ನು ದೇಶಾದ್ಯಂತ ಶ್ರದ್ದ ಭಕ್ತಿಯಿಂದ ಆಚರಿಸಲಾಗುತ್ತಿದೆ. 800 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ನಿಜಗಲ್ಲು ಸಿದ್ದರಬೆಟ್ಟಕ್ಕೆ ವಿದ್ಯುತ್ ದೀಪದ ಬೆಳಕಿನ ಮೂಲಕ ಇಡೀ ಬೆಟ್ಟವನ್ನು ಸಿಂಗಾರ ಮಾಡಲಾಗಿದೆ. 


ವರದಿ: ಡಿ.ಮಂಜುನಾಥ್ ಹೆಬ್ಬಗೋಡಿ, ಬೆಂಗಳೂರು ಗ್ರಾಮಾಂತರ

ನೆಲಮಂಗಲ (ಡಿ.05): ಹನುಮ ಜಯಂತಿಯನ್ನು ದೇಶಾದ್ಯಂತ ಶ್ರದ್ದ ಭಕ್ತಿಯಿಂದ ಆಚರಿಸಲಾಗುತ್ತಿದೆ. 800 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ನಿಜಗಲ್ಲು ಸಿದ್ದರಬೆಟ್ಟಕ್ಕೆ ವಿದ್ಯುತ್ ದೀಪದ ಬೆಳಕಿನ ಮೂಲಕ ಇಡೀ ಬೆಟ್ಟವನ್ನು ಸಿಂಗಾರ ಮಾಡಲಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಸಿದ್ದರಬೆಟ್ಟ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಹನುಮ ಜಯಂತಿಯಂದು ಬೆಟ್ಟಕ್ಕೆ 800 ಹನುಮ ಮಾಲೆ ಧರಿಸಿದ ಭಕ್ತರು ಬೆಟ್ಟಕ್ಕೆ ಪಾದಯಾತ್ರೆ  ಮಾಡಿದ್ದಾರೆ. 

Tap to resize

Latest Videos

ಇಡೀ ಬೆಟ್ಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿ ಭಕ್ತಿ ಭಾವ: ಒಂದೆಡೆ ವಿವಿಧ ಬಣ್ಣದ ವಿದ್ಯುತ್  ಲೈಟಿಂಗ್‌ನಿಂದ ಸಿಂಗಾರಗೊಂಡ ಇಡೀ ಬೆಟ್ಟ, ಹನುಮಜಯಂತಿ ಆಚರಣೆಗೆ ಸಿದ್ದತೆ ಹೌದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ  ಸೋಂಪುರ ಹೋಬಳಿಯ ನಿಜಗಲ್ಲು ಸಿದ್ದರಬೆಟ್ಟಕ್ಕೆ  800ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಹೊಯ್ಸಳ, ವಿಜಯನಗರ, ಮರಾಠ, ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟ ಪ್ರದೇಶ, ನಿಜಗಲ್ಲು ದುರ್ಗಕ್ಕೆ ಸಿದ್ದರಬೆಟ್ಟ, ಉದ್ದಂಡಯ್ಯನ ಬೆಟ್ಟ, ಶೂರಗಿರಿ ಅಂತಾನು  ಕರೆಯಲಾಗಿದೆ.

Hampi Utsav: ಜನವರಿ ತಿಂಗಳಾಂತ್ಯಕ್ಕೆ 3 ದಿನಗಳ ಕಾಲ ಹಂಪಿ ಉತ್ಸವ: ಸಚಿವೆ ಶಶಿಕಲಾ ಜೊಲ್ಲೆ

ಸಿದ್ದಪ್ಪ ನೆಲೆಯಾಗಿರುವ ಸಿದ್ದರ  ಬೆಟ್ಟ ಹಲವು ಮಹಾಪುರುಷರ ತಪ್ಪಸ್ಸಿನ ನೆಲೆಯಾಗಿದೆ, ಬೆಟ್ಟದಲ್ಲಿ ಕೋಟೆ, ಖಜಾನೆ, ಅರಮನೆ, ಸಿದ್ದರಗುಡಿ, ಗಣಪತಿ ದೇವಾಲಯ ಸೇರಿದಂತೆ  ಹಲವು ದೇವಾಲಯಗಳಿವೆ. ಈ ದೇವಾಲಯ ಉಳಿವಿಗೆ ಸ್ಥಳೀಯರು ಕಳೆದ ಐದಾರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮೂಲಕ ವಿಭಿನ್ನವಾಗಿ ಆಚರಣೆ ಮಾಡುತಿದ್ದಾರೆಂದು ಸ್ಥಳೀಯ ಸಮಾಜ ಸೇವಕ ಜಗದೀಶ್ ಚೌದರಿ ತಿಳಿಸಿದರು. ನೆಲಮಂಗಲ ತಾಲೂಕಿನ  ಯುವ ಸಮುದಾಯ ಮತ್ತು ಶ್ರೀನಿಜಗಲ್ಲು  ಸಿದ್ದರಬೆಟ್ಟ ಸೇವಾ ಸಮಿತಿ ಬೆಟ್ಟಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದು, ಲೋಕ ಕಲ್ಯಾಣಕ್ಕಾಗಿ ಹೋಮ ಹವನ ಪೂಜಾ ಕೈಂಕರ್ಯವನ್ನ ನಡೆಸಲಾಗಿದೆ. 

ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳನ್ನು ತೆರೆಯಲು ಅವಕಾಶ ಇಲ್ಲ: ಕೆ.ಎಸ್.ಈಶ್ವರಪ್ಪ

ಈಗಾಗಲೇ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಹಾಕಲಾಗಿದ್ದು, ನಿಜಗಲ್ಲು ಸಿದ್ದರಬೆಟ್ಟವನ್ನ ವಿಶ್ವಪ್ರಸಿದ್ದಿಯನ್ನಾಗಿ ಮಾಡಲು 3562 ಆಡಿ ಎತ್ತರ ಬೆಟ್ಟವನ್ನು ವಿವಿಧ ವಿದ್ಯುತ್ ದೀಪದ ಬೆಳಕಿನಿಂದ ಅಲಂಕಾರ ಮಾಡಲಾಗಿದೆ. ಇಡೀ ಬೆಟ್ಟವನ್ನು ಬಣ್ಣ ಬಣ್ಣದ ಬೆಳಕಿನಿಂದ ಸಿಂಗಾರ  ಮಾಡಲಾಗಿದ್ದು, ಸಂಪೂರ್ಣವಾಗಿ ಸಿದ್ದರ ಬೆಟ್ಟ ಬೆಳಕಿನಿಂದ ದೀಪಾಲಂಕಾರಗೊಂಡು ಇಡೀ ಬೆಟ್ಟವೇ ಬೆಳಕಿನ  ದಿಬ್ಬದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಪಾರಂಪರಿಕ ಹಿಂದು ಮುಸ್ಲಿಂ ಭಾವೈಕ್ಯ ಹಿನ್ನೆಲೆ ಉಳ್ಳ ನಿಜಗಲ್ ರಾಣಿ ಆಳಿದ ಬೆಟ್ಟ ಇದೀಗ ಹೊಸರೂಪ ಪಡೆಯುತ್ತಿದೆ. ಹನುಮ ಜಯಂತಿಯಂದು ಬೆಟ್ಟಕ್ಕೆ ಮತ್ತಷ್ಟು ರಂಗು ಬಂದಿತ್ತು.

click me!