ಇಂದು ಶನಿವಾರ ಯಾರಿಗೆ ಶುಭ? ಅಶುಭ?

Published : Dec 07, 2024, 10:39 AM ISTUpdated : Dec 07, 2024, 01:53 PM IST
ಇಂದು ಶನಿವಾರ ಯಾರಿಗೆ ಶುಭ? ಅಶುಭ?

ಸಾರಾಂಶ

7ನೇ ಡಿಸೆಂಬರ್ 2024 ಶನಿವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.  

ಮೇಷ(Aries): ಬಹಳ ದಿನದಿಂದ ಮುಂದೂಡಿಕೊಂಡು ಬಂದ ಕೆಲಸಕ್ಕೆ ಇಂದು ಮುಹೂರ್ತ ಬರಲಿದೆ. ಹಳೆ ಸ್ನೇಹಿತರ ಭೇಟಿಯಿಂದ ಮನೋಲ್ಲಾಸ. ಸಣ್ಣಪುಟ್ಟ ತಿರುಗಾಟದಿಂದ ಸಂತಸ. ಧನನಷ್ಟ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಮಕ್ಕಳಿಂದ ಚೈತನ್ಯ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. 

ವೃಷಭ(Taurus): ಮನೆಯ ಸ್ವಚ್ಛತಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಬಹಳ ದಿನಗಳ ನಂತರ ಸ್ವಂತಕ್ಕಾಗಿ ಸಮಯ ಮೀಸಲಿಡುವುದರಿಂದ ಸಂಜೆಯ ಹೊತ್ತಿಗೆ ಸಂತೋಷದಲ್ಲಿರುವಿರಿ. ಪ್ರೀತಿಪಾತ್ರರೊಂದಿಗೆ ಮಾತನಾಡುವುದರಿಂದ ದುಗುಡ ಕಳೆಯುವುದು. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ಮಿಥುನ(Gemini): ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಬಂಧು ಮಿತ್ರರ ಭೇಟಿಯಿಂದ ಸಂತಸ. ಧಾರ್ಮಿಕ ವಿಷಯಗಳಲ್ಲಿ ಮನಸ್ಸು ಮುಳುಗುವುದು. ನಿರುದ್ಯೋಗಿಗಳಿಗೆ ಪರಿಚಯದವರಿಂದಲೇ ಅವಕಾಶಗಳು ಅರಸಿ ಬರುವುವು. ಗಣಪತಿಗೆ ದೂರ್ವೆ ಸಮರ್ಪಿಸಿ. 

ಕಟಕ(Cancer): ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದು. ಮನೆಯಲ್ಲಿ ಶುಭ ಕಾರ್ಯಕ್ಕೆ ನಾಂದಿ ಹಾಡುವಿರಿ. ಕುಟುಂಬ ಸದಸ್ಯರ ನಡುವೆ ಇರುವ ವೈಮನಸ್ಸು ಶಮನವಾಗುವುದು. ನೆಂಟರಿಷ್ಟರ ಜೊತೆ ಮಾತುಕತೆ. ಉದ್ಯೋಗದಲ್ಲಿ ಪ್ರಗತಿ. ನವಗ್ರಹ ಸ್ಮರಣೆ ಮಾಡಿ. 

ಸಿಂಹ(Leo): ಖರ್ಚುಗಳು ಹಠಾತ್ ಹೆಚ್ಚಿ ಚಿಂತೆ ಕಾಡುವುದು. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಯಿಂದ ಮನಸ್ಸಿಗೆ ಕಿರಿಕಿರಿ. ವಾಹನ ಖರೀದಿ ಮಾಡುನ ಸಂಭವಗಳಿವೆ. ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಕನ್ಯಾ(Virgo): ವಿನಾ ಕಾರಣ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ಕೊರಗುವಿರಿ. ಇದರಿಂದ ಮನಸ್ಸು ಕ್ಲೇಶಕ್ಕೊಳಗಾಗುವುದು. ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ನಿಮ್ಮ ಮನಸ್ಸಿನ ಕೊರಗನ್ನು ಹತ್ತಿರದವರೊಂದಿಗೆ ಹಂಚಿಕೊಳ್ಳಿ. ವಿಷ್ಣು ಸಹಸ್ರನಾಮ ಪಠಿಸಿ. 

ತುಲಾ(Libra): ನೆಂಟರಿಷ್ಟರ ಮನೆಗೆ ಭೇಟಿ ನೀಡುವಿರಿ. ಹರಟೆ, ಸವಿ ಭೋಜನದಿಂದ ಉಲ್ಲಾಸ. ವೈಯಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಯತ್ನಿಸಿ. ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಬದುಕಿನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬ ಚಿಂತೆ ಆವರಿಸುವುದು. ಆದಷ್ಟು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ. ವಾಯುವಿಹಾರ ಹೋಗಿಬನ್ನಿ. ರುಚಿಕರ ಭೋಜನ ಸವಿಯುವಿರಿ. ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಂಗತಿಯಲ್ಲಿ ನಿರಾಶೆ ಅನುಭವಿಸುವಿರಿ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಧನುಸ್ಸು(Sagittarius): ಬಹಳ ದಿನದಿಂದ ಬಿಡಬೇಕೆಂದಿರುವ ಕೆಟ್ಟ ಚಟವೊಂದಕ್ಕೆ ಇಂದು ತಿಲಾಂಜಲಿ ಇಡುವಿರಿ. ಸಂಗಾತಿಯ ಸಹಕಾರದಿಂದ ಹೊಸ ಹೂಡಿಕೆಗೆ ಕೈ ಹಾಕುವಿರಿ. ವಸ್ತ್ರ ವಡವೆಗಾಗಿ ಧನವ್ಯಯ. ಮಕ್ಕಳ ಪ್ರಗತಿಯಿಂದ ಸಮಾಧಾನ. ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಶಾರದಾಂಬೆಯನ್ನು ಸ್ಮರಿಸಿಕೊಳ್ಳಿ. 

ಮಕರ(Capricorn): ಹಿರಿಯರ  ಸಹಾಯದಿಂದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುವು. ದಿನಸಿ, ವಸ್ತ್ರ, ಒಡವೆ, ವಾಹನ, ಹೋಟೆಲ್ ವ್ಯಾಪಾರದಲ್ಲಿ ಲಾಭ. ಹೊಸ ಮನೆ ಖರೀದಿ ಸಂಬಂಧ ಚರ್ಚೆ ಮುಂದೆ ಹೋಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಿದೆ. ತಂದೆತಾಯಿಯ ಆಶೀರ್ವಾದ ಪಡೆಯಿರಿ. 

ಕುಂಭ(Aquarius): ಬಿಡುವಿಲ್ಲದ ಕೆಲಸದಿಂದ ಮನಸ್ಸಿಗೆ ಕಸಿವಿಸಿಯಾಗುವುದು. ಸಮಯದ ಅಭಾವ ಕಾಡುವುದು. ಕುಟುಂಬ ಸದಸ್ಯರ ನಡುವಳಿಕೆಯಿಂದ ಬೇಸರ. ಪ್ರಮುಖ ನಿರ್ಧಾರಗಳಿಗೆ ಸಿಗದ ಮನ್ನಣೆ ಕಂಗೆಡಿಸುವುದು. ಎಳ್ಳೆಣ್ಣೆಯಲ್ಲಿ ಮುಖ ನೋಡಿಕೊಂಡು ಶನಿಯನ್ನು ಪ್ರಾರ್ಥಿಸಿ. 

ಮೀನ(Pisces): ಹೊಸ ಕಲಿಕೆಯಲ್ಲಿ ತೊಡಗುವುದರಿಂದ ಮನಸ್ಸಿಗೆ ಸಂತಸ. ತಾಂತ್ರಿಕ ವಿಷಯಗಳಲ್ಲಿ ಜ್ಞಾನ ವೃದ್ಧಿಯಾಗುವುದು. ದೂರದ ಸಂಬಂಧಿಯಿಂದ ಸುವಾರ್ತೆ ಕೇಳಿಬರುವುದು. ಮಕ್ಕಳ ಬದುಕಿನ ಸಮಸ್ಯೆಗಳು ತೀರುವುದರಿಂದ ಮನಸ್ಸು ಹಗುರಾಗುವುದು. ಕೃಷ್ಣ ಸ್ಮರಣೆ ಮಾಡಿ. 


 

PREV
Read more Articles on
click me!

Recommended Stories

ಶುಕ್ರನು ಮೀನ ರಾಶಿಯಲ್ಲಿ ಸಾಗಲಿದ್ದು, ಅಪರೂಪದ ಕಾಕತಾಳೀಯತೆಯನ್ನು ಸೃಷ್ಟಿಸುತ್ತದೆ, ಈ 3 ರಾಶಿಯವರು ಶ್ರೀಮಂತವಾಗಿರುತ್ತವೆ
ಪ್ರಬಲ ರಾಜಯೋಗ 3 ರಾಶಿಗೆ ಅದೃಷ್ಟ ತರುತ್ತದೆ, ಡಿಸೆಂಬರ್ 19 ರಿಂದ ದಿನಗಳು ಬದಲಾಗುತ್ತೆ, ಹೊಸ ಉದ್ಯೋಗಾವಕಾಶ, ಹಣದ ಹೊಳೆ