ದೀಪಾವಳಿ ಹಬ್ಬವೆಂದರೆ ಪ್ರತಿಮನೆಯಲ್ಲೂ ಸಿಹಿತಿನಿಸುಗಳ ಮೇಳವೇ ನಡೆಯುತ್ತದೆ. ಆದರೆ, ಈಗೀಗ ಹೆಲ್ತ್ ಕಾನ್ಷಿಯಸ್ ಜನರು ಸಿಹಿತಿನಿಸುಗಲಿಂದ ದೂರವಿರಲು ಬಯಸುತ್ತಾರೆ. ಹಾಗಾಗಿ, ಈಗ ಸ್ವೀಟ್ ಬಾಕ್ಸ್ ಗಿಫ್ಟ್ ನೀಡುವ ಬದಲು ಆರೋಗ್ಯಕರ ಆಯ್ಕೆಗಳನ್ನು ಮಾಡಿ ಉಡುಗೊರೆ ನೀಡುವುದು ಟ್ರೆಂಡ್.
ದೀಪಾವಳಿ ಎಂದರೆ ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬದವರಿಗೆ ಸ್ವೀಟ್‌ಗಳನ್ನು ಹಾಗೂ ಎಣ್ಣೆಯಲ್ಲಿ ಕರಿದ ಖಾರದ ತಿನಿಸುಗಳನ್ನು ಕೊಡುವುದು ಕಾಮನ್. ಆದರೆ, ಈಗ ಎಲ್ಲೆಡೆ ಎಲ್ಲರಲ್ಲೂ ಆರೋಗ್ಯಪ್ರಜ್ಞೆ ಹೆಚ್ಚಾಗಿದ್ದು, ಇಂಥ ಸ್ವೀಟ್ ಹಾಗೂ ಖಾರಗಳನ್ನು ಮತ್ಯಾರಿಗೋ ಪಾಸ್ ಮಾಡುವುದೋ ಅಥವಾ ಕಸದ ಡಬ್ಬಿಗೆ ಹಾಕುವುದೇ ಹೆಚ್ಚು. ಹಾಗಾಗಿ, ಈ ಬಾರಿ ಉಡುಗೊರೆ ನೀಡುವಾಗ ಸಕ್ಕರೆಯ ತಿನಿಸುಗಳ ಬದಲು ಹೆಲ್ದೀ ಆಹಾರ ಪದಾರ್ಥಗಳ ಆಯ್ಕೆ ಮಾಡಿ.
ಫ್ರೂಟ್ ಬಾಸ್ಕೆಟ್
undefined
ಹಣ್ಣುಗಳ ಬಾಸ್ಕೆಟ್ ತೆಗೆದುಕೊಂಡವರಿಗೆ ಖುಷಿಯ ಜೊತೆಗೆ ಸ್ವಲ್ಪ ಮಟ್ಟಿನ ಆರೋಗ್ಯವನ್ನೂ ನೀಡುತ್ತದೆ. ಅಲ್ಲದೆ, ಹಣ್ಣುಗಳನ್ನಿಷ್ಟ ಪಡದವರು ಯಾರೂ ಇರಲು ಸಾಧ್ಯವಿಲ್ಲ. ಆರೋಗ್ಯದ ಮೇಲೆ ಅತಿಯಾಗಿ ಕಾಳಜಿ ಉಳ್ಳವರು, ಡಯಟ್ ಮಾಡುವವರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಹಣ್ಣುಗಳನ್ನು ಅಳುಕಿಲ್ಲದೆ ಸೇವಿಸಬಹುದು. ಇವನ್ನು ರಿಸೈಕಲ್ ಮಾಡುವ ಅಗತ್ಯವೂ ಇಲ್ಲ.
ದೀಪಾವಳಿ: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ
ತ್ಯಾಜ್ಯವೆಂದರೆ ಸಿಪ್ಪೆಯಷ್ಟೇ, ಅದನ್ನು ಮನೆಯ ಹೂಕುಂಡಗಳಿಗೆ ಗೊಬ್ಬರವಾಗಲು ಹಾಕಿದರಾಯಿತು. ಹೀಗೆ ಹಣ್ಣಿನ ಬುಟ್ಟಿಯನ್ನು ನೀಡುವಾಗ ಆಕರ್ಷಕ ಬಿದಿರಿನ ಬುಟ್ಟಿ ಆರಿಸಿ, ಅದರಲ್ಲಿ ಹಲವು ಬಣ್ಣಗಳ ಹಲವು ವಿಧದ ಹಣ್ಣುಗಳನ್ನು ಇಟ್ಟು ಕೊಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರಲ್ಲಿಟ್ಟ ಹಣ್ಣುಗಳ ನ್ಯೂಟ್ರಿಶನ್ ವ್ಯಾಲ್ಯೂ ಹಾಗೂ ಆರೋಗ್ಯ ಲಾಭಗಳನ್ನು ಬರೆದಿರುವ ಚಾರ್ಟ್‌ನ ಪಾಂಪ್ಲೆಂಟೊಂದನ್ನು ಸಹ ಜೊತೆಗಿಡಬಹುದು. ಇದರಲ್ಲಿ ದೀಪಾವಳಿಗೆ ವಿಶ್ ಮಾಡುವುದು ಮರೆಯಬೇಡಿ.
ಟೀ ಪೌಡರ್‌ಗಳು
ಗ್ರೀನ್ ಟೀ ಆ್ಯಂಟಿ ಆಕ್ಸಿಡೆಂಟ್‌ಗಳ ಕಣಜ. ಈಗಂತೂ ಎಲ್ಲರೂ ಆರೋಗ್ಯಕ್ಕಾಗಿ, ತೂಕ ಇಳಿಕೆಗಾಗಿ ಗ್ರೀನ್ ಟೀ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಈ ಬಾರಿ ಗ್ರೀನ್ ಟೀ. ವೈಟ್ ಟೀ, ಲೆಮನ್ ಟೀ, ಲ್ಯಾವೆಂಡರ್, ಹೈಬಿಸ್ಕಸ್ ಟೀ, ಮಸಾಲಾ ಚಾಯ್ ಪೌಡರ್‌ಗಳಿರುವ ಬಾಕ್ಸ್‌ಗಳನ್ನೊಳಗೊಂಡ ಒಂದು ಸುಂದರ ಗಿಫ್ಟ್ ಬಾಕ್ಸ್‌ನ್ನು ಪ್ರೀತಿಪಾತ್ರರಿಗೆ ದೀಪಾವಳಿ ಉಡುಗೊರೆಯಾಗಿ ನೀಡಿ.
ಸೀಡ್ ಬಾಕ್ಸ್
ಡ್ರೈ ಫ್ರೂಟ್‌ಗಳು ನಟ್ಸ್ ನೀಡುವುದು ದೀಪಾವಳಿಯಲ್ಲಿ ಕಾಮನ್. ಅದು ಉತ್ತಮ ಆಯ್ಕೆ ಕೂಡಾ. ನ್ಯೂಟ್ರಿಯೆಂಟ್ಸ್‌ಗಳ ಕಣಜವಾಗಿರುವ ಡ್ರೈ ಫ್ರೂಟ್ಸನ್ನು ಕೇವಲ ದೀಪಾವಳಿಗೆ ಮಾತ್ರವಲ್ಲ, ಇತರೆ ಹಬ್ಬಗಳಿಗೆ, ಬಸುರಿಯರನ್ನು ನೋಡುವಾಗ, ಮಕ್ಕಳಿಗೆ -ಹೀಗೆ ಯಾವಾಗ ಯಾರಿಗೆ ಬೇಕಾದರೂ ಕೊಡಬಹುದು. ಆದರೆ, ಈ ಬಾರಿ ಇದಕ್ಕೊಂದು ಟ್ವಿಸ್ಟ್ ನೀಡಿ. ಚಿಯಾ ಸೀಡ್ಸ್, ಪಂಪ್ಕಿನ್ ಸೀಡ್ಸ್, ಸನ್‌ಫ್ಲವರ್ ಹಾಗೂ ಸೀಸೇಮ್ ಸೀಡ್ಸ್ ಮಿಕ್ಸ್ ಇರುವ ಪ್ಯಾಕೆಟ್‌ಗಳನ್ನು ಜೋಡಿಸಿ, ಅವುಗಳ ಆರೋಗ್ಯ ಲಾಭಗಳ ಕುರಿತ ಚೀಟಿಯಿರಿಸಿ ಕೊಡಿ. ಇವು ಹಾಗೆ ತಿನ್ನಲು ಎಷ್ಟು ರುಚಿಯೋ, ಇತರೆ ಆಹಾರ ಪದಾರ್ಥಗಳಿಗೆ ಸೇರಿಸಿದರೆ ಕೂಡಾ ಅಷ್ಟೇ ರುಚಿ ನೀಡುತ್ತವೆ.
ಹಬ್ಬದ ದಿನ ಚೆನ್ನಾಗಿ ತಿನ್ನೋ ಮುಂಚೆ ಒಮ್ಮೆ ಯೋಚಿಸಿ!
ಔಷಧೀಯ ಸಸ್ಯಗಳು
ಉತ್ತಮ ಆರೋಗ್ಯವನ್ನೇ ಉಡುಗೊರೆಯಾಗಿ ನೀಡುವ ಈ ಪಟ್ಟಿಯಲ್ಲಿ ಆಕರ್ಷಕವೆನಿಸುವಂಥದ್ದೆಂದರೆ ಔಷಧೀಯ ಸಸ್ಯಗಳು. ತುಳಸಿ, ಪುದೀನಾ, ಕೊತ್ತಂಬರಿ ಸೊಪ್ಪು, ಮೆಂತ್ಯೆ ಮುಂತಾದ ಔಷಧೀಯ ಸಸ್ಯಗಳಿರುವ ಪಾಟ್‌ಗಳನ್ನು ಹಬ್ಬದ ಉಡುಗೊರೆಯಾಗಿ ನೀಡಿ. ಇವನ್ನು ಪ್ರತಿ ಬಾರಿ ಬಳಸುವಾಗಲೂ ಮನೆಯವರು ನಿಮ್ಮನ್ನು ನೆನೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಜೊತೆಗೆ, ಪಕ್ಕಾ ಪರಿಸರ ಸ್ನೇಹಿ ಕೂಡಾ. ಪಾಟ್‌ಗಳು ಮಣ್ಣಿನದಾಗಿದ್ದು, ಆಕರ್ಷಕವಾಗಿರುವಂಥದ್ದನ್ನು ಆಯ್ಕೆ ಮಾಡಿ.
ಸ್ಪಾ ಉತ್ಪನ್ನಗಳು
ನಿಮ್ಮ ಪ್ರೀತಿಪಾತ್ರರಿಗೆ ವಿಶೇಷವೆನಿಸುವಂತೆ ಮಾಡಲು ಬ್ಯೂಟಿ ಹಾಗೂ ವೆಲ್‌ನೆಸ್ ಪ್ರಾಡಕ್ಟ್‌ಗಳ ದೀಪಾವಳಿ ಗಿಫ್ಟ್ ಹ್ಯಾಂಪರ್ ನೀಡಿ. ಜೈವಿಕವಾದ ಹಾಗೂ ನೈಸರ್ಗಿಕ ಉತ್ಪನ್ನಗಳನ್ನೊಳಗೊಂಡ ಪ್ಯಾರಾಬೆನ್ ಇಲ್ಲದ ವಸ್ತುಗಳನ್ನು ಆಯ್ಕೆ ಮಾಡಿ. ಕೆಲ ಬ್ರ್ಯಾಂಡ್‌ಗಳು ಹಬ್ಬದ ಸಮಯದಲ್ಲಿ ಇಂಥ ರೆಡಿ ಹ್ಯಾಂಪರ್‌ಗಳನ್ನೇ ಹೊರ ಬಿಡುತ್ತವೆ. ಅವನ್ನು ಆರಿಸಬಹುದು. ಇಲ್ಲದಿದ್ದಲ್ಲಿ, ನೀವೇ ಬುಟ್ಟಿಯೊಂದನ್ನು ಆಯ್ಕೆ ಮಾಡಿ ಉತ್ಪನ್ನಗಳನ್ನು ಕಸ್ಟಮೈಸ್ ಮಾಡಬಹುದು. ಇಲ್ಲದಿದ್ದಲ್ಲಿ ಸ್ಪಾ ಸೆಶನ್ ವೋಚರ್ ನೀಡಬಹುದು.
ಜಿಮ್ ಮೆಂಬರ್‌ಶಿಪ್
ಜಿಮ್ಗೆ ಪ್ರತಿದಿನ ಹೋಗಲು ಡೆಡಿಕೇಶನ್ ಅಗತ್ಯ. ಇದಕ್ಕಾಗಿ ಕೆಲವೊಮ್ಮೆ ನಮಗೆ ಬೇಕಾಗಿರುವುದೇನೆಂದರೆ ಇನ್ನೊಬ್ಬರ ಪ್ರೋತ್ಸಾಹ. ಹಾಗಾಗಿ, ಈ ಬಾರಿ ದೀಪಾವಳಿಗೆ ನಿಮ್ಮ ಹತ್ತಿರದವರಿಗೆ ಒಂದು ತಿಂಗಳ ಜಿಮ್ ಮೆಂಬರ್‌ಶಿಪ್ ಕೊಡಿಸಿ. ಈ ಸಂದರ್ಭದಲ್ಲಿ ಜಿಮ್ ಅವರ ಮನೆಯ ಹತ್ತಿರದಲ್ಲಿದೆಯೇ ಎಂಬುದನ್ನು ಗಮನಿಸಿ. ಅವರಿಗೆ ಜಿಮ್ ಇಷ್ಟವಾಗುವುದಿಲ್ಲ ಎನಿಸಿದರೆ ಯೋಗ, ಝುಂಬ ಅಥವಾ ಇತರೆ ಫಿಟ್‌ನೆಸ್ ಕ್ಲಾಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.